ವಿಶ್ವ ಸಂಗೀತ ದಿನಾಚರಣೆ: ಎಂ.ಜಿ.ರೋಡ್‌ನಲ್ಲಿ ಸಂಗೀತ ಸಂಭ್ರಮ, 110 ಕಲಾವಿದರ ಪ್ರದರ್ಶನ

ಬೆಂಗಳೂರು: ಸಾಮಾನ್ಯ ಭಾನುವಾರವಲ್ಲ, ಎಂ.ಜಿ.ರೋಡ್‌ನಲ್ಲಿ ಈ ಬಾರಿ ಜೂನ್‌ 21ರಂದು ವಿಭಿನ್ನ ದೃಶ್ಯ ಕಂಡುಬಂದಿತು. ನಗರದ ಗದ್ದಲಮಯ ರಸ್ತೆ ಸಂಚಾರದ ಶಬ್ದಗಳಿಗೆ ಬದಲಾಗಿ ಸಂಗೀತ, ತಾಳ ಮತ್ತು ಕರತಾಡನಗಳ ಧ್ವನಿಗಳು ಆವರಿಸಿಕೊಂಡವು. ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್‌ನಲ್ಲಿ ದಿನಪೂರ್ತಿ ನಡೆದ ಕಾರ್ಯಕ್ರಮ ನಗರಕ್ಕೆ ವಿಶೇಷ ಮೆರುಗು ನೀಡಿತು. ದಿನಾಚರಣೆ

ಶಾಸ್ತ್ರೀಯ ರಾಗಗಳಿಂದ ಹಿಡಿದು ಜನಪದ ಗೀತೆಗಳು, ಚಿತ್ರಗೀತೆಗಳು, ಭಕ್ತಿ ಸಂಗೀತ ಹಾಗೂ ಆಧುನಿಕ ಪ್ರದರ್ಶನಗಳವರೆಗೆ ವಿವಿಧ ಸಂಗೀತ ಶೈಲಿಗಳು ಇಲ್ಲಿ ಒಂದೇ ವೇದಿಕೆಯಲ್ಲಿ ಮೂಡಿಬಂದವು. ಎಂ.ಜಿ.ರೋಡ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಈ ಸಾಂಸ್ಕೃತಿಕ ಕೇಂದ್ರದಲ್ಲಿ ಐದು ವೇದಿಕೆಗಳಲ್ಲಿ 110ಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ದಿನಾಚರಣೆ

ಅಲ್ಲಿ ಹಾದು ಹೋಗುತ್ತಿದ್ದವರು ಏನಿದು ಸಂಭ್ರಮ ಎಂದು ಕುತೂಹಲದಿಂದ ನಿಂತು ನೋಡಿದರು. ಕೆಲವರು ಕೆಲ ಕ್ಷಣಗಳು ನಿಂತು ಮುಂದುವರೆದರೆ, ಇನ್ನೂ ಕೆಲವರು ವಿವಿಧ ಸಂಗೀತ ಶೈಲಿಗಳನ್ನು ಕಂಡು ಆನಂದಿಸಿದರು.

ಇದನ್ನೂ ಓದಿ: ಕೋಟ್ಯಾಂತರ ರೂಪಾಯಿ ವೆಚ್ಚದ ಸ್ಮಾರ್ಟ್ ಸಿಟಿ ಮಿನಿ ಸ್ಟೇಡಿಯಂ ಶೋಚನೀಯ ಸ್ಥಿತಿ: ಕ್ರೀಡಾಪಟುಗಳ ಆಕ್ರೋಶ

ಕಾರ್ಯಕ್ರಮದ ಮುಕ್ತ ಸ್ವರೂಪವು ವಿಭಿನ್ನ ಸಂಗೀತ ಪರಂಪರೆಗಳ ಸಂಗಮಕ್ಕೆ ಕಾರಣವಾಯಿತು. ನಾಟಕ ಸಂಗೀತ, ಜನಪದ ಕಲಾ ಪ್ರದರ್ಶನಗಳು, ಕೀರ್ತನೆಗಳು, ಬಹುಭಾಷಾ ಬ್ಯಾಂಡ್‌ಗಳ ಪ್ರದರ್ಶನಗಳು ಮತ್ತು ವಾದ್ಯ ಸಂಗೀತ— ಎಲ್ಲವೂ ಒಂದೇ ಸ್ಥಳದಲ್ಲಿ ಸಾಗಿದವು.

ಕಾರ್ಯಕ್ರಮದ ಕೊನೆಯಲ್ಲಿ ಬೆಂಗಳೂರು ನಗರಕ್ಕೆ ಹೆಸರಾದ ಸಮುದಾಯ ಡ್ರಮ್ ಜ್ಯಾಮ್‌ ನಡೆಯಿತು. ಪ್ರಸಿದ್ಧ ಸಂಗೀತಗಾರರಾದ ವಸುಂಧರ ದಾಸ್ ಮತ್ತು ರಾಬರ್ಟೊ ನರೇನ್ ಅವರ ನೇತೃತ್ವದಲ್ಲಿ ಎಲ್ಲ ವಯಸ್ಸಿನ ಜನರು ಒಂದೇ ತಾಳದಲ್ಲಿ ಸೇರಿ ಸಂಭ್ರಮಿಸಿದರು.

“ಸಾಮಾನ್ಯವಾಗಿ ಎಂ.ಜಿ.ರೋಡ್‌ನಲ್ಲಿ ಸಂಚರಿಸುವವರು ನಾಟಕ ಸಂಗೀತ ಅಥವಾ ಇತರ ಸಂಪ್ರದಾಯಿಕ ಕಲಾರೂಪಗಳನ್ನು ಕಾಣುವುದಿಲ್ಲ. ಆದರೆ ಇಂತಹ ಪ್ರದರ್ಶನಗಳನ್ನು ನೋಡಿದಾಗ ನಮ್ಮ ಸಂಸ್ಕೃತಿ ಮತ್ತು ನಿಧಾನವಾಗಿ ಕಳೆದುಹೋಗುತ್ತಿರುವ ಸಂಗೀತ ಪರಂಪರೆ ಬಗ್ಗೆ ಅರಿವು ಮೂಡುತ್ತದೆ,” ಎಂದು ರಂಗಶ್ರವ್ಯ ಸಂಸ್ಥೆಯ ಡಾ. ಟಿ. ಲಕ್ಷ್ಮೀನಾರಾಯಣ ಹೇಳಿದರು.

ಸಂಗಮ ತಂಡದ ಕಾರ್ತಿಕ್ ಕುಮಾರ್, “ನಾವು ಇನ್ನೂ ಹೊಸಬರು. ಪ್ರಾರಂಭದಲ್ಲಿ ನಮ್ಮ ಪ್ರದರ್ಶನಕ್ಕೆ 10 ಜನಕ್ಕೂ ಕಡಿಮೆ ಜನರಿದ್ದರು. ಆದರೆ ಕೊನೆಯಲ್ಲಿ 60 ರಿಂದ 70 ಜನರು ನಮ್ಮ ಸಂಗೀತವನ್ನು ಕೇಳಿದರು. ಇದು ನಮ್ಮಿಗೆ ಉತ್ತಮ ಅವಕಾಶ,” ಎಂದರು.

ಆರ್‌ಎಸ್ ಅಕಾಡೆಮಿ ಇನ್ಸ್ಟಿಟ್ಯೂಟ್‌ನ ರೋಹಿತ್ ವಿ ಸಿಂಗ್, “ಇಂತಹ ವೇದಿಕೆಗಳು ಅತ್ಯಂತ ಮುಖ್ಯ. ಅನೇಕ ಪ್ರತಿಭಾವಂತ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಲು ಅವಕಾಶ ಸಿಕ್ಕಿತು ಮತ್ತು ಉತ್ತಮ ಪ್ರತಿಕ್ರಿಯೆ ದೊರಕಿತು,” ಎಂದು ಹೇಳಿದರು.

ಪ್ರಾಣ ಕೀರ್ತನಿಯಾ ತಂಡದ ಮಿನು ನಾಯರ್, “ಸಾಮಾನ್ಯ ಜನರೊಂದಿಗೆ ಕೀರ್ತನೆ ಮೂಲಕ ಸಂಪರ್ಕ ಸಾಧಿಸಲು ನಾವು ಅವಕಾಶ ಹುಡುಕುತ್ತಿದ್ದೆವು. ಈ ವೇದಿಕೆ ಅದಕ್ಕೆ ಸೂಕ್ತವಾಗಿತ್ತು. ಜನರು ನಿಂತು ಕೇಳುವಂತಹ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನ ನೀಡುವುದು ವಿಶೇಷ ಅನುಭವ,” ಎಂದು ಹೇಳಿದರು.

ಇದನ್ನೂ ನೋಡಿ: BLO ಕೆಲಸದ ಒತ್ತಡಕ್ಕೆ ಬೇಸತ್ತ ಅಂಗನವಾಡಿ ನೌಕರರು! ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *