ಎಸ್. ಐ.ಆರ್: ‘ಭಾರತ’ ಎಂಬ ಭಾವಕ್ಕೆ ಅತ್ಯಂತ ಗಂಭೀರವಾದ ಬೆದರಿಕೆ

‘ಭಾರತ’ ಎಂಬ ಭಾವದ ಒಂದು ಅತ್ಯಗತ್ಯ ಅಂಶವಾಗಿರುವ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವಂತಹ ಚುನಾವಣಾ ಪ್ರಜಾಪ್ರಭುತ್ವವು ಉಳಿಯಬಹುದೇ ಎಂಬುದು ಇಂದಿನ ಪ್ರಶ್ನೆ. ಅಮಿತ್ ಷಾ ಅವರ ಕಲ್ಪನೆಯನ್ನು ಅನುಸರಿಸುವ ಅಸಹ್ಯಕರ ಪ್ರಯತ್ನದಲ್ಲಿ, ಚುನಾವಣಾ ಆಯೋಗವು ಸಾಂವಿಧಾನಿಕ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿ ಬಿಟ್ಟಿದೆ. ಪ್ರಜಾಪ್ರಭುತ್ವವನ್ನು ಬಯಸುವ ಎಲ್ಲಾ ಜನರು, ವಿಶೇಷವಾಗಿ ದೇಶದ ಎಡಪಂಥೀಯ ಶಕ್ತಿಗಳು, ಸಾರ್ವತ್ರಿಕ ವಯಸ್ಕ ಮತದಾನದ ಮತ್ತು ಚುನಾವಣಾ ಪ್ರಜಾಪ್ರಭುತ್ವದ ಮೂಲ ಆಧಾರತತ್ವವನ್ನು ಮತ್ತು ಚುನಾವಣಾ ಪ್ರಜಾಪ್ರಭುತ್ವವನ್ನು ರಕ್ಷಿಸಲು ದೃಢವಾಗಿ ನಿಲ್ಲಬೇಕು ಮತ್ತು ಯಾವುದೇ ನ್ಯಾಯಬದ್ಧ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಬೇಕು.

– ನೀಲೋತ್ಪಲ ಬಸು

– ಸಂಪಾದಕರು,‘ಪೀಪಲ್ಸ್ ಡೆಮಾಕ್ರಸಿವಾರಪತ್ರಿಕೆ

‘ಭಾರತ’ ಎಂಬ ಭಾವ ಸಾವರ್ಕರ್ ಅವರ ಹಿಂದುತ್ವದ ಸಿದ್ಧಾಂತವು ನೇಯ್ದ ಕಪೋಲಕಲ್ಪಿತ ಕಥೆಯಲ್ಲಿ ಬೆಸೆದದ್ದು ಅಲ್ಲ. ಅದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಉಚ್ಛಾಟನೆ ಮಾಡಲು ನಡೆದ ರಾಷ್ಟ್ರೀಯ ಸ್ವಾತಂತ್ರ‍್ಯ ಹೋರಾಟದಲ್ಲಿ ಚೆಲ್ಲಿದ ರಕ್ತ ಮತ್ತು ಸುರಿದ ಬೆವರಿನ ಮೂಲಕ ರೂಪುಗೊಂಡಿತು. ಆದ್ದರಿಂದಲೇ, ಆ ವಿಚಾರವು ಬೇರೆಯದೇ ಕಾರ್ಯಯೋಜನೆಯನ್ನು ಮುಂದಿಟ್ಟಿತು; ಅದು 1950 ಜನವರಿ 26ರಂದು ವಿಧಿವತ್ತಾಗಿ ಅಂಗೀಕರಿಸಿದ ಸಂವಿಧಾನದ ಆಧಾರ ಸ್ತಂಭಗಳಿಗೆ ಕಾಣಿಕೆ ನೀಡಿತು.

ಆ ಆಧಾರಭೂತ ಅಂಶಗಳು ಯಾವುವು? ಆರ್ಥಿಕ ಮತ್ತು ರಾಜಕೀಯ ಸಾರ್ವಭೌಮತೆಯು ಹಾಗೂ ವಸಾಹತುಶಾಹಿಯಿಂದ ಮುಕ್ತವಾಗುವತ್ತ ಪಯಣವು ಸ್ವಾತಂತ್ರ‍್ಯ ಹೋರಾಟದ ಸಹಜ ಮುಂದುವರಿಕೆಯಾಗಿತ್ತು. ಜನರು ತಾವು ಆರಿಸಿಕೊಂಡ ನಂಬಿಕೆಯನ್ನು ಅನುಸರಿಸಲು ಹೊಂದಿರುವ ಸ್ವಾತಂತ್ರ‍್ಯ ಮತ್ತು ಸಮಾನತೆಗೆ ಮನ್ನಣೆ ನೀಡಲು ಅದು ಜಾತ್ಯಾತೀತವಾಗಿರಬೇಕಾಗಿತ್ತು, ಯಾವುದೇ ಧರ್ಮವನ್ನು ಮೆಚ್ಚಿಸಲು ಅಥವಾ ತುಷ್ಟೀಕರಿಸಲ ಅಲ್ಲ. ದುರ್ಬಲರು ಮತ್ತು ಶಕ್ತಿಶಾಲಿಗಳ ನಡುವೆ ಇರುವ ಭಾರಿ ಕಂದರವನ್ನು, ಹಾಗೂ ಸಂಪತ್ತು ಮತ್ತು ಅವಕಾಶಗಳ ಅಸಮಾನತೆಯನ್ನು ತೊಡೆದು ಹಾಕಲು ಅದು ಪ್ರಜಾಸತ್ತಾತ್ಮಕವಾಗಿರಬೇಕಾಗಿತ್ತು. ಅನೇಕ ರಾಷ್ಟ್ರೀಯತೆಗಳು, ಸಂಸ್ಕೃತಿಗಳು, ಭಾಷೆಗಳು, ಆಹಾರ ಪದ್ಧತಿಗಳು ಮತ್ತು ರೂಪಗಳ ಅಪಾರ ವೈವಿಧ್ಯತೆಯನ್ನು ಕಾಪಾಡಲು ಅದು ಒಕ್ಕೂಟ ತತ್ವವನ್ನು ಅಂಗೀಕರಿಸಬೇಕಾಗಿತ್ತು; ಈ ವೈವಿಧ್ಯತೆಯನ್ನು ಹಿಂದುತ್ವ ಪ್ರತಿಪಾದಿಸಿದ ಏಕ ಆಯಾಮದ, ಏಕಧ್ರುವದ ಸೀಮಿತ ಚೌಕಟ್ಟಿನೊಳಗೆ ತುರುಕಿಸುವ ಮೂಲಕ ನಿಭಾಯಿಸುವುದು ಮತ್ತು ಪರಿಹರಿಸುವುದು ಸಾಧ್ಯವಿರಲಿಲ್ಲ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: 74 ಪ್ರಕರಣಗಳ ಸಂಪೂರ್ಣ ವರದಿ ಸಲ್ಲಿಸಲು ಹೈಕೋರ್ಟ್ ಆದೇಶ

ಆರ್ಥಿಕ ಮತ್ತು ರಾಜಕೀಯ ಸಾರ್ವಭೌಮತೆಯು ಹಾಗೂ ವಸಾಹತುಶಾಹಿಯಿಂದ ಮುಕ್ತವಾಗುವತ್ತ ಪಯಣವು ಸ್ವಾತಂತ್ರ‍್ಯ ಹೋರಾಟದ ಸಹಜ ಮುಂದುವರಿಕೆಯಾಗಿತ್ತು.  ಅದನ್ನು ಹಿಂದುತ್ವ ಪ್ರತಿಪಾದಿಸಿದ ಏಕ ಆಯಾಮದ, ಏಕಧ್ರುವದ ಸೀಮಿತ ಚೌಕಟ್ಟಿನೊಳಗೆ ತುರುಕಿಸುವ ಮೂಲಕ ನಿಭಾಯಿಸುವುದು ಮತ್ತು ಪರಿಹರಿಸುವುದು ಸಾಧ್ಯವಿರಲಿಲ್ಲ.

ಸಂವಿಧಾನವು ಮುಂದೆ ಸ್ಥಾಪಿಸಿದ ‘ಭಾರತ’ ಎಂಬ ಭಾವವು ಸಹಜವಾಗಿಯೆ ನವ-ಫ್ಯಾಸಿಸ್ಟ್ ಕಾರ್ಯಯೋಜನೆಯನ್ನು ಅನುಸರಿಸಲು ಸಾಧ್ಯವಿರಲಿಲ್ಲ ಎಂಬುದು ಸ್ಪಷ್ಟ. ಈ ‘ಭಾರತ’ ಎಂಬ ಭಾವ ಒಂದು ಸರ್ವಸಾಮಾನ್ಯ ಮತ್ತು ಸಮಾನ ಪೌರತ್ವ ಹೊಂದಿರುವ ವಿಭಿನ್ನ ಜನಗಳು ಎಂಬ ತತ್ವದ ಮೇಲೆ ನಿಂತಿದೆ.

ಇದನ್ನನುಸರಿಸಿ ಇಂತಹ ಒಂದು ‘ಭಾರತ’, ಎಲ್ಲರಿಗೂ ಸಮಾನವಾಗಿ ಸೇರಿದ್ದು ಎಂಬ ಭಾವನೆ ಇರಲು ಸಾರ್ವತ್ರಿಕ ವಯಸ್ಕ ಮತಾಧಿಕಾರದ ತತ್ವದ ಮೇಲೆ ನಿಂತಿರಲೇ ಬೇಕಾಗಿತ್ತು. ಒಂದು ರಾಷ್ಟ್ರಭಾಷೆ ಅಥವಾ ರಾಷ್ಟ್ರೀಯ ಧರ್ಮ ಎಂಬ ಕಲ್ಪನೆ ಸಂವಿಧಾನ ಕಂಡರಿಸಿದ್ದ ವಿಚಾರಕ್ಕೆ  ಹೊರತಾಗಿತ್ತು.

ಚುನಾವಣಾ ಆಯೋಗದ ಬಾಧ್ಯತೆ

ಪಾಶ್ಚಾತ್ಯ ಪ್ರಜಾಪ್ರಭುತ್ವಗಳಲ್ಲಿನ ಪರಿಕಲ್ಪನೆಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಸಾರ್ವತ್ರಿಕ ವಯಸ್ಕ ಮತಾಧಿಕಾರ ಮತ್ತು ಚುನಾವಣಾ ಪ್ರಜಾಪ್ರಭುತ್ವವನ್ನು ಅನುಸರಿಸಬೇಕಾಗಿತ್ತು. ಇಲ್ಲದಿದ್ದರೆ ಒಂದು ಸರ್ವಸಾಮಾನ್ಯವಾಗಿ ಹಂಚಿಕೊಂಡ ಸಾಮೂಹಿಕ ಅಸ್ತಿತ್ವದಲ್ಲಿ ಭಾರತದ ಐಕ್ಯತೆ ಅಪಾಯಕ್ಕೆ ಒಳಗಾಗಬಹುದಿತ್ತು. ಈ ಕಾರ್ಯಸಾಧ್ಯ ಪ್ರಮೇಯದ ಕೇಂದ್ರಬಿಂದು ಒಂದು ಬಲಿಷ್ಠವಾಗಿ ಹಾಗೂ ಸಂವಿಧಾನಾತ್ಮಕವಾಗಿ ಅಧಿಕಾರ ಪಡೆದ ಪ್ರಾತಿನಿಧಿಕ ಪ್ರಜಾಪ್ರಭುತ್ವವನ್ನು ಖಚಿತಪಡಿಸುವ ಮತ್ತು ಅದರ ಮೇಲ್ವಿಚಾರಣೆ ಮಾಡುವ ಭಾರತದ ಚುನಾವಣಾ ಆಯೋಗ (ಇಸಿಐ) ಆಗಿತ್ತು.

ಎಲ್ಲಾ ನ್ಯಾಯಬದ್ಧ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಚುನಾವಣಾ ಆಯೋಗದ ಬಾಧ್ಯತೆಯೇ ಹೊರತು, ಕೃಪೆಯಲ್ಲ ಎಂಬುದೂ ಅಷ್ಟೇ ಸ್ಪಷ್ಟ. ಆದ್ದರಿಂದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಚುನಾವಣಾ ಆಯೋಗಕ್ಕೇ ಸೇರಿದ್ದೇ ಹೊರತು ವೈಯಕ್ತಿಕವಾಗಿ ನಾಗರಿಕರಿಗಲ್ಲ.

‘ಭಾರತ’ ಎಂಬ ಭಾವವನ್ನು ಅನುಸರಿಸುವುದು ಸಂವಿಧಾನವು ಚುನಾವಣಾ ಆಯೋಗಕ್ಕೆ ನೀಡಿದ ಪ್ರಧಾನ ಕಾರ್ಯಭಾರವಾಗಿದೆ. ಈ ಆಧಾರತತ್ವದ ಮೇಲೆ ಚುನಾವಣಾ ಆಯೋಗದ ವಿಕಾಸಕ್ಕೆ ದೇಶದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಮನ್ನಣೆ ದೊರೆತಿದೆ.

ಬೆದರಿಕೆಯ ಮೂಲಸೆಲೆ

ದುರದೃಷ್ಟವಶಾತ್, ‘ಭಾರತ’ ಎಂಬ ಭಾವಕ್ಕೆ ಪ್ರಸಕ್ತ ಬೆದರಿಕೆ ಇಲ್ಲಿಂದಲೇ ಹೊಮ್ಮುತ್ತಿದೆ. ಈ ಬೆದರಿಕೆಯ ಮೂಲಸೆಲೆಯ ಬಗ್ಗೆ ಯಾವುದೇ ಸಂದೇಹವಿಲ್ಲ. ಅದು ನಾಗರಿಕರನ್ನು ಅವರ ಧಾರ್ಮಿಕ ಗುರುತಿನ ಆಧಾರದ ಮೇಲೆ ಭಿನ್ನಗೊಳಿಸುವ ಹಿಂದುತ್ವದ ವಿಚಾರ. ಜಾಗತೀಕರಣ ಮತ್ತು ವಿವಿಧ ದೇಶಗಳ ನಿರ್ದಿಷ್ಟ ನವ-ಉದಾರವಾದದ ಮಾದರಿಗಳಿಂದ ಹುಟ್ಟಿಕೊಂಡಿರುವ ಇಂದಿನ ಅತಿಬಲಪಂಥೀಯ ಸಿದ್ಧಾಂತಗಳಲ್ಲಿ ಕೆಲವರನ್ನು “ಅನ್ಯ” ರಾಗಿಸುವುದು ಈ ಹೊಸ ಕಾರ್ಯಯೋಜನೆಯ ಪ್ರಮುಖ ಅಂಶವಾಗಿದೆ. ಭಾರತದಲ್ಲಿ ಆರ್‌ಎಸ್‌ಎಸ್ ಹಾಗೆಯೇ ಡೊನಾಲ್ಡ್ ಟ್ರಂಪ್ ಅವರ ಐಸಿಇ (ವಲಸೆ ಮತ್ತು ಸೀಮಾ ಅನುಷ್ಠಾನ) ಏಜೆಂಟರು ಭಯ ಮತ್ತು ಅಸುರಕ್ಷಿತತೆಯ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಾರೆ. ವಾಸ್ತವದಲ್ಲಿ, ದೇಶದ ಆಂತರಿಕ ಭದ್ರತೆಯ ಹೊಣೆಗಾರಿಕೆಯನ್ನು ಹೊತ್ತಿರುವ, ತಾನು ಭಾರತದ ಕಲ್ಯಾಣದ ರಕ್ಷಕ ಎಂದು ಹೇಳಿಕೊಳ್ಳುವ ಅಮಿತ್ ಷಾ, ದೇಶವನ್ನು ಒಳಗಿಂದಲೇ ತಿಂದು ಹಾಕುತ್ತಿರುವ ಗೆದ್ದಲುಗಳು ಎಂದು ತಾನೇ ಹೇಳಿದ್ದ ತಥಾಕಥಿತ ನುಸುಳುಕೋರರನ್ನು ಗುರುತಿಸಲು ಕಿರುಬೆರಳನ್ನೂ ಎತ್ತಿಲ್ಲ.

ಹೀಗಾಗಿ ಯಾವುದೇ ಸಾಕ್ಷಿಯ ಲವಲೇಶವೂ ಇಲ್ಲದೆ “ನುಸುಳುಕೋರರು” ಎಂಬುದನ್ನು ಒಂದು ರಾಜಕೀಯ ಆಯುಧವನ್ನಾಗಿ ಮಾಡಲಾಗಿದ್ದು, ಈಗ ಅದು  ಚುನಾವಣಾ ಆಯೋಗದ ಕಾರ್ಯಯೋಜನೆಯನ್ನೂ ಹೊಕ್ಕಿದೆ. “ಗುರುತಿಸಿ, ಅಳಿಸಿ, ಹೊರಹಾಕಿ” ಎಂಬ ಕೂಗು ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಅಲಿಖಿತ ರಾಗವಾಗಿ ಬಿಟ್ಟಿದೆ, ‘’ಗೆದ್ದಲುಗಳು’ ಎಂಬ ಮಸಿ ಮೆತ್ತಿಸಲ್ಪಟ್ಟ ನಾಗರಿಕರ ಮತಾಧಿಕಾರವನ್ನು ಕಿತ್ತುಕೊಳ್ಳುವುದು ಇದರ ಉದ್ದೇಶ.

ಚಿತ್ರಕೃಪೆ: Reporters Collective
ಯಾವುದೇ ಸಾಕ್ಷಿಯ ಲವಲೇಶವೂ ಇಲ್ಲದೆ “ನುಸುಳುಕೋರರು” ಎಂಬುದನ್ನು ಒಂದು ರಾಜಕೀಯ ಆಯುಧವನ್ನಾಗಿ ಮಾಡಲಾಗಿದ್ದು, ಈಗ ಅದು  ಚುನಾವಣಾ ಆಯೋಗದ ಕಾರ್ಯಯೋಜನೆಯನ್ನೂ ಹೊಕ್ಕಿದೆ. “ಗುರುತಿಸಿ, ಅಳಿಸಿ, ಹೊರಹಾಕಿ” ಎಂಬ ಕೂಗು ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಅಲಿಖಿತ ರಾಗವಾಗಿ ಬಿಟ್ಟಿದೆ, ‘’ಗೆದ್ದಲುಗಳು’ ಎಂಬ ಮಸಿ ಮೆತ್ತಿಸಲ್ಪಟ್ಟ ನಾಗರಿಕರ ಮತಾಧಿಕಾರವನ್ನು ಕಿತ್ತುಕೊಳ್ಳುವುದು ಇದರ ಉದ್ದೇಶ.

ಆದರೆ ಬಿಹಾರದಲ್ಲಿ ಆರಂಭಗೊಂಡ ಹಾಗೂ ಇನ್ನೂ ಹನ್ನೆರಡು ರಾಜ್ಯಗಳಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯ ಅಂತಿಮ ಫಲಿತಾಂಶಗಳು ಇಂತಹ ನುಸುಳುಕೋರರು ಇರುವುದಕ್ಕೆ ಯಾವುದೇ ದೃಢವಾದ ಸಾಕ್ಷಿಯನ್ನು ಒದಗಿಸಿಲ್ಲ. ಬದಲಿಗೆ, ಈ ಅಸಹ್ಯಕರ ನಿಲುವಿನಿಂದ ಪೀಡಿತರಾಗಿರುವರು ಬಡವರು ಮತ್ತು ದುರ್ಬಲರು ಎಂದು ತೋರಿಸಿದೆ.

ಈ ಪ್ರಕ್ರಿಯೆಗೆ ನೀಡಿದ ಬಿಗಿ ಗಡುವು ಸಂಪೂರ್ಣವಾಗಿ ಅಸಮರ್ಥನೀಯ ಎನ್ನುವುದು ಈಗ ಸ್ಪಷ್ಟವಾಗಿದೆ. ಇದು ಮಾಡಿರುವ ಹಾವಳಿ ಎಲ್ಲರ ಕಣ್ಣ ಮುಂದಿದೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ.

ಪಶ್ಚಿಮ ಬಂಗಾಳವು ಒಂದು ಗಡಿರಾಜ್ಯವಾಗಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಇವರಲ್ಲಿ ಬಹುತೇಕರು ಅನೇಕ ಪೀಳಿಗೆಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಈ ಜನರನ್ನು ಮತಾಧಿಕಾರದಿಂದ ವಂಚಿಸಲು ಪ್ರಯತ್ನಿಸಲಾಗುತ್ತಿದೆ.

ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುವ ಮೊದಲು ಒಟ್ಟು ಮತದಾರರ ಸಂಖ್ಯೆ 7.66 ಕೋಟಿ ಇತ್ತು. ಕರಡು ಪಟ್ಟಿಯನ್ನು ಪ್ರಕಟಿಸಿದ ನಂತರ ಅದು 7.08 ಕೋಟಿಗೆ ಕುಸಿಯಿತು, ಏಕೆಂದರೆ ಉಳಿದವರನ್ನು 2002–03ರ ಮತದಾರರ ಪಟ್ಟಿಯೊಂದಿಗೆ ಹೊಂದಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಯಿತು. ಆದರೆ ಈ ಜೋಡಣೆ ಆಗಲಾರದವರೆಲ್ಲರೂ ದಾಖಲೆಗಳಿಲ್ಲದವರೋ ಅಥವಾ ನಾಗರಿಕರಲ್ಲದವರೋ ಎಂದೇನಲ್ಲ. ಆದರೆ ಎಸ್‌ಐಆರ್ ಅವರೆಲ್ಲರನ್ನೂ ಹಾಗೆಯೇ ಬಗೆದಿದೆ. ಪರಿಣಾಮವಾಗಿ ಅವರು ಮತಾಧಿಕಾರ ಕಳೆದುಕೊಂಡಿದ್ದಾರೆ.

ಆದರೆ ಇದೂ ಹಿಂದುತ್ವ ಮಂದಿಗೆ ಸಾಲಲಿಲ್ಲ. ಏಕೆಂದರೆ ಕಳೆದೆರಡು ದಶಕಗಳಿಂದ ಅವರು ಪ್ರಚಾರಮಾಡುತ್ತಿದ್ದ ಕಥನವನ್ನು ಸಾಬೀತುಪಡಿಸಲು ಅವರಿಗೆ ಆಗಲಿಲ್ಲ. ತದ್ವಿರುದ್ಧವಾಗಿ, ಈ ಬೆದರಿಕೆಯನ್ನು ಎದುರಿಸುತ್ತಿದ್ದ ಮತ್ತು ಹಿಂದುತ್ವ ಮಂದಿ ಮೂದಲಿಸುತ್ತಿದ್ದ ಮಂದಿಯೇ ತಮ್ಮ ಮತಾಧಿಕಾರವನ್ನು ಸಮರ್ಥಿಸುವ ದಾಖಲೆಗಳನ್ನು ಹೊಂದಿದವರಾಗಿದ್ದರು. ಆದ್ದರಿಂದ ಕರಡು ಪಟ್ಟಿಯು  ಹಿಂದುತ್ವ ಮಂದಿಯ ಹುಮ್ಮಸ್ಸನ್ನು ಕುಗ್ಗಿಸುವಂತದ್ದಾಯಿತು.

ಅಮಿತ್ ಷಾರ ಅನೌಪಚಾರಿಕ ಹಿಂಬಾಲಕ

ಅಪಾರ ಒತ್ತಡಕ್ಕೊಳಗಾದ ಚುನಾವಣಾಆಯೋಗ, ಅಮಿತ್ ಷಾರ ಅನೌಪಚಾರಿಕ ಹಿಂಬಾಲಕನಂತೆ ವರ್ತಿಸುತ್ತ “ತಾರ್ಕಿಕ ಅಸಾಂಗತ್ಯ” ಎಂಬ ಹೊಸ ತಂತ್ರವನ್ನು ರೂಪಿಸಿತು. ಇದು ಚುನಾವಣಾ ಕಾನೂನುಗಳಲ್ಲಿ ಅಥವಾ ನಿಯಮಗಳಲ್ಲಿ ಎಲ್ಲಿಯೂ ಇಲ್ಲ. ಹೆಸರುಗಳ ಅಕ್ಷರ ರೂಪದಲ್ಲಿ ಸಣ್ಣ ವ್ಯತ್ಯಾಸಗಳು, ತಂದೆ-ಮಕ್ಕಳ ವಯಸ್ಸಿನ ಅಂತರ ಮುಂತಾದ ಅಂಶಗಳನ್ನು ಕಾರಣವಾಗಿ ತೋರಿಸಲಾಯಿತು. ಇದು ಹಿಂಬಾಗಿಲಿನಿಂದ ಪೌರತ್ವದ ಕಲ್ಪನೆಯನ್ನು ತೂರಿಸುವ ಪ್ರಯತ್ನ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಇದರಿಂದ ಸುಮಾರು 60 ಲಕ್ಷ ಹೆಸರುಗಳು “ನ್ಯಾಯಪರಿಶೀಲನೆಯಲ್ಲಿವೆ” ಎಂದು ಹೇಳಲಾಗಿದೆ. ಇವರು ಬಹುತೇಕವಾಗಿ ದುರ್ಬಲರು, ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು.

ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯನ್ನು ಇನ್ನೂ ಮುಂದೂಡಲಾಗಿದೆ. ಸುಪ್ರೀಂ ಕೋರ್ಟ್ ಕೂಡ ಈ ಅಸಾಂಗತ್ಯಗಳನ್ನು ಪರಿಶೀಲಿಸಲು ಅಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಲು ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಬೇಕಾಗುತ್ತದೆ ಎಂದು ಅಭಿಪ್ರಾಯಪಡಬೇಕಾಯಿತು, ಇದು ಈ ನಡೆಯ ಸಾಂವಿಧಾನಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಆಗಲೂ, ಚುನಾವಣಾ ಆಯೋಗವು ಸರ್ವೋಚ್ಚ ನ್ಯಾಯಾಲಯದ ಮುಂದೆ ಅಫಿಡವಿಟ್ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎಂದು ಒಪ್ಪಿಕೊಳ್ಳಬೇಕಾಗಿ ಬಂತು.

ಪಶ್ಚಿಮ ಬಂಗಾಳದಲ್ಲಿ ರೂಪಿಸಿದ “ತಾರ್ಕಿಕ ಅಸಾಂಗತ್ಯ” ಎಂಬುದರಿಂದ ಸುಮಾರು 60 ಲಕ್ಷ ಹೆಸರುಗಳು “ನ್ಯಾಯಪರಿಶೀಲನೆಯಲ್ಲಿವೆ” ಎಂದು ಹೇಳಲಾಗಿದೆ. ಇವರು ಬಹುತೇಕವಾಗಿ ದುರ್ಬಲರು, ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು. ಸುಪ್ರೀಂ ಕೋರ್ಟ್ ಕೂಡ ಈ ಅಸಾಂಗತ್ಯಗಳನ್ನು ಪರಿಶೀಲಿಸಲು ಅಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಲು ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಬೇಕಾಗುತ್ತದೆ ಎಂದು ಅಭಿಪ್ರಾಯಪಡಬೇಕಾಯಿತು, ಇದು ಈ ನಡೆಯ ಸಾಂವಿಧಾನಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮತ್ತು ಒಂದು ಸಾಂವಿಧಾನಿಕ ಬಿಕ್ಕಟ್ಟನ್ನು ಒಡ್ಡುತ್ತಿದೆ.

ಇದು ಒಂದು ಸಾಂವಿಧಾನಿಕ ಬಿಕ್ಕಟ್ಟನ್ನು ಒಡ್ಡುತ್ತಿದೆ. ಹೊಸ ವಿಧಾನಸಭೆಯು ಮೇ 7, 2026 ರೊಳಗೆ ಅಸ್ತಿತ್ವಕ್ಕೆ ಬರಬೇಕು. ಆದರೆ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸದ ಹೊರತು, ಮೇ 6 ರ ಮೊದಲು ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಚುನಾವಣೆಗೆ ಅಧಿಸೂಚನೆ ನೀಡಲಾಗುವುದಿಲ್ಲ,

ಚುನಾವಣಾ ಆಯೋಗವು 60 ಲಕ್ಷ ಮತದಾರರನ್ನು “ನ್ಯಾಯಪರಿಶೀಲನೆ”ಯಲ್ಲಿಟ್ಟು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ಆಗುವುದಿಲ್ಲ. ಚುನಾವಣಾ ಆಯೋಗದ ಪ್ರಯತ್ನವು ಸ್ಪಷ್ಟವಾಗಿ ಸಿದ್ಧಾಂತ-ಚಾಲಿತವಾಗಿದೆ, ಅದು ವಿಧಿಸಿರುವ ಬೃಹತ್ ಕಿರುಕುಳದ ಬಗ್ಗೆಯಂತೂ ಹೇಳುವಂತೆಯೇ ಇಲ್ಲ.

ಇದನ್ನೂ ನೋಡಿ: “ಯುಗಾದಿ: ಕಾವ್ಯದಲ್ಲಿ ಮೂಡುವ ಜೀವನದ ನಂಟು” Janashakthi Media

ಆದ್ದರಿಂದ, ‘ಭಾರತ’ ಎಂಬ ಭಾವದ ಒಂದು ಅತ್ಯಗತ್ಯ ಅಂಶವಾಗಿರುವ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವಂತಹ ಚುನಾವಣಾ ಪ್ರಜಾಪ್ರಭುತ್ವವು ಉಳಿಯಬಹುದೇ ಎಂಬುದು ಇಂದಿನ ಪ್ರಶ್ನೆ. ಅಮಿತ್ ಷಾ ರವರ ಕಲ್ಪನೆಯನ್ನು ಅನುಸರಿಸುವ ಅಸಹ್ಯಕರ ಪ್ರಯತ್ನದಲ್ಲಿ, ಚುನಾವಣಾ ಆಯೋಗವು ಸಾಂವಿಧಾನಿಕ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿ ಬಿಟ್ಟಿದೆ.

ಪ್ರಜಾಪ್ರಭುತ್ವವನ್ನು ಬಯಸುವ ಎಲ್ಲಾ ಜನರು, ವಿಶೇಷವಾಗಿ ದೇಶದ ಎಡಪಂಥೀಯ ಶಕ್ತಿಗಳು, ಸಾರ್ವತ್ರಿಕ ವಯಸ್ಕ ಮತದಾನದ ಮತ್ತು ಚುನಾವಣಾ ಪ್ರಜಾಪ್ರಭುತ್ವದ ಮೂಲ ಆಧಾರತತ್ವವನ್ನು ಮತ್ತು ಚುನಾವಣಾ ಪ್ರಜಾಪ್ರಭುತ್ವವನ್ನು ರಕ್ಷಿಸಲು ದೃಢವಾಗಿ ನಿಲ್ಲಬೇಕು ಮತ್ತು ಯಾವುದೇ ನ್ಯಾಯಬದ್ಧ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಬೇಕು.

(ಕೃಪೆ: ಪೀಪಲ್ಸ್ ಡೆಮಾಕ್ರಸಿ, ಮಾರ್ಚ್ 15, 2026, ಅನು:ಕೆ.ವಿ.)

Donate Janashakthi Media

Leave a Reply

Your email address will not be published. Required fields are marked *