ಬ್ರಿಕ್ಸ್‌ ನ ದಿಲ್ಲಿ ಘೋಷಣೆ: ವೈರುಧ್ಯಗಳ ನಡುವೆ ಆಕಾಂಕ್ಷೆಗಳು – ಎಂ. ಎ. ಬೇಬಿ

ಬ್ರಿಕ್ಸ್‌ನ ಹೊಸ ದೆಹಲಿ ಘೋಷಣೆಯು ಜಾಗತಿಕ ದಕ್ಷಿಣದ ಕುಂದುಕೊರತೆಗಳನ್ನು ಅಭಿವ್ಯಕ್ತಗೊಳಿಸುತ್ತದೆ; ಏಕಪಕ್ಷೀಯ ನಿರ್ಬಂಧಗಳಿಗೆ  ಸವಾಲು ಹಾಕುತ್ತದೆಪ್ಯಾಲೇಸ್ಟಿನಿಯನ್ ಹಕ್ಕುಗಳನ್ನು ಬೆಂಬಲಿಸುತ್ತದೆ ಮತ್ತು ಸಾಂಸ್ಥಿಕ ಸುಧಾರಣೆಗೆ ಕರೆ ನೀಡುತ್ತದೆ. ಆದರೆ ಅದು ಯುಎಸ್‌ ನ್ನು ಹೆಸರಿಸದೆ ಏಕಪಕ್ಷೀಯ ಬಲವಂತದʼ ಕ್ರಮಗಳನ್ನು ಖಂಡಿಸುತ್ತದೆ,  ಇಸ್ರೇಲನ್ನು ಆಕ್ರಮಣಕಾರಿ ಎಂದು ಗುರುತಿಸದೆ ಪಶ್ಚಿಮ ಏಷ್ಯಾದಲ್ಲಿ ಗರಿಷ್ಠ ಸಂಯಮದ ಬಗ್ಗೆ ಮಾತನಾಡುತ್ತದೆ. ಘೋಷಣೆಯ ಮೌನಗಳು ಆಕಸ್ಮಿಕವಲ್ಲ; ಅವು ವಿಭಿನ್ನ ಮೈತ್ರಿಗಳು ಮತ್ತು ವರ್ಗ ಹಿತಾಸಕ್ತಿಗಳಿರುವ ಪ್ರಭುತ್ವಗಳ ನಡುವೆ ಒಮ್ಮತಕ್ಕೆ ಬರಲು ತೆತ್ತ ಬೆಲೆ ಎನ್ನುತ್ತಾರೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ.  ಬ್ರಿಕ್ಸ್ ಸಾಮ್ರಾಜ್ಯಶಾಹಿವಿರೋಧಿ ವೇದಿಕೆಯಲ್ಲ, ನಿಜ. ಆದರೂ ಅದನ್ನು ತ್ಯಜಿಸುವುದಲ್ಲ, ಬದಲಿಗೆ ಅದನ್ನು ರೂಪಾಂತರಗೊಳಿಸಬೇಕಾಗಿದೆ ಮತ್ತು ಅದು ಬಹುಧ್ರುವೀಯತೆಯ ಮಿತಿಗಳನ್ನು ಮೀರುವಂತೆ ಮಾಡಬೇಕಾಗಿದೆ. ಬರಿಯ ಘೋಷಣೆಗಳು ಜನರನ್ನು ಮುಕ್ತಗೊಳಿಸುವುದಿಲ್ಲ, ಹೋರಾಟಗಳು ಮುಕ್ತಗೊಳಿಸುತ್ತವೆ. ಮಾತಿನ ಅಬ್ಬರ  ಮತ್ತು ವಾಸ್ತವದ ನಡುವಿನ ಅಂತರವನ್ನು ಬಯಲಿಗೆ ತರಬೇಕಾಗಿದೆ,  ಸರ್ಕಾರಗಳು ಉತ್ತರದಾಯಿಯಾಗುವಂತೆ ಮಾಡಬೇಕಾಗಿದೆ ಎನ್ನುತ್ತಾರೆ ಅವರು. ಬ್ರಿಕ್ಸ್‌
( ಅನು: ಕೆ.ವಿ.)

 

ನವದೆಹಲಿಯಲ್ಲಿ ಸೆಪ್ಟೆಂಬರ್ 12-13, 2026 ರಂದು ನಡೆದ 18 ನೇ ಬ್ರಿಕ್ಸ್ ಶೃಂಗಸಭೆಯು 140-ಅಂಶಗಳ ಘೋಷಣೆಯನ್ನು ತಯಾರಿಸಿತು, ಅದು ಏಕಕಾಲದಲ್ಲಿ ಜಾಗತಿಕ ದಕ್ಷಿಣದ ಆಕಾಂಕ್ಷೆಗಳ ಪ್ರತಿಪಾದನೆಯೂ ಆಗಿದೆ  ಮತ್ತು ಈ ಗುಂಪಿನ  ಒಳಗೇ ಇರುವ ವೈರುಧ್ಯಗಳಿಗೆ ಒಂದು ಕನ್ನಡಿಯೂ ಆಗಿದೆ. ಎಡಪಂಥೀಯರ ಕೆಲಸ ಇದನ್ನು ಶ್ಲಾಘಿಸುವುದಾಗಲಿ  ಅಥವಾ ತಳ್ಳಿಹಾಕುವುದಾಗಲೀ  ಅಲ್ಲ, ಈ ದಸ್ತಾವೇಜನ್ನು ವಿಮರ್ಶಾತ್ಮಕವಾಗಿ ಓದಬೇಕು, ಇದು ಯುಎಸ್ ನೇತೃತ್ವದ ಏಕಧ್ರುವೀಯತೆಯ ವಿರುದ್ಧದ ಹೋರಾಟವನ್ನು  ಎಲ್ಲಿ ಮುನ್ನಡೆಸುತ್ತದೆ, ಎಲ್ಲಿ ಅದು ಕಡಿಮೆಯಾಗಿದೆ ಮತ್ತು ಭಾರತ ಸರ್ಕಾರದ ಸ್ವಂತ ನಡವಳಿಕೆಯು ಎಲ್ಲಿ ಈ ಘೋಷಣೆಯ ಚೇತನಕ್ಕೆ ದ್ರೋಹ ಬಗೆದಿದೆ ಎಂಬುದನ್ನು ಗುರುತಿಸಬೇಕಾಗಿದೆ..

ಬ್ರಿಕ್ಸ್ ಸಾಮ್ರಾಜ್ಯಶಾಹಿ ವಿರೋಧಿ ರಂಗವಲ್ಲ. ಇದು ಯುಎಸ್‌  ಉತ್ತೇಜಿಸಿರುವ ಏಕಧ್ರುವೀಯತೆಯ  ಯೋಜನೆಯ ವಿರುದ್ಧ ಬಹುಧ್ರುವೀಯತೆಯನ್ನು ಬಲಪಡಿಸುವ ವೇದಿಕೆಯಾಗಿದೆ. ಈ ವ್ಯತ್ಯಾಸವನ್ನು ಗಮನಿಸಬೇಕು. ಈ  ಗುಂಪು ತೀರಾ ವಿಭಿನ್ನ ಸಾಮಾಜಿಕ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳನ್ನು ಒಳಗೊಂಡಿದೆ: ಚೀನಾದ ಸಮಾಜವಾದಿ ಅರ್ಥವ್ಯವಸ್ಥೆ, ರಷ್ಯಾದ ಕೆಲವರದ್ದೇ ಆಧಿಪತ್ಯದಲ್ಲಿರುವ ಬಂಡವಾಳಶಾಹಿ ಮತ್ತು ಭಾರತದ ದೊಡ್ಡಬಂಡವಾಳಶಾಹಿಗಳ ನೇತೃತ್ವದ ಬೂರ್ಜ್ವಾ- ಭೂಮಾಲೀಕ ಪ್ರಭುತ್ವ, ಈಗ ಕಾರ್ಪೊರೇಟ್ ಕೋಮುವಾದಿ, ಹಿಂದುತ್ವ ಶಕ್ತಿಗಳ ಕೂಟದ ಆಳ್ವಿಕೆಯಲ್ಲಿ ಇರುವಂತದ್ದು. ನಾವು ಇತರ ರಾಜ್ಯಗಳನ್ನು ನೋಡಿದಾಗಲಂತೂ ಈ ವೈವಿಧ್ಯತೆ ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ, ಇವು ಸಾಮಾನ್ಯ ಬಂಡವಾಳಶಾಹಿ-ವಿರೋಧಿ ಹೋರಾಟದಲ್ಲಿನ ಮಿತ್ರರಾಷ್ಟ್ರಗಳಲ್ಲ. ಅವೆಲ್ಲವೂ ಪ್ರಜಾಸತ್ತಾತ್ಮಕವಲ್ಲದ, ಡಾಲರ್ ಪ್ರಾಬಲ್ಯದ, ಯುಎಸ್-ಕೇಂದ್ರಿತ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ತಮಗಾಗಿ ಒಂದು ಜಾಗವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಭುತ್ವಗಳಾಗಿವೆ.

ಅದು ಈ ಗುಂಪಿನ ಅಂತರ್ಗತ ಮಿತಿ.  ಇದೇ ಈ  ಘೋಷಣೆ ಯುಎಸ್‌ ನ್ನು ಹೆಸರಿಸದೆ ‘ಏಕಪಕ್ಷೀಯ ಬಲವಂತದʼ ಕ್ರಮಗಳನ್ನು ಏಕೆ ಖಂಡಿಸುತ್ತದೆ,  ಇಸ್ರೇಲನ್ನು ಆಕ್ರಮಣಕಾರಿ ಎಂದು ಗುರುತಿಸದೆ ಪಶ್ಚಿಮ ಏಷ್ಯಾದಲ್ಲಿ ‘ಗರಿಷ್ಠ ಸಂಯಮ’ದ ಬಗ್ಗೆ ಏಕೆ ಮಾತನಾಡುತ್ತದೆ ಎಂಬುದನ್ನು ವಿವರಿಸುತ್ತದೆ. ಘೋಷಣೆಯ ಮೌನಗಳು ಆಕಸ್ಮಿಕವಲ್ಲ; ಅವು ವಿಭಿನ್ನ ಮೈತ್ರಿಗಳು ಮತ್ತು ವರ್ಗ ಹಿತಾಸಕ್ತಿಗಳಿರುವ ಪ್ರಭುತ್ವಗಳ ನಡುವೆ ಒಮ್ಮತಕ್ಕೆ ಬರಲು ತೆತ್ತ ಬೆಲೆ.

ರಾಜಕೀಯ ಪ್ರಭಾವವಿಲ್ಲದ ಆರ್ಥಿಕ ತೂಕ

ಬ್ರಿಕ್ಸ್‌ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮತ್ತು ಜಾಗತಿಕ ಜಿಡಿಪಿ ಯ ಸರಿಸುಮಾರು ಮೂರನೇ ಒಂದು ಭಾಗದಷ್ಟು ಹೊಂದಿವೆ. ಅವರು ಅಗಾಧವಾದ ಆರ್ಥಿಕ ತೂಕವನ್ನು ಹೊಂದಿದ್ದಾರೆ, ಆದರೆ ವಿಶ್ವಸಂಸ್ಥೆ, ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿಲ್ಲ. ಇದು ಘೋಷಣೆಯು ಪರಿಹರಿಸಲು ಬಯಸುತ್ತಿರುವ ಒಂದು ಅಸಂಗತತೆ.

ಘೋಷಣೆಯು ಯುಎನ್ ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡುತ್ತದೆ, ಅಲ್ಲಿ ಈ ಗುಂಪಿನ ಚೀನಾ ಮತ್ತು ರಷ್ಯಾ ಮಾತ್ರ ಖಾಯಂ ಸದಸ್ಯರಾಗಿದ್ದಾರೆ. ‘ಯಾವುದೇ ಮಹಿಳೆ ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾಗಿಲ್ಲʼಎಂದು ಅದು ಗಮನಿಸಿರುವುದನ್ನು ಮೆಚ್ಚಬೇಕಾಗಿದೆ.ಈ ಪ್ರಶ್ನೆಯನ್ನು ಸದ್ಯದಲ್ಲೇ ಹೊಸ ಮಹಾಕಾರ್ಯದರ್ಶಿಯನ್ನು  ಚುನಾಯಿಸುವಾಗ ಎತ್ತಿಕೊಳ್ಳಬೇಕಾಗಿದೆ. ನಿಜ, ಹೀಗೆ ಆಯ್ಕೆಯಾದ ಮಹಿಳೆಯು ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಪ್ರತಿನಿಧಿಸುವವರು ಮತ್ತು ಅವರ ಪರವಾಗಿ ನಿಲ್ಲುವವರು ಆಗಿರಬೇಕು. ಇದು ಮಹತ್ವದ ವಿಷಯ. ಏಕೆಂದರೆ, ಇಲ್ಲಿಯವರೆಗೆ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ನಿಂದ ಕೇವಲ ಒಬ್ಬರು  ಮತ್ತು ಆಫ್ರಿಕಾ ಮತ್ತು ಏಷ್ಯಾದಿಂದ ತಲಾ ಇಬ್ಬರು ಈ ಸ್ಥಾನವನ್ನು ಅಲಂಕರಿಸಿದ್ದಾರೆ.

ಘೋಷಣೆಯು ಐಎಂಎಫ್‌ ಮತ್ತು ವಿಶ್ವ ಬ್ಯಾಂಕ್ ಸುಧಾರಣೆಗಳು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಬದಲಾಗುತ್ತಿರುವ ತೂಕವನ್ನು ಉತ್ತಮವಾಗಿ ಬಿಂಬಿಸಬೇಕು, ಹೆಚ್ಚಿನ ಮತ ಮತ್ತು ಕೋಟಾ ಪ್ರಾತಿನಿಧ್ಯ ಮತ್ತು ಹೆಚ್ಚು ಪಾರದರ್ಶಕ ನಾಯಕತ್ವದ ಆಯ್ಕೆ ಪ್ರಕ್ರಿಯೆಗಳನ್ನು ಬೆಂಬಲಿಸಬೇಕು ಎಂದು ಕರೆನೀಡುತ್ತದೆ.  ಅದು ಡಬ್ಲ್ಯುಟಿಒ ಸುಧಾರಣೆಯನ್ನು ಬೆಂಬಲಿಸುತ್ತದೆ ಮತ್ತು ಮುಕ್ತ, ಮುಂಗಾಣಬಹುದಾದ ಮತ್ತು ನಿಯಮ-ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ಬೆಂಬಲವನ್ನು ಪುನರುಚ್ಚರಿಸುತ್ತದೆ. ಅದು ಏರುತ್ತಿರುವ ಸುಂಕಗಳು, ಸುಂಕೇತರ ಅಡೆತಡೆಗಳು ಮತ್ತು ರಕ್ಷಣಾತ್ಮಕ ಕ್ರಮಗಳ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತದೆ. ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾದ ಏಕಪಕ್ಷೀಯ ಬಲವಂತದ ಕ್ರಮಗಳನ್ನು ಅದು ಖಂಡಿಸುತ್ತದೆ, ಅಂತಹ ಕ್ರಮಗಳು ಬಡವರು ಮತ್ತು ದುರ್ಬಲರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತವೆ ಎನ್ನುತ್ತದೆ. ಅದು ಕ್ಯೂಬಾದ ಮೇಲೆ ಏಕಪಕ್ಷೀಯ ದಿಗ್ಬಂಧನವನ್ನು ಬಿಗಿಗೊಳಿಸುವುದರ ಬಗ್ಗೆ  ಕಳವಳವನ್ನು ವ್ಯಕ್ತಪಡಿಸುತ್ತದೆ ಮತ್ತು ಅದನ್ನು ಕೊನೆಗೊಳಿಸುವ ಅಗತ್ಯವನ್ನು ಪುನರುಚ್ಚರಿಸುತ್ತದೆ.

ಇವು ಸ್ವಾಗತಾರ್ಹ ನಿಲುವುಗಳು. ಆದರೆ ಅವೆಲ್ಲ  ಜಾಗತಿಕ ಬಂಡವಾಳಶಾಹಿ ಸಂಸ್ಥೆಗಳನ್ನು ಸುಧಾರಿಸುವ ಚೌಕಟ್ಟಿನೊಳಗೇ  ಉಳಿಯುತ್ತವೆ, ಅದನ್ನು ಮೀರುವುದಿಲ್ಲ. ಘೋಷಣೆಯು ಡಾಲರ್‌ನ ಮೀಸಲು-ಕರೆನ್ಸಿ ಸ್ಥಾನಮಾನಕ್ಕೆ , ಜಾಗತಿಕ ದಕ್ಷಿಣದ ದೇಶಗಳನ್ನು  ಶಾಶ್ವತವಾದ ಗುಲಾಮಗಿರಿಯಲ್ಲಿ ಇರಿಸುವ ಐಎಂಎಫ್‌ನ  ಸಂರಚನಾತ್ಮಕ ಹೊಂದಾಣಿಕೆಯ ಷರತ್ತುಗಳು ಅಥವಾ ಸಾಲವ್ಯವಸ್ಥೆಗೆ ಸವಾಲು ಹಾಕುವುದಿಲ್ಲ . ʼಬ್ರಿಕ್ಸ್ ಆಕಸ್ಮಿಕ ಮೀಸಲು ವ್ಯವಸ್ಥೆʼ ಮತ್ತು ʼಬ್ರಿಕ್ಸ್ ಬಹುಪಕ್ಷೀಯ ಖಾತರಿಗಳ ಉಪಕ್ರಮʼವು ಆರ್ಥಿಕ ಚೈತನ್ಯದ ಕಡೆಗೆ ಹೆಜ್ಜೆಗಳು, ಆದರೆ ಅವು ಸಾಧಾರಣ ಸ್ವರೂಪದವು. ಪ್ರಸ್ತಾವಿತ ʼಬ್ರಿಕ್ಸ್‌ ಧಾನ್ಯ ವಿನಿಮಯʼ ಮತ್ತು ಅಗ್ರಿನ್‌ ಜಾಲ ಆಹಾರ ಭದ್ರತೆಯ ಪ್ರಶ್ನೆಯನ್ನು, ಜಾಗತಿಕ ಆಹಾರ ವ್ಯವಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾರ್ಪೊರೇಟ್ ಕೃಷಿ ವ್ಯಾಪಾರ ಏಕಸ್ವಾಮ್ಯವನ್ನು ಎದುರಿಸದೆಯೇ ಪರಿಹರಿಸುವ ಪ್ರಯತ್ನ.

ಇವು ಸ್ವಾಗತಾರ್ಹ ನಿಲುವುಗಳು. ಆದರೆ ಅವೆಲ್ಲ  ಜಾಗತಿಕ ಬಂಡವಾಳಶಾಹಿ ಸಂಸ್ಥೆಗಳನ್ನು ಸುಧಾರಿಸುವ ಚೌಕಟ್ಟಿನೊಳಗೇ  ಉಳಿಯುತ್ತವೆ, ಅದನ್ನು ಮೀರುವುದಿಲ್ಲ. ಘೋಷಣೆಯು ಡಾಲರ್‌ನ ಮೀಸಲು-ಕರೆನ್ಸಿ ಸ್ಥಾನಮಾನಕ್ಕೆ , ಜಾಗತಿಕ ದಕ್ಷಿಣದ ದೇಶಗಳನ್ನು  ಶಾಶ್ವತವಾದ ಗುಲಾಮಗಿರಿಯಲ್ಲಿ ಇರಿಸುವ ಐಎಂಎಫ್‌ನ  ಸಂರಚನಾತ್ಮಕ ಹೊಂದಾಣಿಕೆಯ ಷರತ್ತುಗಳು ಅಥವಾ ಸಾಲವ್ಯವಸ್ಥೆಗೆ ಸವಾಲು ಹಾಕುವುದಿಲ್ಲ . ʼಬ್ರಿಕ್ಸ್ ಆಕಸ್ಮಿಕ ಮೀಸಲು ವ್ಯವಸ್ಥೆʼ ಮತ್ತು ʼಬ್ರಿಕ್ಸ್ ಬಹುಪಕ್ಷೀಯ ಖಾತರಿಗಳ ಉಪಕ್ರಮʼವು ಆರ್ಥಿಕ ಚೈತನ್ಯದ ಕಡೆಗೆ ಹೆಜ್ಜೆಗಳು, ಆದರೆ ಅವು ಸಾಧಾರಣ ಸ್ವರೂಪದವು. ಪ್ರಸ್ತಾವಿತ ʼಬ್ರಿಕ್ಸ್‌ ಧಾನ್ಯ ವಿನಿಮಯʼ ಮತ್ತು ಅಗ್ರಿನ್‌ ಜಾಲ ಆಹಾರ ಭದ್ರತೆಯ ಪ್ರಶ್ನೆಯನ್ನು, ಜಾಗತಿಕ ಆಹಾರ ವ್ಯವಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾರ್ಪೊರೇಟ್ ಕೃಷಿ ವ್ಯಾಪಾರ ಏಕಸ್ವಾಮ್ಯವನ್ನು ಎದುರಿಸದೆಯೇ ಪರಿಹರಿಸುವ ಪ್ರಯತ್ನ.

ಇದನ್ನೂ ಓದಿ : ನೈಸ್‌ ಹೋರಾಟ ಹತ್ತಿಕ್ಕುವ ಯತ್ನ? -ಹೋರಾಟಗಾರರನ್ನು ವಶಕ್ಕೆ ಪಡೆದ ಡಿಕೆಶಿ ಸರ್ಕಾರ

ಜಾಗತಿಕ ದಕ್ಷಿಣದ ಮುಂದಿರುವ ಸವಾಲುಗಳು

ಬಡತನ, ಆರೋಗ್ಯ ರಕ್ಷಣೆ, ನಿರುದ್ಯೋಗ, ಸಾಲ ಮತ್ತು ಕೃತಕ ಬುದ್ಧಿಮತ್ತೆ ಇವೆಲ್ಲವೂ ಜಾಗತಿಕ ದಕ್ಷಿಣದ ಮುಂದಿರುವ ಸವಾಲುಗಳು. ಬ್ರಿಕ್ಸ್ ದೇಶಗಳು ಕೂಡ, ಬಹುಶಃ ಕೋಟ್ಯಂತರ ಜನರನ್ನು ಬಡತನದಿಂದ ಹೊರತಂದಿರುವ ಮತ್ತು ದೇಶೀ ತಾಂತ್ರಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿರುವ ಚೀನಾವನ್ನು ಹೊರತುಪಡಿಸಿ, ಬೇರೆಲ್ಲ ಬ್ರಿಕ್ಸ್‌ ದೇಶಗಳು ಕೂಡ .ಎದುರಿಸುತ್ತಿರುವ  ಸವಾಲುಗಳು.  ಘೋಷಣೆ ಈ ಸವಾಲುಗಳನ್ನು ಗುರುತಿಸುತ್ತದೆ, 2030 ರ ಕಾರ್ಯಸೂಚಿಗೆ (ಸುಸ್ಥಿರ ಅಭಿವೃದ್ಧಿ ಗುರಿಗಳು) ಬದ್ಧವಾಗಿರುವುದಾಗಿ ಹೇಳುತ್ತದೆ, ಅಸಮಾನತೆ ಹೆಚ್ಚಿನ ಸವಾಲುಗಳಿಗೆ ಮೂಲ ಕಾರಣವೆಂದು ಒಪ್ಪಿಕೊಳ್ಳುತ್ತದೆ ಮತ್ತು ಅಸಮಾನತೆಯ ಕುರಿತು ಒಂದು ಅಂತರರಾಷ್ಟ್ರೀಯ ಸಮಿತಿಯ ಪ್ರಸ್ತಾಪಗಳನ್ನು ಗಮನಿಸುತ್ತದೆ. ಇದು ಎಐ ಆಡಳಿತ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಆರೋಗ್ಯ ಸಹಕಾರ, ಕ್ಷಯರೋಗ, ಆಹಾರ ಭದ್ರತೆ ಮತ್ತು ವಿಪತ್ತು ಸನ್ನದ್ಧತೆಯ ಪ್ರಶ್ನೆಗಳನ್ನು ಗುರುತಿಸುತ್ತದೆ.

ಆದರೆ ಗುರುತಿಸುವುದೇ ಪರಿಹಾರವಲ್ಲ. ಈ ಸವಾಲುಗಳನ್ನು ಯುಎಸ್ ಸಾಮ್ರಾಜ್ಯಶಾಹಿ ಮತ್ತು ಅದರ ಆಕ್ರಮಣದ ವಿರುದ್ಧ ನಿಲ್ಲುವ ಮೂಲಕ ಮತ್ತು ಪರಿಧಿಯಲ್ಲಿರುವ ಬಡದೇಶಗಳಿMದ  ಮಿಗುತಾಯವನ್ನು ಕಿತ್ತುಕೊಂಡು ಅದನ್ನು ಕೇಂದ್ರದಲ್ಲಿರುವ ಶ್ರೀಮಂತ ದೇಶಗಳಲ್ಲಿ ತುಂಬುವ ರೀತಿಯಲ್ಲಿ  ವಿನ್ಯಾಸಗೊಳಿಸಲಾದ ಒಂದು  ಜಾಗತಿಕ ವ್ಯವಸ್ಥೆಯ  ಷರತ್ತುಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮೂಲಕ ಮಾತ್ರ ಎದುರಿಸಬಹುದು. ಜಾಗತಿಕ ದಕ್ಷಿಣಕ್ಕೆ ಎಐ ಸಂಪನ್ಮೂಲಗಳು ಮತ್ತು ಅಂತರರಾಷ್ಟ್ರೀಯ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಲಬ್ಯವಾಗಬೇಕು ಎಂದು  ಘೋಷಣೆಯು ಕರೆ ನೀಡುತ್ತದೆ. ಆದರೆ ಬೌದ್ಧಿಕ ಆಸ್ತಿ ವ್ಯವಸ್ಥೆ ಯುಎಸ್‌  ಕಾರ್ಪೊರೇಟ್‌ಗಳ ನಿಯಂತ್ರಣದಲ್ಲಿಯೇ   ಉಳಿದಿರುವ ವರೆಗೆ ಈ ಕರೆ ಅರ್ಥಹೀನ . ಬೆಲೆ ನಿರ್ಧಾರದಲ್ಲಿ ದೊಡ್ಡ ಔಷಧಿ ಕಾರ್ಪೊರೇಟ್‌ಗಳ ಏಕಸ್ವಾಮ್ಯಕ್ಕೆ  ಸವಾಲು ಹಾಕದಿದ್ದರೆ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಬೆಂಬಲವು ಟೊಳ್ಳಾಗಿರುತ್ತದೆ. ಯುಎಸ್‌  ಮತ್ತು ಯುರೋಪಿಯನ್‌ ಒಕ್ಕೂಟದಲ್ಲಿ ಕೃಷಿ ಸಬ್ಸಿಡಿಗಳು  ಜಾಗತಿಕ ಮಾರುಕಟ್ಟೆಗಳನ್ನು ವಿರೂಪಗೊಳಿಸುವುದನ್ನು ಮುಂದುವರಿಸುತ್ತಿದ್ದರೆ ಆಹಾರ ಭದ್ರತೆಯ ನಿಬಂಧನೆಗಳು ಅಸಮರ್ಪಕವಾಗುತ್ತವೆ..

ಹವಾಮಾನ ಬದಲಾವಣೆ: ಅಭಿವೃದ್ಧಿ ಹೊಂದಿದ ದೇಶಗಳು ತೆರಬೇಕು

ಹವಾಮಾನ ಬದಲಾವಣೆಯು ಬ್ರಿಕ್ಸ್‌ನ ಒಂದು ಪ್ರಮುಖ ಕಾಳಜಿಯಾಗಿದೆ. ನೇಪಾಳದಲ್ಲಿ ಇತ್ತೀಚಿನ ನೈಸರ್ಗಿಕ ವಿಕೋಪ ಮತ್ತು ನಮ್ಮ ದೇಶದಲ್ಲಿ ಎಲ್ ನಿನೋ ಪರಿಣಾಮಗಳು, ಅಕಾಲಿಕ ಮಳೆ ಮತ್ತು ತೀವ್ರ ಪ್ರವಾಹಗಳು ಒಂದೆಡೆ ಮತ್ತು ಅನಾವೃಷ್ಟಿ ಇನ್ನೊಂದೆಡೆ ನಮ್ಮ ದೇಶದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಪ್ರತಿಬಿಂಬಿಸುತ್ತವೆ. ಇಂತಹ ಹಿನ್ನೆಲೆಯಿರುವಾಗ, ಘೋಷಣೆಯು ಬಲವಾದ ವಿಪತ್ತು-ಅಪಾಯ ಕಡಿತ ವ್ಯವಸ್ಥೆಗಳಿಗೆ ಕರೆ ನೀಡುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ನಿರ್ದಿಷ್ಟವಾಗಿ ಗಂಭೀರವಾದ ಹವಾಮಾನ ಸಂಬಂಧಿತ ಹಣಕಾಸು ಸವಾಲುಗಳನ್ನು ಎದುರಿಸುತ್ತಿವೆ ಎಂದು ಗುರುತಿಸುತ್ತದೆ. ಆದರೆ ಇಲ್ಲಿಯೂ, ಘೋಷಣೆಯು ಇದರ ಅಪರಾಧಿಗಳನ್ನು ಹೆಸರಿಸುವುದಿಲ್ಲ.

ಸವಾಲುಗಳನ್ನು ಗುರುತಿಸುವುದೇ  ಪರಿಹಾರವಲ್ಲ. ಈ ಸವಾಲುಗಳನ್ನು ಯುಎಸ್ ಸಾಮ್ರಾಜ್ಯಶಾಹಿ ಮತ್ತು ಅದರ ಆಕ್ರಮಣದ ವಿರುದ್ಧ ನಿಲ್ಲುವ ಮೂಲಕ ಮತ್ತು ಪರಿಧಿಯಲ್ಲಿರುವ ಬಡದೇಶಗಳಿಂದ  ಮಿಗುತಾಯವನ್ನು ಕಿತ್ತುಕೊಂಡು ಅದನ್ನು ಕೇಂದ್ರದಲ್ಲಿರುವ ಶ್ರೀಮಂತ ದೇಶಗಳಲ್ಲಿ ತುಂಬುವ ರೀತಿಯಲ್ಲಿ  ವಿನ್ಯಾಸಗೊಳಿಸಲಾದ ಒಂದು  ಜಾಗತಿಕ ವ್ಯವಸ್ಥೆಯ  ಷರತ್ತುಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮೂಲಕ ಮಾತ್ರ ಎದುರಿಸಬಹುದು.

ಹವಾಮಾನ ಬಿಕ್ಕಟ್ಟು ಒಂದು ಹಂಚಿಕೊಳ್ಳಬೇಕಾದ ಜವಾಬ್ದಾರಿಯಲ್ಲ. ಇದು ಅಭಿವೃದ್ಧಿ ಹೊಂದಿದ ದೇಶಗಳು ಎರಡು ಶತಮಾನಗಳ ಕಾಲ ಯಾವುದೇ ನಿಯಂತ್ರಣವಿಲ್ಲದೆ  ಇಂಗಾಲವನ್ನು  ಹೊರಸೂಸಿರುವುದರ ಉತ್ಪನ್ನ. ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟು ಅಧಿನಿರ್ಣಯದಲ್ಲಿ  ಪ್ರತಿಪಾದಿಸಿರುವ ಎಲ್ಲರ, ಆದರೆ ವಿಭಿನ್ನ ಮಟ್ಟಗಳ ಜವಾಬ್ದಾರಿಗಳ ತತ್ವವನ್ನು ಎತ್ತಿಹಿಡಿಯಬೇಕು. ಅಭಿವೃದ್ಧಿ ಹೊಂದಿದ ದೇಶಗಳು ಜವಾಬ್ದಾರಿಯನ್ನು ಹೊರಬೇಕು, ಜಾಗತಿಕ ದಕ್ಷಿಣವಲ್ಲ. ಅವರು ವಸಾಹತುಗಳಾಗಿಸಿದ  ಮತ್ತು ಶೋಷಣೆ ಮಾಡಿದ ದೇಶಗಳಿಗೆ ಹವಾಮಾನ ಋಣಭಾರವನ್ನು ಹೊಂದಿದ್ದಾರೆ ಮತ್ತು ಅವರು ಅದನ್ನು ತಂತ್ರಜ್ಞಾನ ವರ್ಗಾವಣೆ, ರಿಯಾಯಿತಿ ಹಣಕಾಸು, ಮತ್ತು ತಮ್ಮ ದೇಶಗಳಲ್ಲಿ ನಿಜವಾದ ಹೊರಸೂಸುವಿಕೆ ಕಡಿತದ ಮೂಲಕ  ಪಾವತಿಸಬೇಕು. ಬ್ರಿಕ್ಸ್ ರಾಷ್ಟ್ರಗಳು ಹವಾಮಾನ ಹಾನಿಗಳಿಗೆ ಪರಿಹಾರವನ್ನು ಕೋರಬೇಕು, ಕೇವಲ ಅಳವಡಿಕೆ ಹಣಕಾಸು ಮಾತ್ರವಲ್ಲ.

ಭಾರತ: ಯುಎಸ್ ಸಾಮ್ರಾಜ್ಯಶಾಹಿಯ ಕಿರಿಯ ಪಾಲುದಾರ

ನವದೆಹಲಿ ಶೃಂಗಸಭೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡುಬಂದ ವೈರುಧ್ಯವೆಂದರೆ ಭಾರತ ಸರ್ಕಾರದ ನಡವಳಿಕೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯುಎಸ್‌ನೊಂದಿಗೆ ರಾಜಿ ಮಾಡಿಕೊಳ್ಳುವ ಮತ್ತು ಅದರ ಕಿರಿಯ ಪಾಲುದಾರನಾಗಿ ಕಾರ್ಯನಿರ್ವಹಿಸುವ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡಿದೆ. ಇದು ಬಹುಧ್ರುವೀಯತೆಯ ಮನೋಭಾವಕ್ಕೆ ವಿರುದ್ಧವಾಗಿದೆ. ಚೀನಾವನ್ನು ತಡೆದು ನಿಲ್ಲಿಸಲು ವಿನ್ಯಾಸಗೊಳಿಸಲಾದ ಕ್ವಾಡ್, ಎಯುಕೆಯುಎಸ್, ಮಿಲಿಟರಿ ಮತ್ತು ವ್ಯಾಪಾರ ವ್ಯವಸ್ಥೆಗಳ ಮೂಲಕ ಭಾರತವು ಯುಎಸ್ ಜೊತೆಗಿನ ತನ್ನ ಸಾಮರಿಕ ಪಾಲುದಾರಿಕೆಯನ್ನು ಆಳಗೊಳಿಸಿದೆ. ಬ್ರಿಕ್ಸ್‌  ಘೋಷಣೆಯು 1967 ರ ಗಡಿಯೊಳಗೆ ಪೂರ್ವ ಜೆರುಸಲೆಮನ್ನು ರಾಜಧಾನಿಯಾಗಿ ಹೊಂದಿರುವ ಪ್ಯಾಲೇಸ್ಟಿನಿಯನ್ ಸ್ವಯಂನಿರ್ಧಾರಕ್ಕೆ ಕರೆ ನೀಡುತ್ತಿರುವಾಗಲೇ,  ಭಾರತ  ಇಸ್ರೇಲ್‌ನೊಂದಿಗೆ ಸಾಮರಿಕ ಸಂಬಂಧವನ್ನು ಸಹ ಇಟ್ಟುಕೊಂಡಿದೆ. ಇರಾನ್, ವೆನೆಜುವೆಲಾ ಮತ್ತು ಕ್ಯೂಬಾ ವಿರುದ್ಧದ ಯುಎಸ್ ಆಕ್ರಮಣದ ಬಗ್ಗೆ ಅದು ಮೌನವಹಿಸಿದೆ. ಗಾಝಾದಲ್ಲಿ ಇಸ್ರೇಲಿನ ನರಮೇಧದ ಹಿಂಸಾಚಾರವನ್ನು ಸ್ಪಷ್ಟವಾಗಿ ಖಂಡಿಸಲು ಅದು ನಿರಾಕರಿಸಿದೆ.

ಇದು ಬಹುಧ್ರುವೀಯತೆಗೆ ಬದ್ಧವಾಗಿರುವ ಒಂದು ದೇಶದ ನಡವಳಿಕೆ ಅಲ್ಲ. ಇದು ಯುಎಸ್‌ ಪ್ರಾಬಲ್ಯವನ್ನು ಎದುರಿಸುವ ವೆಚ್ಚವನ್ನು ಭರಿಸದೆ  ಬ್ರಿಕ್ಸ್ ಸದಸ್ಯತ್ವದ ಪ್ರಯೋಜನಗಳನ್ನು ಬಯಸುವ ಒಂದು ದೇಶದ ನಡವಳಿಕೆಯಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಮೆರಿಕದ ತಾಳಕ್ಕೆ ಕುಣಿಯುತ್ತಲೇ, ಜಾಗತಿಕ ದಕ್ಷಿಣದ ಮೇಜಿನ ಮುಂದೆ ಕುಳಿತುಕೊಳ್ಳ ಬಯಸುತ್ತದೆ.

ನವದೆಹಲಿ ಶೃಂಗಸಭೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡುಬಂದ ವೈರುಧ್ಯವೆಂದರೆ ಭಾರತ ಸರ್ಕಾರದ ನಡವಳಿಕೆ. ಇದು ಬಹುಧ್ರುವೀಯತೆಗೆ ಬದ್ಧವಾಗಿರುವ ಒಂದು ದೇಶದ ನಡವಳಿಕೆ ಅಲ್ಲ. ಇದು ಯುಎಸ್‌ ಪ್ರಾಬಲ್ಯವನ್ನು ಎದುರಿಸುವ ವೆಚ್ಚವನ್ನು ಭರಿಸದೆ  ಬ್ರಿಕ್ಸ್ ಸದಸ್ಯತ್ವದ ಪ್ರಯೋಜನಗಳನ್ನು ಬಯಸುವ ಒಂದು ದೇಶದ ನಡವಳಿಕೆಯಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಮೆರಿಕದ ತಾಳಕ್ಕೆ ಕುಣಿಯುತ್ತಲೇ, ಜಾಗತಿಕ ದಕ್ಷಿಣದ ಮೇಜಿನ ಮುಂದೆ ಕುಳಿತುಕೊಳ್ಳ ಬಯಸುತ್ತದೆ.

ಸರ್ಕಾರವು ತನ್ನ ವಿದೇಶಾಂಗ ನೀತಿಯನ್ನು ಮತ್ತೆ ಸರಿಹೊಂದಿಸಿಕೊಳ್ಳಬೇಕು ಮತ್ತು ಪ್ಯಾಲೆಸ್ಟೈನ್, ಇರಾನ್, ಕ್ಯೂಬಾ, ವೆನೆಜುವೆಲಾ ಮತ್ತು ಯುಎಸ್ಗೆ ಗುರಿಯಾಗಿರುವ ಇತರ ದೇಶಗಳೊಂದಿಗೆ ಸೌಹಾರ್ದದಿಂದ ನಿಲ್ಲಬೇಕು. ಬಾಹ್ಯ ಮತ್ತು ಆಂತರಿಕ ವಾಸ್ತವವನ್ನು ಎದುರಿಸಲು ಸರ್ಕಾರ ಕಲಿಯಬೇಕು. ಅರಬ್ ಸೆಂಟರ್ ಫಾರ್ ರಿಸರ್ಚ್ ಅಂಡ್ ಪಾಲಿಸಿ ಸ್ಟಡೀಸ್, ಪಶ್ಚಿಮ ಏಷ್ಯಾದ 15 ದೇಶಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, 44 ಶೇ.ದಷ್ಟು ಜನ ಇಸ್ರೇಲನ್ನು ಮತ್ತು 21 ಶೇ.ದಷ್ಟು ಜನರು ಯುಎಸ್ ಅನ್ನು ಅರಬ್ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡುವ ಪ್ರಭುತ್ವ  ಎಂದು ಹೆಸರಿಸಿದ್ದಾರೆ. ಇರಾನ್ ಬಹಳ ದೂರದಲ್ಲಿ ಮೂರನೇ ಸ್ಥಾನದಲ್ಲಿದೆ.  ಅದನ್ನು  ಹೆಸರಿಸಿದವರು 6ಶೇ.ದಷ್ಟು. ಇದೇನೂ ಹೊಸ ಪ್ರವೃತ್ತಿಯಲ್ಲ: ಇಸ್ರೇಲ್ ನಿರಂತರವಾಗಿ ಅಗ್ರ ಬೆದರಿಕೆಯಾಗಿ ಸ್ಥಾನ ಪಡೆದಿದೆ ಮತ್ತು ಯುಎಸ್ ಸತತವಾಗಿ ಎರಡನೇ ಸ್ಥಾನದಲ್ಲಿದೆ. ಇಸ್ರೇಲಿ ನೀತಿಗಳು ಅರಬ್ ಪ್ರದೇಶದ ಭದ್ರತೆ ಮತ್ತು ಸ್ಥಿರತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು 84 ಶೇ. ಅಂದರೆ ಸಮಾರಾಗಿ ಒಮ್ಮತದಿಂದ ಒಪ್ಪಿಕೊಂಡರು, ಯುಎಸ್‌ ನೀತಿಗಳ  ಬಗ್ಗೆ 77 ಶೇ.ದಷ್ಟು ಜನರು ಇದನ್ನೇ ಹೇಳಿದ್ದಾರೆ. ಒಟ್ಟಾರೆಯಾಗಿ ಯುಎಸ್‌  ಬಗ್ಗೆ ಅವರ ಭಾವನೆಗಳ ಬಗ್ಗೆ ಕೇಳಿದಾಗ, 56 ಶೇ.ದಷ್ಟು ಜನರು, ಒಂದು ದಶಕದ ಹಿಂದಿನದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ನಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅರಬ್ ಪ್ರಪಂಚದಲ್ಲಿರುವ ಭಾವನೆಯಷ್ಟೇ ಅಲ್ಲ. ಪ್ಯೂ ರಿಸರ್ಚ್ ಸೆಂಟರ್‌ನ 36 ದೇಶಗಳನ್ನು ಒಳಗೊಂಡ ಸ್ಪ್ರಿಂಗ್ 2026 ಜಾಗತಿಕ ನಿಲುವುಗಳ ಸಮೀಕ್ಷೆಯು,ಹೆಚ್ಚಿನ ದೇಶಗಳಲ್ಲಿ ಬಹುಪಾಲು ಜನರು  ಇಸ್ರೇಲ್ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಕಂಡಿದೆ. ಭಾರತೀಯ ಸರ್ಕಾರ ಈ ವಾಸ್ತವದತ್ತ ಕಣ್ಣು ತೆರೆಯಬೇಕು ಮತ್ತು ಯುಎಸ್ ಮತ್ತು ಇಸ್ರೇಲ್‌ನಿಂದ ದೂರವಿರಬೇಕು.

ಇನ್ನೊಂದು ವಾಸ್ತವ ಒಳಗಿನದ್ದು. ಸರ್ಕಾರ ಬಡತನವನ್ನು ಮರೆಮಾಚಲು ಪ್ರಯತ್ನಿಸಿತು. ಶೃಂಗಸಭೆಯ ಮೊದಲು ಕೊಳೆಗೇರಿಗಳಿಗೆ ಆವರಣ ಹೊದಿಸಿ  ಮತ್ತು ವಸತಿಹೀನರನ್ನು  ನಗರ ಕೇಂದ್ರಗಳಿಂದ ದೂರ ತಳ್ಳಿ  ಬಡತನ, ಹಣದುಬ್ಬರ, ನಿರುದ್ಯೋಗ ಮತ್ತು ವಸತಿಹೀನತೆಯನ್ನು ಅಡಗಿಸಿಡಲು ಅಥವಾ ಆರ್ಥಿಕ ಅಂಕಿಅಂಶಗಳು ಮತ್ತು ಪ್ರಚಾರದ ಬಿರುಸಿನ ಮೂಲಕ ಸುಳ್ಳಾಗಿಸಲು ಪ್ರಯತ್ನಿಸಿತು.

ಮುಂದಿನ ದಾರಿ

ಹೊಸ ದೆಹಲಿ ಘೋಷಣೆಯು ಜಾಗತಿಕ ದಕ್ಷಿಣದ ಕುಂದುಕೊರತೆಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಇದು ಏಕಪಕ್ಷೀಯ ನಿರ್ಬಂಧಗಳಿಗೆ  ಸವಾಲು ಹಾಕುತ್ತದೆ, ಪ್ಯಾಲೇಸ್ಟಿನಿಯನ್ ಹಕ್ಕುಗಳನ್ನು ಬೆಂಬಲಿಸುತ್ತದೆ ಮತ್ತು ಸಾಂಸ್ಥಿಕ ಸುಧಾರಣೆಗೆ ಕರೆ ನೀಡುತ್ತದೆ. ಆದರೆ ಘೋಷಣೆಗಳು ಜನರನ್ನು ಮುಕ್ತಗೊಳಿಸುವುದಿಲ್ಲ, ಹೋರಾಟಗಳು ಮುಕ್ತಗೊಳಿಸುತ್ತವೆ.

ಮಾತಿನ ಅಬ್ಬರ  ಮತ್ತು ವಾಸ್ತವದ ನಡುವಿನ ಅಂತರವನ್ನು ಎಡಪಕ್ಷಗಳು ಬಯಲಿಗೆ ತರಬೇಕು,  ಸರ್ಕಾರಗಳು ಉತ್ತರದಾಯಿಯಾಗುವಂತೆ ಮಾಡಬೇಕು,  ಮತ್ತು ನಿಜವಾದ ಬದಲಾವಣೆಗೆ ಬಲವಂತ ಮಾಡಬಲ್ಲ ಚಳುವಳಿಗಳನ್ನು ಕಟ್ಟಬೇಕು. ಬ್ರಿಕ್ಸ್ ಸಾಮ್ರಾಜ್ಯಶಾಹಿ ವಿರೋಧಿ ವೇದಿಕೆಯಲ್ಲ. ನಮ್ಮ ಕೆಲಸ ಅದನ್ನು ತ್ಯಜಿಸುವುದಲ್ಲ, ಬದಲಿಗೆ ಅದನ್ನು ರೂಪಾಂತರಗೊಳಿಸುವುದು ಮತ್ತು ಬಹುಧ್ರುವೀಯತೆಯ ಮಿತಿಗಳನ್ನು ಮೀರುವತ್ತ ತಳ್ಳುವುದು.

ಪ್ಯಾಲೆಸ್ಟೈನ್, ಇರಾನ್, ಕ್ಯೂಬಾ ಮತ್ತು ವೆನೆಜುವೆಲಾದ ಜನರಿಗೆ ಘೋಷಣೆಗಳಿಗಿಂತ ಹೆಚ್ಚಿನದು ಬೇಕಾಗಿದೆ. ಅವರಿಗೆ ಕ್ರಿಯೆ ಬೇಕಾಗಿದೆ.  ಮತ್ತು ಆ ಕ್ರಿಯೆ  ಸಂಘಟಿತ ಕಾರ್ಮಿಕ ವರ್ಗ, ರೈತಾಪಿ ವರ್ಗ, ಯುವಜನರು ಮತ್ತು ಯುಎಸ್ ಸಾಮ್ರಾಜ್ಯಶಾಹಿಯಿಂದ ಆದೇಶಿಸಲ್ಪಟ್ಟ ಜಗತ್ತನ್ನು ಸ್ವೀಕರಿಸಲು ನಿರಾಕರಿಸುವ ಎಲ್ಲರಿಂದ ಬರುತ್ತದೆ. ಹೋರಾಟ ಮುಂದುವರಿಯುತ್ತದೆ.

(ಕೃಪೆ: ಪೀಪಲ್ಸ್‌ ಡೆಮಾಕ್ರಸಿ ವಾರಪತ್ರಿಕೆ, ಸಪ್ಟಂಬರ್‌ ೨೦, ೨೦೨೬)

ವ್ಯಂಗ್ಯಚಿತ್ರ: ರಾಕೇಶ್‌ ರಂಜನ್‌, ಮೊಲಿಟಿಕ್ಸ್‌.ಇನ್

ಇದನ್ನೂ ನೋಡಿ :SIR | 14 ಕೋಟಿ ಮತದಾರರ ಹೆಸರು ಡಿಲೀಟ್‌? ಮತದಾನದ ಹಕ್ಕಿಗೇ ಕತ್ತರಿ! | Janashakthi Media

Donate Janashakthi Media

Leave a Reply

Your email address will not be published. Required fields are marked *