ಎನ್​ಡಿಎಗೆ ದೊಡ್ಡ ಸೋಲು; ಡಿಲಿಮಿಟೇಶನ್‌ ಮಸೂದೆಗೆ ಸಿಗದ ಬಹುಮತ

ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ಮೂರು ಮಸೂದೆಗಳನ್ನು ಮಂಡಿಸಲು ಗುರುವಾರ (ಏಪ್ರಿಲ್ 16) ಲೋಕಸಭೆಯ ವಿಶೇಷ ಅಧಿವೇಶನವನ್ನು ಕರೆದಿತ್ತು. ನಿನ್ನೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಮೂರು ಮಸೂದೆಗಳಾದ ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026, ಕ್ಷೇತ್ರ ಮರುವಿಂಗಡಣೆ ಮಸೂದೆ, 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026 ಮಹಿಳಾ ಮೀಸಲಾತಿ ಮಸೂದೆಗಳಿಗೆ ಇಂದು ಲೋಕಸಭೆಯಲ್ಲಿ ಮತ ಚಲಾಯಿಸಲಾಗಿತ್ತು. ಈ ವೇಳೆ ಎನ್​ಡಿಎಗೆ ಬಹುಮತ ಲಭ್ಯವಾಗಿಲ್ಲ. ಹೀಗಾಗಿ, ಬಿಜೆಪಿ ನೇತೃತ್ವದ ಎನ್​ಡಿಎಗೆ ಭಾರೀ ಹಿನ್ನಡೆಯಾಗಿದೆ. ಎನ್​ಡಿಎ

ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಮುಖ ಮಸೂದೆಗಳಿಗೆ ಲೋಕಸಭೆಯಲ್ಲಿ 298-230 ಮತಗಳಿಂದ ಸೋಲು ಉಂಟಾಗಿದೆ. ಒಟ್ಟು 489 ಮತಗಳಲ್ಲಿ 278 ಮತಗಳು ಸೀಮಾ ನಿರ್ಣಯ ಮಸೂದೆಯ ಪರವಾಗಿ ಚಲಾವಣೆಯಾದವು. ಆದರೆ 211 ಮತಗಳು ಅದರ ವಿರುದ್ಧವಾಗಿ ಚಲಾವಣೆಯಾದವು. ಮಹಿಳಾ ಮೀಸಲಾತಿ ಮಸೂದೆಯು ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯದ ಕಾರಣದಿಂದ ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ವಿಫಲವಾಯಿತು.

2026ರ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಪ್ರಸ್ತಾವಿತ ಮಸೂದೆಯ ಪರವಾಗಿ 298 ಸಂಸದರು ಮತ್ತು ವಿರುದ್ಧವಾಗಿ 230 ಸಂಸದರು ಮತ ಚಲಾಯಿಸಿದರು. ಎನ್​ಡಿಎಗೆ

ಇದನ್ನೂ ಓದಿ : ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಲೋಕಸಭೆಯಲ್ಲಿ ಸೀಮಾ ನಿರ್ಣಯ ಮತ್ತು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆ ಸೇರಿದಂತೆ ಇತರ ಎರಡು ಮಸೂದೆಗಳನ್ನು ಮೊದಲನೆಯ ಮಸೂದೆ ಸೋತ ನಂತರ ಉಳಿದೆರಡು ಮಸೂದೆಗಳನ್ನು ಮತಕ್ಕೆ ಹಾಕಲಿಲ್ಲ. ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗೆ ಈ ಎರಡು ಮಸೂದೆಗಳು ಆಂತರಿಕವಾಗಿ ಸಂಬಂಧಿಸಿದೆ ಎಂದು ಹೇಳಿದೆ. ಹೀಗಾಗಿ, ಒಂದು ಮಸೂದೆಯನ್ನು ಮಾತ್ರ ಮತಕ್ಕೆ ಪ್ರಸ್ತಾಪಿಸಲಾಯಿತು. ಇದರಿಂದಾಗಿ ಮೂರೂ ಮಸೂದೆಗಳು ಬಹುಮತ ಪಡೆಯಲು ವಿಫಲವಾದಂತಾಗಿದೆ.

ಮಹಿಳಾ ಮೀಸಲಾತಿಯಂತಹ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಮೂರನೇ ಎರಡರಷ್ಟು ವಿಶೇಷ ಬಹುಮತದ ಅಗತ್ಯವಿದೆ. 293 ಸಂಸದರನ್ನು ಹೊಂದಿರುವ ಎನ್‌ಡಿಎಗೆ ಸ್ವಂತವಾಗಿ ಅಂಗೀಕಾರ ಪಡೆಯಲು ಅಗತ್ಯವಾದ ಸಂಖ್ಯಾಬಲವಿರಲಿಲ್ಲ.

ಪ್ರಸ್ತುತ, ಲೋಕಸಭೆಯಲ್ಲಿ 540 ಸಂಸದರಿದ್ದಾರೆ. ಮೂರು ಸ್ಥಾನಗಳು ಖಾಲಿ ಇವೆ. ಈ ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆಯಲು 360 ಸಂಸದರು ಅದರ ಪರವಾಗಿ ಮತ ಚಲಾಯಿಸಬೇಕಾಗಿತ್ತು. ಆದರೆ, ಎನ್​ಡಿಎಗೆ ಅಗತ್ಯವಾದ ಸಂಖ್ಯಾಬಲವಿಲ್ಲದ ಕಾರಣದಿಂದ ಈ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್ ಅಥವಾ ಇತರ ಇಂಡಿಯ ಬ್ಲಾಕ್ ಪಕ್ಷಗಳ ಸಹಾಯದ ಅಗತ್ಯವಿತ್ತು.

ಇದನ್ನೂ ನೋಡಿ : ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media ಎನ್​ಡಿಎಗೆ

Donate Janashakthi Media

Leave a Reply

Your email address will not be published. Required fields are marked *