ಹೊಸ ಸಂಪುಟದಲ್ಲಿ ಯಾರಿಗೆ ಅವಕಾಶ? ಕಾಂಗ್ರೆಸ್‌ನಲ್ಲಿ ಆರಂಭವಾದ ಲಾಬಿ ರಾಜಕಾರಣ

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ನಡುವೆಯೇ, ಕಾಂಗ್ರೆಸ್‌ ಹೊಸ ಸಚಿವ ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್‌ ಹೆಸರು ಬಹುತೇಕ ಖಚಿತ ಎನ್ನಲಾಗುತ್ತಿರುವ ಬೆನ್ನಲ್ಲೇ, ಸಚಿವ ಸ್ಥಾನಕ್ಕಾಗಿ ಹಲವು ಹಿರಿಯ ಹಾಗೂ ಹೊಸ ಮುಖಗಳು ಲಾಬಿ ಆರಂಭಿಸಿರುವುದಾಗಿ ತಿಳಿದುಬಂದಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ, ಅನುಭವ ಮತ್ತು ಸಂಘಟನಾ ನಿಷ್ಠೆಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಹಳೆಯ ಸಚಿವರ ಪೈಕಿ ಕೆಲವರಿಗೆ ಮರುಅವಕಾಶ ಸಿಗುವ ನಿರೀಕ್ಷೆಯಿದ್ದರೂ, ಕೆಲವರಿಗೆ ಸಂಪುಟದಿಂದ ಹೊರಗುಳಿಯುವ ಆತಂಕವೂ ಎದುರಾಗಿದೆ.

ಸಿದ್ದರಾಮಯ್ಯ ಆಪ್ತರು, ಡಿ.ಕೆ. ಶಿವಕುಮಾರ್‌ ಬೆಂಬಲಿಗರು ಮತ್ತು ಹೈಕಮಾಂಡ್‌ ಕೋಟಾ ಎಂಬ ಮೂರು ಹಂತಗಳಲ್ಲಿ ಸಚಿವ ಸ್ಥಾನ ಹಂಚಿಕೆ ನಡೆಯಬಹುದು ಎನ್ನುವ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಸಚಿವಾಕಾಂಕ್ಷಿಗಳು ಈಗಾಗಲೇ ದೆಹಲಿ ಮತ್ತು ಬೆಂಗಳೂರಿನಲ್ಲಿ ಪಕ್ಷದ ನಾಯಕರ ಭೇಟಿಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಕರಾವಳಿ ಹಾಗೂ ಹಳೆ ಮೈಸೂರು ಭಾಗಗಳಿಗೆ ಸಮರ್ಪಕ ಪ್ರತಿನಿಧಿತ್ವ ನೀಡುವ ಒತ್ತಡ ಹೈಕಮಾಂಡ್‌ ಮೇಲಿದ್ದು, ಲಿಂಗಾಯತ, ವೊಕ್ಕಲಿಗ, ದಲಿತ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಮತೋಲನ ಕಾಪಾಡುವುದು ದೊಡ್ಡ ಸವಾಲಾಗಿದೆ. ಜೊತೆಗೆ ಯುವ ಶಾಸಕರಿಗೆ ಅವಕಾಶ ನೀಡಬೇಕೆಂಬ ಒತ್ತಾಯವೂ ಪಕ್ಷದೊಳಗೆ ಹೆಚ್ಚಾಗಿದೆ.

ಈ ನಡುವೆ, ಉಪ ಮುಖ್ಯಮಂತ್ರಿ ಹುದ್ದೆಗಳ ಸಂಖ್ಯೆಯನ್ನೂ ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬ ವರದಿಗಳು ಹರಿದಾಡುತ್ತಿವೆ. ಕಾಂಗ್ರೆಸ್‌ ಒಳಗಿನ ಶಕ್ತಿ ಸಮತೋಲನ ಕಾಪಾಡಲು ಬಹು ಉಪ ಮುಖ್ಯಮಂತ್ರಿ ಮಾದರಿಯೂ ಪರಿಗಣನೆಯಲ್ಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಒಟ್ಟಾರೆ, ಹೊಸ ಮುಖ್ಯಮಂತ್ರಿ ಆಯ್ಕೆಯಷ್ಟೇ ಹೊಸ ಸಚಿವ ಸಂಪುಟ ರಚನೆಯೂ ಕಾಂಗ್ರೆಸ್‌ಗೆ ದೊಡ್ಡ ರಾಜಕೀಯ ಪರೀಕ್ಷೆಯಾಗಿ ಪರಿಣಮಿಸಿದ್ದು, ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ಮುಂದಿನ ಕೆಲ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ : ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ : ಹೊಸ ನಾಯಕನ ಆಯ್ಕೆಗೆ ವೇದಿಕೆ ಸಜ್ಜು

ಡಿಕೆಶಿ ಕೋಟಾದಲ್ಲಿ ಮರು ಎಂಟ್ರಿ ಯಾರೆಲ್ಲಾ?

  • ಚೆಲುವರಾಯ ಸ್ವಾಮಿ
  • ಎಸ್ ಎಸ್ ಮಲ್ಲಿಕಾರ್ಜುನ
  • ರಾಮಲಿಂಗಾ ರೆಡ್ಡಿ

ಸಿದ್ದರಾಮಯ್ಯ ಕೋಟಾದಲ್ಲಿ ಮರು ಎಂಟ್ರಿ ಯಾರೆಲ್ಲಾ?

  • ಡಾ. ಎಚ್ ಸಿ ಮಹದೇವಪ್ಪ
  • ಜಮೀರ್ ಅಹ್ಮದ್ ಖಾನ್
  • ಕೆ ಜೆ ಜಾರ್ಜ್
  • ದಿನೇಶ್ ಗುಂಡೂರಾವ್
  • ಸಂತೋಷ್ ಲಾಡ್
  • ಸತೀಶ್ ಜಾರಕಿಹೊಳಿ
  • ಎಂ ಬಿ ಪಾಟೀಲ್

ಹೈಕಮಾಂಡ್ ಕೋಟಾ

  • ಪ್ರಿಯಾಂಕ್ ಖರ್ಗೆ
  • ಡಾ ಜಿ ಪರಮೇಶ್ವರ್
  • ಈಶ್ವರ್ ಖಂಡ್ರೆ
  • ಕೃಷ್ಣ ಬೈರೇಗೌಡ

ಕೈ ಬಿಡುವ ಸಾಧ್ಯತೆ ಲಿಸ್ಟ್‌ನಲ್ಲಿ ಯಾರೆಲ್ಲಾ?

  • ರಹೀಂ ಖಾನ್
  • ಆರ್ ಬಿ ತಿಮ್ಮಾಪುರ
  • ಕೆ ವೆಂಕಟೇಶ್
  • ಶರಣ ಬಸಪ್ಪ ದರ್ಶನಾಪುರ
  • ಶಿವಾನಂದ ಪಾಟೀಲ್
  • ಲಕ್ಷ್ಮೀ ಹೆಬ್ಬಾಳ್ಕರ್
  • ಬೋಸರಾಜ್
  • ಬೈರತಿ ಸುರೇಶ್
  • ಮಧು ಬಂಗಾರಪ್ಪ
  • ಕೆ ಎಚ್ ಮುನಿಯಪ್ಪ
  • ಎಚ್ ಕೆ ಪಾಟೀಲ್

ಸಂಪುಟಕ್ಕೆ ಹೊಸ ಎಂಟ್ರಿ ಸಾಧ್ಯತೆ

  • ಎನ್ ಎ ಹ್ಯಾರಿಸ್
  • ಕೆ. ಷಡಕ್ಷರಿ
  • ಗುಬ್ಬಿ ಶ್ರೀನಿವಾಸ್
  • ರಿಜ್ವಾನ್ ಅರ್ಷದ್
  • ಯು.ಟಿ ಖಾದರ್
  • ಯತೀಂದ್ರ ಸಿದ್ದರಾಮಯ್ಯ
  • ಬಿಕೆ ಹರಿ ಪ್ರಸಾದ್
  • ಬಸವರಾಜ ರಾಯರೆಡ್ಡಿ / ರಾಘವೇಂದ್ರ ಹಿಟ್ನಾಳ
  • ನರೇಂದ್ರ ಸ್ವಾಮಿ/ ಬಿ ಶಿವಣ್ಣ
  • ರೂಪಾ ಶಶಿಧರ್
  • ಬೇಳೂರು ಗೋಪಾಲಕೃಷ್ಣ
  • ಶ್ರೀನಿವಾಸ್ ಮಾನೆ
  • ನಾಗೇಂದ್ರ
  • ರಘುಮಾರ್ತಿ
  • ಟಿಡಿ ರಾಜೇಗೌಡ/ ಶಿವಲಿಂಗೇಗೌಡ
  • ಲಕ್ಷ್ಮಣ್ ಸವದಿ
  • ಸಿಎಸ್ ನಾಡಗೌಡ

ಇದನ್ನೂ ನೋಡಿ : ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ಸಿಐಟಿಯು ಪ್ರತಿಕ್ರಿಯೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *