ಹೊಸ, ಡಿಜಿಟಲ್‌ ತಲೆಮಾರು ಜವಾಬ್ದಾರಿ ವಹಿಸಿಕೊಂಡಿದೆ

ಪ್ರಸ್ತುತ ವಾಸ್ತವಗಳನ್ನು ತಮ್ಮ ಅನುಭವಗಳ ಮೂಲಕ ಅರ್ಥೈಸಿಕೊಂಡ ಯುವಜನರು, ಸರ್ಕಾರದ ದಾಳಿಗಳನ್ನು ಎದುರಿಸುತ್ತಾ ಬೃಹತ್ ಸಂಖ್ಯೆಯಲ್ಲಿ ಸಂಘಟಿತರಾಗಿ ಮೊದಲ ಪರೀಕ್ಷೆಯಲ್ಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬಹುತೇಕರು ‘‘ರಾಜಕೀಯದಿಂದ ದೂರವಿದ್ದ ತಲೆಮಾರು’’ ಎಂದು ತಳ್ಳಿಹಾಕಿದ್ದ ಯುವಜನರೇ ಸಾವಿರಾರು ಜನರನ್ನು ಚಳವಳಿಯತ್ತ ಆಕರ್ಷಿಸಿದ್ದಾರೆ.ಅವರು ಸಾಂಪ್ರದಾಯಿಕ ರಾಜಕೀಯ ಭಾಷೆಯನ್ನು ಬಳಸದಿದ್ದರೂ, ತಮ್ಮದೇ ಆದ ಭಾಷೆಯಲ್ಲಿ, ತಮ್ಮದೇ ಶೈಲಿಯಲ್ಲಿ ರಾಜಕೀಯ ಚೇತನವನ್ನು ವ್ಯಕ್ತಪಡಿಸಿದ್ದಾರೆ. ಹೊಸ ತಲೆಮಾರು ಜವಾಬ್ದಾರಿಯನ್ನು ವಹಿಸಿಕೊಂಡು ಮುಂದೆ ಸಾಗುತ್ತಿರುವುದು ತುಂಬಾ ತೃಪ್ತಿ ನೀಡುವ ಸಂಗತಿ ಡಿಜಿಟಲ್‌
ಪ್ರಬೀರ್‌ ಪುರಕಾಯಸ್ಥ
(ಅನು:ಸಿಚಿ)

ಈ ವರ್ಷದ ಮೇ 15 ರಂದು ನಿರುದ್ಯೋಗಿ ಯುವಕರ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮಾಡಿದ ಅನುಚಿತ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವ್ಯಂಗ್ಯಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಹುಟ್ಟಿಕೊಂಡಿರಬಹುದು. ಆದರೆ, ನಂತರದ ಕೆಲವೇ ತಿಂಗಳುಗಳಲ್ಲಿ ಅದು ಊಹಿಸಲಾರದ ರೀತಿಯಲ್ಲಿ ರಾಷ್ಟ್ರೀಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಅಭಿಜಿತ್ ದೀಪ್ಕೆ ಮರುದಿನವೇ “ಜಿರಳೆಗಳೆಲ್ಲವೂ ಒಂದಾದರೆ ಏನಾಗುತ್ತದೆ?” ಎಂದು ಮಾಡಿದ ಚಮತ್ಕಾರದ ಹೇಳಿಕೆಗೆ ವಿಶೇಷ ಸ್ಪಂದನೆ ಸಿಕ್ಕಿತು. ಅನಂತರ, ವ್ಯಂಗ್ಯಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ’ ಸೇರಲು ಬಯಸುವವರಿಗಾಗಿ ದೀಪ್ಕೆ ಆನ್‌ಲೈನ್ ಫಾರ್ಮ್ ಒಂದನ್ನು ಲಭ್ಯಗೊಳಿಸಿದರು. ಮೊದಲ 24 ಗಂಟೆಗಳಲ್ಲೇ ಅದಕ್ಕೆ ಐವತ್ತು ಸಾವಿರ ಜನರು ಸ್ಪಂದಿಸಿದರೆ, ಕೆಲವೇ ದಿನಗಳಲ್ಲಿ ಆ ಸಂಖ್ಯೆ ಲಕ್ಷಗಳನ್ನು ತಲುಪಿತು. ದೆಹಲಿಯಲ್ಲಿ ಪ್ರತಿಭಟನೆಗೆ ಅನುಮತಿ ಇರುವ ಪ್ರಮುಖ ಸ್ಥಳಗಳಲ್ಲಿ ಜಂತರ್ ಮಂತರ್ ಕೂಡ ಒಂದು. ಆರಂಭದಲ್ಲಿ ಸಿಜೆಪಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆಯಾಗಿದ್ದರೂ, ಕ್ರಮೇಣ ಅದು ಹೆಚ್ಚಾಯಿತು. ತದನಂತರ ಸಿಜೆಪಿ ಜೊತೆಗೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಜುಲೈ 20 ರಂದು ‘ಪಾರ್ಲಿಮೆಂಟ್ ಮಾರ್ಚ್’ಗೆ ಕರೆ ನೀಡಿದವು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು, ಪೆಲೆಟ್ ಗನ್‌ಗಳ ಬಳಕೆಯೂ ಸೇರಿದಂತೆ ತೀವ್ರ ಬಲಪ್ರಯೋಗಕ್ಕೆ ಮುಂದಾದರು. ಜಂತರ್ ಮಂತರ್ ಪರಿಸರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದು, ಮೆಟ್ರೋ ಸೇವೆಗಳನ್ನು ಬಂದ್ ಮಾಡುವುದರ ಮೂಲಕ ಪ್ರತಿಭಟನಾಕಾರರನ್ನು ಒಂಟಿ ಮಾಡಬಹುದು ಎಂದು ಅವರು ಭಾವಿಸಿದ್ದರು. ಆದರೆ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಯಿತು.

ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್‌ಗಳು ಹರಿದುಬಂದಿದ್ದರಿಂದ ಪೊಲೀಸರ ಕ್ರಮಗಳು ದೇಶಾದ್ಯಂತ ಕ್ಷಣಾರ್ಧದಲ್ಲಿ ತಲುಪಿದವು. ಹೆಸರು ಬಿಲ್ಲೆಗಳೂ ಇಲ್ಲದ ಪೊಲೀಸರು ಯುವ ವಿದ್ಯಾರ್ಥಿಗಳು, ಯುವಕರು ಮತ್ತು ಯುವತಿಯರ ಮೇಲೆ ನಡೆಸಿದ ಹಿಂಸೆಯನ್ನು ಆ ಪೋಸ್ಟ್‌ಗಳು ಸ್ಪಷ್ಟವಾಗಿ ತೋರಿಸಿದವು. ಯುನಿಫಾರ್ಮ್ ಇಲ್ಲದ ಪೊಲೀಸರು ಅಥವಾ ಪೊಲೀಸರೊಂದಿಗೆ ಸೇರಿ ಕೆಲಸ ಮಾಡುತ್ತಿರುವ ವ್ಯಕ್ತಿಗಳೂ ಸಹ ದಾಳಿಯಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಯಾವುದೇ ಪ್ರಚೋದನೆ ಇಲ್ಲದಿದ್ದರೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಯುವತಿಯ ಮೇಲೆ ದಾಳಿ ಮಾಡಿದ ದೃಶ್ಯಗಳು ಸಹ ವೈರಲ್ ಆದವು. ಇದರಿಂದಾಗಿ ಈ ಚಳವಳಿಯು ಜಂತರ್ ಮಂತರ್‌ಗಷ್ಟೇ ಸೀಮಿತವಾಗದೆ, ಇಂಟರ್ನೆಟ್‌ನ ವರ್ಚುವಲ್ ಜಗತ್ತಿನಲ್ಲೂ ಪ್ರತ್ಯಕ್ಷವಾಗಿ ಮುಂದುವರಿಯಿತು.

ಪೊಲೀಸರು ಅತಿಯಾದ ಬಲಪ್ರಯೋಗದಿಂದ ವಿದ್ಯಾರ್ಥಿಗಳನ್ನು ಮತ್ತು ಯುವಜನರನ್ನು ಚದುರಿಸಲು ಯತ್ನಿಸುವುದು ಸರ್ಕಾರಗಳಿಗೆ ಹೊಸ ವಿಷಯವೇನಲ್ಲ. ಕೆಲವು ಸಂದರ್ಭಗಳಲ್ಲಿ ಅದು ಫಲ ನೀಡುತ್ತದೆ, ಇನ್ನು ಕೆಲವು ಸಂದರ್ಭಗಳಲ್ಲಿ ವಿಫಲವಾಗುತ್ತದೆ. ಆದರೆ ಈ ಬಾರಿ ಅದು ಸಂಪೂರ್ಣವಾಗಿ ಉಲ್ಟಾ ಹೊಡೆಯಿತು. ಜಂತರ್ ಮಂತರ್‌ಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಲ್ಲದೆ, ದೇಶಾದ್ಯಂತ ಪ್ರತಿಭಟನೆಗಳಿಗೆ ವೇಗ ಸಿಕ್ಕಿತು. ಶೀಘ್ರದಲ್ಲೇ ಬಿಹಾರ, ಉತ್ತರ ಪ್ರದೇಶ, ಮುಂಬೈ, ಕೋಲ್ಕತ್ತಾ ಮುಂತಾದ ಪ್ರದೇಶಗಳಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಳು ವ್ಯಕ್ತವಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಇದರಿಂದಾಗಿ ಇದು ದೆಹಲಿಯ ಕೆಲವೇ ವಿದ್ಯಾರ್ಥಿಗಳ ಬೇಡಿಕೆಯಾಗಿ ಉಳಿಯದೆ, ದೇಶಾದ್ಯಂತ ಯುವಜನರ ದನಿಯಾಗಿ ಬದಲಾಯಿತು. ಪರಿಣಾಮವಾಗಿ, ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ವಿಷಯದಲ್ಲಿ ಮೋದಿ ಸರ್ಕಾರವು ತನ್ನ ಮೇಲುಗೈಯನ್ನು ಕಳೆದುಕೊಂಡಿತು. ಡಿಜಿಟಲ್‌

ಇದನ್ನೂ ಓದಿ : ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಚರ್ಚೆಗೆ ಅಮಿತ್‌ ಶಾ ಷರತ್ತು: ರಾಹುಲ್‌ ಗಾಂಧಿ ವಿರೋಧ

ಸುದ್ದಿಗಳ ಮೇಲೆ ಯಾರ ಆಧಿಪತ್ಯ?

ಹೆಚ್ಚಿನ ದಿನಪತ್ರಿಕೆಗಳು ಮತ್ತು ಟೆಲಿವಿಷನ್ ಸುದ್ದಿಗಳ ಕಾರ್ಯಸೂಚಿಯನ್ನು (ಅಜೆಂಡಾ) ಸರ್ಕಾರಗಳು ಹಾಗೂ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಪ್ರಭಾವಿಸಬಲ್ಲವು. ಸ್ವಾತಂತ್ರ್ಯದ ನಂತರ ವೃತ್ತಪತ್ರಿಕೆಗಳನ್ನು ‘ಜೂಟ್ ಪ್ರೆಸ್’ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಅಂದಿನ ಪ್ರಮುಖ ಪತ್ರಿಕಾ ಸಂಸ್ಥೆಗಳು ಸೆಣಬಿನ (ಜೂಟ್) ವ್ಯಾಪಾರಿಗಳಾದ ಬಿರ್ಲಾ, ದಾಲ್ಮಿಯಾ, ಸಾಹು ಜೈನ್ ಮುಂತಾದ ಉದ್ಯಮಿಗಳ ಹೂಡಿಕೆಗಳಿಂದ ಸ್ಥಾಪನೆಯಾಗಿದ್ದವು. ಪರಿಣಾಮವಾಗಿ, ಯಾವುದು ಸುದ್ದಿಯಾಗಬೇಕು, ಮುಖ್ಯವಾಗಿ ಕಾರ್ಮಿಕರ ಮುಷ್ಕರಗಳಂತಹ ವಿಷಯಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಅವರು ಗಣನೀಯವಾಗಿ ಪ್ರಭಾವಿಸಲು ಸಾಧ್ಯವಾಯಿತು. ಭಾರತದಲ್ಲಿ ರೇಡಿಯೋ ಮೇಲೆ ಸರ್ಕಾರದ ನಿಯಂತ್ರಣ ಇರಲು ಮತ್ತೊಂದು ಕಾರಣವೆಂದರೆ, ಇತರ ದೇಶಗಳಂತೆ ಅದು ಸಂಪೂರ್ಣವಾಗಿ ವಾಣಿಜ್ಯೀಕರಣಗೊಳ್ಳದಿರುವುದು. ಅರವತ್ತು ಮತ್ತು ಎಪ್ಪತ್ತರ ದಶಕಗಳನ್ನು ನೆನಪಿಸಿಕೊಳ್ಳುವವರಿಗೆ ರೇಡಿಯೋ ಸಿಲೋನ್ ಖಂಡಿತ ನೆನಪಿರುತ್ತದೆ. ಹಿಂದಿ ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡುತ್ತಾ ಅದು ವ್ಯಾಪಕ ಶ್ರೋತೃಗಳನ್ನು ಗಳಿಸುವುದರ ಜೊತೆಗೆ ಜಾಹೀರಾತು ಆದಾಯದಲ್ಲೂ ದೊಡ್ಡ ಪಾಲನ್ನು ಪಡೆದುಕೊಂಡಿತು. ತದನಂತರ 1980-90 ರ ದಶಕದಲ್ಲಿ ಆರ್ಥಿಕ ಉದಾರೀಕರಣದೊಂದಿಗೆ ಟೆಲಿವಿಷನ್ ವೇಗವಾಗಿ ವಾಣಿಜ್ಯೀಕರಣಗೊಂಡಿತು.

ಪ್ರಧಾನಿಯಾದ ನಂತರ ಮೋದಿ ಹೆಚ್ಚಿನ ಮಟ್ಟಿಗೆ ಸುದ್ದಿಗಳ ಅಜೆಂಡಾವನ್ನು ನಿಯಂತ್ರಿಸಲು ಸಾಧ್ಯವಾಯಿತು. ಆದರೆ ಈ ಬಾರಿ ಪರಿಸ್ಥಿತಿ ಏಕೆ ಬದಲಾಯಿತು?

ಮೊದಲನೆಯದಾಗಿ… ಬಹುತೇಕ ಎಲ್ಲಾ ಪ್ರಮುಖ ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ತಂದಿದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ‘ವೈಫಲ್ಯದ ಏಕೈಕ ಕೇಂದ್ರ’ (ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್) ಸೃಷ್ಟಿಯಾಗಿ ಅಸಮಾಧಾನ ಹೆಚ್ಚಾಯಿತು.

ಈ ಬಾರಿಯ ಪ್ರತಿಭಟನೆಯಲ್ಲಿ ಕಂಡುಬಂದ ಮತ್ತೊಂದು ವೈಶಿಷ್ಟ್ಯವೆಂದರೆ, ಈ ತಲೆಮಾರಿನ ವಿದ್ಯಾರ್ಥಿಗಳು ಕೇವಲ ಭೌತಿಕ ಜಗತ್ತಿನಲ್ಲಿ ಮಾತ್ರವಲ್ಲದೆ, ಡಿಜಿಟಲ್ ಜಗತ್ತಿನಲ್ಲೂ ಸಮರ್ಥವಾಗಿ ಸಂಘಟಿತರಾದರು. ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿರಂತರವಾಗಿ ನೀತಿ ಬೋಧಿಸುವ ಸರ್ಕಾರವು, ತನ್ನ ಸ್ವಂತ ವೈಫಲ್ಯಗಳಿಗೆ ಮಾತ್ರ ಹೊಣೆ ಹೊರದಿರುವುದರ ಬಗ್ಗೆ ಯುವಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಎರಡನೆಯದಾಗಿ… ನೀಟ್ (NEET) ಮಾತ್ರವಲ್ಲದೆ ಇತರ ಅನೇಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸೋರಿಕೆಗಳು ಸಹ ಸರಣಿಯಾಗಿ ಆಗಿದ್ದು. ಅಂದಾಜಿನ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ನೀಟ್, ಐಐಟಿ-ಜೆಇಇ (IIT-JEE) ಹಾಗೂ ವಿವಿಧ ರಾಜ್ಯಗಳ ನೇಮಕಾತಿ ಪರೀಕ್ಷೆಗಳು ಸೇರಿದಂತೆ ಸುಮಾರು 150 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಇದನ್ನು ಇನ್ನಷ್ಟು ಗಂಭೀರ ಸಮಸ್ಯೆಯನ್ನಾಗಿ ಮಾಡಿದ್ದು ಸರ್ಕಾರದ ಹೊಣೆಗಾರಿಕೆ ಇಲ್ಲವಾದದ್ದು. ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ, ಪ್ರಶ್ನೆಪತ್ರಿಕೆಗಳು ಮುಂಚಿತವಾಗಿಯೇ ಹೊರಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಸಿದ್ಧರಾಗಲು ಹೆಚ್ಚು ಸಮಯ ಸಿಕ್ಕಿತು ಎಂದು, ಅದು ಅವರಿಗೆ ಉಪಯುಕ್ತವಾಯಿತು ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡಿದ್ದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಸ್ಪಷ್ಟಪಡಿಸಿತು. ಈ ಬಾರಿಯ ಪ್ರತಿಭಟನೆಯಲ್ಲಿ ಕಂಡುಬಂದ ಮತ್ತೊಂದು ವೈಶಿಷ್ಟ್ಯವೆಂದರೆ, ಈ ತಲೆಮಾರಿನ ವಿದ್ಯಾರ್ಥಿಗಳು ಕೇವಲ ಭೌತಿಕ ಜಗತ್ತಿನಲ್ಲಿ ಮಾತ್ರವಲ್ಲದೆ, ಡಿಜಿಟಲ್ ಜಗತ್ತಿನಲ್ಲೂ ಸಮರ್ಥವಾಗಿ ಸಂಘಟಿತರಾದರು. ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿರಂತರವಾಗಿ ನೀತಿ ಬೋಧಿಸುವ ಸರ್ಕಾರವು, ತನ್ನ ಸ್ವಂತ ವೈಫಲ್ಯಗಳಿಗೆ ಮಾತ್ರ ಹೊಣೆ ಹೊರದಿರುವುದರ ಬಗ್ಗೆ ಯುವಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಬದಲಾಗುತ್ತಿರುವ ಸುದ್ದಿಗಳ ಸ್ವರೂಪ

‘ಜೆನ್ ಜಿ’ ಅಥವಾ ಮಿಲೇನಿಯಲ್ಸ್ ನಂತರದ ತಲೆಮಾರು ಸಂಪೂರ್ಣವಾಗಿ ಡಿಜಿಟಲ್ ತಲೆಮಾರು. ಎರಡನೇ ಮಹಾಯುದ್ಧದ ನಂತರ ಜನಿಸಿದ ನಮ್ಮ ತಲೆಮಾರಿನ ‘ಬೇಬಿ ಬೂಮರ್ಸ್'(ಎರಡನೇ ಮಹಾಯುದ್ಧಾನಂತರದ  ತಲೆಮಾರು) ಮತ್ತು ಆ ನಂತರ ಬಂದ ಮಿಲೇನಿಯಲ್ಸ್‌ಗೆ ಹೋಲಿಸಿದರೆ, ಜೆನ್ ಜಿ ಸಂಪೂರ್ಣವಾಗಿ ವಿಭಿನ್ನವಾದ ಮಾಹಿತಿ ಜಗತ್ತಿನಲ್ಲಿ ಬೆಳೆದಿದೆ. ಬೂಮರ್ಸ್ ಸುದ್ದಿಗಳಿಗಾಗಿ ಮುಖ್ಯವಾಗಿ ವೃತ್ತಪತ್ರಿಕೆಗಳನ್ನೇ ನೆಚ್ಚಿಕೊಂಡಿದ್ದರು. ಮಿಲೇನಿಯಲ್ಸ್ ಟೆಲಿವಿಷನ್ ಅನ್ನು ತಮ್ಮ ಪ್ರಮುಖ ಮಾಹಿತಿಯ ಮೂಲವನ್ನಾಗಿ ಮಾಡಿಕೊಂಡರು. ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ರಾತ್ರಿ ಒಂಬತ್ತು ಗಂಟೆಯ ಸುದ್ದಿಯಲ್ಲಿ ಯಾವುದು ಪ್ರಮುಖವಾಗಿ ಪ್ರಸಾರವಾಗುತ್ತಿತ್ತೋ, ಅದೇ ಮರುದಿನ ವೃತ್ತಪತ್ರಿಕೆಗಳ ಮುಖ್ಯಾಂಶವಾಗುತ್ತಿತ್ತು. ನಮ್ಮ ಬೂಮರ್ಸ್ ತಲೆಮಾರಿಗೆ ದಿನದ ಆರಂಭವು ಪ್ರಮುಖ ಪತ್ರಿಕೆಗಳ ಮೊದಲ ಪುಟದ ಸುದ್ದಿಗಳೊಂದಿಗೆ ಆಗುತ್ತಿತ್ತು.

ಭಾರತದಲ್ಲಿ ರೇಡಿಯೋ ಇತರ ದೇಶಗಳಂತೆ ದೊಡ್ಡ ಪಾತ್ರವನ್ನು ವಹಿಸಲಿಲ್ಲ. ಏಕೆಂದರೆ ಅದನ್ನು ಹೆಚ್ಚಿನವರು ಸರ್ಕಾರದ ದನಿಯೆಂದೇ ಭಾವಿಸುತ್ತಿದ್ದರು. ಆದರೂ, ಅರವತ್ತು, ಎಪ್ಪತ್ತರ ದಶಕಗಳಲ್ಲಿ ಪ್ರತಿ ಸಂಜೆ ಒಂಬತ್ತು ಗಂಟೆಯ ರೇಡಿಯೋ ಸುದ್ದಿಗಳನ್ನು ನಿಯಮಿತವಾಗಿ ಕೇಳುವುದು ನಮ್ಮ ಪೋಷಕರ ತಲೆಮಾರಿನ ದೈನಂದಿನ ಅಭ್ಯಾಸವಾಗಿತ್ತು. ಇಂದು ಸುದ್ದಿಗಳನ್ನು ಪತ್ರಿಕೆಗಳು ಅಥವಾ ಟೆಲಿವಿಷನ್ ಮಾತ್ರ ನಿರ್ಧರಿಸುತ್ತಿಲ್ಲ. ಸೋಶಿಯಲ್ ಮೀಡಿಯಾವೇ ಸುದ್ದಿಗಳ ಹರಿವನ್ನು ಹೆಚ್ಚಾಗಿ ನಿರ್ದೇಶಿಸುತ್ತಿದೆ. ಯಾವುದು ವೈರಲ್ ಆಗುತ್ತದೆಯೋ ಅದೇ ಸುದ್ದಿಯಾಗುತ್ತದೆ. ಯಾವ ವಿಷಯಕ್ಕೆ ಪ್ರಾಮುಖ್ಯತೆ ಸಿಗಬೇಕು ಎಂಬುದನ್ನು ಪ್ಲಾಟ್‌ಫಾರ್ಮ್‌ಗಳಿಗಿಂತ ಅವುಗಳನ್ನು ಬಳಸುವ ಜನರೇ ಹೆಚ್ಚಾಗಿ ನಿರ್ಧರಿಸುತ್ತಿದ್ದಾರೆ. ಆಲ್ಗೊರಿಥಮ್‌ಗಳ ಮೂಲಕ ಪ್ಲಾಟ್‌ಫಾರ್ಮ್‌ಗಳು ಒಂದಷ್ಟರ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾದರೂ, ಸಾವಿರಾರು ಜನರು ಒಂದೇ ವಿಷಯದ ಮೇಲೆ ಒಂದೇ ಬಾರಿಗೆ ಪೋಸ್ಟ್‌ಗಳು, ಟ್ವೀಟ್‌ಗಳು ಮತ್ತು ರೀಲ್ಸ್‌ಗಳನ್ನು ಮಾಡಿದರೆ ಅವುಗಳನ್ನು ಸಂಪೂರ್ಣವಾಗಿ ತಡೆಯುವುದು ಕಷ್ಟ.

ಕಳೆದ ಕೆಲವು ವಾರಗಳಿಂದ ದೆಹಲಿಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ರಸ್ತೆಗಿಳಿದ ಈ ತಲೆಮಾರು, ಭಾರತದ ರಾಜಕೀಯದಲ್ಲಿ ಒಂದು ಹೊಸ ತಲೆಮಾರನ್ನು ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸಿದೆ. ಅವರು ತಮ್ಮ ವಯಸ್ಸನ್ನೂ ಮೀರಿದ ಪರಿಪಕ್ವತೆಯನ್ನು ಪ್ರದರ್ಶಿಸಿದ್ದಾರೆ. ತೀವ್ರವಾದ ಪ್ರಚೋದನೆಗಳು ಎದುರಾದರೂ ಅವರು ಸಂಯಮ ಕಳೆದುಕೊಳ್ಳಲಿಲ್ಲ. ಪೊಲೀಸರು ಎಷ್ಟೇ ಬಲಪ್ರಯೋಗಕ್ಕೆ ಮುಂದಾದರೂ ಧೈರ್ಯವಾಗಿ ಎದುರಿಸಿದ್ದಾರೆ.

ಡಿಜಿಟಲ್ ಮೀಡಿಯಾ ಕೂಡ ಪ್ರಮುಖವಾಗಿ ಜಾಹೀರಾತು ಆದಾಯದ ಮೇಲೆಯೇ ಆಧಾರಪಟ್ಟಿರುತ್ತದೆ. ಆದ್ದರಿಂದ ಹೆಚ್ಚು ವೀಕ್ಷಣೆಗಳು ಮತ್ತು ಹೆಚ್ಚಿನ ಸ್ಪಂದನೆ ತರುವ ಕಂಟೆಂಟ್‌ಗೆ ಆಲ್ಗೊರಿಥಮ್‌ಗಳು ಆದ್ಯತೆ ನೀಡುತ್ತವೆ. ಪರಿಣಾಮವಾಗಿ ವೈರಲ್ ಆಗುವ ವಿಷಯಗಳೇ ಜನರ ಮುಂದೆ ಹೆಚ್ಚಾಗಿ ಬರುತ್ತವೆ. ಸಿಜೆಪಿ ಚಳವಳಿ ಸಾಧಿಸಿದ ಯಶಸ್ಸು ಕೇವಲ ತಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವಂತೆ ಮಾಡುವುದು ಮಾತ್ರವಲ್ಲ. ಸರ್ಕಾರವು ತನ್ನ ವೈಫಲ್ಯಗಳಿಗೆ ಹೊಣೆ ಹೊರುವ ಪರಿಸ್ಥಿತಿಯನ್ನು ತಂದಿದ್ದು ಕೂಡ ಅಷ್ಟೇ ಪ್ರಮುಖವಾದ ಯಶಸ್ಸು. ಪ್ರಮುಖ ವಿಷಯದಲ್ಲಿ ವಿಫಲವಾದರೆ ಸಂಬಂಧಪಟ್ಟ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂಬ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದೆ ಬೇರೆ ದಾರಿಯಿರಲಿಲ್ಲ. ಇತಿಹಾಸದಲ್ಲಿ, ದೊಡ್ಡ ರೈಲು ಅಪಘಾತದ ನಂತರ ರೈಲ್ವೆ ಸಚಿವ ಲಾಲ್ ಬಹದ್ದೂರ್ ಶಾಸ್ತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆದರೆ ಈಗಿನ ಸರ್ಕಾರದಲ್ಲಿ ಅಂತಹ ರಾಜಕೀಯ ನೈತಿಕತೆ ಕಾಣಿಸುತ್ತಿಲ್ಲ. ಸರ್ಕಾರದ ವೈಫಲ್ಯಗಳಿಗೆ ಹೊಣೆ ಹೊರುವ ಬದಲು ಅವುಗಳನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಮೇಲೆ ತಳ್ಳುವ ಪ್ರವೃತ್ತಿ ಮುಂದುವರಿಯುತ್ತಿದೆ.

ಆಶಾವಾದ ಮೂಡಿಸಿದ ಹೊಸ ತಲೆಮಾರು

ಕಳೆದ ಕೆಲವು ವಾರಗಳಿಂದ ದೆಹಲಿಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ರಸ್ತೆಗಿಳಿದ ಈ ತಲೆಮಾರು, ಭಾರತದ ರಾಜಕೀಯದಲ್ಲಿ ಒಂದು ಹೊಸ ತಲೆಮಾರನ್ನು ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸಿದೆ. ಪ್ರಸ್ತುತ ವಾಸ್ತವಗಳನ್ನು ತಮ್ಮ ಅನುಭವಗಳ ಮೂಲಕ ಅರ್ಥೈಸಿಕೊಂಡ ಈ ಯುವಜನರು, ಸರ್ಕಾರದ ದಾಳಿಗಳನ್ನು ಎದುರಿಸುತ್ತಾ ಬೃಹತ್ ಸಂಖ್ಯೆಯಲ್ಲಿ ಸಂಘಟಿತರಾಗಿ ‘ಮೊದಲ ಪರೀಕ್ಷೆ’ಯಲ್ಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತಮ್ಮ ವಯಸ್ಸನ್ನೂ ಮೀರಿದ ಪರಿಪಕ್ವತೆಯನ್ನು ಪ್ರದರ್ಶಿಸಿದ್ದಾರೆ. ತೀವ್ರವಾದ ಪ್ರಚೋದನೆಗಳು ಎದುರಾದರೂ ಅವರು ಸಂಯಮ ಕಳೆದುಕೊಳ್ಳಲಿಲ್ಲ. ಪೊಲೀಸರು ಎಷ್ಟೇ ಬಲಪ್ರಯೋಗಕ್ಕೆ ಮುಂದಾದರೂ ಧೈರ್ಯವಾಗಿ ಎದುರಿಸಿದರು. ಬಹುತೇಕರು ‘‘ರಾಜಕೀಯದಿಂದ ದೂರವಿದ್ದ ತಲೆಮಾರು’’ ಎಂದು ತಳ್ಳಿಹಾಕಿದ್ದ ಯುವಜನರೇ ಸಾವಿರಾರು ಜನರನ್ನು ಚಳವಳಿಯತ್ತ ಆಕರ್ಷಿಸಿದರು. ಅವರು ಸಾಂಪ್ರದಾಯಿಕ ರಾಜಕೀಯ ಭಾಷೆಯನ್ನು ಬಳಸದಿದ್ದರೂ, ತಮ್ಮದೇ ಆದ ಭಾಷೆಯಲ್ಲಿ, ತಮ್ಮದೇ ಶೈಲಿಯಲ್ಲಿ ರಾಜಕೀಯ ಚೇತನವನ್ನು ವ್ಯಕ್ತಪಡಿಸಿದರು. ಈ ಚಳವಳಿಯಲ್ಲಿ ಯುವತಿಯರು ಮುಂಚೂಣಿಯಲ್ಲಿ ನಿಂತು, ಪೊಲೀಸ್ ವಾಹನಗಳನ್ನು ತಡೆಯುವುದು ಮಾತ್ರವಲ್ಲದೆ ಲಾಠಿಚಾರ್ಜ್‌ಗಳನ್ನೂ ಧೈರ್ಯವಾಗಿ ಎದುರಿಸಿದರು.

ಕೊನೆಯದಾಗಿ ಒಂದು ವಿಷಯವನ್ನು ಉಲ್ಲೇಖಿಸಲು ಬಯಸುತ್ತೇನೆ. ಈ ಅಂಕಣಗಳಲ್ಲಿ ನಾನು ಈ ಹಿಂದೆಯೂ ಬರೆದಿದ್ದೇನೆ. ಸತ್ಯದ ಜೊತೆಗೆ ಎಡಪಂಥೀಯರಿಗಿರುವ ಪ್ರಮುಖ ಬಲವೆಂದರೆ ಸಮಾಜದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದನ್ನು ವಿಶ್ಲೇಷಿಸುವ ಸಾಮರ್ಥ್ಯ, ಗತಕಾಲವನ್ನು ವರ್ತಮಾನದೊಂದಿಗೆ ಜೋಡಿಸಿ ಅರ್ಥಮಾಡಿಕೊಳ್ಳುವ ದೃಷ್ಟಿಕೋನ ಹಾಗೂ ಹಾಸ್ಯಪ್ರಜ್ಞೆ. ಆದರೆ ಇವೆಲ್ಲವೂ ಆಚರಣೆ ಎಂಬ ಒರೆಗಲ್ಲಿನ ಮೇಲೆ, ನಮ್ಮ ಜೀವನದ ಅನುಭವಗಳ ಮೂಲಕವೇ ಪರೀಕ್ಷಿಸಲ್ಪಡಬೇಕು. ಜೆನ್ ಜಿ ಯುವಕರಿಗೆ ಈ ಚಳವಳಿ ಮತ್ತು ಅದರಲ್ಲಿ ಅವರು ಪಡೆದ ಅನುಭವವು ರಾಜಕೀಯ ಶಾಸ್ತ್ರದ ಮೇಲೆ ಎಷ್ಟೇ ಉಪನ್ಯಾಸಗಳನ್ನು ಕೇಳಿದರೂ ಸಿಗದ ಪಾಠಗಳನ್ನು ಕಲಿಸಿದೆ. ನನ್ನ ತಲೆಮಾರಿನ ಪರವಾಗಿ ಹೇಳುವುದಾದರೆ, ಈಗ ಹೊಸ ತಲೆಮಾರು ಈ ಜವಾಬ್ದಾರಿಯನ್ನು ವಹಿಸಿಕೊಂಡು ಮುಂದೆ ಸಾಗುತ್ತಿರುವುದು ನನಗೆ ತುಂಬಾ ತೃಪ್ತಿ ನೀಡಿದೆ.

ಇದನ್ನೂ ನೋಡಿ : ಪಿಟಿಸಿಎಲ್ ಕಾಯ್ದೆ ಇದ್ದರೂ ದಲಿತರ ಭೂಹಕ್ಕು ಏಕೆ ರಕ್ಷಿತವಾಗಿಲ್ಲ? | ಡಾ. ಜಾಮದಾರ್ Janashakthi Media

Donate Janashakthi Media

Leave a Reply

Your email address will not be published. Required fields are marked *