ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ವೆಬ್‌ಸೈಟ್‌ ಲೋಕಾರ್ಪಣೆ

ಬೆಂಗಳೂರು : ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ನೂತನ ವೆಬ್‌ಸೈಟ್‌ ಅನ್ನು ಸಂಘಟನೆಯ ಮಾಜಿ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್‌ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಜನ ಚಳವಳಿಯನ್ನು ಬಲಪಡಿಸಲು ಹಳೆಯ ಅನುಭವ ಮತ್ತು ಹೊಸ ತಲೆಮಾರಿನ ಉತ್ಸಾಹವನ್ನು ಒಗ್ಗೂಡಿಸಬೇಕೆಂದು ಕರೆ ನೀಡಿದರು. ಡಿವೈಎಫ್‌ಐ

ಡಿವೈಎಫ್‌ಐ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಮಾತನಾಡಿದ ಅವರು, ಹಳೆಯ ಬೇರುಗಳು ಮತ್ತು ಹೊಸ ಚಿಗುರುಗಳ ಸಮನ್ವಯದ ಮೂಲಕ ಯುವಜನ ಚಳವಳಿ ಮತ್ತಷ್ಟು ಬಲಗೊಳ್ಳಬೇಕು. ಹಿರಿಯರು ಕಟ್ಟಿಬೆಳೆಸಿದ ಚಳವಳಿಯ ಅನುಭವವನ್ನು ಇಂದಿನ ಯುವಜನರ ಆಲೋಚನೆ, ಉತ್ಸಾಹ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಯೊಂದಿಗೆ ಬೆಸೆಯುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಇಂದಿನ ಝೆನ್‌-ಝೀ (Gen Z) ಕಾಲಘಟ್ಟದಲ್ಲಿ ಯುವಜನರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಹಾಗೂ ಸಾಮಾಜಿಕ ಜಾಲತಾಣಗಳನ್ನು ಚಳವಳಿಗಳ ಸಂಪರ್ಕ ಕೊಂಡಿಯಾಗಿ ಬಳಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯುವಜನರ ಆಲೋಚನೆಗಳು, ಹೋರಾಟಗಳು ಮತ್ತು ಸಾಮಾಜಿಕ ಸಮಸ್ಯೆಗಳನ್ನು ವ್ಯಾಪಕವಾಗಿ ಜನರಿಗೆ ತಲುಪಿಸಲು ಡಿಜಿಟಲ್ ಮಾಧ್ಯಮಗಳು ಪರಿಣಾಮಕಾರಿ ಸಾಧನಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಡಿವೈಎಫ್‌ಐ

ಇದನ್ನೂ ಓದಿ : ಸುರತ್ಕಲ್‌ ಎಚ್‌ಪಿಸಿಎಲ್‌ನಲ್ಲಿ 4 ಮಹಿಳಾ ಕಾರ್ಮಿಕರ ವಜಾ: 50 ದಿನಗಳಿಂದ ಧರಣಿ, ನ್ಯಾಯಕ್ಕೆ ಡಿವೈಎಫ್‌ಐ ಆಗ್ರಹ

ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ವೆಬ್‌ಸೈಟ್‌ ಯುವಜನ ಚಳವಳಿಯ ಚಟುವಟಿಕೆಗಳು, ಹೋರಾಟಗಳು ಮತ್ತು ಸಂಘಟನೆಯ ವಿಚಾರಧಾರೆಗಳನ್ನು ಯುವಜನರಿಗೆ ತಲುಪಿಸುವ ವೇದಿಕೆಯಾಗಬೇಕು. ಯುವಜನರಿಗೆ ಹೊಸ ಭರವಸೆಯ ಆಶಾಕಿರಣವಾಗಿ ರೂಪುಗೊಳ್ಳುವ ಮೂಲಕ ರಾಜ್ಯದಲ್ಲಿ ಯುವಜನ ಚಳವಳಿಯನ್ನು ಮತ್ತಷ್ಟು ಬಲಪಡಿಸಲು ವೆಬ್‌ಸೈಟ್‌ ನೆರವಾಗಲಿ ಎಂದು ಕೆ. ಮಹಾಂತೇಶ್‌ ಆಶಯ ವ್ಯಕ್ತಪಡಿಸಿದರು.

ಈ ವೇಳೆ ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್‌, ರಾಜ್ಯ ಕಾರ್ಯದರ್ಶಿ ಸಂತೋಷ್‌ ಬಜಾಲ್‌, ಕೇಂದ್ರ ಸಮಿತಿ ಸದಸ್ಯರಾದ ಬಸವರಾಜ ಪೂಜಾರ್‌, ಕಾರ್ಮಿಕ ನಾಯಕ ಬಾಲಕೃಷ್ಣ ಶೆಟ್ಟಿ,  ದಿಲಿಪ್‌ ಶೆಟ್ಟಿ, ಮಾಧುರಿ ಬೋಳಾರ, ರಾಜಶೇಖರ ಬಾಗೇಪಲ್ಲಿ, ಹರೀಶ್ ಬಾಗೇಪಲ್ಲಿ, ರಿಜ್ವಾನ್ ಹರೇಕಳ, ನಿರೇಶ್ ಬಾಬು ಸೇರಿದಂತೆ ಅನೇಕ ಮುಖಂಡರು ಇದ್ದರು.

ಇದನ್ನೂ ನೋಡಿ : ಎಸ್‌ಐಆರ್‌ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!

Donate Janashakthi Media