ನವದೆಹಲಿ: ಪ್ರಸಿದ್ಧ ಐಟಿ ಕಂಪನಿಯೊಂದು ವಿಶ್ವಾದ್ಯಂತ ಒಮ್ಮೆಲೇ ಬರೋಬ್ಬರಿ 30,000 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಮೊದಲಿಗೆ ಆ ಕಂಪನಿಯ ಸಿಬ್ಬಂದಿಗಳು ಇದೊಂದು ಏಪ್ರಿಲ್ ಫೂಲ್ ಅಂತ ಅಂದುಕೊಂಡಿದ್ದರು, ಆದರೆ ನಂತರ ಫೋನ್ ರಿಂಗ್ ಆಗಿದ್ದೂ, ಆ ಕಡೆಯಿಂದ ಮಾತನಾಡೋದನ್ನು ಕೇಳಿ ಈ ಉದ್ಯೋಗಿಗಳೆಲ್ಲ ಶಾಕ್‌ಗೆ ಒಳಗಾಗಿದ್ದಾರೆ. ಒರಾಕಲ್
ಇದರಿಂದ ಭಾರತದಲ್ಲಿ ಒಟ್ಟು 12 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ ಕೆಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪ್ರಸಿದ್ಧ ಐಟಿ ಕಂಪನಿಯೊಂದು ಈ ರೀತಿ ಕೆಲಸ ಕಡಿತಗೊಳಿಸಿದ ನಂತರ, ಐಟಿ ವಲಯದಲ್ಲಿ ಸಾಕಷ್ಟು ಕೋಲಾಹಲ ಉಂಟಾಗಿದೆ. ಈಗಾಗಲೇ ಉದ್ಯೋಗ ಸಿಗದ ಉದ್ಯೋಗಿಗಳ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ, ಕಂಪನಿಯು ಒಂದೇ ಬಾರಿಗೆ ಅಷ್ಟೊಂದು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವುದು ಬಹಳ ಆಘಾತಕಾರಿ ಘಟನೆಯಾಗಿದೆ.
ಇದನ್ನೂ ಓದಿ: ಬೆಲೆ ಏರಿಕೆ ಯುದ್ಧ: ಕೇಂದ್ರ ವಿರುದ್ಧ ಡಿಕೆ ಶಿವಕುಮಾರ್ ಕಿಡಿ
ಏಪ್ರಿಲ್ 1ರ ಬೆಳಿಗ್ಗೆ ಭಾರತೀಯ ಐಟಿ ವಲಯಕ್ಕೆ ಕರಾಳ ಬುಧವಾರವಾಗಿದೆ. ವಿಶ್ವಪ್ರಸಿದ್ಧ ಕಂಪನಿಯಾದ ಒರಾಕಲ್, ವಿಶ್ವಾದ್ಯಂತ ತನ್ನ ಒಟ್ಟು ಉದ್ಯೋಗಿಗಳಲ್ಲಿ 18% ಜನರನ್ನು ಅಂದರೆ 30,000 ಉದ್ಯೋಗಿಗಳನ್ನು ಒಂದೇ ಬಾರಿಗೆ ಕೆಲಸದಿಂದ ತೆಗೆದುಹಾಕಿದೆ. ಆಘಾತಕಾರಿ ವಿಷಯವೆಂದರೆ ಈ ಬೃಹತ್ ಕಡಿತದಲ್ಲಿ ಭಾರತವು ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ದೇಶದಲ್ಲಿ ಸುಮಾರು 12,000 ಐಟಿ ವೃತ್ತಿಪರರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ.
ಬೆಳಿಗ್ಗೆ 6 ಗಂಟೆಗೆ ಬಂತು ಇಮೇಲ್!
ಈ ವಜಾಗೊಳಿಸುವ ಪ್ರಕ್ರಿಯೆಯು ತುಂಬಾ ಆಘಾತಕಾರಿ ಮತ್ತು ಹೃದಯವಿದ್ರಾವಕವಾಗಿತ್ತು. ಅನೇಕ ಉದ್ಯೋಗಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸುತ್ತಾ, ಬೆಳಿಗ್ಗೆ 5-6 ಗಂಟೆ ಸುಮಾರಿಗೆ ‘ಒರಾಕಲ್ ಲೀಡರ್‌ಶಿಪ್’ ನಿಂದ ಇಮೇಲ್ ಬಂದಿರುವುದಾಗಿ ಹೇಳಿದರು.
ಕಂಪನಿಗೆ 20 ವರ್ಷಗಳ ಕಾಲ ಸೇವೆ ನೀಡಿದವರನ್ನು ಸಹ ಯಾವುದೇ ಪೂರ್ವ ಸೂಚನೆ ಇಲ್ಲದೆ, ಸಣ್ಣ ಕೃತಜ್ಞತೆಯೂ ಇಲ್ಲದೆ ‘ನಿಮ್ಮ ಸ್ಥಾನವು ಈಗ ಕಂಪನಿಯಲ್ಲಿ ಅನಗತ್ಯವಾಗಿದೆ’ ಎಂದು ಹೇಳಿದೆ.
ಇಮೇಲ್ ದ ನಂತರ ನೌಕರರು ಚೇತರಿಸಿಕೊಂಡು ಅವರ ಲ್ಯಾಪ್‌ಟಾಪ್‌ನಲ್ಲಿ ಲಾಗಿನ್ ಆಗಲು ಕೂಡ ಸಾಧ್ಯವಾಗಿಲ್ಲ, ಅವರೆಲ್ಲರಿಗೆ ಇದ್ದ ಆಕ್ಸೆಸ್ ಅನ್ನು ರಿಮೂವ್ ಮಾಡಲಾಗಿತ್ತು.
12,000 ಜನರ ಉದ್ಯೋಗ ಲಾಸ್!
ಒರಾಕಲ್ ಭಾರತದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ ಸುಮಾರು 40% ಅಥವಾ 12,000 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಬ್ಲೈಂಡ್ ಮತ್ತು ರೆಡ್ಡಿಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿನ ಉದ್ಯೋಗಿ ಖಾತೆಗಳ ಪ್ರಕಾರ, ಅನೇಕ ತಂಡಗಳಲ್ಲಿನ 50%ಗೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಒಬ್ಬ ವ್ಯವಸ್ಥಾಪಕರ ಪ್ರಕಾರ, ‘ನನ್ನ 20 ಜನರ ತಂಡದಲ್ಲಿ ಆರು ಜನರಿಗೆ ಇಂದು ಬೆಳಿಗ್ಗೆ ಇಮೇಲ್ ಬಂದಿದೆ’ ಎಂದು ತಿಳಿದು ಬಂದಿದೆ.
AI ನಿಂದಾಗಿ ಉದ್ಯೋಗ ನಷ್ಟದ ಬಗ್ಗೆ ಚರ್ಚೆ
ಒರಾಕಲ್ ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ, ತಜ್ಞರ ಪ್ರಕಾರ, ಕಂಪನಿಯು AI ನಲ್ಲಿ ಹೂಡಿಕೆ ಮಾಡಲು ಮಾನವ ಸಂಪನ್ಮೂಲದಲ್ಲಿ ಗಮನಾರ್ಹ ಕಡಿತವನ್ನು ಮಾಡುತ್ತಿದೆ. ಅಮೆಜಾನ್ ಮತ್ತು ಇತರ ಟೆಕ್ ಕಂಪನಿಗಳು ಸಹ ಇದೇ ರೀತಿಯಲ್ಲಿ ಸಿಬ್ಬಂದಿಯನ್ನು ಕಡಿತಗೊಳಿಸಿವೆ, ಆದರೆ ಒರಾಕಲ್ ಅದನ್ನು ಮಾಡಿದ ವೇಗ ಮತ್ತು ವಿಧಾನವು ಐಟಿ ವಲಯವನ್ನು ಆಘಾತಗೊಳಿಸಿದೆ.
ಇದನ್ನೂ ನೋಡಿ: ಉನ್ನತ ಶಿಕ್ಷಣ ‘ಉದ್ಯಮ’ವಾಗುತ್ತಿದೆ: ಬರಗೂರು ರಾಮಚಂದ್ರಪ್ಪ ಟೀಕೆ Janashakthi Media
