ನವದೆಹಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಕಾಫಿ ಬೆಲೆಯಲ್ಲಿ ಗಣನೀಯ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ, ಮಾರುಕಟ್ಟೆ ಸ್ಥಿರತೆಗಾಗಿ ಕೇಂದ್ರ ಸರ್ಕಾರ ಮತ್ತು ಕಾಫಿ ಮಂಡಳಿಯ ತಕ್ಷಣದ ಮಧ್ಯಪ್ರವೇಶ ಅಗತ್ಯವಿದೆ ಎಂದು ಕಾಫಿ ಬೆಳೆಗಾರರ ಒಕ್ಕೂಟ (CFFI) ಆಗ್ರಹಿಸಿದೆ. ಕಾಫಿ
ಈ ಕುರಿತು ಅಖಿಲ ಭಾರತ ಅಧ್ಯಕ್ಷ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಪ್ರಸಾದ್ ಜಂಟಿ ಹೇಳಿಕೆ ನೀಡಿದ್ದು, ರೋಬಸ್ಟಾ ಕಾಫಿಗೆ ಕನಿಷ್ಠ ಪ್ರತಿ ಕೆಜಿಗೆ ₹250 ಹಾಗೂ ಅರೆಬಿಕಾ ಡ್ರೈ ಚೆರ್ರಿಗೆ ₹300 ಬೆಲೆ ನಿಗದಿಪಡಿಸಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಲೆ ದತ್ತಾಂಶಗಳ ಪ್ರಕಾರ, 2025ರ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ರೋಬಸ್ಟಾ ಚೆರ್ರಿ ಕಾಫಿ ಬೆಲೆ ₹260-₹280 ಇದ್ದು, ಪ್ರಸ್ತುತ ₹180-₹205ರ ಮಟ್ಟಕ್ಕೆ ಕುಸಿದಿದೆ. ಅದೇ ರೀತಿ, ಅರೆಬಿಕಾ ಚೆರ್ರಿ ಬೆಲೆ ₹300ರಿಂದ ₹260ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿದ್ದರಿಂದ ರೈತರು ಸಾಲ ಪಡೆದು ತೋಟಗಳಿಗೆ ಹೆಚ್ಚಿನ ಹೂಡಿಕೆ ಮಾಡಿದ್ದರು. ಆದರೆ ಈಗಿನ ಕುಸಿತದಿಂದ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ
ಇದನ್ನೂ ಓದಿ : ಕೇರಳ ಚುನಾವಣೆ | ಎಲ್‌ಡಿಎಫ್ ವಿರೋಧಿ ಅಲೇ ಇದೆಯೇ? ಯುಡಿಎಫ್ ಸೋತರೆ ಏನಾಗಬಹುದು? ಬಿಜೆಪಿ ಲೆಕ್ಕಾಚಾರ ಏನಿದೆ? ಕಾಫಿ
ಜಾಗತಿಕ ರಾಜಕೀಯ ಅಶಾಂತಿಯೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಸಾಗಣೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಸುಮಾರು 300 ಕಂಟೈನರ್ ಭಾರತೀಯ ಕಾಫಿ ಬಂದರುಗಳಲ್ಲಿ ಬಾಕಿಯಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಸಾಗಣೆ ನಿಧಾನಗೊಂಡಿದ್ದು, ವಿಮೆ ಮತ್ತು ಸರಕು ಸಾಗಣೆ ವೆಚ್ಚಗಳು ಹೆಚ್ಚಿವೆ. ಕೆಲವು ಯುರೋಪಿಯನ್ ಖರೀದಿದಾರರು ‘ಕೇಪ್ ಆಫ್ ಗುಡ್ ಹೋಪ್’ ಮಾರ್ಗವನ್ನು ಬಳಸುತ್ತಿರುವುದು ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ. ಕಾಫಿ
ಈ ಪರಿಸ್ಥಿತಿಯಿಂದ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆ ಕುಂಠಿತಗೊಂಡಿದ್ದು, ರೈತರಿಂದ ಕಾಫಿ ಖರೀದಿ ಬಹುತೇಕ ಸ್ಥಗಿತಗೊಂಡಿದೆ. ಅರಕು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸರ್ಕಾರಿ ಏಜೆನ್ಸಿಗಳಾದ GCC ಮತ್ತು ITDA ಕೂಡ ಖರೀದಿ ನಿಲ್ಲಿಸಿರುವುದರಿಂದ ಆದಿವಾಸಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾಫಿ ವಲಯದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಹೆಚ್ಚುತ್ತಿರುವುದು ರೈತರ ಶೋಷಣೆಗೆ ಕಾರಣವಾಗುತ್ತಿದೆ ಎಂದು CFFI ಆರೋಪಿಸಿದೆ. ರೈತರು ಉತ್ಪಾದನೆದಿಂದ ಮಾರುಕಟ್ಟೆವರೆಗೆ ಎಲ್ಲಾ ಹಂತಗಳಲ್ಲಿ ಭಾಗಿಯಾಗುವಂತೆ ಬಲವಾದ ಸಹಕಾರಿ ವ್ಯವಸ್ಥೆಯನ್ನು ರೂಪಿಸಬೇಕೆಂದು ಒತ್ತಾಯಿಸಿದೆ.
ಸಂಸದೀಯ ಉಪಸಮಿತಿಯ ‘ನೂರ ಎರಡನೇ ವರದಿ’ಯಲ್ಲಿ ಶಿಫಾರಸು ಮಾಡಿದ ರೈತ ಸಹಕಾರ ಸಂಘಗಳ ರಚನೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಮನವಿ ಮಾಡಿದೆ. ಈ ಮಹತ್ವದ ವರದಿಯನ್ನು ಯುಪಿಎ-2 ಹಾಗೂ ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಗಳು ಅನುಷ್ಠಾನಗೊಳಿಸದಿರುವುದು ವಿಷಾದನೀಯ ಎಂದು CFFI ತಿಳಿಸಿದೆ. ಕಾಫಿ
ಇದನ್ನೂ ನೋಡಿ : ಬಿಜೆಪಿ–ಸಂಘಪರಿವಾರದಿಂದ ಇತಿಹಾಸ ವಿರೂಪಗೊಳಿಸುವ ಪ್ರಯತ್ನ – ಪ್ರಿಯಾಂಕ್ ಖರ್ಗೆ Janashakthi Media ಕಾಫಿ
