ಮಂಗಳೂರಿನ ಸ್ಟೇಟ್ ಬ್ಯಾಂಕ್–ರೊಸಾರಿಯೋ ರಸ್ತೆ ವ್ಯಾಪಾರಿಗಳಿಗೆ ಸಂಡೆ ಬಜಾರ್ ನಡೆಸಲು ಅವಕಾಶ
ಮಂಗಳೂರು : ಮಂಗಳೂರಿನ ಸಂಡೆ ಬಜಾರ್ ವ್ಯಾಪಾರಿಗಳ ಐದು ತಿಂಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸ್ಟೇಟ್ ಬ್ಯಾಂಕ್–ರೊಸಾರಿಯೋ ರಸ್ತೆಯಲ್ಲಿ ಸಂಡೆ ಬಜಾರ್ ನಡೆಸಲು ಮಂಗಳೂರು ಮಹಾನಗರ ಪಾಲಿಕೆ ಅನುಮತಿ ನೀಡಿದ್ದು, 95 ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದೆ. CITU ನೇತೃತ್ವದಲ್ಲಿ ನಡೆದ ಸುದೀರ್ಘ ಹೋರಾಟದ ಫಲವಾಗಿ ಈ ನಿರ್ಧಾರ ಹೊರಬಿದ್ದಿದೆ. ಸಂಡೆ
ಈ ಕುರಿತು ಸಿಐಟಿಯು ಜಿಲ್ಲಾ ಮುಖಂಡ ಬಿ.ಕೆ. ಇಮ್ತಿಯಾಜ್ ಜನಶಕ್ತಿ ಮೀಡಿಯಾ ಜೊತೆ ಮಾತನಾಡುತ್ತಾ, ಸಂಡೆ ಬಜಾರ್ನಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳ ಜೀವನೋಪಾಯದ ಹಕ್ಕಿಗಾಗಿ CITU ಕಳೆದ ಐದು ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿತ್ತು. ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಸಂಘಟನೆ ಪ್ರತಿಭಟನೆಗಳ ಮೂಲಕ ಒತ್ತಡ ಹೇರಿದ್ದಲ್ಲದೆ, ನ್ಯಾಯಾಲಯದ ಮೊರೆ ಹೋಗುವ ಮೂಲಕವೂ ಹೋರಾಟವನ್ನು ನಡೆಸಲಾಗಿತ್ತು ಎಂದು ತಿಳಿಸಿದರು.
ಸಂಡೆ ಬಜಾರ್ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು, ನಿರಂತರ ಧರಣಿಗಳನ್ನು ಸಿಐಟಿಯು ನೇತೃತ್ವದ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘ ನಿರಂತರ ಹೋರಾಟಗಳನ್ನು ನಡೆಸಿತ್ತು. ಸಂಡೆ
ಇದನ್ನೂ ಓದಿ :ಮಂಗಳೂರು ಬೀದಿ ವ್ಯಾಪಾರಿಗಳ ಹೋರಾಟ ರಾಜ್ಯಕ್ಕೆ ದಾರಿದೀಪ: ಪ್ರತಾಪ ಸಿಂಹ
ನಗರದ ರಸ್ತೆಬದಿಯಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಸಣ್ಣ ವ್ಯಾಪಾರಿಗಳ ಬದುಕಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆದ ಈ ಹೋರಾಟಕ್ಕೆ ಈಗ ಫಲ ದೊರೆತಿದೆ. 95 ವ್ಯಾಪಾರಿಗಳಿಗೆ ಸಂಡೆ ಬಜಾರ್ ನಡೆಸಲು ನಗರಪಾಲಿಕೆ ಅನುಮತಿ ನೀಡಿರುವುದು ವ್ಯಾಪಾರಿಗಳ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.
ಐದು ತಿಂಗಳ ಕಾಲ ನಡೆದ ಈ ಹೋರಾಟದಲ್ಲಿ ವ್ಯಾಪಾರಿಗಳ ಜೀವನೋಪಾಯದ ಹಕ್ಕನ್ನು ಎತ್ತಿಹಿಡಿದ CITU, ನಗರಪಾಲಿಕೆಯ ನಿರ್ಧಾರದಿಂದ ಜಯ ಸಾಧಿಸಿದೆ. ಸಣ್ಣ ವ್ಯಾಪಾರಿಗಳ ಬದುಕಿನ ಹಕ್ಕಿಗಾಗಿ ಸಂಘಟಿತ ಹೋರಾಟ ನಡೆಸಿದರೆ ನ್ಯಾಯ ಪಡೆಯಲು ಸಾಧ್ಯ ಎಂಬುದಕ್ಕೆ ಈ ಬೆಳವಣಿಗೆ ಮತ್ತೊಂದು ಉದಾಹರಣೆಯಾಗಿದೆ. ಸಂಡೆ
ಇದನ್ನೂ ನೋಡಿ : ಗುತ್ತಿಗೆ ಕಾರ್ಮಿಕರ ಶೋಷಣೆ: ಎಜೆನ್ಸಿ ಮಾಫೀಯಾಗೆ ಬಲಿಯಾಗುತ್ತಿರುವ ಕಾರ್ಮಿಕರ ಬದುಕು! Janashakthi Media
