ಟ್ರಂಪ್ ಆಡಳಿತದ ಎರಡನೇ ಅವಧಿಯಲ್ಲಿ ನ್ಯಾಯದ ಬಗ್ಗೆ ಅತ್ಯಂತ ವ್ಯಾವಹಾರಿಕ ಕೊಡು-ಕೊಳ್ಳು ಧೋರಣೆಯನ್ನು ತೋರಲಾಗುತ್ತಿದೆ ಎಂಬ ಸೂಚನೆಗಳಿವೆ. ಆದರೆ, ನಮಗೆ, ಅಂದರೆ ಭಾರತೀಯರಿಗೆ, ಪ್ರಧಾನಿಯ ಅತ್ಯಂತ ಅಸಾಧಾರಣವಾದ ಗೆಳೆಯ ಅಮೆರಿಕದಲ್ಲಿ ನ್ಯಾಯವನ್ನು ಖರೀದಿಸುತ್ತಾನೆ ಎನ್ನುವುದು ಕಡಿಮೆ ಮಹತ್ವದ ವಿಷಯವೇನೂ ಅಲ್ಲ. ಮಿತವ್ಯಯ ಆಚರಿಸುವಂತೆ ಭಾರತೀಯ ನಾಗರಿಕರಿಗೆ ಮೋದಿ ಸಲಹೆ ನೀಡುತ್ತಿರುವ ಈ ಸಂದರ್ಭದಲ್ಲಿ ಅಮೆರಿಕದಲ್ಲಿ 15,000 ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಅದಾನಿ 10 ಶತಕೋಟಿ ಡಾಲರ್ ಹಣವನ್ನು ಉದಾರವಾಗಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ವಿದೇಶಿ ವಿನಿಮಯವನ್ನು ಉಳಿಸಲಿಕ್ಕಾಗಿ ಮಿತವ್ಯಯ ಸಾಧಿಸಬೇಕೆಂಬ ತನ್ನ ಸಲಹೆಯನ್ನು ಹೀಗೆ ಅದಾನಿ ಉಲ್ಲಂಘಿಸಿರುವುದಕ್ಕೆ ಪ್ರಧಾನಿಯಿಂದ ಯಾವುದಾದರೂ ಪ್ರತಿಭಟನೆಯ ಸೊಲ್ಲು ಬಂದಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ? ಹೌದು, ಇದರಲ್ಲಿ ಯಾವುದೇ ಧಾರ್ಮಿಕ ಭಾವನೆ ಅಡಕವಾಗಿಲ್ಲ. ಇದು ಬಂಡವಾಳ ಮತ್ತು ಲಾಭಕ್ಕೆ ಅನುಕೂಲ ಕಲ್ಪಿಸುವ ಒಂದು ಶುದ್ಧ ಹಾಗೂ ಸರಳ ಕಥೆ. ಕ್ರಿಮಿನಲ್
– ನೀಲೋತ್ಪಲ್ ಬಸು
– ಕನ್ನಡಕ್ಕೆ: ವಿಶ್ವ
ಐದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾರಿ ಸಂಭ್ರಮ ಪಟ್ಟಿದ್ದಾರೆ. `ಇದೊಂದು ಚುನಾವಣಾ ಸ್ಥಿತ್ಯಂತರ ಮಾತ್ರವೇ ಅಲ್ಲ, ಜನರ ಮನೋಭಾವದಲ್ಲಿನ ಬದಲಾವಣೆಯೂ ಆಗಿದೆ’ ಎಂದು ಅವರು ಆಕ್ರಮಣಕಾರಿಯಾಗಿ ಪ್ರತಿಪಾದಿಸಿದ್ದಾರೆ. ಕೇರಳದಲ್ಲಿ ಎಲ್ಡಿಎಫ್ ಪರಾಭವ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿರುವುದರಿಂದ ಈ ಚುನಾವಣಾ ಆರೋಹಣದ ಸೈದ್ಧಾಂತಿಕ ಕ್ರೋಡೀಕರಣದ ಕ್ಷಣವಾಗಿದೆ. ಕ್ರಿಮಿನಲ್
ಇದೇ ಹೊತ್ತಿಗೆ ಮೋದಿಯಲ್ಲಿ ಅಷ್ಟೇ ಸುಪ್ತವಾದ ಕಳವಳವೂ ಇದೆ. ಅದು ಅವರ ಸೈದ್ಧಾಂತಿಕ ಚಿಲುಮೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅದರ ಪ್ರಭಾವಶಾಲಿ ಸಿದ್ಧಾಂತಿ ಗೊಲ್ವಾಲ್ಕರ್ರಿಂದ ಬಂದಿದ್ದಾಗಿದೆ. ಕಮ್ಯೂನಿಸ್ಟರು ಪ್ರಮುಖ ಪ್ರತಿಸ್ಪರ್ಧಿಗಳು ಎಂದು ಗೊಲ್ವಾಲ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು. ಇದರಲ್ಲಿ ಅಂತರ್ಗತವಾಗಿರುವ ಫ್ಯಾಸಿಸ್ಟ್ ತೆರನ ನಾಡಿಮಿಡಿತ ಹಾಗೂ ಬಂಡವಾಳಶಾಹಿ ಪರ ಒಲವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಮ್ಯೂನಿಸ್ಟರ ಸೈದ್ಧಾಂತಿಕ ಅಡಿಪಾಯವು ನೀಡುತ್ತದೆ. ಆದ್ದರಿಂದ, ಪ್ರತಿರೋಧಕ್ಕಾಗಿ ಜನರನ್ನು ಆದಷ್ಟು ವಿಶಾಲ ಪ್ರಮಾಣದಲ್ಲಿ ಅಣಿನೆರೆಯಿಸುವ ಶಕ್ತಿ ಅವರಿಗಿದೆ ಎನ್ನುವುದು ಆರೆಸ್ಸೆಸ್ನ ಸಾಂಸ್ಥಿಕ ನೆನಪಿನ ಭಾಗವಾಗಿದೆ. ಹಾಗಾಗಿ, ಈ ಚುನಾವಣೋತ್ತರ ಆನಂದಾತಿರೇಕ ಅರ್ಥವಾಗುವಂಥದ್ದೇ. ಕ್ರಿಮಿನಲ್
ಇದನ್ನೂ ಓದಿ: ಕೇಳಿದ ಖಾತೆ ನೀಡದ್ದಕ್ಕೆ ಬೇಸರ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾ ರೆಡ್ಡಿ
ಪ್ರಸಕ್ತ ಪೀಳಿಗೆಯ ನವಉದಾರವಾದಿಗಳು ಏನೇ ಹೇಳಲಿ, ಬಂಡವಾಳದ ಚಲನೆಯ ಕುರಿತ ಕಾರ್ಲ್ ಮಾರ್ಕ್ಸ್ ಒಳನೋಟಗಳು ಬಂಡವಾಳದ ವಿಧಿ-ವಿಧಾನಗಳನ್ನು ಬಯಲುಮಾಡುವಲ್ಲಿ ಕಾಲಾತೀತವಾದುವುಗಳು ಎನ್ನುವುದು ಸಾಬೀತಾಗಿವೆ. `ಬಂಡವಾಳ’ ಕೃತಿಯ ಕೈಗಾರಿಕಾ ಬಂಡವಾಳದ ಉಗಮದ ಬಗೆಗಿನ ಅಧ್ಯಾಯವನ್ನು ಮಾರ್ಕ್ಸ್ ಹೀಗೆ ಮುಗಿಸಿದ್ದಾರೆ: `ಬಂಡವಾಳವು ತಲೆಯಿಂದ ಕಾಲಿನ ವರೆಗೆ , ಪ್ರತಿಯೊಂದು ರಂಧ್ರದಿಂದಲೂ ರಕ್ತ ಮತ್ತು ಕೊಳಕನ್ನು ಹನಿಸುತ್ತ ಬರುತ್ತದೆ’ . ಹೀಗೆನ್ನುತ್ತ ಅವರು ಇದಕ್ಕೆ ಪೂರಕವಾಗಿ ಕಾರ್ಮಿಕ ನಾಯಕ ಟಿ.ಜೆ. ಡನ್ನಿಂಗ್ ರ ಹೇಳಿಕೆಯನ್ನು ಅಡಿಟಿಪ್ಪಣಿಯನ್ನಾಗಿ ಉಲ್ಲೇಖಿಸುತ್ತಾರೆ (ಮಾರ್ಕ್ಸ್ ತಮ್ಮ ವಿಶ್ಲೇಷಣೆಗಳನ್ನು ಸಮರ್ಥಿಸಲು ಪ್ರಜ್ಞಾಪೂರ್ವಕವಾಗಿಯೇ ಕಾರ್ಮಿಕರ ಲೇಖನಗಳು ಮತ್ತು ಅನುಭವಗಳನ್ನು ಉದ್ಧರಿಸುತ್ತಾರೆ). ಕ್ರಿಮಿನಲ್
ಅದು ಹೀಗಿದೆ:`ಸಾಕಷ್ಟು ಲಾಭವಿದ್ದರೆ ಬಂಡವಾಳವು ತುಂಬಾ ಧೈರ್ಯಶಾಲಿ. ಶೇಕಡ 10ರಷ್ಟು ಇದ್ದರೆ ಅದನ್ನು ಎಲ್ಲಿಯಾದರೂ ಖಂಡಿತವಾಗಿ ತೊಡಗಿಸಬಹುದು; ಶೇಕಡ 20ರಷ್ಟಿದ್ದರೆ ಅದು ಕಾತುರವನ್ನು ಸೃಷ್ಟಿಸುತ್ತದೆ; ಶೇಕಡ 50 ಇದ್ದರೆ ಸಕಾರಾತ್ಮಕ ಭಂಡತನ; ಶೇಕಡ 100 ಎಲ್ಲ ಮಾನವ ಕಾನೂನುಗಳನ್ನು ತುಳಿದು ಹಾಕಲು ಅದನ್ನು ಸಿದ್ಧಗೊಳಿಸುತ್ತದೆ; ಶೇಕಡ 300 ಇದ್ದರಂತೂ ಯಾವುದೇ ಅಪರಾಧಕ್ಕೆ ಅದು ಹೇಸುವುದಿಲ್ಲ, ಅಥವಾ ಯಾವುದೇ ಅಪಾಯಕ್ಕೆ ಕೈಹಾಕಲೂ ಹಿಂದೆ-ಮುಂದೆ ನೋಡುವುದಿಲ್ಲ, ತನ್ನ ಮಾಲಿಕನನ್ನೇ ನೇಣಿಗೇರಿಸುವ ಸಂದರ್ಭ ಬಂದರೂ ಸರಿಯೇ”. ಕ್ರಿಮಿನಲ್
ಅದಿರಲಿ, ಕೈಗಾರಿಕಾ ಬಂಡವಾಳದ ಈ ಆರಂಭಿಕ ಲಕ್ಷಣಗಳಾಚೆಯೂ, ಅಪರಾಧ ಎಸಗುವ ಪ್ರವೃತ್ತಿ ಬಂಡವಾಳಕ್ಕೆ ಇದ್ದೇ ಇದೆ. ಜಾಗತೀಕರಣದ ಆರಂಭದ ದಿನಗಳಲ್ಲಿ ಇದು ಸ್ಪಷ್ಟವಾಗಿ ಕಂಡಿದೆ. ಒಪೆಕ್ (ತೈಲ ಉತ್ಪಾದಕ) ರಾಷ್ಟ್ರಗಳು ಆರಂಭಿಸಿದ ಕಚ್ಚಾತೈಲದ ತೀಕ್ಷ್ಣ ಬೆಲೆಯೇರಿಕೆಯು ಹಣಕಾಸು ಬಂಡವಾಳದ ಮತ್ತು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ರೂಪದಲ್ಲಿ ಅದರ ಯಜಮಾನಿಕೆಯ ಹಿನ್ನೆಲೆಯಾಗಿದೆ. ಅಮೆರಿಕವು ಭೌತಿಕ ಸರಕುಗಳನ್ನೂ ಹಣಕಾಸಾಗಿ ಪರಿವರ್ತಿಸುವ (ಫೈನಾನ್ಶಿಯಲೈಸೇಶನ್) ಪ್ರಕ್ರಿಯೆಯನ್ನು ಆರಂಭಿಸಿದಂದಿನಿಂದ ಒಪೆಕ್ ಆರಂಭಿಸಿದ್ದ ಕಚ್ಚಾ ತೈಲ ಬೆಲೆಯೇರಿಕೆಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಅದಕ್ಕೆ ಸಾಧ್ಯವಾಯಿತು. ಕ್ರಿಮಿನಲ್
ಇಂಥ ಹಣಕಾಸೀಕರಣವನ್ನು ಒಪ್ಪುವುದು ಮತ್ತು ಅದನ್ನು ಹಣಕಾಸು ಹಾಗೂ ಇತರ ಸೇವೆಗಳ ಮತ್ತು ಅವುಗಳ ವಿನಿಮಯದ ಬಲೆಗೆ ಬೀಳಿಸುವುದು ಸಾಮ್ರಾಜ್ಯಶಾಹಿ ನೇತೃತ್ವದ ನವಉದಾರವಾದಿ ಜಾಗತೀಕರಣದ ಆರಂಭದ ಸೂಚನೆಯಾಗಿತ್ತು. ಪರಿವರ್ತನೆಯ ಈ ಅವಧಿಯಲ್ಲಿ ಸಿಐಎ ಮತ್ತು ಅಮೆರಿಕದ ಇತರ ಸಂಸ್ಥೆಗಳು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಕೆಲವು ಒಪೆಕ್ ರಾಷ್ಟ್ರಗಳು ಹಾಗೂ ಅಭಿವೃದ್ಧಿಹೊಂದುತ್ತಿರುವ ದೇಶಗಳಿಗೆ ಸಲಹಾಕಾರರಾಗಿ ಕೆಲಸ ಮಾಡಲು ಕೂಡ ತರಬೇತಾದ ಬುದ್ಧಿವಂತ ಯುವಜನರನ್ನು ನೇಮಿಸಿಕೊಂಡವು. ಕ್ರಿಮಿನಲ್
ಅರ್ಥ ವ್ಯವಸ್ಥೆಯನ್ನು ವಂಚಿಸಲು ಹಾಗೂ ಸಾರ್ವಭೌಮ ಆರ್ಥಿಕ ಶಕ್ತಿಗಳನ್ನು ಬುಡಮೇಲು ಮಾಡುವ ಉದ್ದೇಶದಿಂದ ಹಣಕಾಸು ಬಂಡವಾಳದ ಏಕಸ್ವಾಮ್ಯವನ್ನು ಸ್ಥಾಪಿಸುವ ಕೈಚಳಕಕ್ಕೆ ಹೊಣೆಗಾರರಾದ ಈ ಕಾಲಾಳುಗಳ ಅನುಭವಗಳನ್ನು ಜಾನ್ ಪರ್ಕಿನ್ಸ್ `ದಿ ಕನ್ಫೆಶನ್ಸ್ ಆಫ್ ಆ್ಯನ್ ಇಕನಾಮಿಕ್ ಹಿಟ್ ಮ್ಯಾನ್’ ಕೃತಿಯಲ್ಲಿ ಒಂದು ಥ್ರಿಲ್ಲರ್ ಕಥೆಯ ರೀತಿಯಲ್ಲಿ ಹಿಡಿದಿಟ್ಟಿದ್ದಾರೆ. ಪರ್ಕಿನ್ಸ್ ಈ ಹೊಸ ವ್ಯವಸ್ಥೆಯನ್ನು ಕಾರ್ಪೊರೇಟೋಕ್ರಸಿ ಎಂದು ವರ್ಣಿಸಿರುವುದು ಈ ಕೃತಿಯಲ್ಲೇ. ವಾಸ್ತವವಾಗಿ ಈ ಕಾರ್ಪೊರೇಟೋಕ್ರಸಿ ಎನ್ನುವುದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದಿಂದ ಚಾಲಿತವಾದ ನವಉದಾರವಾದಿ ಜಾಗತೀಕರಣವನ್ನು ಸೂಚಿಸಲು ಬಳಸುವ ಪರೋಕ್ಷ ಪದವಾಗಿದೆ. ಕ್ರಿಮಿನಲ್
ಈ ವ್ಯವಸ್ಥೆಯ ಸ್ವರೂಪದ ಇತ್ತೀಚಿನ ಪ್ರಸಂಗವೆಂದರೆ, ನರೇಂದ್ರ ಮೋದಿಯ ಅತ್ಯಂತ ಗಮನಾರ್ಹ ಬಂಟರಾದ ಗೌತಮ್ ಅದಾನಿ ಹಾಗೂ ಅವರ ಅತಿ ನಿಕಟ ಸಹಚರರನ್ನು ಒಳಗೊಂಡ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ. ಅಮೆರಿಕದ ನ್ಯಾಯ ಇಲಾಖೆಯು ಅದಾನಿ ಸಮೂಹದ ವಿರುದ್ಧ ಹೇರಿದ್ದ ಆರೋಪಗಳನ್ನು ಈಗ ಕೈಬಿಡಲಾಗುತ್ತಿದೆ. ಆರೋಪಗಳನ್ನು ಸಾರಾಸಗಟಾಗಿ ಕೈಬಿಡಲು ನ್ಯಾಯ ಇಲಾಖೆ ಯೋಜನೆ ರೂಪಿಸುತ್ತಿರುವಾಗ ಸೃಷ್ಟಿಯಾಗಿರುವ ಸನ್ನಿವೇಶಗಳು ಅಪರಾಧಕ್ಕೆ ಸಂಬಂಧಪಟ್ಟ ನ್ಯಾಯ ವ್ಯವಸ್ಥೆಯ ಹಣಕಾಸೀಕರಣದ ಒಂದು ನಗ್ನ ಉದಾಹರಣೆಯಾಗಿದೆ. ಕ್ರಿಮಿನಲ್
ಭಾರತೀಯ ಬಿಲಿಯಾಧಿಪತಿ ಗೌತಮ್ ಅದಾನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಖಾಸಗಿ ವಕೀಲರಲ್ಲಿ ಒಬ್ಬರಾದ ರಾಬರ್ಟ್ ಜೆ. ಜಿಯುಫ್ರಾ ಜೂನಿಯರ್ ನೇತೃತ್ವದ ಹೊಸ ಕಾನೂನು ತಂಡವನ್ನು ನೇಮಿಸಿಕೊಂಡ ನಂತರ ಹೀಗೆ ಕೈಬಿಡುವ ಬೆಳವಣಿಗೆ ನಡೆದಿದೆ. ಅದಾನಿ ಪರವಾಗಿ ಜಿಯುಫ್ರಾ ನಡೆಸಿದ ಪ್ರಯತ್ನಗಳ ಫಲವಾಗಿ ವಾಷಿಂಗ್ಟನ್ನಲ್ಲಿರುವ ನ್ಯಾಯ ಇಲಾಖೆಯ ಕೇಂದ್ರ ಕಾರ್ಯಾಲಯದಲ್ಲಿ ಕಳೆದ ತಿಂಗಳು ಸಭೆಯೊಂದು ನಡೆದಿತ್ತು. ಇದರ ಬಗ್ಗೆ ಈ ಹಿಂದೆ ವರದಿಯಾಗಿರಲಿಲ್ಲ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆ ಸಭೆ ಬಗ್ಗೆ ಪರಿಚಿತವಾದ ವ್ಯಕ್ತಿಗಳಿಂದಲೇ ತಿಳಿದು ಬಂದಿದೆ. ಆ ಸಭೆಯಲ್ಲಿ ಜಿಯುಫ್ರಾ ಏಕೆ ಪ್ರಾಸಿಕ್ಯೂಟರ್ಗಳ ಬಳಿ ಮೂಲಭೂತ ಪುರಾವೆಗಳ ಕೊರತೆಯಿದೆ ಹಾಗೂ ಪ್ರಕರಣವನ್ನು ಕೋರ್ಟಿಗೆ ತರುವ ಅಧಿಕಾರ ವ್ಯಾಪ್ತಿ ಇಲ್ಲ ಎಂದು ತೋರಿಸುವ ಸುಮಾರು 100 ಸ್ಲೈಡ್ಗಳನ್ನು ತೋರಿಸಿದರು ಎನ್ನಲಾಗಿದೆ. ಕ್ರಿಮಿನಲ್
ಇನ್ನೊಂದು ಸ್ಲೈಡ್ನಲ್ಲಿ ಒಂದು ಅಸಹಜವಾದ ಸಂಗತಿಯಿತ್ತು. ಪ್ರಾಸಿಕ್ಯೂಟರ್ಗಳು ಆರೋಪಗಳನ್ನು ಕೈಬಿಟ್ಟರೆ ಅದಾನಿ ಯುಎಸ್ ಅರ್ಥವ್ಯವಸ್ಥೆಯಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವ ಆಫರ್ ನೀಡಿದ್ದಾರೆ ಎನ್ನುವುದು ಈ ಸ್ಲೈಡಿನಲ್ಲಿದ್ದ ಅಂಶ ಎನ್ನಲಾಗಿದೆ. ಅದರಿಂದ 15,000 ಉದ್ಯೋಗ ಸೃಷ್ಟಿಯಾಗುತ್ತದೆ. ಟ್ರಂಪ್ರ ಚುನಾವಣೆಯ ವೇಳೆಯಲ್ಲಿ ಅದಾನಿ ಹೀಗಂದಿದ್ದರು. ಅದೀಗ ಇಲ್ಲಿ ಪ್ರತಿಧ್ವನಿಸಿದೆ.
ಅದಾನಿ ವಿರುದ್ಧ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಹೂಡಿದ್ದ ಸಮಾನಾಂತರ ಸಿವಿಲ್ ದಾವೆ ಮಾತ್ರವಲ್ಲದೆ ಹಣಕಾಸು ಇಲಾಖೆ ಆರಂಭಿಸಿದ್ದ ಪ್ರತ್ಯೇಕ ವಿಚಾರಣೆಯೊಂದನ್ನು ಇತ್ಯರ್ಥಪಡಿಸಲು ಅದೇ ಸಭೆಯಲ್ಲಿ ಜಿಯುಫ್ರಾ ಬಯಸಿದ್ದರು. ಅದಾನಿ ಜತೆಗೆ ವಿವಾದ ಇತ್ಯರ್ಥವನ್ನು ಎಸ್ಇಸಿ ಪ್ರಕಟಿಸಿದೆ. ಹಣಕಾಸು ಇಲಾಖೆ ಮುಂಬರುವ ದಿನಗಳಲ್ಲಿ ತನ್ನ ವ್ಯವಹಾರವನ್ನು ಅನಾವರಣಗೊಳಿಸಬಹುದು.
ಅಮೆರಿಕದ ನ್ಯಾಯ ಇಲಾಖೆಯು ಅದಾನಿ ಸಮೂಹದ ವಿರುದ್ಧ ಹೇರಿದ್ದ ಆರೋಪಗಳನ್ನು ಈಗ ಕೈಬಿಡಲಾಗುತ್ತಿದೆ. ಪ್ರಾಸಿಕ್ಯೂಟರ್ಗಳು ಆರೋಪಗಳನ್ನು ಕೈಬಿಟ್ಟರೆ ಅದಾನಿ ಯುಎಸ್ ಅರ್ಥವ್ಯವಸ್ಥೆಯಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಅದಾನಿ ದಾವೆ ಹೂಡಿದ್ದ ಯುಎಸ್ ನ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಅದಾನಿ ಜತೆಗೆ ವಿವಾದ ಇತ್ಯರ್ಥವಾಗಿದೆ ಎಂದು ಪ್ರಕಟಿಸಿದೆ. ಅಲ್ಲಿನ ಹಣಕಾಸು ಇಲಾಖೆ ಮುಂಬರುವ ದಿನಗಳಲ್ಲಿ ತನ್ನ ವ್ಯವಹಾರವನ್ನು ಅನಾವರಣಗೊಳಿಸಬಹುದು.
10 ಶತಕೋಟಿ ಡಾಲರ್ ಹೂಡಿಕೆ ವಿಚಾರವು ಕ್ರಿಮಿನಲ್ ಕೇಸ್ ಇತ್ಯರ್ಥದಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ಪ್ರಾಸಿಕ್ಯೂಟರ್ಗಳು ನಂತರ ಜಿಯುಫ್ರಾಗೆ ಹೇಳಿದ್ದಾರಾದರೂ ಅದಾನಿ ಆಫರ್ಗೆ ಸಭೆಯಲ್ಲಿದ್ದ ನ್ಯಾಯ ಇಲಾಖೆಯ ಕನಿಷ್ಠ ಒಬ್ಬ ಹಿರಿಯ ಅಧಿಕಾರಿಯಿಂದ ಅನುಕೂಲಕರ ಸ್ಪಂದನೆ ದೊರೆಯಿತು ಎಂದು ಸಭೆಯ ಕುರಿತು ಬಲ್ಲ ವ್ಯಕ್ತಿಗಳು ಹೇಳಿದ್ದಾರೆ.
ರಾಜಕೀಯ ಮತ್ತು ಆರ್ಥಿಕ ಗೆಲುವೆಂದು ಟ್ರಂಪ್ ಎತ್ತಿಹಿಡಿಯಬಹುದಾಗಿದ್ದ ಈ ಪ್ರಸ್ತಾಪವು ಟ್ರಂಪ್ ಆಡಳಿತದ ಎರಡನೇ ಅವಧಿಯಲ್ಲಿ ನ್ಯಾಯದ ಬಗ್ಗೆ ಅತ್ಯಂತ ವ್ಯಾವಹಾರಿಕ ಕೊಡು-ಕೊಳ್ಳು ಧೋರಣೆಯನ್ನು ತೋರಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಆದರೆ, ಪ್ರಧಾನಿಯ ಅತ್ಯಂತ ಅಸಾಧಾರಣವಾದ ಗೆಳೆಯ ಅಮೆರಿಕದಲ್ಲಿ ನ್ಯಾಯವನ್ನು ಖರೀದಿಸುತ್ತಾನೆ ಎನ್ನುವುದು ನಮಗೆ, ಅಂದರೆ ಭಾರತೀಯರಿಗೆ ಕಡಿಮೆ ಮಹತ್ವದ ವಿಷಯವೇನೂ ಅಲ್ಲ. ಮಿತವ್ಯಯ ಆಚರಿಸುವಂತೆ ಭಾರತೀಯ ನಾಗರಿಕರಿಗೆ ಮೋದಿ ಸಲಹೆ ನೀಡುತ್ತಿರುವ ಈ ಸಂದರ್ಭದಲ್ಲಿ ಅಮೆರಿಕದಲ್ಲಿ 15,000 ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಅದಾನಿ 10 ಶತಕೋಟಿ ಡಾಲರ್ ಹಣವನ್ನು ಉದಾರವಾಗಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ವಿದೇಶಿ ವಿನಿಮಯವನ್ನು ಉಳಿಸಲಿಕ್ಕಾಗಿ ಮಿತವ್ಯಯ ಸಾಧಿಸಬೇಕೆಂಬ ತನ್ನ ಸಲಹೆಯನ್ನು ಅದಾನಿ ಉಲ್ಲಂಘಿಸಿರುವುದಕ್ಕೆ ಪ್ರಧಾನಿಯಿಂದ ಯಾವುದಾದರೂ ಪ್ರತಿಭಟನೆಯ ಸೊಲ್ಲು ಬಂದಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ?
ಯಾವ ರೀತಿಯ ಮನೋಭಾವ ಬದಲಾಗುವುದನ್ನು ಕಾಣಲು ಪ್ರಧಾನಿ ಬಯಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ರಾಕೆಟ್ ವಿಜ್ಞಾನದ ಅಗತ್ಯವೇನೂ ಇಲ್ಲ. ಕ್ರಿಮಿನಲ್ ನ್ಯಾಯವನ್ನು ಹಣಕಾಸಿನ ರೂಪಕ್ಕೆ ಪರಿವರ್ತಿಸಬಹುದು ಮತ್ತು ವ್ಯವಹಾರಕ್ಕೆ ಒಳಪಡಿಸಬಹುದು ಎಂಬ ಬಂಡವಾಳದ ಲಂಗುಲಗಾಮಿಲ್ಲದ ಆಳ್ವಿಕೆಗೆ ವಿನೀತ ದಾಸನಾಗುವ ವಿಚಾರವನ್ನು ಮೋದಿ ಮಾತನಾಡುತ್ತಿದ್ದಾರೆ. ಅವರ ಸರಕಾರವೇ ಕ್ರಿಮಿನಲ್ ಉಲ್ಲಂಘನೆಗಳನ್ನು ಕ್ಷುಲ್ಲಕಗೊಳಿಸುವಂಥ ಜನ ವಿಶ್ವಾಸ್ ಕಾನೂನು ತರಲು ಮುಂದಾಗಿದೆ. ಇದರಲ್ಲಿ ಯಾವುದೇ ಧಾರ್ಮಿಕ ಭಾವನೆ ಅಡಕವಾಗಿಲ್ಲ. ಇದು ಬಂಡವಾಳ ಮತ್ತು ಲಾಭಕ್ಕೆ ಅನುಕೂಲ ಕಲ್ಪಿಸುವ ಒಂದು ಶುದ್ಧ ಹಾಗೂ ಸರಳ ಕಥೆ. ಮೋದಿ ಎಷ್ಟೇ ಸಂಭ್ರಮ ಪಡಲಿ, ಮಾರ್ಕ್ಸ್ ಅಂತೂ ಮುಂದೆಯೂ ತಮ್ಮ ಗಾಢವಾದ ಒಳನೋಟಗಳಿಂದ ನಮ್ಮ ಸುತ್ತಮುತ್ತವೇ ಜೀವಂತವಾಗಿದ್ದು ತಟ್ಟಿ ಎಚ್ಚರಿಸುತ್ತಿರುತ್ತಾರೆ.
ಸರಕಾರವೇ ಕ್ರಿಮಿನಲ್ ಉಲ್ಲಂಘನೆಗಳನ್ನು ಕ್ಷುಲ್ಲಕಗೊಳಿಸುವಂಥ ಜನ ವಿಶ್ವಾಸ್ ಕಾನೂನು ತರಲು ಮುಂದಾಗಿದೆ. ಇದರಲ್ಲಿ ಯಾವುದೇ ಧಾರ್ಮಿಕ ಭಾವನೆ ಅಡಕವಾಗಿಲ್ಲ. ಇದು ಬಂಡವಾಳ ಮತ್ತು ಲಾಭಕ್ಕೆ ಅನುಕೂಲ ಕಲ್ಪಿಸುವ ಒಂದು ಶುದ್ಧ ಹಾಗೂ ಸರಳ ಕಥೆ. ಮೋದಿ ಎಷ್ಟೇ ಸಂಭ್ರಮ ಪಡಲಿ, ಮಾರ್ಕ್ಸ್ ಅಂತೂ ಮುಂದೆಯೂ ತಮ್ಮ ಗಾಢವಾದ ಒಳನೋಟಗಳಿಂದ ನಮ್ಮ ಸುತ್ತಮುತ್ತವೇ ಜೀವಂತವಾಗಿದ್ದು ತಟ್ಟಿ ಎಚ್ಚರಿಸುತ್ತಿರುತ್ತಾರೆ.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳ ಮೇಲೆ GBA ದಾಳಿ – ಬೀದಿ ವ್ಯಾಪಾರಿಗಳ ಆಕ್ರೋಶ Janashakthi Media
