ಕೋವಿಡ್‌ ತಡೆಗಟ್ಟಲು ಲಾಕ್‌ಡೌನ್‌ ಪರಿಣಾಮಕಾರವಲ್ಲವೇ? – ಸುಪ್ರೀಂ ಕೋರ್ಟ್‌

ನವದೆಹಲಿ: ದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅತ್ಯಧಿಕ ಪ್ರಮಾಣದಲ್ಲಿ ತೀವ್ರವಾಗಿ ಹರಡುತ್ತಿರುವ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಕಡಿವಾಣ ಹಾಕಲು ‘ಸಾರ್ವಜನಿಕ ಹಿತಾಸಕ್ತಿ ದೃಷ್ಟಿ’ಯಿಂದ ಲಾಕ್‌ಡೌನ್‌ ಹೇರುವ ಸಾಧ್ಯತೆ ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಹೇಳಿದೆ.

ನ್ಯಾಯಮೂರ್ತಿ ಡಿ.ವೈಚಂದ್ರಚೂಡ್‌ ಅವರು ಒಳಗೊಂಡ ತ್ರೀ ಸದಸ್ಯರ ಪೀಠವು ಕೇಂದ್ರವನ್ನು ಲಾಕ್‌ಡೌನ್‌ ಬಗ್ಗೆ ಹೇಳಿದ್ದು ಈ ಬಗ್ಗೆ ಹೆಚ್ಚಾಗುತ್ತಿರುವ ಸೋಂಕಿನ ಪರಿಣಾಮ ಹಾಗೂ ಭವಿಷ್ಯದ ಕಾರ್ಯಸೂಚಿ, ಕಾರ್ಯಕ್ರಮಗಳ ಕುರಿತಾದಂತೆ ಮೇ 10ರೊಳಗೆ ವರದಿ ಸಲ್ಲಿಸಬೇಕು ಎಂದು ಪೀಠ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಇದನ್ನು ಓದಿ: ಲಸಿಕೆಯ ಬೆಲೆ ನಿರ್ಧಾರ ಮತ್ತು ಹಂಚಿಕೆಯನ್ನು ತಯಾರಕರಿಗೆ ಬಿಡಬೇಡಿ – ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋರ್ಟ್ ಸಲಹೆ ಮತ್ತು ಹಲವು ಪ್ರಶ್ನೆಗಳು

ಕೋವಿಡ್‌-19 ಸೋಂಕು ತಡೆಗಟ್ಟಲು ವಿವಿಧ ರಾಜ್ಯಗಳಲ್ಲಿ ಹೇರಿರುವ ಕರ್ಫ್ಯೂ ಸೇರಿದಂತೆ ಕೆಲವೊಂದು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರ ನಡುವೆ ಸುಪ್ರೀಂ ಕೋರ್ಟ್ ಈ ರೀತಿಯ ಸಲಹೆಯನ್ನು ನೀಡಿದೆ. ಸ್ವಯಂಪ್ರೇರಿತವಾಗಿ ಕೈಗೊಂಡ ಪ್ರಕರಣ ಕುರಿತು ಭಾನುವಾರ ಆದೇಶವನ್ನು ಬಿಡುಗಡೆ ಮಾಡಲಾಗಿದೆ.

‘ಲಾಕ್‌ಡೌನ್‌ ನಿಂದ ನಿರ್ಲಕ್ಷ್ಯಿತ ಸಮುದಾಯಗಳ ಮೇಲೆ ತೀವ್ರವಾದ ಪರಿಣಾ ಬೀರಲಿದೆ. ಒಟ್ಟಾರೆಯಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಅರಿವು ನಮಗಿದೆ. ಒಂದು ವೇಳೆ ಲಾಕ್‌ಡೌನ್‌ ಅನ್ನು ಜಾರಿಗೊಳಿಸಿದರೆ, ಈ ವರ್ಗಗಳ ಅಗತ್ಯಗಳನ್ನು ಈಡೇರಿಸಲು ಸೂಕ್ತ ಕ್ರಮ ಜರುಗಿಸಬೇಕು‘ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಇದನ್ನು ಓದಿ: ಕೋವಿಡ್‌ ನಿರ್ವಹಣೆ : ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಲಿದೆ – ಡಾ. ದೇವಿಶೆಟ್ಟಿ ಎಚ್ಚರಿಕೆ

ಅಗತ್ಯ ಔಷಧಗಳು, ಆಮ್ಲಜನಕ ಮತ್ತು ಲಸಿಕೆಗಳನ್ನು ಖರೀದಿಸುವುದಕ್ಕೆ ಸರಿಯಾರ ಒಂದು ನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದ್ದು, ಆರೋಗ್ಯ ಆರೈಕೆ ಸಿಬ್ಬಂದಿ, ವೈದ್ಯರ ಕುಶಲವನ್ನು ಗಮನಿಸಬೇಕು ಎಂದು ಹೇಳಿದೆ.

‘ಇಂಥ ಸುರಕ್ಷತಾ ಕ್ರಮಗಳು ಕೇವಲ ವೈದ್ಯರಿಗಷ್ಟೇ ಅಲ್ಲ, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಆಂಬುಲೆನ್ಸ್‌ ಸಿಬ್ಬಂದಿ, ಸ್ವಚ್ಚತಾ ಸಿಬ್ಬಂದಿ, ಚಿತಾಗಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಿತವನ್ನು ಈ ಪಿಡುಗಿನ ಸಂದರ್ಭದಲ್ಲಿ ಗಮನಿಸಬೇಕು’ ಎಂದು ತಿಳಿಸಿತು.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್ ಮತ್ತ ಎಸ್.ರವೀಂದ್ರ ಭಟ್ ಅವರಿದ್ದ ಪೀಠವು, ಆರೋಗ್ಯ ಕಾರ್ಯಕರ್ತರಿಗೆ ಜಾರಿಗೊಳಿಸಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್‌ ವಿಮಾ ಭದ್ರತೆ ಯೋಜನೆಯ ಅವಧಿಯನ್ನು ಒಂದು ವರ್ಷ ವಿಸ್ತರಿಸಿರುವುದನ್ನು ಗಣನೆಗೆ ತೆಗೆದುಕೊಂಡಿತು.

ಯೋಜನೆಯಡಿ 168 ವೈದ್ಯರು ಸೇರಿದಂತೆ ಕೇವಲ 287 ಜನರ ಕುಟುಂಬಗಳಿಗೆ ಸಂಬಂಧಿಸಿದ ಕ್ಲೇಮುಗಳನ್ನಷ್ಟೇ ಇತ್ಯರ್ಥಪಡಿಸಿರುವುದನ್ನೂ ಅದು ಉಲ್ಲೇಖಿಸಿದೆ.

Donate Janashakthi Media

Leave a Reply

Your email address will not be published. Required fields are marked *