ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಕಾರ್ಯಕರ್ತರ ಮನವಿ
ಹಾವೇರಿ: ಹಾವೇರಿ ವಿಶ್ವವಿದ್ಯಾಲಯಕ್ಕೆ ನೂತನ ಸರ್ಕಾರಿ ಹಾಸ್ಟೆಲ್ ಗಳ ಮಂಜೂರು ಮಾಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ವಿಶ್ವವಿದ್ಯಾಲಯ ಎಸ್ಎಫ್ಐ ಘಟಕ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾ ಆಡಳಿತ ಕಚೇರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರಶಾಂತ ವರಗಪ್ಪನವರ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಹಾವೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ ದಿಂದ ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡುವ ಕನಸನ್ನು ಹೊತ್ತು ನಗರದಿಂದ ಸುಮಾರು 8-10 ಕಿಲೋಮೀಟರ್ ದೂರದಲ್ಲಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಆಗಮಿಸುತ್ತಾರೆ. ಒಂದೆಡೆ ಬಸ್ಸಿನ ಸಮಸ್ಯೆ ವಿಪರೀತವಾಗಿದೆ ಸರಿಯಾದ ವೇಳೆಗೆ ಬಸ್ ಬರುವುದಿಲ್ಲ. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯ ಇರುವುದರಿಂದ ಅತೀ ಹೆಚ್ಚು ವಿದ್ಯಾರ್ಥಿನಿಯರು ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದಾರೆ.
ವಿವಿಯ ಬಾಲಕರ ವಸತಿ ನಿಲಯವಿದ್ದು ಅದು ಕೇವಲ ವಸತಿ ಸೌಲಭ್ಯವನ್ನು ಮಾತ್ರ ಹೊಂದಿದೆ ಆದರೆ ಊಟ ಸೇರಿದಂತೆ ಇತರೆ ಯಾವುದೇ ಸೌಲಭ್ಯಗಳಿಲ್ಲದೆ ಸಾವಿರಾರು ರೂಪಾಯಿ ಶುಲ್ಕ ನಿಗದಿ ಮಾಡಿರುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಹೊರೆ ಆಗುತ್ತದೆ.
ಇದನ್ನೂ ಓದಿ: ಇಸ್ರೋ ವಿಜ್ಞಾನಿಗಳ ರಾಜಿನಾಮೆ ಹುಟ್ಟಿಸಿದ ತಲ್ಲಣ !
ಆದರೆ ಬಾಲಕರ ಹಾಸ್ಟೆಲ್ ಇಲ್ಲದಿರುವ ಕಾರಣ ಶಿಕ್ಷಣವನ್ನೇ ಮೊಟಕುಗೊಳಸುತ್ತಿದ್ದಾರೆ. ಪ್ರವೇಶಗಳ ದಾಖಲಾತಿ ಆಸಕ್ತಿ ತೋರುತ್ತಿಲ್ಲ. ಆದರಿಂದ ನಗರದ ವಿವಿಧ ಹಾಸ್ಟೆಲ್ ಗಳಿಗೆ ಅರ್ಜಿ ಹಾಕಿದ ವಿದ್ಯಾರ್ಥಿಗಳ ಪೈಕಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವಸತಿ ಸೌಲಭ್ಯಗಳು ಸಿಗುತ್ತಿವೆ. ಇದರಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕ್ಯಾಂಪಸ್ ನಲ್ಲಿಯೇ ಹಾಸ್ಟೆಲ್ ಮಂಜೂರು ಮಾಡುವುದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದಾಗಿ ಆಗುತ್ತದೆ.
ಹಾವೇರಿ ವಿಶ್ವವಿದ್ಯಾಲಯಕ್ಕೆ 2023 ರಿಂದ 2026ನೇ ಸಾಲಿನಲ್ಲಿ ಒಟ್ಟು 715 ಜನ ವಿದ್ಯಾರ್ಥಿಗಳ ಪೈಕಿ 242 ಬಾಲಕರು 473 ವಿದ್ಯಾರ್ಥಿನಿಯರು ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಬಾಲಕರು ಮತ್ತು ಬಾಲಕಿಯರ ಹಾಸ್ಟೆಲ್ ಗಳ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆ ಆದೇಶದಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಒದಗಿಸಬೇಕೆಂದು ನಿಯಮವಿದೆ ಆದರೆ ನಮ್ಮ ಜಿಲ್ಲೆಯಲ್ಲಿ ಉನ್ನತ ಇಲಾಖೆಯ ನಿಯಮ ಉಲ್ಲಂಘನೆ ಆಗಿದೆ ವಿಶ್ವವಿದ್ಯಾಲಯ ಮೂರು ವರ್ಷಗಳ ಕಾಲ ಪೂರೈಸಿದರು ಈವರೆಗೂ ಯಾವುದೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಕೇಳುತ್ತಿಲ್ಲದಿರುವುದು ದುರದೃಷ್ಟಕರವಾಗಿದೆ. ಕೂಡಲೇ ಜಿಲ್ಲಾ ಉಪ ನಿರ್ದೇಶಕರು ಹಾಸ್ಟೆಲ್ ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಕಳುಹಿಸ ಸಮಾಜ ಕಲ್ಯಾಣ ಇಲಾಖೆಯ ಬಾಲಕ ಬಾಲಕಿಯರ ವಸತಿ ನಿಲಯ ಪ್ರಾರಂಬಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾವಿವಿ ಎಸ್ಎಫ್ಐ ಘಟಕ ಅಧ್ಯಕ್ಷೆ ಪೂಜಾ ಬಾರ್ಕಿ, ಕಾರ್ಯದರ್ಶಿ ಶಂಭುಲಿಂಗ ಸವದತ್ತಿ, ಉಪಾಧ್ಯಕ್ಷರು ಪರಶುರಾಮ, ಬಸವರಾಜ ಎಸ್, ಕಾಂತೇಶ್ ಹಳ್ಳೇರ್, ಸಹ ಕಾರ್ಯದರ್ಶಿ ಪ್ರವೀಣ್ ಮಟ್ಟೇರ, ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಗವತ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ‘ಪ್ರತಿ ಐವರಲ್ಲಿ ಒಬ್ಬ ಮತದಾರ ಪಟ್ಟಿಯಿಂದ ಹೊರಗೆ’ : SIR ವಿರುದ್ಧ ಗಂಭೀರ ಆರೋಪ Janashakthi Media
