ಬೆಂಗಳೂರು ಗೋದಾಮಿಗೆ ದಿಢೀರ್ ದಾಳಿ: ಆಹಾರ ಗುಣಮಟ್ಟದ ತಪಾಸಣೆ ತೀವ್ರ

ಬೆಂಗಳೂರು: ನಗರದಲ್ಲಿ ಆಹಾರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಪರಿಶೀಲನೆ ಕಾರ್ಯಾಚರಣೆ ಮುಂದುವರಿದಿದೆ. ಇದರ ಭಾಗವಾಗಿ ಬೊಮ್ಮನಹಳ್ಳಿಯಲ್ಲಿರುವ ಆಹಾರ ಪೂರೈಕೆ ಗೋದಾಮಿನ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಬೆಂಗಳೂರು

ಇಂದು ಬೆಳಿಗ್ಗೆ ನಡೆದ ಈ ದಾಳಿಯಲ್ಲಿ ಗೋದಾಮಿನಲ್ಲಿರುವ ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹ ವಿಧಾನ ಹಾಗೂ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಲಾಗಿದೆ. ಅಲ್ಲದೆ, ಗೋದಾಮಿನ ಸಿಬ್ಬಂದಿಯಿಂದಲೂ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಭೂ ಕುಸಿತ ಸಮಸ್ಯೆಗೆ ವೈಜ್ಞಾನಿಕ ಪರಿಹಾರ: ಉತ್ತರಾಖಂಡ ಸರ್ಕಾರದ ಯೋಜನೆ

ಇದಕ್ಕೂ ಮೊದಲು ರಾಜ್ಯದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಕೆಲವು ಹೋಟೆಲ್‌ಗಳ ಅಡುಗೆಮನೆ ಹಾಗೂ ಸಂಗ್ರಹ ಕೋಣೆಗಳಲ್ಲಿ ಅವಧಿ ಮೀರಿದ ಹಾಲು, ಕೊಳೆತ ತರಕಾರಿ ಹಾಗೂ ಹಾಳಾದ ಮಾಂಸ ಪತ್ತೆಯಾಗಿತ್ತು. ನಿಯಮ ಪಾಲನೆ ಮಾಡದ ಹೋಟೆಲ್‌ಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು.

ಈ ಕ್ರಮಗಳ ಬೆನ್ನಲ್ಲೇ ಈಗ ಆಹಾರ ಪೂರೈಕೆ ಗೋದಾಮುಗಳತ್ತ ಅಧಿಕಾರಿಗಳ ಗಮನ ಹರಿದಿದ್ದು, ಆಹಾರ ಇಲಾಖೆಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ನೋಡಿ: ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *