ಲೈಂಗಿಕ ದೌರ್ಜನ್ಯ ಪ್ರಕರಣ : ರಾಜಕೀಯ ಕೆಸರೆರಚಾಟ ನಿಲ್ಲಿಸಿ – ಜನವಾದಿ ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಮುಖ ಆರೋಪಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಪೆನ್‌ಡ್ರೈವ್‌ ಹಂಚಿಕೆ ವಿಚಾರ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರಚಾಟಗಳಿ ಮಾತ್ರ ಸೀಮಿತವಾಗಿದ್ದು, ಹೆಚ್.ಡಿ. ರೇವಣ್ಣರ ಮತ್ತು ಪ್ರಜ್ವಲ್ ರೇವಣ್ಣ ಮೇಲೆ ಸೂಕ್ತ ರೀತಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತವಾದ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ. ಸರ್ಕಾರಿ ವಕೀಲರು ಹೆಚ್.ಡಿ.ರೇವಣ್ಣ ಮೇಲಿನ ಆರೋಪಕ್ಕೆ ದಾಖಲಾದ ದೂರು ಜಾಮೀನುರಹಿತವಾಗಿದೆ. ಹಾಗಾಗಿ ಸರ್ಕಾರ ಅವರನ್ನು ಬಂಧಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿರುವುದು ದಿಗ್ಭ್ರಮೆ ಮೂಡಿಸುವ ವಿಚಾರವಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿದ್ದಾರೆ.

ಸರಕಾರಿ ವಕೀಲರು ಅವರ ಮೇಲಿನ ಆರೋಪಕ್ಕೆ ದಾಖಲಾದ ದೂರು ಜಾಮೀನು ರಹಿತ ಅಲ್ಲವಾಗಿರುವುದರಿಂದ ಅವರನ್ನು ಸರಕಾರ ಬಂಧಿಸುವುದಿಲ್ಲವೆಂದು ಮಾನ್ಯ ನ್ಯಾಯಾಲಯಕ್ಕೆ ಭರವಸೆ ಕೊಟ್ಟ ಕಾರಣಕ್ಕಾಗಿ ಅವರು ನಿರೀಕ್ಷಣಾ ಜಾಮೀನು ಹಿಂತೆಗೆದುಕೊಂಡರು ಎಂಬ ವರದಿಗಳು ಬರುತ್ತಿವೆ.ಈ ಹಿಂದೆ ಪ್ರಭಾಕರ ಭಟ್ಟ ಕಲ್ಲಡ್ಕ ವಿಷಯದಲ್ಲಿಯೂ ರಾಜ್ಯ ಸರಕಾರ ಹೀಗೇ ನಡೆದುಕೊಂಡು ಮಹಿಳೆಯರ ಘನತೆಯ ಕುರಿತು ತನಗಿರುವ ಅವಜ್ಞೆಯನ್ನು ತೋರಿಸಿಕೊಟ್ಟಿದೆ.ಮಹಿಳೆಯರ ಘನತೆಯ ಬದುಕಿಗೆ ಕೊಳ್ಳಿ ಇಡುವ ಕೃತ್ಯ ಎಸಗಿದ ಇಬ್ಬರು ಜನ ಪ್ರತಿನಿಧಿಗಳು, ಬಹಿರಂಗವಾಗಿ ಪೆನ್ ಡ್ರೈವ್ ಹಂಚಿದ ಅಮಾನವೀಯ ಮತ್ತು ಕಾನೂನು ಬಾಹಿರ ಕೃತ್ಯಗಳು ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿವೆ. ಪ್ರತಿಭಟನೆ ಗಳು ನಡೆಯುತ್ತಿವೆ.

ಇದನ್ನೂ ಓದಿ: ಅಧಿಕ ಬಿಸಿಲಿಗೆ ಕಿಡ್ನಿಸ್ಟೋನ್ ಪ್ರಕರಣ ಹೆಚ್ಚಳ

ಪರಸ್ಪರ ಕೆಸರೆರೆಚಿಕೊಂಡು ಕಾಲ ಹರಣ ಮಾಡುತ್ತಿರುವ ರಾಜಕೀಯ ಪಕ್ಷಗಳು, ಕದಡಿದ ನೀರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿ.ಜೆ.ಪಿ. ಇವೆಲ್ಲವುಗಳ ಮಧ್ಯೆ ನ್ಯಾಯ ಸೊರಗುತ್ತಿದೆ ಎಂದು ರಾಜ್ಯದ ಮಹಿಳೆಯರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ತಿಕ್ಕಾಟವನ್ನು ಮೀನಾಕ್ಷಿ ಬಾಳಿ ಖಂಡಿಸಿದರು.

ಎಸ್‌ಐಟಿ ಅಧಿಕಾರಿಗಳು ಹೆಚ್.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣರವರನ್ನು ಸರಕಾರಕ್ಕಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಹಿಡಿದು ತರಬೇಕು.ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಬಂಧಿಸುವುದಿಲ್ಲ ಎಂಬ ಭರವಸೆ ಕೊಡುವ ಬದಲು ವಿರೋಧಿಸಬೇಕು.ಪ್ರಾಥಮಿಕ ಹಂತದಲ್ಲಿ ಪ್ರಕರಣ ದಾಖಲಿಸುವಾಗ ಇಂತಹ ವಿಚಾರಣೆಗೆ ಕರೆದು ಸಮಗ್ರ ತನಿಖೆ ನಡೆಸಿ ಯಾವುದೇ ಕಾರಣಕ್ಕೂ ಅವರು ಸಾಕ್ಷಿ ನಾಶದಂತಹ ಕೆಲಸಕ್ಕೆ ಹೋಗದಂತೆ ಕ್ರಮ ಕೈಗೊಳ್ಳಬೇಕು.ಅತ್ಯಾಚಾರ ದ ವ್ಯಾಖ್ಯಾನವನ್ನು ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳ ನೆಲೆಯಲ್ಲಿ ನೋಡಬೇಕು.ಮೊದಲ ಹಂತದಲ್ಲಿಯೇ ಪ್ರಕರಣ ದಾಖಲಿಸುವಾಗ ಇಂತಹ ಅತ್ಯಂತ ಘೋರ ಅಪರಾಧವನ್ನು ಹಗುರ‌ ಕಾನೂನಿನ ಅಡಿಯಲ್ಲಿ ದಾಖಲಿಸಿರುವುದೇ ಅವರು ತಪ್ಪಿಸಿಕೊಳ್ಳಲು ಅವಕಾಶ ನೀಡಿರುವುದು ಸರಕಾರದ ಮಾತು ಮತ್ತು ಕೃತಿಯಲ್ಲಿ ಇರುವ ಅಗಾಧ ಅಂತರವನ್ನು ತೋರಿಸುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಒತ್ತಾಯಿಸಿದೆ.

ಇದನ್ನೂ ನೋಡಿ: ಬಿಜೆಪಿಗೆ 400 ಪ್ಲಸ್ ಅಂದರೆ ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ಅಂತ್ಯ, ‘ಇಲ್ಲಿದೆ ವಿವರಗಳು’ Janashakthi Media

Donate Janashakthi Media

Leave a Reply

Your email address will not be published. Required fields are marked *