ಶಾಲೆಗಳು ಮುಚ್ಚುವ ಭೀತಿ: RTE ಜಾರಿಗೆ ಸರ್ಕಾರಕ್ಕೆ ಪಾಫ್ರೆ ಒತ್ತಾಯ

ದೂರವಾಣಿ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 (ಶಿಕ್ಷಣ ಹಕ್ಕು ಕಾಯಿದೆ) ಕ್ಕೆ 16 ವರ್ಷ ತುಂಬಿದ ಸಂದರ್ಭದಲ್ಲಿ ಕಾಯಿದೆಯನ್ನು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಒತ್ತಾಯಿಸಿದೆ. ಶಾಲೆಗಳು 

ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಿ 16 ವರ್ಷಗಳು ತುಂಬಿದೆ . ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದೊಡ್ಡ ಪ್ರಮಾಣದಲ್ಲಿ ಮುಚ್ಚುವ ಆತಂಕ ಪ್ರಾರಂಭವಾಗಿದೆ. ಶಾಲೆಗಳನ್ನು ಉಳಿಸಿಕೊಂಡು, ಎಲ್ಲಾ ಮಕ್ಕಳನ್ನು ಶಾಲೆಗೆ ತಂದು , ಖಾಲಿ ಇರುವ ಶಿಕ್ಷಕರನ್ನು ನೇಮಿಸಿಕೊಂಡು , ಶಾಲಾ ಹಂತದಲ್ಲಿ ಎಸ್‌ ಡಿ ಎಮ್‌ ಸಿ ಗಳಿಗೆ ಮತ್ತಷ್ಟು ಅಧಿಕಾರ ನೀಡುವ ಮೂಲಕ ಗುಣಾತ್ಮಕ ಶಿಕ್ಷಣ ಒದಗಿಸಲು ಶಿಕ್ಷಣ ಹಕ್ಕು ಕಾಯಿದೆಯ ಪರಿಣಾಮಕಾರಿ ಜಾರಿಗೆ ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದೆ. ಶಾಲೆಗಳು 

ಸಾವಿರಾರು ಗ್ರಾಮಗಳ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ ; ಸಾವಿರಾರು ಮಕ್ಕಳು ಶಾಲೆ ಬಿಟ್ಟು ಹೊರಗಿದ್ದಾರೆ ; ಸಾವಿರಾರು ಶಾಲೆಗಳಲ್ಲಿ ಅತೀ ಕಡಿಮೆ ದಾಖಲಾತಿಯಿದೆ ; ಬಾರೀ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಿದೆ, ಮೂಲಭೂತ ಸೌಕರ್ಯ ಇನ್ನೂ ಕನಸಾಗಿಯೇ ಉಳಿದಿದೆ ಮತ್ತು ಮೇಲ್ವಿಚಾರಣೆಯ ದುರ್ಬಲತೆಯಿಂದ ಶಿಕ್ಷಣ ಹಕ್ಕು ಕಾಯಿದೆ ರಾಜ್ಯದಲ್ಲಿ ಕಾಗದದಲ್ಲೇ ಉಳಿಯುವಂತಾಗಿದೆ. ಶಾಲೆಗಳು 

ಇದನ್ನೂ ಓದಿ: “ನಾಲ್ಕೇ ತಿಂಗಳಲ್ಲಿ ನಿರ್ಗಮನ? ನಿತೀಶ್‌ಗೆ ಬಿಜೆಪಿ ಒತ್ತಡವಿತ್ತೆ?”

ಈಗ ಬೇಕಿರುವುದು ಹೊಸ ಹೊಸ ಘೋಷಣೆಗಳಲ್ಲ. ಬದಲಿಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ರಾಜಕೀಯ ಇಚ್ಛಾಸಕ್ತಿ ಎಂದು ತಿಳಿಸಿದೆ.

2024-25ರ ಸಮಗ್ರ ಶಿಕ್ಷಣದ ಯೋಜನಾ ಅನುಮೋದನೆ ಮಂಡಳಿ( ಪಿಎಬಿ) ದಾಖಲೆಯ ಪ್ರಕಾರ ರಾಜ್ಯದ 49,679 ಸರ್ಕಾರಿ ಶಾಲೆಗಳಲ್ಲಿ 262 ಶಾಲೆಗಳು ಶೂನ್ಯ ದಾಖಲಾತಿಯಿದೆ; 22,757 ಶಾಲೆಗಳಲ್ಲಿ ಮಕ್ಕಳ ದಾಖಲಾತಿ 50ಕ್ಕಿಂತ ಕಡಿಮೆ ಇದೆ; 6,790 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ ಮತ್ತು ಪ್ರಾಥಮಿಕ ಹಂತದಲ್ಲಿ ಶೇಕಡ 35.4ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷರ ಅನುಪಾತ ಪ್ರತಿಕೂಲವಾಗಿದೆ.

ಈ ಸ್ಥಿತಿಯಲ್ಲಿ ಮೊದಲ ಆದ್ಯತೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವುದು ಕರ್ನಾಟಕದ 2024-25 ಯೋಜನಾ ದಾಖಲೆಯ ಪ್ರಕಾರ ರಾಜ್ಯವು 9,456 ಶಾಲೆಬಿಟ್ಟ/ಹೊರಗುಳಿದ ಮಕ್ಕಳನ್ನು ಗುರುತಿಸಿದೆ; ಇವರಲ್ಲಿ ಕೆಲವರಿಗೆ 3 ತಿಂಗಳ, 6 ತಿಂಗಳ ಮತ್ತು ವಸತಿ ವಿಶೇಷ ತರಬೇತಿ ಅಗತ್ಯವಿದೆ ಎಂದು ರಾಜ್ಯವೇ ದಾಖಲಿಸಿದೆ. ಕಾಯಿದೆ ಬಂದು16 ವರ್ಷವಾದರೂ , ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಇದರ ಪರಿಹಾರಕ್ಕಾಗಿ ತಾಲ್ಲೂಕು ಹಾಗು ಜಿಲ್ಲಾಮಟ್ಟದಲ್ಲಿ ಮರುಪ್ರವೇಶದ ಅಭಿಯಾನಗಳು ತುರ್ತಾಗಿ ಪ್ರಾರಂಭವಾಗಬೇಕಿದೆ ಎಂದು ಅಭಿಪ್ರಾಯ ಪಟ್ಟಿದೆ.

ಶಾಲೆ ಮುಚ್ಚುವಿಕೆ ಅಥವಾ ವಿಲೀನವನ್ನು ಯಾಂತ್ರಿಕವಾಗಿ ನೋಡದೆ , ಹಕ್ಕುಆಧಾರಿತ ನೆಲೆಯಲ್ಲಿ ನೋಡಬೇಕಿದೆ. ಸರ್ಕಾರಿ ಶಾಲೆಗಳ ಮುಚ್ಚುವಿಕೆ/ವಿಲೀನದ ವಿರೋಧವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವುದು ಜನವಿರೋಧಿ ನಡೆಯ ಬಗ್ಗೆ ಎಚ್ಚರಿಕೆಯಾಗಿದೆ. ರಾಜ್ಯದಲ್ಲಿ ಸಾವಿರಾರು ಸಣ್ಣ ಶಾಲೆಗಳಿರುವ ಸಂದರ್ಭದಲ್ಲಿ, ಶಾಲಾ ವಿಲೀನವನ್ನು ಕೇವಲ “ದಾಖಲಾತಿ ಕಡಿಮೆ” ಎಂಬ ಒಂದೇ ಮಾನದಂಡದ ಮೇಲೆ ಅಳೆಯುವುದು ಸರಿಯಲ್ಲ. ಬದಲಿಗೆ, ಮಕ್ಕಳ ನಡೆದು ಹೋಗುವ ದೂರ, ಗಿರಿಜನ/ಗ್ರಾಮೀಣ ಪ್ರದೇಶ, ಸಾರಿಗೆ ಸೌಲಭ್ಯ, ಹೆಣ್ಣುಮಕ್ಕಳ ಸುರಕ್ಷತೆ, ಮತ್ತು RTEಯ ನೆರೆಹೊರೆಯ ಶಾಲೆ ತತ್ವಗಳ ಆಧಾರದಲ್ಲಿ ತೀರ್ಮಾನವಾಗಬೇಕಿದೆ .

ಆದ್ಯತೆಯ ಮೇಲೆ ಶಿಕ್ಷಕರ ನೇಮಕವಾಗಬೇಕಿದೆ . 6,790 ಏಕೋಪಾಧ್ಯಾಯ ಶಾಲೆಗಳಿಗೆ ಆರ್‌ ಟಿ ಇ ಮಾನದಂಡದಂತೆ ಕನಿಷ್ಠ ಇಬ್ಬರು ಶಿಕ್ಷಕರನ್ನು ತಕ್ಷಣ ಒದಗಿಸಬೇಕಿದೆ .ಮಕ್ಕಳ ಶಿಕ್ಷಕರ ಅನುಪಾತ ಪ್ರತಿಕೂಲವಾಗಿರುವ ಶೇಕಡ 35.4 ಶಾಲೆಗಳಲ್ಲಿ ಆದ್ಯತೆ ಮೇಲೆ ಶಿಕ್ಷಕರನ್ನು ಒದಗಿಸಬೇಕಿದೆ. ಇಲ್ಲವಾದಲ್ಲಿ ಗುಣಮಟ್ಟದ ಶಿಕ್ಷಣ ಕನಸಾಗಿಯೇ ಉಳಿಯುತ್ತದೆ. ಖಾಲಿ ಇರುವ 62500 ಶಿಕ್ಷಕರ ಹುದ್ದೆಗಳ ಭರ್ತಿ, ವಿಷಯಾಧಾರಿತ ಶಿಕ್ಷಕರ ನೇಮಕ, ಬಹುವರ್ಗ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರು ಹಾಗೂ ದುರ್ಗಮ ಪ್ರದೇಶಗಳಿಗೆ ವಿಶೇಷ ಶಿಕ್ಷಕರನ್ನು ನಿಯೋಜಿಸುವ ನೀತಿ ಜಾರಿಗೆ ಬರಬೇಕು. ಶಾಲೆ ಉಳಿಸುವ ಚರ್ಚೆ ಶಿಕ್ಷಕರಿಲ್ಲದೆ ಅರ್ಥಹೀನವಾಗುತ್ತದೆ ಎಂದು ಹೆಳಿದೆ.

ಶಾಲಾ ಹಂತದಲ್ಲಿ ವಿಕೇಂದ್ರೀಕರಣದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು (ಎಸ್‌ ಡಿ ಎಮ್‌ ಸಿ) ಕಾಗದದ ಸಮಿತಿಗಳಾಗಿಯೇ ಬಿಡದೆ, ಶಿಕ್ಷಣ ಕಾಯಿದೆ ನಿಜ ಅರ್ಥದಲ್ಲಿ ಸ್ಥಳೀಯ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸಲು ಬಲವರ್ಧನೆ ಮಾಡಬೇಕಿದೆ.

ಶಿಕ್ಷಣ ಹಕ್ಕು ಕಾಯಿದೆಯ ಸಮಗ್ರ ಜಾರಿಗಾಗಿ ರಾಜ್ಯ ಸಲಹಾ ಮಂಡಳಿಯನ್ನು ರಚಿಸಬೇಕು. ಯಾವ ಶಾಲೆಯಲ್ಲಿ ಎಷ್ಟು ಮಕ್ಕಳು ಹೊರಗುಳಿದಿದ್ದಾರೆ, ಯಾವ ಶಾಲೆ ಏಕೋಪಾಧ್ಯಾಯ ಶಾಲೆ , ಯಾವ ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆ ಇದೆ, ಯಾವ ಜಿಲ್ಲೆಯಲ್ಲಿ ಕಲಿಕಾ ಹಿನ್ನಡೆ ಹೆಚ್ಚಿದೆ ಈ ಎಲ್ಲ ಮಾಹಿತಿಯನ್ನು ಸಾರ್ವಜನಿಕ ಡ್ಯಾಶ್‌ಬೋರ್ಡ್‌ನಲ್ಲಿ ತಿಂಗಳಿಗೊಮ್ಮೆ ಪ್ರಕಟಿಸಬೇಕು ಎಂದು ಹೆಳಿದೆ.

ನಮ್ಮ ಪ್ರಮುಖ ಬೇಡಿಕೆಗಳು:

1. ಶಾಲೆ ಬಿಟ್ಟ ಮಕ್ಕಳಿಗಾಗಿ ಜಿಲ್ಲಾವಾರು “ಶಾಲೆಗೆ ಮರಳಿ” ವಿಶೇಷ ಅಭಿಯಾನ ಆರಂಭಿಸಬೇಕು

2. ನೆರೆಹೊರೆಯ ಶಾಲೆ ತತ್ವವನ್ನು ಉಲ್ಲಂಘಿಸುವ ಶಾಲೆ ಮುಚ್ಚುವಿಕೆ/ವಿಲೀನಗಳನ್ನು ತಕ್ಷಣ ನಿಲ್ಲಿಸಬೇಕು.

3. ಏಕೋಪಾಧ್ಯಾಯ ಶಾಲೆಗಳಿಗೆ ಆದ್ಯತೆಯಲ್ಲಿ ಶಿಕ್ಷಕರ ನೇಮಕ ಮಾಡಬೇಕು.

4. ಕಲಿಕಾ ಗುಣಮಟ್ಟಕ್ಕೆ ಶಾಲಾವಾರು ಗುರಿ ಮತ್ತು ಪರಿಹಾರ ಕ್ರಿಯಾ ಯೋಜನೆ ಪ್ರಕಟಿಸಬೇಕು.

5. ಎಸ್‌ ಡಿ ಎಮ್‌ ಸಿ ಗಳಿಗೆ ನೈಜ ಅಧಿಕಾರ, ತರಬೇತಿ ಮತ್ತು ಸಾಮಾಜಿಕ ಲೆಕ್ಕಪತ್ರ ನಡೆಸುವ ವ್ಯವಸ್ಥೆ ನೀಡಬೇಕು.

6. RTE ಜಾರಿಗೆ ರಾಜ್ಯಮಟ್ಟದ ಪಾರದರ್ಶಕ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಬೇಕು.

ಶಿಕ್ಷಣ ಹಕ್ಕು ಕಾಯಿದೆಗೆ 16 ವರ್ಷ ತುಂಬಿದ ಈ ಘಳಿಗೆಯಲ್ಲಿ, ಕರ್ನಾಟಕ ಶಿಕ್ಷಣ ಹಕ್ಕು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸ ಬೇಕಾಗಿದೆ ಎಂದು ಹೆಳಿದೆ.

ಪತ್ರಿಕಾ ಹೇಳಿಕೆಯಲ್ಲಿ PAFRE ಸಂಚಾಲಕ ನಿರಂಜನಾರಾಧ್ಯ ವಿ.ಪಿ, ಎಐಟಿಯುಸಿ ಅಧ್ಯಕ್ಷ  ಪ್ರೊ. ಬಾಬು ಮಾಥ್ಯು,ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟದ ಎಂ.ಜಯಮ್ಮ, ಎಸ್‌ಡಿಎಮ್‌ಸಿಸಿಎಫ್‌ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ, ಬಿಜಿವಿಎಸ್‌ನ ಎಫ್ . ಸಿ .ಚೇಗಾ ರೆಡ್ಡಿ ಹಾಗೂ ಶುಭಂಕರ್‌ ಚಕ್ರವರ್ತಿ,  AISF ರಾಜ್ಯಾಧ್ಯಕ್ಷ ಕುಮಾರಿ ವೀಣ ಎಲ್‌. ವೈ ., AISA ರಾಜ್ಯ ಸಂಚಾಲಕ ಲೇಖ ಅಡವಿ, ಕ್ರಿಟಿಕಲ್ ಎಡ್‌ಟೆಕ್ ಇಂಡಿಯಾದ ಗುರುಮೂರ್ತಿ ಕಾಶಿನಾಥನ್, ಮಗು ಮತ್ತು ಕಾನೂನು ಕೇಂದ್ರ, ಸಿಸಿಎಲ್-ಎನ್‌ ಎಲ್‌ಎಸ್‌ಐಯು ಸಂಶೋಧಕ ಕುಮಾರ್‌ ಶೃಂಗೇರಿ, ಪ್ರಬುದ್ಧ ಫೌಂಡೇಶನ್‌ನ ಸೌಮ್ಯಾ ಕೆ.ಆರ್, ಫೋರ್ತ್ವೇವ್ ಫೌಂಡೇಶನ್‌, ವಿಶೇಷ ಅಗತ್ಯವುಳ್ಳ ಮಕ್ಕಳ ರಾಜ್ಯ ಸಂಘಟನೆಯ ಜಿ. ರವಿ, ಸಮ-ಸಮಾಜದ ಗೆಳೆಯರ ಬಳಗದ ಗಂಗಾಧರ್‌ ಇದ್ದರು.

ಇದನ್ನೂ ನೋಡಿ: ಉನ್ನತ ಶಿಕ್ಷಣ ‘ಉದ್ಯಮ’ವಾಗುತ್ತಿದೆ: ಬರಗೂರು ರಾಮಚಂದ್ರಪ್ಪ ಟೀಕೆ Janashakthi Media

Donate Janashakthi Media

Leave a Reply

Your email address will not be published. Required fields are marked *