ಕ್ಯಾಂಪಸ್ ಡೆಮಾಕ್ರಸಿ ಉಳಿವಿಗಾಗಿ 4 ದಿನಗಳ ಎಸ್ಎಫ್ಐ ಅಧ್ಯಯನ ಶಿಬಿರ

ದಾವಣಗೆರೆ: ಸರ್ಕಾರಿ ಶಾಲೆಗಳ ಉಳಿವಿಗಾಗಿ, ಕ್ಯಾಂಪಸ್ ಡೆಮಾಕ್ರಸಿ ಉಳಿಸಲು, ವಿದ್ಯಾರ್ಥಿ ಸಂಘದ ಚುನಾವಣಾ ನಡೆಸಲು ತೆಗೆದುಕೊಂಡ ತೀರ್ಮಾನವನ್ನು ಜಾತಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಆಗ್ರಹಿಸಿದರು. ಡೆಮಾಕ್ರಸಿ

ನಗರದ ಪತ್ರಿಕಾ ಭವನದಲ್ಲಿ ಎಸ್ಎಫ್ಐ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಕುರಿತು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆಯೋಜಿಸಿದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸರ್ವರಿಗೂ ಸಮಾನ ಗುಣಮಟ್ಟದ ಮತ್ತು ವೈಜ್ಞಾನಿಕ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿ ಸಂಘಟನೆಯಾಗಿದೆ. ಭಗತ್ ಸಿಂಗ್ ರವರ ಆಶಯಗಳನ್ನು ಮೈಗೂಡಿಸಿಕೊಂಡಿರುವ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿರುವ ಎಸ್.ಎಫ್.ಐ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಮಾಜವಾದ ಎಂಬ ಘೋಷಣೆಯೊಂದಿಗೆ ಹಾಗೂ ಅಧ್ಯಯನ ಮತ್ತು ಹೋರಾಟ ಘೋಷಣೆಯೊಂದಿಗೆ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದೆ. ಡೆಮಾಕ್ರಸಿ

ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ, ಕ್ಯಾಂಪಸ್ ಡೆಮಾಕ್ರಸಿ ಉಳಿಸಲು, ವಿದ್ಯಾರ್ಥಿ ಸಂಘದ ಚುನಾವಣಾ ನಡೆಸಲು ಒತ್ತಾಯಿಸಿ ರಾಜ್ಯದ ವಿದ್ಯಾರ್ಥಿ ಚಳುವಳಿಯ ಮುಖಂಡರಿಗೆ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು 23 ರಿಂದ 26 ಏಪ್ರಿಲ್ 2026 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತಾಲ್ಲೂಕಿನ ಪ್ರೊ. ಬಿ ಕೃಷ್ಣಪ್ಪ ಮೆಮೊರಿಯಲ್ ಹಾಲ್ ನಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ರಸ್ತೆಬದಿಯಲ್ಲಿ ಯುವಕನ ಶವ ಪತ್ತೆ; ಬಿಸಿಲಿನ ತಾಪದಿಂದ ಸಾವು ಶಂಕೆ

ಈ ಅಧ್ಯಯನ ಶಿಬಿರದಲ್ಲಿ ಜಾತಿ ಉಗಮ, ಬೆಳವಣಿಗೆ ಹಾಗೂ ಸವಾಲುಗಳ ಬಗ್ಗೆ ಹಾಗೂ ಸ್ವಾತಂತ್ರ ಹೋರಾಟದ ನಂತರದ ರಾಜಕೀಯ ,ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆ. ಸ್ವಾತಂತ್ರ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಅಸ್ಮಿತೆಯ ರಾಜಕಾರಣ ಹೀಗೆ ಹಲವು ವಿಷಯದ ಮೇಲೆ ಪಾಠಗಳು ನಡೆಯುತ್ತದೆ. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ಬಲಿಷ್ಟ ವಿದ್ಯಾರ್ಥಿ ಚಳುವಳಿ ರೂಪಿಸಲು ಕಾರ್ಯಯೋಜನೆಯನ್ನು ಹಾಕಿಕೊಳ್ಳಲಾಗುವುದು.

ಅಧ್ಯಯನ ಅದ್ಯಯನ ಶಿಬಿರದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳು, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ ಅವರು ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಿವೃತ್ತ ಪ್ರಾಂಶುಪಾಲರು, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರಾದ ಡಾ. ಎ.ಬಿ. ರಾಮಚಂದ್ರಪ್ಪ, ಹಿರಿಯ ಪತ್ರಕರ್ತರು, ಲೇಖಕರಾದ ಬಿ.ಎನ್ ಮಲ್ಲೇಶ್, ಎಸ್ಎಫ್ಐ ಅಖಿಲ ಭಾರತ ಸಮಿತಿ ಸದಸ್ಯೆ ಸುಜಾತ ವೈ, ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ಗಣೇಶ ರಾಠೋಡ್, ಡಾ. ದೊಡ್ಡ ಬಸವರಾಜ ಗುಳೆದಾಳ ಆಗಮಿಸುತ್ತಾರೆ. ಪ್ರಾಸ್ತಾವಿಕವಾಗಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ ಎಸ್, ಅಧ್ಯಕ್ಷತೆಯನ್ನು ಶಿವಪ್ಪ ಅಂಬ್ಲಿಕಲ್ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ ಎಸ್ ಮಾತನಾಡಿ, ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಮತ್ತು ಬಲವರ್ಧನೆಗಾಗಿ ‘ಅಭ್ಯಾಸ ಹೋರಾಟ ತ್ಯಾಗದಿಂದ ನಿರಂತರವಾಗಿ ಚಳುವಳಿಯನ್ನು ಮುನ್ನಡೆಸುತ್ತಾ, ಶಿಕ್ಷಣ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘರ್ಷಾತ್ಮಕ ಹೋರಾಟಗಳನ್ನು ಎಸ್.ಎಫ್.ಐ. ನಡೆಸುತ್ತಾ ಬಂದಿದೆ. ಶೈಕ್ಷಣಿಕ ಸಮಸ್ಯೆಗಳು ಮಾತ್ರವಲ್ಲದೆ ಜಾತಿಬೇಧ, ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಮತಾಂಧತೆ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳ ವಿರುದ್ಧ ಆರೋಗ್ಯಕರ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಸ್.ಎಫ್.ಐ. ಶ್ರಮಿಸುತ್ತಿದೆ. ವಿದ್ಯಾರ್ಥಿ ಸಮುದಾಯವನ್ನು ವೈಚಾರಿಕವಾಗಿ, ಸೈದ್ಧಾಂತಿಕಾವಾಗಿ ಜಾಗೃತಿಗೊಳಿಸುತ್ತಾ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತಿದೆ.

ರಾಜ್ಯಾದ್ಯಂತ ವಿದ್ಯಾರ್ಥಿ ಸಮುದಾಯದ ನಡುವೆ ವಿಚಾರ ಸಂಕಿರಣಗಳು, ಸಂವಾದ, ಕ್ರೀಡೆ- ಸಾಂಸ್ಕೃತಿಕ ಕಾರ್ಯಕ್ರಮ ಶೈಕ್ಷಣಿಕ ಸಮಸ್ಯೆಗಳ ಕುರಿತು ಜಾಗೃತಿ ಜಾಥಾಗಳನ್ನು ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ರಾಜ್ಯವ್ಯಾಪ್ತಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವಿಗಾಗಿ ಹಾಗೂ ಹಾಸ್ಟೆಲ್ ಬಲವರ್ಧನೆಗಾಗಿ, ಶಿಕ್ಷಣ ಉದ್ಯೋಗ ಮೂಲಭೂತ ಹಕ್ಕಾಗಬೇಕೆಂದು ನಿರಂತರವಾಗಿ ಚಳುವಳಿಯನ್ನು ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವರಾಜ ಗುಳೆದಾಳ, ಜಿಲ್ಲಾ ಸಂಚಾಲಕ ಅನಂತರಾಜ್, ಮುಖಂಡರಾದ ಕೃಷ್ಣ ಎನ್ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಬಸವ ಜಯಂತಿ ವಿಶೇಷ | ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *