ಬೆಂಗಳೂರು: ದ್ವಿತೀಯ ವಾಟಿಕನ್ ಕೌನ್ಸಿಲ್ ನೀಡಿದ ಮಾರ್ಗದರ್ಶನದ ಪ್ರಕಾರ ಚರ್ಚ್‌ಗಳಲ್ಲಿ ಸ್ಥಳೀಯ ಭಾಷೆ ಕನ್ನಡದಲ್ಲಿ ಪೂಜೆ ನಡೆಸಬೇಕೆಂದು ಆಗ್ರಹಿಸಿ ಮಾರ್ಚ್ 28ಕ್ಕೆ ನಗರದ ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ ಕ್ರೈಸ್ತರ ಕನ್ನಡ ಸಂಘವು ಹೋರಾಟವನ್ನು ಹಮ್ಮಿಕೊಂಡಿದೆ.
ಮಾರ್ಚ್ 24ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ದಶಕಗಳಾದರೂ ಕನ್ನಡದಲ್ಲಿ ನಿಯಮಿತ ಮತ್ತು ಗೌರವಪೂರ್ಣ ಪೂಜೆಗಳು ನಡೆಯುತ್ತಿಲ್ಲ. ಕರ್ನಾಟಕ ಚರ್ಚ್ಗಳಲ್ಲಿ ಕನ್ನಡವನ್ನು ಸಾಮಾನ್ಯ ವರ್ಣಾಕ್ಯುಲರ್ ಪ್ರಾಂತೀಯ ಭಾಷೆಯಾಗಿ ಪರಿಗಣಿಸಿ ನಿಯಮಿತವಾಗಿ ಕನ್ನಡ ಪೂಜೆಗಳನನ್ನು ನಡೆಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಸಾಮ್ರಾಜ್ಯಶಾಹಿ ಮತ್ತು ಕಾರ್ಮಿಕ ವರ್ಗ: ಇರಾನ್ ದಾಳಿ ಮತ್ತು ದತ್ತಾಂಶದ ಶಸ್ತ್ರಾಸ್ತ್ರೀಕರಣ
ಸೆಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನಾರಿಯ ಆಡಳಿತದ ವಿಷಯಕ್ಕೆ ಸಂಬಂಧಿಸಿದಂತೆ, 1929ರಲ್ಲಿ ಮೈಸೂರ ಮಹರಾಜರು ಅನುದಾನವಾಗಿ ನೀಡಿದ ಜಮೀನಿನಲ್ಲಿ, ಕರ್ನಾಟಕದಲ್ಲಿರುವ ಸಂಸ್ಥೆಯ ಆಡಳಿತವನ್ನು ತಮಿಳುನಾಡು ಬಿಷಪ್‌ಗಳು ನಿರ್ವಹಿಸುತ್ತಿರುವುದು ನ್ಯಾಯಸಮ್ಮತವಲ್ಲ, ಅದನ್ನು ಕರ್ನಾಟಕದ ಬಿಷಪ್‌ಗಳಿಗೆ ಹಸ್ತಾಂತರಿಸಬೇಕು. ರಾಜ್ಯದ ಜನರು ತಮ್ಮ ನೆಲದ ಮೇಲೆ ಇರುವ ಸಂಸ್ಥೆಯ ಮೇಲಿನ ಹೊರಗಿನ ನಿಯಂತ್ರಣವನ್ನು ಇನ್ನು ಮುಂದೆ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಲವು ದಶಕಗಳಿಂದ ಕನ್ನಡೇತರ ಗುಂಪುಗಳ ಬಿಷಪ್‌ಗಳು ಕರ್ನಾಟಕದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಕನ್ನಡ ಭಾಷೆ, ಸಂಸ್ಕೃತಿ, ಪಾದ್ರಿಗಳನ್ನು ಕಡೆಗಣಿಸಿದ್ದಾರೆ. ಆದುದರಿಂದ ಕರ್ನಾಟಕದ ಧರ್ಮಪ್ರಾಂತಗಳಲ್ಲಿ ಕನ್ನಡ ಪಾದ್ರಿಗಳನ್ನು ಬಿಷಪ್‌ಗಳಾಗಿ ನೇಮಕ ಮಾಡಬೇಕು ಮತ್ತು ಸ್ಥಳೀಯ ಪರಿಸ್ಥಿತಿಯನ್ನು ಅರಿತ ನಾಯಕತ್ವಕ್ಕೆ ಆದ್ಯತೆ ನೀಡಬೇಕು ಎಂದು ಐಸಾಕ್ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: “ಕರ್ನಾಟಕದಲ್ಲಿ SIR: ಬೂತ್ ಮಟ್ಟದ ಜಾಗೃತಿ – ವಂಚನೆ ತಡೆಯುವ ಹೊಣೆ ಯಾರದ್ದು?” Janashakthi Media
