12.9 ಕೋಟಿ ಸ್ಮಾರ್ಟ್ ಟಿವಿ ಬಳಕೆದಾರರಿಗೆ ಶಾಕ್: ಉಚಿತ ಚಾನಲ್‌ಗಳಿಗೆ ಶುಲ್ಕ?

ನವದೆಹಲಿ: TRAI ಶೀಘ್ರದಲ್ಲೇ ತೆಗೆದುಕೊಳ್ಳಲಿರುವ ಪ್ರಮುಖ ನಿರ್ಧಾರದಿಂದಾಗಿ,  12.9 ಕೋಟಿ ಸ್ಮಾರ್ಟ್ ಟಿವಿ ಬಳಕೆದಾರರು ಸದ್ಯ ಆಪ್‌ಗಳ ಮೂಲಕ ಸ್ಮಾರ್ಟ್ ಟಿವಿಗಳಲ್ಲಿ ಲಭ್ಯವಿರುವ 150ಕ್ಕೂ ಹೆಚ್ಚು ಉಚಿತ ಚಾನಲ್‌ಗಳು ಶುಲ್ಕದ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂಬ ಮಾಹಿತಿಯಿದೆ.
ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ ಟಿ.ವಿಗಳ ಬಳಕೆ ವೇಗವಾಗಿ ಹೆಚ್ಚಾಗಿದ್ದು, ಟಿ.ವಿ ವೀಕ್ಷಿಸುವ ವಿಧಾನವನ್ನೇ ಬದಲಿಸಿದೆ. ವಿಶೇಷವಾಗಿ ಇಂಟರ್ನೆಟ್ ಸಂಪರ್ಕದ ಮೂಲಕವೇ ನೂರಾರು ಉಚಿತ ಚಾನಲ್‌ಗಳನ್ನು ಒದಗಿಸುವ ಆಪ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಆದರೆ, ಈಗ ಈ ಉಚಿತ ಸೇವೆಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಕಾಣುತ್ತಿದೆ.

ಪ್ರಸ್ತುತ ದೇಶದಲ್ಲಿ 12.9 ಕೋಟಿಗೂ ಹೆಚ್ಚು ಸ್ಮಾರ್ಟ್ ಟಿವಿ ಬಳಕೆದಾರರಿದ್ದಾರೆ.ಇವರಲ್ಲಿ ಹೆಚ್ಚಿನವರು ಕೇಬಲ್ ಅಥವಾ ಡಿಟಿಎಚ್ (DTH) ಸಂಪರ್ಕವಿಲ್ಲದೆಯೇ, ವಿವಿಧ ಆಪ್‌ಗಳ ಮೂಲಕ ಉಚಿತವಾಗಿ ಚಾನಲ್‌ಗಳನ್ನು ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: 10 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ; ಇವಿಎಂ ಬದಲು ಬ್ಯಾಲೆಟ್ ಮಸೂದೆ ಬಾಕಿ

ಸಮಸ್ಯೆ ಏನು ?: ಡಿಟಿಎಚ್ ಮತ್ತು ಕೇಬಲ್ ಕಂಪನಿಗಳು ಚಾನಲ್‌ಗಳಿಗೆ ಶುಲ್ಕ ವಸೂಲಿ ಮಾಡುವುದರ ಜೊತೆಗೆ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿವೆ ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತಿವೆ. ಆದರೆ ಸ್ಮಾರ್ಟ್ ಟಿ.ವಿ ಆಪ್‌ಗಳ ವಿಷಯದಲ್ಲಿ ಇದುವರೆಗೆ ಅಂತಹ ಯಾವುದೇ ಕಟ್ಟುಪಾಡುಗಳಿಲ್ಲ.

TRAI ಆಲೋಚನೆ: ಈ ಅಸಮಾನತೆಯನ್ನು ಸರಿಪಡಿಸಲು TRAI ಹೊಸ ನಿಯಮಗಳನ್ನು ತರಲು ಯೋಜಿಸುತ್ತಿದೆ. ಸ್ಮಾರ್ಟ್ ಟಿವಿ ಆಪ್‌ಗಳು ಕೂಡ ಡಿಟಿಎಚ್ ಮಾದರಿಯಲ್ಲೇ ನಿಯಂತ್ರಣಕ್ಕೆ ಬರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮೇ 4, 2026 ರಂದು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಗ್ರಾಹಕರ ಮೇಲೆ ಇದರ ಪ್ರಭಾವ:

ಈ ನಿರ್ಧಾರ ಜಾರಿಗೆ ಬಂದರೆ, ಇದುವರೆಗೆ ಉಚಿತವಾಗಿ ಲಭ್ಯವಿದ್ದ ಕೆಲವು ಚಾನಲ್‌ಗಳಿಗೆ ಬಳಕೆದಾರರು ಹಣ ಪಾವತಿಸಬೇಕಾಗಬಹುದು. ಆದರೆ, ಈ ಬದಲಾವಣೆ ಪ್ರತಿಯೊಬ್ಬ ಬಳಕೆದಾರರ ಮೇಲೆ ಸಮಾನವಾಗಿ ಪ್ರಭಾವ ಬೀರದಿರಬಹುದು. ಏಕೆಂದರೆ ಪ್ರಸ್ತುತ ಮಿಲೇನಿಯಲ್ಸ್ ಮತ್ತು ಜೆನ್-ಜಿ (Gen Z) ತಲೆಮಾರಿನವರು ಹೆಚ್ಚಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್‌ನಂತಹ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾರೆ.

ಒಟ್ಟಾರೆಯಾಗಿ, ಈ ನಿರ್ಧಾರ ಜಾರಿಯಾದರೆ ಭಾರತದಲ್ಲಿ ಟಿವಿ ವೀಕ್ಷಣೆ ವಿಧಾನ ಮತ್ತೊಮ್ಮೆ ಬದಲಾಗಲಿದೆ. ಉಚಿತ ಸೇವೆಗಳ ಮೇಲೆ ಅವಲಂಬಿತವಾಗಿರುವ ಗ್ರಾಹಕರಿಗೆ ಇದು ಹೊಸ ಆರ್ಥಿಕ ಹೊರೆಯಾಗಿ ಪರಿಣಮಿಸಬಹುದು.

ಇದನ್ನೂ ನೋಡಿ: ಗಾಳಿ ದುರಗಪ್ಪ ಫ್ಯೂಷನ್ ಮ್ಯೂಸಿಕ್ – ತಲೆದೂಗದೆ ಇರೋದು ಅಸಾಧ್ಯ! Janashakthi Media

Donate Janashakthi Media

Leave a Reply

Your email address will not be published. Required fields are marked *