ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಯುಡಿಎಫ್ ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲು

ಅಡೂರು: ಚುನಾವಣೆಯ ಮೌನ ಅವಧಿಯಲ್ಲಿ ಮತದಾರರನ್ನು ಪ್ರಭಾವಿತಗೊಳಿಸಲು ಯತ್ನಿಸಿ ಮಾದರಿ ನಡವಳಿಕಾ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಯುಡಿಎಫ್ ಅಭ್ಯರ್ಥಿ ಸಿ.ವಿ. ಶಾಂತಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.  ಚುನಾವಣಾ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್. ಪ್ರೇಮ್ ಕೃಷ್ಣನ್ ಅವರು ಈ ಸಂಬಂಧ ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ನಾಡೋಜ ಪದವಿ ಪ್ರಶ್ನಿಸಿದ ಅರ್ಜಿ ವಜಾ; ಹೈಕೋರ್ಟ್ ತಿರಸ್ಕಾರ

ಚುನಾವಣ ನಿಯಮಗಳ ಪ್ರಕಾರ, ಪ್ರಚಾರ ಅವಧಿ ಮುಗಿದ ನಂತರ 48 ಗಂಟೆಗಳ ಮೌನ ಅವಧಿ ಜಾರಿಯಾಗುತ್ತದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಅವಧಿ ಮುಂದುವರಿಯುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳು ದೃಶ್ಯ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ಪ್ರಭಾವಿತಗೊಳಿಸುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ನಿಷಿದ್ಧ.

ಆದರೆ, ನಿರ್ಬಂಧಿತ ಅವಧಿಯಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸುವ ಮೂಲಕ ಶಾಂತಕುಮಾರ್ ಅವರು ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಇದನ್ನೂ ನೋಡಿ: ಜನಾರೋಗ್ಯದಲ್ಲಿ ಕೇರಳ ಮಾದರಿ – ಪ್ರಸನ್ನ ಸಾಲಿಗ್ರಾಮ, ಕೆ.ಎಸ್.‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *