ಜೈಲು ಭರೋ ಚಳುವಳಿ: ರೈತ-ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ, ಪ್ರತಿಭಟನಾಕಾರರ ಬಂಧನ

ತುಮಕೂರು: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ) ಅವರು ಆಗಸ್ಟ್ 10ರಂದು ‘ಭಾರತ ಬಿಟ್ಟು ತೊಲಗಿ’ ನೆನಪಿನಲ್ಲಿ ಕರೆ ನೀಡಿದ್ದ ಜೈಲು ಭರೋ ಚಳುವಳಿ ತುಮಕೂರು ನಗರದಲ್ಲಿ ನಡೆಯಿತು. ಸರ್ಕಾರದ ಜನವಿರೋಧಿ, ರೈತ-ಕಾರ್ಮಿಕ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ನಡೆದ ಈ ಹೋರಾಟದಲ್ಲಿ ಪ್ರತಿಭಟನಾಕಾರರು ಸ್ವಾತಂತ್ರ್ಯ ಚೌಕದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡರು. ಬ್ಯಾರಿಕೇಡ್ ತಳ್ಳಾಟ ನಡೆಸಿದ ಪ್ರತಿಭಟನಾಕಾರರು ಪ್ರಬಲ ಪ್ರತಿರೋಧ ತೋರಿದರು. ಜೈಲು

ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ಜಿಲ್ಲೆಯಲ್ಲಿ ರೈತರಿಂದ ಜಮೀನು ಕಸಿದುಕೊಳ್ಳುವ ಕೆಲಸ ನಿಲ್ಲಿಸಬೇಕೆಂದು ಆಗ್ರಹಿಸಿದರು. ಜೈಲು

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ಪ್ರತಿ ಕಾರ್ಮಿಕರಿಗೆ ಕನಿಷ್ಠ 42 ಸಾವಿರ ಮಾಸಿಕ ವೇತನ ನಿಗದಿಪಡಿಸಬೇಕು, ಗುತ್ತಿಗೆ ಮತ್ತು ಹೋರ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ನಲ್ಲಿ ಎರಡು ಪಕ್ಷಗಳಿವೆ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಿಗದಿಪಡಿಸಿದ ಕನಿಷ್ಠ ವೇತನವನ್ನು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಏಕೆ ಜಾರಿ ಮಾಡುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಬಿಜಿವಿಎಸ್ ರಾಜ್ಯ ಸಮ್ಮೇಳನ: ಶಿಕ್ಷಣ – ವಿಜ್ಞಾನ ಕ್ಷೇತ್ರಕ್ಕೆ 15 ಪ್ರಮುಖ ನಿರ್ಣಯಗಳು

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡನಂಜಪ್ಪ ಮಾತನಾಡಿ, ಬೇಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಿಲ್ಲ. ಲಂಚ ನೀಡಿದವರಿಗೆ ಪಡಿ ಆಗುತ್ತದೆ, ಇಲ್ಲದವರಿಗೆ ನೆಪಗಳನ್ನು ಸೃಷ್ಟಿಸಲಾಗುತ್ತಿದೆ. ಭೂಮಿ ನೀಡದ ಸರ್ಕಾರ ಭೂಮಿ ಕಸಿಯುತ್ತಿದೆ ಎಂದರು.

ಎಐಟಿಯುಸಿ ಗಿರೀಶ್ ಮಾತನಾಡಿ, ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸಂಘಗಳ ಅಸ್ತಿತ್ವವನ್ನು ಅಳಿಸಿ ಬಂಡವಾಳಗಾರರಿಗೆ ಮಾತ್ರ ಲಾಭ ತರಲಿವೆ ಎಂದರು. ಎಐಯುಟಿಯುಸಿ ಮಂಜಳಾ ಗೋನಾವರ ಮಾತನಾಡಿ, ಜನತೆ ಬೆಲೆ ಏರಿಕೆಯಿಂದ ತತ್ತರಿಸಿದ್ದು, ಸರ್ಕಾರ ಉದ್ಯೋಗ ಸೃಷ್ಟಿಸದೆ ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ನಿರಾಕರಿಸುತ್ತಿದೆ ಎಂದರು.

ರಾಜ್ಯ ರೈತ ಸಂಘ ಶಂಕರಪ್ಪ, ಪ್ರಾಂತ ರೈತ ಸಂಘ ಬಿ. ಉಮೇಶ್, ಸಿಐಟಿಯು ಎನ್.ಕೆ. ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಜ. ಕಮಲ ಮಾತನಾಡಿದರು. ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್, ಷಣ್ಮುಖಪ್ಪ, ಅಕ್ಷರ ದಾಸೋಹ ನೌಕರರ ಸಂಘ ನಾಗರತ್ನ, ಅಂಗನವಾಡಿ ಕಾರ್ಯಕರ್ತೆಯರಾದ ಅನಸೂಯ, ಸರೋಜಾ, ಕಸದ ವಾಹನ ಚಾಲಕರು, ಲಾರಿ ಮತ್ತು ಕ್ಲೀನರ್ ಸಂಘ ಮಾರತಿ, ಮಂಜುನಾಥ, ಶ್ರೀನಿವಾಸ್, ಕಸದ ಲಿಪ್ಪರ್ ಲಾರಿ ಚಾಲಕರ ಸಂಘ ಪ್ರಕಾಶ್, ಪೌರ ಕಾರ್ಮಿಕರ ಸಂಘ ಮಂಜುನಾಥ, ಅಂದಾನಿ, ಕುಮಾರ್, ಎಐಟಿಯುಸಿ ಚಂದ್ರಶೇಖರ್, ಐಎನ್ಟಿಯುಸಿ ನವಾಜ್, ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯಮ್ಮ, ಅಸ್ವತ್ರೆ ಕಾರ್ಮಿಕರ ಸಂಘ ರಂಗಮ್ಮ, ನೇತ್ರವತಿ, ವಿ.ವಿ ಕಾರ್ಮಿಕ ಸಂಘ ಗಂಗಮ್ಮ, ಲಕ್ಷ್ಮಿ, ನಿಖಿತ ಕಾರ್ಮಿಕರ ಸಂಘ ಮಧುಸೂಧನ್, ಸಿಂಧೂರ್ ಪೋಜ್ ಕಾರ್ಮಿಕ ಸಂಘ ಉಮೇಶ್, ಕಟ್ಟಡ ಕಾರ್ಮಿಕ ಸಂಘ ಕಲೀಲ್, ಶಂಕರಪ್ಪ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಜಂತರ್ ಮಂತರ್ ಪೋಲೀಸ್ ಅತಿರೇಕ-ಕಾನೂನು ಪಾಲನೆ- ಉಲ್ಲಂಘನೆ!!!! Janashakthi Media

Donate Janashakthi Media

Leave a Reply

Your email address will not be published. Required fields are marked *