ನವದೆಹಲಿ | ಆರ್‌ಜೆಡಿಯ ಹೀನಾಯ ಸಾಧನೆ ಕಂಡರು ಮತ ಪ್ರಮಾಣ ಕಾಯ್ದುಕೊಂಡಿದೆ

ನವದೆಹಲಿ: ಶೇ 17ರಷ್ಟಿರುವ ಮುಸ್ಲಿಂ ಹಾಗೂ ಶೇ 13ರಷ್ಟಿರುವ ಯಾದವರು ಆರ್‌ಜೆಡಿಯ ಪಾರಂಪರಿಕ ಮತದಾರರು. ಆರ್‌ಜೆಡಿಗೆ ಯಾದವ–ಮುಸ್ಲಿಂ (ಎಂ–ವೈ) ಮತಗಳೇ ಪ್ರಮುಖ ಆಸರೆ. ಮೈತ್ರಿಕೂಟದಲ್ಲಿರುವ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳಿಗೂ ಅವರೇ ಮತ ಬ್ಯಾಂಕ್‌. ಮಹಾಮೈತ್ರಿಕೂಟವು ಕಳೆದ ಬಾರಿ ಗಳಿಸಿದಷ್ಟೇ ಮತಗಳನ್ನು ಪಡೆದಿದೆ. ಆದರೆ, ಸೀಟುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಇದನ್ನೂ ಓದಿ : ಕಬ್ಬು ಖರೀದಿ ದರ | ಎಲ್ಲಾ ಕಾರ್ಖಾನೆಗಳು ಪಾಲಿಸಲಿ – ರೈತರ ಆಗ್ರಹ

ಇನ್ನೊಂದೆಡೆ, ಎನ್‌ಡಿಎ ಮೈತ್ರಿಕೂಟದ ಮತ ಪ್ರಮಾಣವು ಕಳೆದ ಸಲಕ್ಕಿಂತ ಶೇ 10ರಷ್ಟು ಜಾಸ್ತಿ ಆಗಿದೆ. ಯಾದವೇತರ ಪ್ರಬಲ ಜಾತಿಗಳು, ಅತಿ ಹಿಂದುಳಿದ ಜಾತಿಗಳು (ಇಬಿಸಿ) ಹಾಗೂ ದಲಿತರ ಮತ ಸಮೀಕರಣದಿಂದ ಮೈತ್ರಿಕೂಟ ಅಭೂತಪೂರ್ವ ಜಯ ಪಡೆದಿದೆ. ರಾಜ್ಯದಲ್ಲಿ ಶೇ 36ರಷ್ಟಿರುವ ಇಬಿಸಿ ಮತದಾರರು ದಶಕಗಳಿಂದ ನಿತೀಶ್‌ ತೆಕ್ಕೆಯಲ್ಲಿದ್ದಾರೆ. 2020ರಲ್ಲಿ ಜೆಡಿಯು ಮತಗಳನ್ನು ಗಣನೀಯ ಪ್ರಮಾಣದಲ್ಲಿ ಕಸಿದು ಪಕ್ಷವನ್ನು 43 ಸ್ಥಾನಕ್ಕೆ ಇಳಿಸಿದ್ದ ಚಿರಾಗ್‌ ಪಾಸ್ವಾನ್‌ ಮೈತ್ರಿಕೂಟಕ್ಕೆ ಬಂದಿದ್ದು ಇಡೀ ಸಮೀಕರಣವನ್ನೇ ಬದಲಿಸಿತು.

ಕಳೆದ ಬಾರಿ ಮೂರು ಸ್ಥಾನಗಳನ್ನು ಗೆದ್ದಿದ್ದ ಎಲ್‌ಜೆಪಿ ಈ ಬಾರಿ 19 ಸ್ಥಾನಗಳನ್ನು ಗೆದ್ದು ಬೀಗಿತು. ಮಿತ್ರ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಗಣನೀಯ ಕೊಡುಗೆ ನೀಡಿತು. ಉಪೇಂದ್ರ ಕುಶ್ವಾಹ ಅವರು ಕುಶ್ವಾಹ ಮತಗಳನ್ನು ಹಾಗೂ ಪಾಸ್ವಾನ್‌ ಮತ್ತು ಜಿತನ್‌ ರಾಮ್‌ ಮಾಂಜಿ ಅವರು ದಲಿತ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಮೈತ್ರಿಕೂಟಕ್ಕೆ ಸೆಳೆದರು. ಫಲವಾಗಿ ಗ್ರಾಮೀಣ ಬಿಹಾರದಲ್ಲಿ ಬಹುತೇಕ ಕ್ಷೇತ್ರಗಳನ್ನು ಗೆದ್ದಿತು. ಯಾದವ–ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿತು.

ಇದನ್ನೂ ನೋಡಿ : ಚುನಾವಣಾ ಆಯೋಗದ ಮತಗಳ್ಳತನ ವಿರೋಧಿಸಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ಸಮಾವೇಶ

Donate Janashakthi Media

Leave a Reply

Your email address will not be published. Required fields are marked *