ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಳಿಕ ಉಂಟಾಗಿದ್ದ ಖಾತೆ ಹಂಚಿಕೆ ಗೊಂದಲಕ್ಕೆ ತೆರೆ ಬಿದ್ದಿದೆ. ಬುಧವಾರ ಸಚಿವರಿಗೆ ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಖಾತೆ
ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಲ್ಲಿ ಬಹುತೇಕರಿಗೆ ಹಿಂದಿನ ಸರ್ಕಾರದಲ್ಲಿ ನಿರ್ವಹಿಸುತ್ತಿದ್ದ ಇಲಾಖೆಗಳನ್ನೇ ಮುಂದುವರಿಸಲಾಗಿದ್ದು, ಕೆಲವು ಸಚಿವರಿಗೆ ಹೊಸ ಖಾತೆಗಳನ್ನು ನೀಡಲಾಗಿದೆ.ಖಾತೆ
ಯಾರಿಗೆ ಯಾವ ಖಾತೆ?
ಚಲುವರಾಯಸ್ವಾಮಿ ಅವರಿಗೆ ಕೃಷಿ, ಎಚ್.ಸಿ. ಬಾಲಕೃಷ್ಣ ಅವರಿಗೆ ಸಣ್ಣ ನೀರಾವರಿ, ಕೆ.ಎಚ್. ಮುನಿಯಪ್ಪ ಅವರಿಗೆ ಸಾಮಾಜಿಕ ಕಲ್ಯಾಣ ಹಾಗೂ ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಇಲಾಖೆ ನೀಡಲಾಗಿದೆ.
ಬಸವಂತಪ್ಪ ಅವರಿಗೆ ಬಂದರು ಮತ್ತು ಮೀನುಗಾರಿಕೆ, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಿಕ್ಷಣ, ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಮತ್ತು ಜಮೀರ್ ಅಹ್ಮದ್ ಖಾನ್ ಅವರಿಗೆ ವಸತಿ ಇಲಾಖೆ ಹಂಚಿಕೆಯಾಗಿದೆ.
ಯು.ಟಿ. ಖಾದರ್ ಅವರಿಗೆ ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್, ರಿಜ್ವಾನ್ ಅರ್ಷದ್ ಅವರಿಗೆ ಆಹಾರ, ಲಕ್ಷ್ಮಣ್ ಸವದಿ ಅವರಿಗೆ ಸಹಕಾರ, ಡಾ. ಅಜಯ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಲಾಗಿದೆ.
ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ, ಪುಟ್ಟರಂಗಶೆಟ್ಟಿ ಅವರಿಗೆ ಪಶುಸಂಗೋಪನೆ ಇಲಾಖೆ ಜವಾಬ್ದಾರಿ ವಹಿಸಲಾಗಿದೆ.
ಇನ್ನು ಬಿ. ನಾಗೇಂದ್ರ, ರುದ್ರಪ್ಪ ಲಮಾಣಿ, ಶಿವರಾಜ್ ತಂಗಡಗಿ, ವಿಜಯಪ್ಪ ಕಾಶಪ್ಪನವರ್, ನರೇಂದ್ರ ಸ್ವಾಮಿ ಹಾಗೂ ಟಿ. ರಘುಮೂರ್ತಿ ಅವರಿಗೆ ಈ ಹಂತದಲ್ಲಿ ಖಾತೆ ಹಂಚಿಕೆ ಆಗಿಲ್ಲ ಎಂದು ವರದಿಯಾಗಿದೆ. ಇವರಿಗೂ ಶೀಘ್ರದಲ್ಲೇ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನ ಸಿಗದ ಶಾಸಕರ ಅಸಮಾಧಾನ, ನಂತರ ಖಾತೆ ಹಂಚಿಕೆ ವಿಳಂಬದಿಂದ ಕಾಂಗ್ರೆಸ್ ಸರ್ಕಾರದೊಳಗೆ ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದವು. ಇದೀಗ ಖಾತೆ ಹಂಚಿಕೆಯಾಗಿರುವುದರಿಂದ ಸಚಿವರು ತಮ್ಮ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಆಡಳಿತ ಚುರುಕುಗೊಳಿಸುವ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ : ಡಾ. ಎಂ.ಪಿ. ಪರಮೇಶ್ವರನ್ ನಿಧನಕ್ಕೆ ಬಿಜಿವಿಎಸ್ ಹಾಸನ ಜಿಲ್ಲಾ ಸಮಿತಿ ಸಂತಾಪ
ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 13 ಮಂದಿಗೆ ಮಾತ್ರ ಈ ಗ ಖಾತೆ ಹಂಚಿಕೆ ಮಾಡಲಾಗಿದೆ. 6 ಮಂದಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ.
ಚಲುವರಾಯಸ್ವಾಮಿ – ಕೃಷಿ
ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಸರಬರಾಜು
ಮುನಿಯಪ್ಪ – ಸಮಾಜ ಕಲ್ಯಾಣ
ಸಂತೋಷ್ ಲಾಡ್ – ಕಾರ್ಮಿಕ
ಬಸಂತಪ್ಪ- ಮೀನುಗಾರಿಕೆ
ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ
ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ
ಜಮೀರ್ – ವಸತಿ ಖಾತೆ
ಲಕ್ಷ್ಮಣ ಸವದಿ – ಸಹಕಾರ ಇಲಾಖೆ
ಅಜಯ್ ಸಿಂಗ್ – ಅರಣ್ಯ ಇಲಾಖೆ
ಎಸ್ ಎಸ್ ಮಲ್ಲಿಕಾರ್ಜುನ – ಗಣಿ ಮತ್ತು ವಿಜ್ಞಾನ
ಬಾಲಕೃಷ್ಣ- ಸಣ್ಣ ನೀರಾವರಿ
ಇದನ್ನೂ ನೋಡಿ : ರೈತ–ಕಾರ್ಮಿಕರ ಜೈಲ್ ಭರೋ: ಕೇಂದ್ರದ ನೀತಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ Janashakthi Media
