ತುಂಗಭದ್ರಾ ಜಲಾಶಯದಲ್ಲಿ ಇತಿಹಾಸದ ಕ್ಷಣ: 33 ಗೇಟ್‌ಗಳ ಉದ್ಘಾಟನೆ

ಹೊಸಪೇಟೆ: ತುಂಗಭದ್ರಾ ಜಲಾಶಯ (TB Dam)ದ 33 ಗೇಟ್‌ಗಳ ಭವ್ಯ ಲೋಕಾರ್ಪಣೆ ಸಮಾರಂಭ ಜೂನ್‌ .25ರಂದು ನಡೆಯಲಿದೆ. ಜಲಾಶಯದ ಆವರಣದಲ್ಲಿ ಹಾಗೂ ಮುನಿರಾಬಾದ್ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡಲಾಗಿದೆ.

ಸಮಾರಂಭದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದ್ದು, ಇಡೀ ಪ್ರದೇಶ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

ಇದನ್ನೂ ಓದಿ: ಕಟ್ಟಡ ಕಾರ್ಮಿಕರಿಗಾಗಿ ಆರೋಗ್ಯ ಯೋಜನೆಗೆ ಅನುಮೋದನೆ – 10 ಲಕ್ಷ ಜನರಿಗೆ ಲಾಭ

ಜಲಾಶಯದ 33 ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮವು ಅದರ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಸಮಾರಂಭವಾಗಿ ಗುರುತಿಸಲಾಗುತ್ತಿದೆ. 1953ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಜಲಾಶಯವನ್ನು ಉದ್ಘಾಟಿಸಿದುದು ಮೊದಲ ಮಹತ್ವದ ಐತಿಹಾಸಿಕ ಸಂದರ್ಭವಾಗಿತ್ತು.

ಇಂದು ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 33 ಗೇಟ್‌ಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.‌ಬಸವರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *