ಸಂಡೆ ಬಜಾರ್ ವ್ಯಾಪಾರಿಗಳ ಕಾರ್ಯಾಚರಣೆಗೆ ಮುಂದಾದ ನಗರಪಾಲಿಕೆ: ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಮಂಗಳೂರು: ಪರ್ಯಾಯ ವ್ಯವಸ್ಥೆ ಮಾಡದೆ ಸಂಡೆ ಬಜಾರ್ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದ ನಗರಪಾಲಿಕೆ ಅಧಿಕಾರಿಗಳು ಬಡ ಬೀದಿ ವ್ಯಾಪಾರಿಗಳ ಸರಕುಗಳನ್ನು ವಶಪಡಿಸಲು ಲಾರಿಗಳನ್ನು ತಂದು ಕಾರ್ಯಾಚರಣೆ ನಡೆಸಲು ಮುಂದಾಗುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು ಪಾಲಿಕೆಯ ಎದುರು ಕೂತು ತೀವ್ರ ಪ್ರತಿಭಟನೆ ನಡೆಸಿದರು ಎಂದು ಬಿ.ಕೆ ಇಮ್ತಿಯಾಜ್ ತಿಳಿಸಿದರು.

ಪಾಲಿಕೆ ಬೀದಿಬದಿ ವ್ಯಾಪಾರದ ನಿಯಮನುಸಾರ ಕಾರ್ಯಾಚರಣೆ ಮಾಡಬೇಕೆಂದು ಪಟ್ಟು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಿಗಳ ಧಿಡೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು ಎಂದರು.

ಇದನ್ನೂ ಓದಿ: ಕೇರಳ| ಬಸ್ಸುಗಳಲ್ಲಿ ಜೂನ್ 15ರಿಂದ ಮಹಿಳೆಯರು, ತೃತೀಯಲಿಂಗಿಗಳಿಗೆ ಉಚಿತ ಪ್ರಯಾಣ

ಬೀದಿಬದಿ ವ್ಯಾಪಾರಸ್ಥರ ಸಂಘಟನೆಗಳ ಪ್ರಮುಖರಾದ ಅಬ್ದುಲ್ ರಹಿಮಾನ್, ಸಂತೋಷ್ ಆರ್ ಎಸ್,ಮುಜಾಫರ್ ಅಹ್ಮದ್, ಮೊಹಮ್ಮದ್ ಮುಸ್ತಫಾ, ವಿಜಯ್ ಜೈನ್, ಎಂ.ಎನ್ ಶಿವಪ್ಪ,ನೌಶಾದ್ ಉಳ್ಳಾಲ, ಹಂಝ ಮೊಹಮ್ಮದ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ನಗರದಲ್ಲಿ ಸಂಡೆ ಬಜಾರ್ 50 ವರ್ಷಗಳ ಹಿಂದಿನಿಂದಲೂ ನಡೆಯುತ್ತಾ ಬರುತ್ತಿದೆ. ಬೀದಿಬದಿ ವ್ಯಾಪಾರಿಗಳು ಐಕ್ಯತೆ ಮತ್ತು ಬದ್ಧತೆಯಿಂದ ಕಾರ್ಯಚರಣೆಯನ್ನು ವಿಫಲಗೊಳಿಸಿದ್ದಾರೆ.

ನಗರ ಪಾಲಿಕೆ ಕಾರ್ಯಾಚರಣೆ ಮಾಡದೆ ಪರ್ಯಾಯ ವ್ಯವಸ್ಥೆ ಬಗ್ಗೆ ತೀರ್ಮಾನ ಕೈಗೊಳ್ಳಲಿ ಏಕಪಕ್ಷೀಯ ಮತ್ತು ನಿಯಮಬಾಹಿರ ಕಾರ್ಯಾಚರಣೆ ಪರಿಹಾರ ಕ್ರಮವಲ್ಲ.

ಇದನ್ನೂ ನೋಡಿ: ಹಾಸನ | ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮೋದಿ ಪ್ರತಿಕೃತಿ ದಹನ Janashakthi Media

Donate Janashakthi Media

Leave a Reply

Your email address will not be published. Required fields are marked *