ಯಲಹಂಕ | ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ

ಯಲಹಂಕ: ಸರ್ಕಾರ ‘ಬಸವಲಿಂಗಪ್ಪನವರ ಸ್ಮಾರಕ ನಿರ್ಮಿಸುವುದಕ್ಕೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಮಾಜಿ ಶಾಸಕ ಬಿ. ಪ್ರಸನ್ನ ಕುಮಾರ್ ತಿಳಿಸಿದರು.

ಅಲ್ಲಾಳಸಂದ್ರ ಸಮೀಪದಲ್ಲಿರುವ ಬಸವಲಿಂಗಪ್ಪನವರ ಸಮಾಧಿಯ ಸ್ಥಳದಲ್ಲಿ ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ 33ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ : ಬೆಂಗಳೂರು | ಮೂಲಸೌಕರ್ಯ ಜೊತೆಗೆ ಪುನರ್‌ವಸತಿ ಕೋಗಿಲು ಬಡಾವಣೆಯ ನಿವಾಸಿಗಳಿಗೆ  ಕಲ್ಪಿಸಿ – ಡಾ. ನಾಗಲಕ್ಷ್ಮೀ ಚೌಧರಿ

‘ಸ್ಮಾರಕ ನಿರ್ಮಾಣಕ್ಕಾಗಿ 2013ರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ, ಇದುವರೆಗೆ ಬಿಡುಗಡೆ ಆಗಿರಲಿಲ್ಲ. ಈಗ ಅನುದಾನ ಬಿಡುಗಡೆಯಾಗಿದ್ದು, 2026ರ ಮೇ ತಿಂಗಳ ಅಂತ್ಯದೊಳಗೆ ಸ್ಮಾರಕ ನಿರ್ಮಿಸಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್. ಮಾರಪ್ಪ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ನೂರಾರು ಜನ ಕೈಯಲ್ಲಿ ಕೆಂಪುಗುಲಾಬಿ ಹೂ ಹಿಡಿದು ಸಾಗಿದರು. ಜಾಥಾವು ಯಲಹಂಕ ಉಪನಗರದ ನ್ಯೂಟೌನ್ ಕ್ಲಬ್‌ನಿಂದ ಶೇಷಾದ್ರಿಪುರಂ ಕಾಲೇಜು, ಎನ್.ಇ.ಎಸ್.ವೃತ್ತ ಹಾಗೂ ಯಲಹಂಕ ಪೊಲೀಸ್ ಠಾಣೆ ವೃತ್ತದ ಮಾರ್ಗವಾಗಿ ಅಲ್ಲಾಳಸಂದ್ರ ಗೇಟ್ ಬಳಿಯಿರುವ ಬಿ.ಬಸವಲಿಂಗಪ್ಪನವರ ಸಮಾಧಿ ಸ್ಥಳದವರೆಗೆ ಆಗಮಿಸಿದರು. ನಂತರ ಸಮಾಧಿಗೆ ಗುಲಾಬಿ ಹೂ ಅರ್ಪಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಇದನ್ನೂ ನೋಡಿ : 2026 | ನಿರಾತಂಕ ಹಗಲು, ನಿರ್ಭಯದ ರಾತ್ರಿಗಳ ಖಾತ್ರಿಯಾಗಿರಲಿ Janashakthi Media

Donate Janashakthi Media

Leave a Reply

Your email address will not be published. Required fields are marked *