ಹೈದರಾಬಾದ್: ವಿಹಾನ್ ಡೈರೆಕ್ಟ್ ಸೇಲಿಂಗ್ ಪ್ರೈವೆಟ್ ಲಿಮಿಟೆಡ್ ಕಂಪನಿ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವನ್ನು ಹೈದಾರಾಬಾದ್ ಪೊಲೀಸರು ಭೇದಿಸಿದ್ದೂ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಒಟ್ಟು 32 ಮಂದಿಯನ್ನು ಬಂಧಿಸಲಾಗಿದೆ.
‘30 ತಂಡಗಳು ಏಕಕಾಲದಲ್ಲಿ ಅಂತರರಾಜ್ಯಗಳಲ್ಲಿ ಶೋಧ ನಡೆಸಿದ್ದವು’ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಪೂರೈಕೆ ವಿವಾದ: ಹೋಟೆಲ್ ಅರ್ಜಿ ಹೈಕೋರ್ಟ್ ವಜಾ
‘ಬಹುತೇಕ ಆರೋಪಿಗಳು ಐಟಿ ಉದ್ಯೋಗಿಗಳು. ನಾಲ್ಕು ಪ್ರಕರಣಗಳಲ್ಲಿ ವಂಚನೆಗೆ ಒಳಗಾದ 11 ಮಂದಿಯ ವಿಚಾರಣೆ ನಡೆಸಿದ್ದು, ಅವರು ಸುಮಾರು ₹75 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡಿರುವ ಇನ್ನೂ ಅನೇಕರ ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: “ಯುಗಾದಿ: ಕಾವ್ಯದಲ್ಲಿ ಮೂಡುವ ಜೀವನದ ನಂಟು” Janashakthi Media
