ಮದ್ದೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಮಾಜಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕೋಮುದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಮದ್ದೂರು ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ವಿವಿಧ ಹಿಂದುತ್ವಪರ ಸಂಘಟನೆಗಳು ಮದ್ದೂರು ಪಟ್ಟಣದಲ್ಲಿ ‘ಬಲಿದಾನ ದಿವಸ್’ ಅಂಗವಾಗಿ ಮಾರ್ಚ್ 23ರಂದು ಆಯೋಜಿಸಿದ್ದ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಇಬ್ಬರೂ ಭಾಷಣ ಮಾಡಿದ್ದರು.
ಇದನ್ನೂ ಓದಿ: ಹೈದರಾಬಾದ್| ಅಕ್ರಮ ಹಣ ವರ್ಗಾವಣೆ; 32 ಮಂದಿ ಬಂಧನ
ಮದ್ದೂರಿನ್ಲಲಿ ಆರು ತಿಂಗಳ ಹಿಂದೆ ನಡೆದ ಕೋಮುಗಲಭೆ ಸಂದರ್ಭದಲ್ಲೂ ಪಟ್ಟಣಕ್ಕೆ ಬಂದು ಭಾಷಣ ಮಾಡಿದ್ದ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕೋಮುದ್ವೇಷ ಭಾಷಣ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ನೋಡಿ: ಬಜೆಟ್ ನಿರ್ಲಕ್ಷ್ಯ: ಅಂಗನವಾಡಿ ನೌಕರರ ಅನಿರ್ದಿಷ್ಟ ಧರಣಿ Janashakthi Media
