ಕೇರಳದಲ್ಲಿ ಕ್ರೈಸ್ತರ ಕುರಿತು ಸಿನಿಕತನದ ಧೋರಣೆ

ಪ್ರಕಾಶ್ ಕಾರತ್                ಅನು: ವಿಶ್ವ ಏಪ್ರಿಲ್ ೯ರಂದು ಈಸ್ಟರ್ ದಿನ ಪ್ರಧಾನಿ…

ಎನ್‌ಸಿಇಆರ್‌ಟಿ ‘ಹಗುರ’ಗೊಳಿಸಿದ್ದು ವಿದ್ಯಾರ್ಥಿಗಳ ಪಾಠಗಳ ಹೊರೆಯನ್ನೋ ಅಥವ ಆಳುವವರ ಪಾಪಪ್ರಜ್ಞೆಯ ಹೊರೆಯನ್ನೋ

                               …

ಬಿಜೆಪಿ ಪಕ್ಷದೊಳಗಿನ ಬಂಡಾಯ ಜನತೆಯೊಳಗೆ ತೀವ್ರ ಮಡುಗಟ್ಟಿರುವ ಅತೃಪ್ತಿಯ ಪ್ರತಿಫಲನವೂ ಹೌದು!

ಎಸ್.ವೈ.ಜಿ. ಸ್ಪೋಟಗೊಳ್ಳುತ್ತಿರುವ ಒಳ ಬಂಡಾಯಗಳು ರಾಜ್ಯದ ರಾಜಕಾರಣದಲ್ಲಿ ಬಿಜೆಪಿ ಪಕ್ಷದೊಳಗಿನ ಈ ಬಾರಿ ಬಂಡಾಯ ಬಹಳ ಮಹತ್ವದ ಅಂಶ. ಇದು ಜನತೆಯೊಳಗೆ…

‘ಸತ್ಯಪಾಲ್ ಮಲಿಕ್ ಸಂದರ್ಶನ : ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೋದಿ ಸರ್ಕಾರ ಉತ್ತರಿಸಲೇಬೇಕು’

“ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಶ್ರೀ . ಸತ್ಯಪಾಲ್ ಮಲಿಕ್  ಎತ್ತಿರುವ ಎಲ್ಲಾ ಗಂಭೀರ ಆರೋಪಗಳ ಬಗ್ಗೆ  ಮೋದಿ ಸರ್ಕಾರವು ಸ್ಪಷ್ಟಗೊಳಿಸಬೇಕು, ಅವಕ್ಕೆಲ್ಲ ಉತ್ತರಿಸಬೇಕು” ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. “40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕುರಿತಂತೆ ಆರೋಪಗಳು ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಪೊಲಿಟ್‍ಬ್ಯುರೊ ಹೇಳಿದೆ. ಇದು ಸರಕಾರದ ತಪ್ಪಿನಿಂದಾಗಿ ಸಂಭವಿಸಿರುವ ದುರಂತ, ಸಿಆರ್ ಪಿ ಎಫ್ ನವರು ಕೇಳಿದಂತೆ  ದಳದ ಸದಸ್ಯರನ್ನು ಸಾಗಿಸಲು ಐದು ವಿಮಾನಗಳನ್ನು  ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದಾಗ ಅವರು ಈಗ ಈ ಬಗ್ಗೆ ಸುಮ್ಮನಿರಿ ಎಂದು ಹೇಳಿದುದಾಗಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್‍ ರೊಂದಿಗೆ ಸಂದರ್ಶನದಲ್ಲಿ ಸತ್ಯಪಾಲ್‍ ಮಲಿಕ್‍ ಅವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು. ತನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು ಎಂದೂ ಮಲಿಕ್‍ ಹೇಳಿದ್ದಾರೆ.  ಈ ಘಟನೆಗೆ ಪ್ರತೀಕಾರವೆಂದು ಮುಂದೆ ಬಾಲಾಕೋಟ್‍ ವಿಮಾನ ದಾಳಿ ನಡೆಸಿ ಅದನ್ನು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸಿಕೊಂಡದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. “ಸಂವಿಧಾನದ 370 ಮತ್ತು 35 ಎ ಕಲಮುಗಳನ್ನು  ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳು ಕೂಡ ಅಷ್ಟೇ ಗಂಭೀರವಾಗಿವೆ” ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ.   ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದು, ಅಲ್ಲಿಯ ಆಡಳಿತಕ್ಕೆ  ಪೂರ್ಣ ಹೊಣೆಗಾರರಿದ್ದ ರಾಜ್ಯಪಾಲರಿಗೂ ಹಿಂದಿನ ರಾತ್ರಿಯ ವರೆಗೂ ಇದರ ಸುಳಿವಿರಲಿಲ್ಲ ಎಂದು ಈ ಸಂದರ್ಶನದಿಂದ ಈಗ ತಿಳಿದು ಬಂದಿದೆ. ಅಲ್ಲದೆ ಪ್ರಧಾನಿಗಳಿಗೆ ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅದನ್ನು ಪಡೆದುಕೊಳ್ಳಬೇಕು ಎಂದನಿಸದಷ್ಟು ದರ್ಪ ಅವರಲ್ಲಿದ್ದಂತಿತ್ತು ಎಂದೂ ಸತ್ಪಾಲ್‍ ಮಲಿಕ್‍ ಸಂದರ್ಶನದಲ್ಲಿ ಸೂಚಿಸಿದ್ದಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು. “ಈ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೌನವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಐಕ್ಯತೆ  ಮತ್ತು ಸಮಗ್ರತೆ ಕುರಿತಂತೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಂವಿಧಾನಿಕ ಪಾವಿತ್ರ್ಯದ ಹಿತದೃಷ್ಟಿಯಿಂದ ಮೋದಿ ಸರ್ಕಾರ ಈ ಆರೋಪಗಳಿಗೆ ಉತ್ತರಿಸಬೇಕು. ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮುಂದುವರೆದು ಹೇಳಿದೆ. 

ಅಮಾಯಕ ಇದ್ರೀಶ್ ಕೊಲೆ ದೀರ್ಘ ಸಂಚಿನ ಭಾಗ : ಟಿ.ಎಲ್.ಕೃಷ್ಣೇಗೌಡ

ಟಿ.ಎಲ್.ಕೃಷ್ಣೇಗೌಡ ಹಳೇ ಮೈಸೂರು ಭಾಗವನ್ನು ಹೇಗಾದರೂ ವಶಕ್ಕೆ ಪಡೆಯಬೇಕು ಎಂಬ ದೀರ್ಘ ಸಂಚಿನ ಭಾಗವಾಗಿಯೇ ಇದ್ರಿಶನ ಕೊಲೆಯಾಗಿದೆ ಎನ್ನುವುದು ಸ್ಪಷ್ಟ. ಕಳೆದ…

ಫಿನ್ ಲ್ಯಾಂಡ್ : ನಾಟೋ ಕೂಟದ 31ನೆಯ ಸದಸ್ಯ, ಬಲಪಂಥೀಯ ಸರಕಾರ

  ಫಿನ್ ಲ್ಯಾಂಡ್ ಇತ್ತೀಚೆಗೆ ಎರಡು ಕಾರಣಗಳಿಗೆ ಸುದ್ದಿಯಲ್ಲಿತ್ತು. ಆದರೆ ಬಹುಶಃ ಎರಡಕ್ಕೂ ನೇರ ಸಂಬಂಧವಿಲ್ಲ. ಫಿನ್ ಲ್ಯಾಂಡ್ ನಾಟೋ ಮಿಲಿಟರಿ…

ಇರಾನ್-ಸೌದಿ ರಾಜಿ ಸಂಧಾನದತ್ತ, ರಾಯಭಾರ ಕಚೇರಿ ಆರಂಭಿಸುವ ಘೋಷಣೆ

ಪಶ್ಚಿಮ ಏಶ್ಯಾದ ಪ್ರಮುಖ ದೇಶಗಳೂ ಹಲವು ವರ್ಷಗಳಿಂದ ಪರಸ್ಪರ ವೈರತ್ವವನ್ನೂ ಹೊಂದಿದ್ದ ಇರಾನ್ ಮತ್ತು ಸೌದಿ ಅರೇಬಿಯಾ ರಾಜಿ ಸಂಧಾನ ಆರಂಭಿಸಿವೆ.…

ಮುಕ್ತಮಾರುಕಟ್ಟೆಯ ಸವಾಲುಗಳೂ ನಂದಿನಿಯ ಪ್ರಲಾಪವೂ

ನಾ ದಿವಾಕರ                    ನವ ಉದಾರವಾದದ ಮಾರುಕಟ್ಟೆ ಶಕ್ತಿಗಳು ಸಹಕಾರಿ…

ಫ್ರಾನ್ಸ್ : ಪೆಂಶನ್ ಬದಲಾವಣೆಗಳ ರದ್ದಿಗೆ ಪಟ್ಟು ಹಿಡಿದಿರುವ ಕಾರ್ಮಿಕರು

ಫ್ರಾನ್ಸ್ ನಲ್ಲಿ ಅಧ‍್ಯಕ್ಷ ಮ್ಯಾಕ್ರಾನ್ ಜಿದ್ದಿನಿಂದ ತರಲು ಹೊರಟಿರುವ ಪೆಂಶನ್ ಬದಲಾವಣೆಗಳನ್ನು ರದ್ದು ಮಾಡಬೇಕೆಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಏಪ್ರಿಲ್ 6…

ಆಮೂಲಾಗ್ರ ನ್ಯಾಯಾಂಗ ಬದಲಾವಣೆಗಳು : ಇಸ್ರೇಲ್ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಆಂತರಿಕ ಯುದ್ಧದತ್ತ ?

  – ವಸಂತರಾಜ ಎನ್.ಕೆ. ಕಳೆದ ಮೂರು ತಿಂಗಳುಗಳಿಂದ ಇಸ್ರೇಲಿನ ನೆತನ್ಯಾಹು ಸರಕಾರ ಪ್ರಸ್ತಾವಿಸಿರುವ ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳ ವಿರುದ್ಧ ಅಭೂತಪೂರ್ವವಾದ…

ಸರ್ಕಾರದ ಟೀಕೆ ಭಾರತ ವಿರೋಧಿ ಕೃತ್ಯ ಅಲ್ಲ; 323 ಹಿರಿಯ ನ್ಯಾಯವಾದಿಗಳ ಜಂಟಿ ಹೇಳಿಕೆ

“ಕಾನೂನು ಮಂತ್ರಿ ಹುದ್ದೆಯ ಸಾರ್ವಜನಿಕ ಘನತೆಯನ್ನು ಕಾಯ್ದುಕೊಳ್ಳಬೇಕು” ಸರ್ಕಾರವನ್ನು ಟೀಕಿಸಿದ್ದಾರೆ ಎಂದ ಮಾತ್ರಕ್ಕೇ  ಯಾವುದೇ ವ್ಯಕ್ತಿಯ ದೇಶಪ್ರೇಮಕ್ಕೆ ಮಸಿ ಬಳೆಯುವ ಅಧಿಕಾರವನ್ನು…

ಚುನಾವಣಾ ಹೊಸ್ತಿಲಲ್ಲಿ ಕರ್ನಾಟಕ; ಭ್ರಷ್ಟ, ಕೋಮುವಾದಿ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಲು ಸಕಾಲ

ಮಂಜುನಾಥ ದಾಸನಪುರ ಕರ್ನಾಟಕ ರಾಜ್ಯ ಚುನಾವಣೆಯ ಹೊಸ್ತಿನಲ್ಲಿ ನಿಂತಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ಮೇ 10ಕ್ಕೆ ಮತದಾನ,…

ಭಾರತೀಯರ ಒಡೆತನದ ಕಡಲಾಚೆಯ ʻಚಿಪ್ಪುʼ ಕಂಪನಿಗಳ ಬಗ್ಗೆ ಮೋದಿ ಸರ್ಕಾರದ ಬಳಿ ಮಾಹಿತಿಯಿಲ್ಲ?!

ಮಾರ್ಚ್ 21ರಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ʻʻಭಾರತೀಯ ನಾಗರಿಕರ…

ಈರುಳ್ಳಿ ಬೆಲೆ ಕುಸಿತ! ರಸಗೊಬ್ಬರ ಬೆಲೆ ಏರಿಕೆ!

ಸಿದ್ದಯ್ಯ ಸಿ. `2022ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ, ಇನ್ನು ಮುಂದೆ ರೈತರು ನೆಮ್ಮದಿಯಿಂದ ಬದುಕುತ್ತಾರೆ’ ಇದು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು…

ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳೋ, ಕಾಲ್ಪನಿಕವೊ?

ಸಿ. ಸಿದ್ದಯ್ಯ ಇತ್ತೀಚೆಗೆ ಉರಿಗೌಡ ಮತ್ತು ನಂಜೇಗೌಡ ಸಹೋದರರ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಹೋದರರು ಟಿಪ್ಪೂ ಸುಲ್ತಾನನನ್ನು ಕೊಂದರು…

ಅಮೆರಿಕನ್ ಬ್ಯಾಂಕ್ ಗಳ ಕುಸಿತ ಮಹಾ ಆರ್ಥಿಕ ಕುಸಿತದ ಸೂಚನೆಯೇ?

ಸಿ.ಸಿದ್ದಯ್ಯ, ವಸಂತರಾಜ ಎನ್.ಕೆ ಕಳೆದ ಕೆಲವು ದಿನಗಳಲ್ಲಿ ಮೂರು  ಅಮೆರಿಕದ ಬ್ಯಾಂಕ್ ಗಳು ದಿವಾಳಿಯಾಗಿವೆ. ಇನ್ನೊಂದು ಅಮೆರಿಕನ್ ಮತ್ತು ಸ್ವಿಸ್ ಬ್ಯಾಂಕ್…

ಜಾತಿ ತಾರತಮ್ಯ, ಮೀಸಲಾತಿ, ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳಿಗೆ ʻಕೇಂದ್ರ ಕಾರಣʼ : ಮುಂಬೈ ಐಐಟಿ ಎಸ್‍ಸಿ/ಎಸ್‌ಟಿ ಸೆಲ್‍ ಸಮೀಕ್ಷೆ

ಆತನ ಸಾವಿಗೆ ಕ್ಯಾಂಪಸ್‌ ನಲ್ಲಿರುವ ತಾರತಮ್ಯದ ವಾತಾವರಣ ಕಾರಣ ಎಂಬ ತೀವ್ರ ಆರೋಪದ ಹಿನ್ನೆಲೆಯಲ್ಲಿ ಐಐಟಿ, ಬಾಂಬೆ ನೇಮಿಸಿದ ತನಿಖಾ ಸಮಿತಿ ಆತನ ಆತ್ಮಹತ್ಯೆಗೆ…

ರಾತ್ರಿ ಪಾಳಿಯ ಕೆಲಸದಲ್ಲಿ ದುಡಿಯುವ ಮಹಿಳೆಯರ ಸಂಕಷ್ಟಗಳು

ಹೆಚ್.ಎಸ್.ಸುನಂದ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ 1948 ಕ್ಕೆ ತಿದ್ದುಪಡಿ ಮಾಡಿ ವಿಧೇಯಕ 2023ನ್ನು…

ಚೀನಾ ವಿಜ್ಞಾನ-ತಂತ್ರಜ್ಞಾನದ ಸೂಪರ್ ಪವರ್ ಆಗಿ ಬಿಟ್ಟಿದೆಯೇ?

ವಸಂತರಾಜ ಎನ್.ಕೆ. ಕೃತಕ ಬುದ್ಧಿಮತ್ತೆ, 5ಜಿ, ಸೆಮಿಕಂಡಕ್ಟರ್ ಮುಂತಾದ ವಿಜ್ಞಾನ-ತಂತ್ರಜ್ಞಾನದ ಮುಂಚೂಣಿ ಕ್ಷೇತ್ರಗಳಲ್ಲಿ ಚೀನಾ ಸ್ವಾವಲಂಬನೆ ಮತ್ತು ಉತ್ತಮ ಮುನ್ನಡೆ ಸಾಧಿಸಿದೆ…

ತ್ರಿಪುರಾ: ಬಿಜೆಪಿ ಮೈತ್ರಿಕೂಟಕ್ಕೆ ಸಿಕ್ಕಿರುವುದು ಸರಳ ಬಹುಮತ

ಎ. ಅನ್ವರ್ ಹುಸೇನ್ 2021ರ ಅಂತ್ಯದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಅದು ಶೇ. 60ರಷ್ಟು…