ಬೆಟ್ಟದಪುರ ಪೊಲೀಸ್ ಠಾಣೆಗೆ ಮಹಿಳಾ ಆಯೋಗ ಅಧ್ಯಕ್ಷೆ ಭೇಟಿ; ದಾಖಲೆಗಳ ಪರಿಶೀಲನೆ

ಬೆಟ್ಟದಪುರ: ಏಪ್ರಿಲ್‌ 16ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಠಾಣೆಯ ವಿವಿಧ ದಾಖಲಾತಿಯ ನೋಂದಣಿ ಪುಸ್ತಕಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಈ ವೇಳೆ ಗ್ರಾಮದ ವಿವಿಧ ಮುಖಂಡರು, ಮಹಿಳಾ ಸದಸ್ಯರು ಸನ್ಮಾನಿಸಿದರು. ದಿಢೀರ್ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಇದನ್ನೂ ಓದಿ: ಎಸ್‌ಐಆರ್‌ ಪರಿಶೀಲನೆಯ ಹೆಸರಿನಲ್ಲಿ ನಾಗರಿಕರಿಗೆ ಕಿರುಕುಳ; ನಿಲ್ಲಿಸುವಂತೆ ಆಗ್ರಹ

ಈ ಸಂದರ್ಭದಲ್ಲಿ ಹುಣಸೂರು ಡಿವೈಎಸ್ಪಿ ರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ, ಪಿಎಸ್‌ಐ ಅಜಯ್ ಕುಮಾರ್, ಸಿಡಿಪಿಒ ವೀಣಾ, ಎಎಸ್‌ಐ ಗೋಪಾಲ್, ಜಗದೀಶ್, ಮುಖಂಡರಾದ ಸರಸ್ಪತಿ, ಅನಿತಾ ತೊಟ್ಟಪ್ಪಶೆಟ್ಟಿ, ಪ್ರೀತಿ ಅರಸ್, ಪುಟ್ಟರಾಜು, ರವಿಕುಮಾರ್, ನೇರಳಕುಪ್ಪೆ ನವೀನ್ ಸೇರಿದಂತೆ ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ಇದನ್ನೂ ನೋಡಿ: ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ | ಡಾ ಸಿದ್ದಲಿಗಯ್ಯ | ಪಿಚ್ಚಳ್ಳಿ ಶ್ರೀನಿವಾಸ Janashakthi Media

Donate Janashakthi Media

Leave a Reply

Your email address will not be published. Required fields are marked *