ಉತ್ತಮ್‌ ನಗರ | ‘ಗೋಲಿ ಮಾರೋ’ ಘೋಷಣೆ: ಬಿಜೆಪಿ ಕಾರ್ಯಕರ್ತನ ಗುರುತು ಬಯಲು

ದೆಹಲಿ ಉತ್ತರ ಪಶ್ಚಿಮ ಭಾಗದ ಉತ್ತಮ್‌ ನಗರದಲ್ಲಿ 26 ವರ್ಷದ ತರುಣ್ ಕುಮಾರ್ ಸಾವಿನ ನಂತರ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿತ್ತು. ನಂತರದ ಫ್ಯಾಕ್ಟ್‌ಚೆಕ್‌ನಲ್ಲಿ, ಆ ವ್ಯಕ್ತಿ ಸಾಮಾನ್ಯ ನಾಗರಿಕನಲ್ಲ, ಬಿಜೆಪಿ ಕಾರ್ಯಕರ್ತ ನಯನ್ ಮಾರ್ಕೆನ್ ಎಂದು Alt News ಗುರುತಿಸಿದೆ. ಉತ್ತಮ್‌ 

– ಗುರುರಾಜ ದೇಸಾಯಿ

ಸಾಮಾಜಿಕ ಜಾಲತಾಣಗಳಲ್ಲಿ ಆತನು ತನ್ನನ್ನು ಬಿಜೆಪಿ ಸಂಬಂಧಿತ ವ್ಯಕ್ತಿಯಾಗಿ ಪರಿಚಯಿಸಿಕೊಂಡಿದ್ದಾನೆ. ಜೊತೆಗೆ, ಬಿಜೆಪಿ ಯುವ ಮೋರ್ಚಾದ ಮಾಜಿ ವಕ್ತಾರನಾಗಿದ್ದುದೂ ತಿಳಿದುಬಂದಿದೆ. ಉತ್ತಮ್‌ 

ಹೋಳಿ ದಿನ ಏನಾಗಿತ್ತು?

ಹೋಳಿ ದಿನ ಎರಡು ಸಮುದಾಯಗಳ ನಡುವೆ ಸಣ್ಣ ವಾಗ್ವಾದ ಶುರುವಾಯಿತು. ಬಣ್ಣದ ನೀರಿನ ಬಲೂನ್ ಒಂದು ಮುಸ್ಲಿಂ ಮಹಿಳೆಯರ ಮೇಲೆ ಬಿದ್ದದ್ದು ಕಾರಣ. ಈ ವಾಗ್ವಾದ ಬೇಗನೆ ಗಲಾಟೆಗೆ ತಿರುಗಿತು. ಕೆಲವೇ ಕ್ಷಣಗಳಲ್ಲಿ ಹಲವರು ಸೇರಿಕೊಂಡರು. ಉತ್ತಮ್‌ 

ಇದನ್ನೂ ಓದಿ: ಮಹಿಳೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ವಿರುದ್ಧ FIR

ಈ ವೇಳೆ ಸ್ಥಳದಲ್ಲಿರದ ತರುಣ್ ಕುಮಾರ್ ನಂತರ ಬಂದಾಗ ದಾಳಿಗೆ ಒಳಗಾದನು. ತಲೆಗೆ ಗಂಭೀರ ಗಾಯಗೊಂಡ ಆತನು ಆಸ್ಪತ್ರೆಯಲ್ಲಿ ಮೃತಪಟ್ಟನು.

ಪೊಲೀಸರ ಪ್ರಕಾರ, ಇದು ಏಕಾಏಕಿ ನಡೆದ ಘಟನೆ ಮಾತ್ರವಲ್ಲ. ಕುಟುಂಬಗಳ ನಡುವೆ ಹಿಂದಿನಿಂದಲೂ ಕೆಲವು ಸಮಸ್ಯೆಗಳು ಇದ್ದವು. ಈದ್ ಹಬ್ಬ ಸಮೀಪಿಸುತ್ತಿದ್ದಂತೆ, ಈ ಘಟನೆಗೆ ಸಾಮುದಾಯಿಕ ತೀವ್ರತೆ ಹೆಚ್ಚಾಯಿತು.

ವೈರಲ್ ವಿಡಿಯೋ ಏನು?

ಘಟನೆಯ ನಂತರ ಹಲವಾರು ಯೂಟ್ಯೂಬ್ ಚಾನೆಲ್‌ಗಳು ಸ್ಥಳಕ್ಕೆ ಬಂದು “ಸುದ್ದಿ” ಹೆಸರಿನಲ್ಲಿ ವಿಡಿಯೋಗಳನ್ನು ಮಾಡಲಾರಂಭಿಸಿವೆ. ಈ ವಿಡಿಯೋಗಳಲ್ಲಿ ಜನರ ಭಾವನೆಗಳನ್ನು ಹೆಚ್ಚು ಪ್ರಚೋದಿಸುವ ರೀತಿಯಲ್ಲಿ ಪ್ರಶ್ನೆಗಳು ಕೇಳಲಾಗಿದೆ.

ಅದರಲ್ಲೇ ಒಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ತೀವ್ರವಾಗಿ ಮಾತನಾಡುತ್ತಾ:

• ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಹೇಳುತ್ತಾನೆ

• ಹಿಂಸೆಗೆ ಬಹಿರಂಗವಾಗಿ ಕರೆ ನೀಡುತ್ತಾನೆ

• ಕಾನೂನು-ಸುವ್ಯವಸ್ಥೆಯ ಅಗತ್ಯವನ್ನೇ ತಳ್ಳಿ ಹಾಕುತ್ತಾನೆ

ಗುಂಪು ಕೂಡ “ಗೋಲಿ ಮಾರೋ” ಎಂಬ ಘೋಷಣೆಗಳನ್ನು ಕೂಗುತ್ತದೆ. ಕಾನೂನು-ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದಾಗ, “ಅದರ ಅವಶ್ಯಕತೆ ಇಲ್ಲ” ಎಂದು ತಳ್ಳಿ ಹಾಕುತ್ತಾನೆ. ಈ ಹೇಳಿಕೆಗಳ ನಂತರ ಗುಂಪು ಚಪ್ಪಾಳೆ ಹೊಡೆದು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತದೆ.

ಹಿಂಸೆಗೆ ಕರೆ ನೀಡಿದ್ದ ವ್ಯಕ್ತಿ ಯಾರು?

ಮೊದಲಲಿಗೆ, ನೋಡಲು ಇದು ಒಬ್ಬ ಸ್ಥಳೀಯನ ಆಕ್ರೋಶದಂತೆ ಕಾಣಬಹುದು. ಆದರೆ ತನಿಖೆಯಲ್ಲಿ ಬೇರೆ ಚಿತ್ರ ಹೊರಬಂದಿದೆ. ವಿವಿಧ ಯೂಟ್ಯೂಬ್ ವಿಡಿಯೋಗಳಲ್ಲಿ ಅದೇ ವ್ಯಕ್ತಿ ಕಾಣಿಸಿಕೊಂಡಿದ್ದು, ಒಂದು ಸಂದರ್ಶನದಲ್ಲಿ ಅವನನ್ನು ಸ್ಪಷ್ಟವಾಗಿ ನಯನ್ ಮಾರ್ಕೆನ್ ಎಂದು ಪರಿಚಯಿಸಲಾಗಿದೆ.

ಅವನ ಸಾಮಾಜಿಕ ಜಾಲತಾಣ ಪ್ರೊಫೈಲ್‌ಗಳು ಸ್ಪಷ್ಟ ರಾಜಕೀಯ ಸಂಪರ್ಕವನ್ನು ತೋರಿಸುತ್ತವೆ. ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಉಜ್ವಲ ಯೋಜನೆ”ಗೆ ಸಂಬಂಧಿಸಿದಂತೆ ಆತ ತನ್ನನ್ನು ಬಿಜೆಪಿಯೊಂದಿಗೆ ಜೋಡಿಸಿಕೊಂಡಿದ್ದಾನೆ. ಈ ಯೋಜನೆ ಗ್ರಾಮೀಣ ಮತ್ತು ಬಡ ಕುಟುಂಬಗಳಿಗೆ ಸ್ವಚ್ಛ ಇಂಧನ (LPG) ಒದಗಿಸುವ ಉದ್ದೇಶ ಹೊಂದಿದೆ.

 

ಅವನ ಫೇಸ್ಬುಕ್ ಖಾತೆಯಲ್ಲಿ ಬಿಜೆಪಿ ಹಿರಿಯ ನಾಯಕರು—ಜೆ.ಪಿ. ನಡ್ಡಾ, ಮುರಳಿ ಮನೋಹರ್ ಜೋಷಿ, ನೂಪುರ್ ಶರ್ಮಾ, ಕಂಗನಾ ರಣೌತ್—ಇವರೊಂದಿಗೆ ತೆಗೆದ ಚಿತ್ರಗಳೂ ಕಾಣುತ್ತವೆ.

ಆದರೆ ವೈರಲ್ ವಿಡಿಯೋದಲ್ಲಿ, ಈ ರಾಜಕೀಯ ಹಿನ್ನೆಲೆ ಎಲ್ಲಿಯೂ ಬಹಿರಂಗಪಡಿಸಲಾಗಿಲ್ಲ. ಆತನು “ಸಾಮಾನ್ಯ ನಾಗರಿಕ” ಎಂಬಂತೆ ತೋರಿಸಲಾಗಿದೆ.
ರಾಜಕೀಯ ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನು ಸಾಮಾನ್ಯ ನಾಗರಿಕನಂತೆ ತೋರಿಸಿ, ಅವನ ಹೇಳಿಕೆಗಳನ್ನು “ಜನಾಭಿಪ್ರಾಯ” ಎಂದು ಪ್ರದರ್ಶಿಸಲಾಗಿದೆ.

ಇದು ಕೇವಲ ಮಾಹಿತಿ ಹಂಚಿಕೆಯಾಗಿಲ್ಲ, ಕೋಮು ಧ್ರುವೀಕರಣದ ಮೂಲಕ ಗಲಭೆ ಸೃಷ್ಟಿಸಲು ಪ್ರಯತ್ನಿಸಿದಂತೆ ಕಾಣುತ್ತಿದೆ. ತರುಣ್‌ ಕುಮಾರ್‌ ಸಾವಿಗೆ ಕಾರಣವಾದರನ್ನು ತಕ್ಷಣವೇ ಬಂಧಿಸಿಬೇಕಿದೆ. ಅದನ್ನು ಬಿಟ್ಟು ಗಲಭೆ ಎಬ್ಬಿಸಿ ಸೌಹಾರ್ದ ಹಾಳುಮಾಡಿ ರಾಜಕೀಯ ಲಾಭ ಪಡೆಯುವುದು ಸರಿಯಾದುದಲ್ಲ. ಮಾಧ್ಯಮಗಳು ಕೂಡ ವಾಸ್ತವ ವಿಚಾರವನ್ನು ಹೇಳಬೇಕೆ ಹೊರತು ವೈಭವೀಕರಿಸುವ ಕೆಲಸ ಮಾಡಬಾರದು.

ಇದನ್ನೂ ನೋಡಿ: ಫ್ಯಾಕ್ಟ್ ಚೆಕ್ | ಮೋದಿ–ಸೋನಿಯಾ ಆಸ್ಪತ್ರೆ ಭೇಟಿ: ವೈರಲ್ ಫೋಟೋ ನಿಜವೇ ಅಥವಾ ನಕಲಿಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *