ತುಮಕೂರು: ರಾಜ್ಯ ರಾಜಕೀಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಸಂದರ್ಭಗಳನ್ನು ನೆನೆದು ಭಾವುಕರಾದರು.. ಮುಖ್ಯಮಂತ್ರಿಸಿಎಂ
ಜೂನ್ 8ರಂದು ತಮ್ಮ ಒಡೆತನದ ಸಿದ್ಧಾರ್ಥ ಕಾಲೇಜಿಗೆ ಮೊದಲ ಬಾರಿಗೆ ಡಿಸಿಎಂ ಆಗಿ ಭೇಟಿ ನೀಡಿದ ಪರಮೇಶ್ವರ ಅವರನ್ನು ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಪಕ್ಷದ ಸಂಘಟನೆಗಾಗಿ ದೀರ್ಘಕಾಲ ದುಡಿದಿದ್ದರೂ ಮುಖ್ಯಮಂತ್ರಿ ಹುದ್ದೆ ತಮ್ಮ ಪಾಲಾಗಲಿಲ್ಲ ಎಂದು ಹೇಳಿಕೊಂಡರು. ರಾಜಕೀಯ ಜೀವನದಲ್ಲಿ ಹಲವು ಏರಿಳಿತಗಳನ್ನು ಎದುರಿಸಿದ್ದೇನೆ. ಮುಖ್ಯಮಂತ್ರಿ ಹುದ್ದೆಯ ಸಮೀಪಕ್ಕೆ ಬಂದಿದ್ದರೂ ವಿವಿಧ ಸಂದರ್ಭಗಳಲ್ಲಿ ಅವಕಾಶ ತಪ್ಪಿಹೋಯಿತು ಎಂದು ಅವರು ಸ್ಮರಿಸಿದರು
ಪಕ್ಷದ ಕಾರ್ಯಕರ್ತನಾಗಿ ಆರಂಭವಾದ ತಮ್ಮ ರಾಜಕೀಯ ಪಯಣ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಸಚಿವರಾಗಿ ನಿರ್ವಹಿಸಿದ ಜವಾಬ್ದಾರಿಗಳನ್ನು ಉಲ್ಲೇಖಿಸಿದ ಅವರು, ಪಕ್ಷ ನೀಡಿದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂದು ಹೇಳಿದರು. ಮುಖ್ಯಮಂತ್ರಿ ಹುದ್ದೆ ಸಿಗದಿದ್ದರೂ ಪಕ್ಷದ ಮೇಲಿನ ನಿಷ್ಠೆ ಮತ್ತು ಜನಸೇವೆಯ ಬದ್ಧತೆ ಕಡಿಮೆಯಾಗಿಲ್ಲ ಎಂದರು. ಮುಖ್ಯಮಂತ್ರಿ
ಇದನ್ನೂ ಓದಿ: ಮಮತಾಗೆ ಮತ್ತೊಂದು ಆಘಾತ? ವಿಧಾನಸಭೆಯಂತೆ ಲೋಕಸಭೆಯಲ್ಲೂ ಟಿಎಂಸಿ ಇಬ್ಬಾಗವೇ?
2013ರ ಚುನಾವಣೆಯನ್ನು ಉಲ್ಲೇಖಿಸಿದ ಅವರು, ‘ಆ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಬಹುಶಃ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನನ್ನ ಸೋಲಿನ ಪರಿಣಾಮವಾಗಿ ಅವರು ಸಿಎಂ ಆದರು’ ಎಂದು ಅಭಿಪ್ರಾಯಪಟ್ಟರು.
2018ರ ಸಂದರ್ಭವನ್ನು ನೆನೆದು, ‘ಆ ವೇಳೆ ನಮ್ಮ ಪಕ್ಷ 80 ಸ್ಥಾನ ಗಳಿಸಿತ್ತು. ಜೆಡಿಎಸ್ ಜೊತೆ ಮೈತ್ರಿ ಆದ ಬಳಿಕ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಆ ಸಂದರ್ಭದಲ್ಲಿ ನನ್ನನ್ನು ಆಯ್ಕೆ ಮಾಡಬಹುದಿತ್ತು. ಆದರೆ ಅವಕಾಶ ಸಿಗಲಿಲ್ಲ’ ಎಂದು ಹೇಳಿದರು.
2023ರ ಚುನಾವಣೆಯ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ‘2026ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾನು ಪ್ರಯತ್ನಿಸಿದ್ದೆ. ಈ ಬಾರಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಒಂದು ಹಂತದಲ್ಲಿ ಹೈಕಮಾಂಡ್ಗೆ ನನ್ನ ಅಭಿಪ್ರಾಯವನ್ನೂ ತಿಳಿಸಿದ್ದೆ. ಆದರೆ ಪರಿಸ್ಥಿತಿಗಳು ಬದಲಾಗುತ್ತವೆ. ಅಂತಿಮವಾಗಿ ನನಗೆ ಉಪಮುಖ್ಯಮಂತ್ರಿಯ ಜವಾಬ್ದಾರಿ ನೀಡಲಾಗಿದೆ’ ಎಂದು ಹೇಳಿದರು.
‘ಈ ಹುದ್ದೆಯ ಮಹತ್ವ ಅರಿತು ಕೆಲಸ ಮಾಡುತ್ತೇನೆ. ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ’ ಎಂದು ಅವರು ಹೇಳಿದರು.
ಇದನ್ನೂ ನೋಡಿ: ಸಾಮಾಜಿಕ ನ್ಯಾಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ – ಕೆ.ನೀಲಾ Janashakthi Media
