ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್

ಚಿತ್ರದುರ್ಗ: ವಿದ್ಯೆ ಕಲಿಸಬೇಕಾದ ಗುರುವೇ ಕಾಮಪಿಶಾಚಿಯಾದ ಘನಘೋರ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಪುಸಲಾಯಿಸಿ ಅದೇ ಶಾಲೆಯ ಶಿಕ್ಷಕನೊಬ್ಬ ಬಲತ್ಕಾರ ಎಸಗಿದ್ದು ಇದರ ಪರಿಣಾಮ ವಿದ್ಯಾರ್ಥಿನಿ ಗರ್ಭವತಿಯಾಗಿದ್ದಾಳೆ ಪ್ರಕರಣ ಈಗ ಪೊಲೀಸ್ ಮೆಟ್ಟಿಲೇರಿದೆ. ಲೈಂಗಿಕ

ಚಳ್ಳಕೆರೆ ವ್ಯಾಪ್ತಿಯಲ್ಲಿ ಬರುವ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ಹೆಚ್.ಓ. ರಾಜಣ್ಣ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಬಾಲಕಿ ಗರ್ಭ ಧರಿಸಿದ್ದಳು ಎನ್ನಲಾಗಿದೆ. ಪೋಷಕರಿಗೆ ತಿಳಿದರೆ ಸಮಸ್ಯೆ ಎಂದರಿತು ಆರೋಪಿ ಶಿಕ್ಷಕ ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿಸಿದ್ದಾನೆಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬಿಹಾರ| ಏ. 14ರಂದು ಸಿಎಂ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಕೆ

ಬಾಲಕಿ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆಯೇ ವಿಷಯ ಮುಚ್ಚಿಹಾಕಲು ಆರೋಪಿ ಶಿಕ್ಷಕ ಯತ್ನಿಸಿದ್ದಾನೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಹೋಮ್‌ನ ವೈದ್ಯೆ ಶಂಕರಲಕ್ಷ್ಮೀ ಎಂಬುವವರ ಬಳಿ ಈ ವಿಷಯ ಮಾತಾಡಿ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು

ವಿಷಯ ತಿಳಿದ ಮಕ್ಕಳ ರಕ್ಷಣಾಧಿಕಾರಿ ರೇಖಾ ಅವರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕಾಮುಕ ಶಿಕ್ಷಕ ರಾಜಣ್ಣ ಹಾಗೂ ಸಹಕರಿಸಿದ ವೈದ್ಯೆ ಶಂಕರಲಕ್ಷ್ಮೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಗುರುಗಳಂತೆ ಕಾಣುವ ಇಂಥ ಶಿಕ್ಷಕರೇ ಶಿಶುಕಾಮುಕರಾಗಿ ಬದಲಾಗುತ್ತಿರುವುದು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಶಾಲೆಗೆ ಹೋದರೆ ಮಕ್ಕಳು ಸುರಕ್ಷಿತ ಎಂಬ ಪೋಷಕರ ನಂಬಿಕೆಗೆ ಈ ಘಟನೆ ದೊಡ್ಡ ಪೆಟ್ಟು ನೀಡಿದ್ದು, ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ನೋಡಿ: ಇರಾನ್ ಪ್ರತಿರೋಧ – ಯು.ಎಸ್ (ಅಮೆರಿಕ) ಪತನದ ಆರಂಭವೆ? ಡಾ. ಬಿ.ಆರ್. ಮಂಜುನಾಥ್ , ಗುರುರಾಜ ದೇಸಾಯಿ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *