ಲೋಕಸಭೆ ಚುನಾವಣೆ-2024| ಎರಡನೇ ಹಂತ: ದೇಶದ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ ವೇಳೆಗೆ ಶೇ40 ರಷ್ಟು ಮತದಾನ

ನವದೆಹಲಿ: 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 18ನೇ ಲೋಕಸಭೆ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.

ಮಧ್ಯಾಹ್ನ 1 ಗಂಟೆಗೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 39.1% ಮತದಾನವಾಗಿದೆ. ಮಣಿಪುರ, ಛತ್ತೀಸ್‌ಗಢ ಮತ್ತು ತ್ರಿಪುರಾದಲ್ಲಿ 53% ಕ್ಕಿಂತ ಹೆಚ್ಚು ಮತದಾನವಾಗಿದ್ದು, ಮಹಾರಾಷ್ಟ್ರದಲ್ಲಿ 31% ಕ್ಕಿಂತ ಕಡಿಮೆ ಮತದಾನವಾಗಿದೆ. 2019 ರಲ್ಲಿ, ಈ 88 ಸ್ಥಾನಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 40% ಮತದಾನ ದಾಖಲಾಗಿದೆ.

ಕೇರಳದ ಎಲ್ಲಾ 20 ಸ್ಥಾನಗಳು, ಕರ್ನಾಟಕದ 28 ಸ್ಥಾನಗಳಲ್ಲಿ 14, ರಾಜಸ್ಥಾನದಲ್ಲಿ 13 ಸ್ಥಾನಗಳು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8 ಸ್ಥಾನಗಳು, ಮಧ್ಯಪ್ರದೇಶದಲ್ಲಿ 7 ಸ್ಥಾನಗಳು, ಅಸ್ಸಾಂ ಮತ್ತು ಬಿಹಾರದಲ್ಲಿ ತಲಾ 5 ಸ್ಥಾನಗಳು, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3 ಸ್ಥಾನಗಳು , ಮತ್ತು ಮಣಿಪುರ, ತ್ರಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಸ್ಥಾನಕ್ಕೆ ನಾಳೆ ಮತದಾನ ನಡೆಯಲಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ : ಹಕ್ಕು ಚಲಾಯಿಸಿದ ಮಧುಮಗಳು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್,ಹಾಗೂ ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್ ಮತ್ತು ಶಫಿ ಪರಂಬಿಲ್ ಬೆಳಗ್ಗೆಯೇ ಮತ ಚಲಾಯಿಸಿದರು.

ಕರ್ನಾಟಕದಲ್ಲಿ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಒಟ್ಟಾರೆ ಶೇಕಡಾ 22.34 ರಷ್ಟು ಮತದಾನವಾಗಿದ್ದು, ಮತಗಟ್ಟೆಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಪೌರಕಾರ್ಮಿಕರು, ಕೂಲಿಕಾರರು, ರೈತರು, ಬೀದಿಬದಿ ವ್ಯಾಪಾರಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಕೇಂದ್ರ ಹಣಕಾಸು ಸಚಿವೆ ಮತ್ತು ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಮತ್ತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿದಂತೆ ಅನೇಕ ಸಚಿವರು, ಶಾಸಕರು ಮತವನ್ನು ಚಲಾಯಿಸಿದರು.

ಏಳು ಹಂತಗಳ ಪೈಕಿ ಕಳೆದ ಶುಕ್ರವಾರ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು. ಮತದಾನದಲ್ಲಿ ಸುಮಾರು 65.5% ರಷ್ಟು ಮತದಾನವಾಗಿದೆ.

ಇದನ್ನೂ ನೋಡಿ: ಮೋದಿಯವರ ‘ಮುಸ್ಲಿಂ, ಮೊಘಲ್, ಮಟನ್’ ಎನ್ನುವ ಅಪಾಯಕಾರಿ ಸಿದ್ಧಾಂತ. Janashakthi Media

Donate Janashakthi Media

Leave a Reply

Your email address will not be published. Required fields are marked *