ದೇವರಾಜೇಗೌಡ ನಕಲಿ ವಕೀಲ, ಶಿವರಾಮೇಗೌಡ ಆರೋಪ

ಬೆಂಗಳೂರು: ಪೆನ್ ಡ್ರೈವ್ ಪ್ರಕರಣದ ರುವಾರಿ ದೇವರಾಜೇಗೌಡ ಅವರನ್ನು ಮೊದಲು ಎಸ್ ಐ ಟಿ ಬಂಧಿಸಲಿ. ಅವರ ಹಣದ ಮೂಲ ತನಿಖೆಯಾಗಲಿ. ಮತ್ತು ಕಳೆದ ಮೂರು ತಿಂಗಳಿಂದ ಯಾರ್ಯಾರ ಜೊತೆ ಫೋನ್ ಸಂಭಾಷಣೆ ನಡೆಸಿದ್ದಾರೆ ಅದು ಬಹಿರಂಗವಾಗಲಿ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಆಗ್ರಹಿಸಿದರು.

ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ದೇವರಾಜೇಗೌಡ ನನ್ನ ಹೆಸರು ಬಳಕೆ ಮಾಡಿದ್ದು ವಿಷಾದನೀಯ. ಯಾವ ಹುದ್ದೆ ಆಫರ್ ಮಾಡಿಲ್ಲ. ದೇವರಾಜೇಗೌಡ ಜೊತೆಗಿನ ಡಿಕೆಶಿ ಫೋನ್ ಸಂಭಾಷಣೆಯ ಸಂದರ್ಭದಲ್ಲಿ ಯಾವುದೇ ಹುದ್ದೆ ಆಫರ್ ಮಾಡಿಲ್ಲ. ಸಚಿವ ಸ್ಥಾನ ಬಿಡಿ ಗ್ರಾಮ ಪಂಚಾಯತ್ ಹುದ್ದೆಯೂ ಆಫರ್ ಮಾಡಿಲ್ಲ. ದೇವರಾಜೇಗೌಡ ಗ್ರಾಮಪಂಚಾಯತ್ ಸದಸ್ಯ ಆಗಲೂ ನಾಲಾಯಕ್ ಎಂದು ಕಿಡಿ ಕಾರಿದರು

ಹಾಸನ ಪೆನ್ ಡ್ರೈವ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ದೇವರಾಜೇಗೌಡ ನಕಲಿ ವಕೀಲ, ಅವರ ಮೈಯಲ್ಲಾ ಕ್ಯಾಮೆರಾ ಇದೆ ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.

ಏಪ್ರಿಲ್ 29 ಕ್ಕೆ ದೇವರಾಜೇಗೌಡ ನಾನು ಭೇಟಿಯಾಗಿದ್ದು ಇದೇ ಮೊದಲು. ಅಲ್ಲಿ ತನಕ ಅವರನ್ನು ನಾನು ಈ ಹಿಂದೆ ಯಾವತ್ತೂ ಭೇಟಿಯಾಗಿರಲಿಲ್ಲ .ಈ ವೇಳೆ ಡಿಕೆಶಿ ಭೇಟಿ ಮಾಡಿಸಿ ಎಂದು ನನ್ನಲ್ಲಿ ಪದೇ ಪದೇ ಮನವಿ ಮಾಡಿದ್ದರು.

ಹೊಳೆನರಸೀಪುರದವರು ಬಂದು ನಿಮ್ಮನ್ನು ದೇವರಾಜೇಗೌಡ ಕೇಳ್ತಿದ್ದರು ಎಂದರು. ಹಾಗಾಗಿ ಮೊದಲು ಫೋನ್ ನಲ್ಲಿ ನಾನು ದೇವರಾಜೇಗೌಡ ಜೊತೆ ಮಾತನಾಡಿದ್ದೆ. ಆಗ ನನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದರು. ಫೋನ್ ಸಂಭಾಷಣೆ ಸಂದರ್ಭದಲ್ಲಿ ನನ್ನ ಬಳಿ ಹಲವು ದಾಖಲೆ ಇದೆ ಎಂದು ದೇವರಾಜೇಗೌಡ ಹೇಳಿದ್ದರು. ನಿನ್ನ ಬಳಿ ಇರೋದನ್ನ ಎಸ್‌ಐಟಿ ಕೊಡು ಎಂದಷ್ಟೇ ಡಿಕೆಶಿ ಹೇಳಿದ್ದರು ಎಂದು‌ ಶಿವರಾಮೇಗೌಡ ತಿಳಿಸಿದರು.

ಡಿಕೆಶಿ ಜೊತೆ ಮಾತನಾಡಿಸಿದ ನಂತರ ಇದೇ ಹೋಟೆಲ್‌ಗೆ ನನ್ನನ್ನು ದೇವರಾಜೇಗೌಡ ಹುಡುಕಿಕೊಂಡು ಬಂದಿದ್ದರು. ಅವರ ನಡವಳಿಕೆ ಗಮನಿಸಿದರೆ ಹಣ ಗಳಿಸುವ ಉದ್ದೇಶ ಇತ್ತು ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *