ವಿಶ್ವಶಾಂತಿಗಾಗಿ ಮೌನ ಪ್ರತಿಭಟನೆ: ಕುಂದಾಪುರದಲ್ಲಿ ರಾಮಾಂಜಿ ಹೋರಾಟ

ಕುಂದಾಪುರ: ಮಕ್ಕಳ ಹಕ್ಕುಗಳ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಕಾರ್ಕಳದ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮಭೂಮಿ “ವಿಶ್ವಶಾಂತಿಗಾಗಿ ಹಾಗೂ ಯುದ್ಧ ವಿರೋಧಿಸಿ” ಏಪ್ರಿಲ್‌ 25ರಂದು ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಎರಡನೇ ಹಂತದ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಆರಂಭದಲ್ಲಿ ಅವರು ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಯುದ್ಧದಲ್ಲಿ ಮಡಿದವರಿಗೆ ಮೌನವಾಗಿ ಶ್ರದ್ಧಾಂಜಲಿ ಸಲ್ಲಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ ರಾಮಾಂಜಿಯವರ ನಿಲುವಿಗೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: ನಿತೀಶ್ ಕುಮಾರ್ ರನ್ನು ಮುಗಿಸಲು ಬಿಜೆಪಿ ಪ್ರಯತ್ನ: ತೇಜಸ್ವಿ ಯಾದವ್ ಆರೋಪ

ಇದೇ ಸಂದರ್ಭ ಅವರು ತನ್ನ ಜೊತೆಗೆ ಮಗುವಿನ ಕಲಾಕೃತಿ ಹಾಗೂ ಗಾಂಧಿ ಪುಸ್ತಕವನ್ನೂ ಇರಿಸಿಕೊಂಡಿದ್ದು, ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ, ದಯೆಯೇ ಧರ್ಮದ ಮೂಲವಯ್ಯ, ಬಂದೂಕಿನ ನಳಿಗೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಲಿ ಎನ್ನುವ ನುಡಿಗಳ ಫಲಕಗಳನ್ನು ಪ್ರದರ್ಶಿಸಿದರು.

‘ಅಧಿಕಾರಶಾಹಿ ಮನಸ್ಥಿತಿಯು ವಿಶ್ವದಲ್ಲಿ ಯುದ್ಧ ಭೀತಿಯನ್ನು ಸೃಷ್ಟಿಸಿದೆ. ಪರಿಣಾವಾಗಿ ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಮಾನವ ಜೀವಗಳು ಸಾವನ್ನಪ್ಪುತ್ತಿರುವುದು ಆತಂಕ ಹುಟ್ಟುಹಾಕುತ್ತಿದೆ. ಪರಿಸರದ ಮೇಲೂ ಮಾರಣಾಂತಿಕ ಹಾನಿಗಳಾಗುತ್ತಿದ್ದು ವಿಶ್ವಶಾಂತಿಗಾಗಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ರಾಮಾಂಜಿ ತಿಳಿಸಿದರು.

ಯುದ್ಧದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳೂ ಗಂಭೀರವಾಗುತ್ತಿದ್ದು, ಅದನ್ನು ತಪ್ಪಿಸಿ ಶಾಂತಿ ನೆಲೆಸುವಲ್ಲಿ ನಾವೆಲ್ಲರೂ ಹೋರಾಡಬೇಕು ಎಂದು ಅವರು ಹೇಳಿದರು.

ಇದನ್ನೂ ನೋಡಿ: ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media

Donate Janashakthi Media

Leave a Reply

Your email address will not be published. Required fields are marked *