“ಭಾರತ ಮುಸ್ಲಿಂ ರಾಷ್ಟ್ರವಾಗವುದೇ?” ಪುಸ್ತಕ ಪರಿಚಯ; ಸಂವಾದ ಕಾರ್ಯಕ್ರಮ

ಉಪ್ಪಿನಂಗಡಿ: ವೈದ್ಯ ಹಾಗೂ ರಾಜಕೀಯ ಮುಖಂಡ ರಾಜಾರಾಮ್ ಕೊಂಗುಜೆ ಅವರ ಮನೆಯಲ್ಲಿ ಸಾಹಿತಿ ಎಂ ಜಿ ಹೆಗಡೆ ಅವರ “ಭಾರತ ಮುಸ್ಲಿಂ ರಾಷ್ಟ್ರವಾಗವುದೇ?” ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಲೇಖಕ ಎಂ ಜಿ ಹೆಗಡೆ ಅವರು ಮಾತನಾಡಿ, ಸುಳ್ಳುಗಳ ವಿರುದ್ಧ ನಿರಂತರ ಹೋರಾಟ ಅಗತ್ಯವಿದೆ. ಅದು ಎಲ್ಲಾ ರೀತಿಯಲ್ಲಿಯೂ ನಡೆಯಬೇಕು. ಸಮಾಜದಲ್ಲಿ ಹಿಂಸೆ ಮತ್ತು ದ್ವೇಷ ಹುಟ್ಟಿಸುವ ಸುಳ್ಳುಗಳ ವಿರುದ್ಧ ಸಾಹಿತ್ಯ ಚಳುವಳಿಯ ಪಾತ್ರ ಬಹು ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ: ಕಬಡ್ಡಿ ಬೆಟ್ಟಿಂಗ್ ಪ್ರಕರಣ: ಪರಮೇಶ್ವರ ವಿರುದ್ಧ ಎಫ್‌ಐಆರ್ ಆದೇಶಕ್ಕೆ ಹೈಕೋರ್ಟ್ ತಡೆ

ಅಂಕಿ ಅಂಶಗಳ ದಾಖಲೆ ಸಹಿತ ಮುಸ್ಲಿಂ ಜನಸಂಖ್ಯೆ ಯಾವುದೇ ಕಾರಣಕ್ಕೂ ಮಿತಿ ಮೀರಿ ಭಾರತ ಮುಸ್ಲಿಂ ರಾಷ್ಟ್ರವಾಗುವುದಿಲ್ಲ ಎಂದು ಇದರಲ್ಲಿ ಸಾಬೀತು ಮಾಡಲಾಗಿದೆ.

ಈ ಸಭೆಯಲ್ಲಿ ಸ್ಥಳೀಯ ಸಾಮಾಜಿಕ ಮುಖಂಡರುಗಳಾದ ಅಜೀಜ್ ಬಸ್ತಿಕಾರ್, ಅಶ್ರಫ್ ಬಸ್ತಿಕಾರ್, ಕೃಷ್ಣ ರಾವ್ ಅರ್ತಿಲ , ಸೋಮನಾಥ ರಾಮನಗರ, ಅಬ್ದುಲ್ ರಹಿಮಾನ್ ಮಠ, ಆದಮ್ ಕೊಪ್ಪಳ, ಆಸಿಫ್ ಉಪ್ಪಿನಂಗಡಿ, ವೆಂಕಪ್ಪ ಪೂಜಾರಿ ಮರುವೆಲು, ಇಸ್ಮಾಯಿಲ್ ಇಕ್ಬಾಲ್ ಪಾಂಡೆಲ್,ಜನಾರ್ಧನ ಪೂಜಾರಿ ನೂಜ, ಲತೀಫ್ ನಿನ್ನಿಕಲ್, ಹಮೀದ್ ಕರಾವಳಿ ಉಪಸ್ಥಿತರಿದ್ದರು.

ಡಾ. ರಾಜರಾಮ್ ಕೊಂಗುಜೆ ಸ್ವಾಗತಿಸಿದರು. ಸಧ್ಯದಲ್ಲೇ ಉಪ್ಪಿನಂಗಡಿಯಲ್ಲಿ ಈ ಕುರಿತು ಇನ್ನೊಂದು ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಲಾಯಿತು. ಆಜೀಜ್ ಬಸ್ತಿಕಾರ್ ವಂದಿಸಿದರು.

ಇದನ್ನೂ ನೋಡಿ: ವಿಶ್ವ ಪುಸ್ತಕ ದಿನ: ಶಿಕ್ಷಣದ ಕೇಂದ್ರೀಕರಣದ ವಿರುದ್ಧ ಚಿಂತನೆಯ ಧ್ವನಿ Janashakthi Media

Donate Janashakthi Media

Leave a Reply

Your email address will not be published. Required fields are marked *