ಮತದಾನದ ಹಕ್ಕು ಪೋರೈಸಿ ಪ್ರಾಣ ಬಿಟ್ಟ ವೃದ್ಧರು

ಬೆಂಗಳೂರು: ಮತದಾನದ ಹಕ್ಕನ್ನು ಪೋರೈಸಿದ ನಂತರ ಇಬ್ಬರು ವೃದ್ಧರು ಪ್ರಾಣ ಬಿಟ್ಟಿದ್ದಾರೆ. ಸಾವಿನ ಸಂದರ್ಭದಲ್ಲಿಯೂ ಅವರ ಮತದಾನದ ಹಕ್ಕು ಚಲಾಯಿಸಿದ್ದು ಮಾದರಿಯ ನಡೆಯಾಗಿದೆ ಎಂದು ಶ್ಲಾಘಿಸಲಾಗುತ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮತ ಚಲಾವಣೆ ಮಾಡಿದ ಕೆಲವೇ ಹೊತ್ತಿನಲ್ಲಿ 91 ವರ್ಷ ವಯಸ್ಸಿನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹುಣಸೂರು ತಾಲ್ಲೂಕು ಬರುತ್ತದೆ.

ಮೃತರನ್ನು ಪುಟ್ಟಮ್ಮ ಎಂದು ಗುರ್ತಿಸಲಾಗಿದ್ದು, ವಯೋವೃದ್ಧರಾಗಿದ್ದರೂ ಕೂಡಾ, ವಯೋ ಸಹಜವಾದ ಆರೋಗ್ಯ ಸಮಸ್ಯೆಗಳು ಇದ್ದರೂ ಕೂಡಾ ಮತ ಚಲಾವಣೆ ಮಾಡಿ ಯುವ ಸಮುದಾಯಕ್ಕೆ ಮಾದರಿ ಆಗಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕೆ.ಸುಧಾಕರ್‌ ಆಪ್ತನ ಮನೆಯಲ್ಲಿ ಹಣ: ಪ್ರಕರಣ ದಾಖಲಿಸಿದ ಚುನಾವಣಾ ಆಯೋಗ

ಚಿತ್ರದುರ್ಗದ ಸರೋಜಮ್ಮ ಎಂಬ  92 ವರ್ಷದ ವೃದ್ಧೆ ಮತ ಚಲಾವಣೆಯ ನಂತರ ಮೃತರಾಗಿದ್ದಾರೆ. ಮತದಾನ ಮುಗಿಸಿ ಮೊಮ್ಮಗನ ಜೊತೆ ಮನೆಗೆ ವಾಪಸ್ಸಾಗುತ್ತಿದ್ದಾಗ ಅವರು ಮೃತರಾಗಿದ್ದಾರೆ.  ಇದೇ ವೇಳೆ ಚಿತ್ರದುರ್ಗದಲ್ಲಿ ಕರ್ತವ್ಯ ನಿರತ ಚುನಾವಣಾ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 55 ವರ್ಷ ಯಶೋಧಮ್ಮ ಎಂಬುವರು ಲೋ ಬಿಪಿಯಿಂದ ಕುಸಿದು ಬಿದ್ದರು. ಕೂಡಲೆ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ದಾರಿ ಮಧ್ಯೆ ನಿಧನರಾದರು. ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ನೋಡಿ: ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!

Donate Janashakthi Media

Leave a Reply

Your email address will not be published. Required fields are marked *