ಬೆಂಗಳೂರು: ಕಳೆದ ಎಂಟು ತಿಂಗಳಿಂದ ಕನಿಷ್ಠ ಕೋಳಿ ಸಾಕಾಣಿಕೆ ದರವಾಗಿ ಕೆಜಿಗೆ 20 ರೂ ನಿಗದಿ ಮಾಡುವಂತೆ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಳಿ ಸಾಕಾಣಿಕೆ ರೈತರು ಹೋರಾಟ ಮಾಡುತ್ತಿದ್ದು ಮದ್ಯಂತರ ದರವಾಗಿ 10 ರೂ ನಿಗದಿ ಪಡಿಸಲು ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶಿಸಿರುವುದು ಕೋಳಿ ಸಾಕಾಣಿಕೆ ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸಮಿತಿ ಹರ್ಷ ವ್ಯಕ್ತಪಡಿಸುತ್ತದೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪಶುಸಂಗೋಪನ ಇಲಾಖೆಯ ಸಚಿವರು ಮಾನ್ಯ ಕೆ ವೆಂಕಟೇಶ್ ರವರಿಗೆ ಪಶುಸಂಗೋಪನ ಇಲಾಖೆಯ ಮುಖ್ಯ ಕಾರ್ಯದರ್ಶಿ ರವರಿಗೆ ಪಶುಭವನದ ಆಯುಕ್ತರಿಗೆ ಕುಕ್ಕಟ ಮಹಾಮಂಡಳಿ ಅಧ್ಯಕ್ಷರಿಗೆ ಆಡಳಿತ ಅಧಿಕಾರಿಗೆ ಕೋಳಿ ಸಾಕಾಣಿಕ ರೈತರ ಪ್ರಮುಖ ಸಮಸ್ಯೆಯಾದ ಕಂಪನಿ ಗಳಿಂದ ಸಾಕಾಣಿಕ ವೆಚ್ಚವನ್ನು ಮಿನಿಮಮ್ ಸಾಕಾಣಿಕ ವೆಚ್ಚ 20 ರೂಪಾಯಿಗೆ ನಿಗದಿ ಮಾಡಲು ಮನವಿಯನ್ನ ಸಲ್ಲಿಸಿ ಹಲವಾರು ಹಂತದ ಪ್ರತಿಭಟನೆಗಳನ್ನು ನಡೆಸಿ ಒತ್ತಾಯಿಸಲಾಗಿತ್ತು.
ಇದರ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಕೋಳಿ ಸಾಕಾಣಿಕ ರೈತರಿಗೆ ಸಾಲ ಸೌಲಭ್ಯ ಕೋಳಿ ಸಾಕಾಣಿಕ ರೈತರಿಗೆ ಸಹಾಯಧನ ಸೌಲಭ್ಯಗಳನ್ನು ನೀಡಬೇಕೆಂದು ಮನವಿಯನ್ನು 7/8/2025 ಮನವಿಯನ್ನು ಸಲ್ಲಿಸಲಾಗಿತ್ತು ಪಶುಸಂಗೋಪನ ಆಯುಕ್ತರು19/9/2025 ರಂದು ಕಂಪನಿಗಳು ಮತ್ತು ರೈತರ ಸಭೆಯನ್ನು ನಡೆಸಿದ್ದರು.
ಇದನ್ನೂ ಓದಿ: ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಆರೋಪ: ಮಾಲ್ದಾದಲ್ಲಿ 15 ಮಂದಿ ಬಂಧನ
ನಂತರ 31/1/2026 ರಂದು ಮತ್ತೊಂದು ಸುತ್ತಿನ ಕಂಪನಿಗಳು ಮತ್ತು ರೈತರ ಸಭೆಯನ್ನು ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು ಮತ್ತೆ 11/2/2026 ರಂದು ಕಂಪನಿಗಳನ್ನು ಮಾತ್ರ ಸಭೆ ಕರೆದು ಚರ್ಚೆ ಮಾಡಿ ರೈತರ ಮತ್ತು ಕಂಪನಿಗಳ ಅಭಿಪ್ರಾಯವನ್ನು ಪಡೆದುಕೊಂಡು ಸರ್ಕಾರದ ಹಂತದಲ್ಲಿ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ನಡೆಸಿದ್ದರು.
ಇದರ ಮಧ್ಯದಲ್ಲಿ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಕೆಜಿಎಫ್ ಶಾಸಕರು ಡಾಕ್ಟರ್ ರೂಪಕಲಾ ಶಶಿಧರ್ ರವರು ನಮ್ಮ ಸಂಘದ ಮನವಿಯ ಮೇರೆಗೆ ರೈತರ ಸಮಸ್ಯೆಗಳನ್ನು ಸದನದಲ್ಲಿ ಪ್ರಶ್ನೆ ಮಾಡುವ ಮುಖಾಂತರ ಸರ್ಕಾರದ ಗಮನವನ್ನು ಸೆಳೆದಿದ್ದರು. ಪಶುಸಂಗೋಪನ ಸಚಿವರು ಉತ್ತರವಾಗಿ ಸರ್ಕಾರದ ಹಂತದಲ್ಲಿ ಸಮಿತಿಯನ್ನು ರಚನೆ ಮಾಡಿ ಸಮಿತಿಯ ವರದಿ ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಉತ್ತರದಲ್ಲಿ ತಿಳಿಸಿದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೋಳಿ ಸಾಕಾಣಿಕ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಗಣಿಸಿ ಹಾಗೂ ಆರ್ಥಿಕ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕ್ರಮವಾಗಿ ಮಧ್ಯಂತರ ಆದೇಶವಾಗಿ ಕನಿಷ್ಠ ಸಾಕಾಣಿಕ ವೆಚ್ಚ 10 ರೂಪಾಯಿ ನಿಗದಿ ಮಾಡಿ ಸರ್ಕಾರ ಆದೇಶ ಮಾಡಿದೆ.
ಈ ಆದೇಶವನ್ನು ಜಾರಿ ಮಾಡುವ ಕೆಲಸವನ್ನು ಪಶುಭವನದ ಆಯುಕ್ತರಿಗೆ ವಹಿಸಲಾಗಿದೆ ಈ ಎಲ್ಲಾ ಕ್ರಮವನ್ನು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕ ಕ್ಷೇಮಾಭಿವೃದ್ಧಿ ಸಂಘ ಸ್ವಾಗತಿಸುತ್ತೇವೆ ಮತ್ತು ಪಶುಸಂಗೋಪನ ಸಚಿವರು ಕೆ ವೆಂಕಟೇಶ್ ರವರಿಗೆ ಕೆಜಿಎಫ್ ಶಾಸಕರು ರೂಪಕಲಾ ಶಶಿಧರ್ ರವರಿಗೆ ಆಯುಕ್ತರು ಶಿಲ್ಪಾನಾಗ್ ಮೇಡಂ ರವರಿಗೆ ಕುಕ್ಕಟ ಮಹಾಮಂಡಳಿಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಸಮಿತಿ ಸಭೆಯು ಆದಷ್ಟು ಶೀಘ್ರವಾಗಿ ನಡೆದು ವೈಜ್ಞಾನಿಕ ರೀತಿಯಲ್ಲಿ ಸ್ವಾಮಿನಾಥನ್ ಆಯೋಗದ ಪ್ರಕಾರ c+2 50% ಲಾಭಾಂಶ ಸೇರಿಸಿ ಬೆಲೆ ನಿಗದಿ ಆಗಬೇಕೆಂದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷ ಸಾಲ ಸೌಲಭ್ಯ ಮತ್ತು ಸಹಾಯಧನ ಸೌಲಭ್ಯಗಳನ್ನು ಸರ್ಕಾರ ನೀಡಬೇಕೆಂದು ಪಶುಸಂಗೋಪನ ಸಚಿವರಿಗೆ ಹಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಧ್ಯಮದ ಮುಖಾಂತರ ಮಾಡಿಕೊಳ್ಳುತ್ತೇವೆ.
ಇದನ್ನೂ ನೋಡಿ: ಭಾರತದ ಪ್ರಜಾಪ್ರಭುತ್ವ ಮತ್ತು ನಾರ್ವೆ ಪತ್ರಕರ್ತರು:ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ? Janashakthi Media
