ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆ: ವಿಜಯ್ ಟಿವಿಕೆಗೆ ಬಿಜೆಪಿ ಭರ್ಜರಿ ಆಫರ್?

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ದೀರ್ಘಕಾಲದಿಂದ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸುತ್ತಿವೆ. ಕಾಂಗ್ರೆಸ್‌ ಪ್ರಭಾವ ಕುಗ್ಗಿದ ನಂತರ ರಾಜ್ಯ ರಾಜಕೀಯದಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳೇ ಪ್ರಮುಖ ಶಕ್ತಿಗಳಾಗಿ ಉಳಿದಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಕೂಡ ತನ್ನ ನೆಲೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ತಮಿಳುನಾಡು 

ಇದರ ನಡುವೆ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಉದಯ ತಮಿಳುನಾಡು ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಿತ್ತು. ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿ ಮಾತುಕತೆಗಳು ಕೇಳಿಬರುತ್ತಿದೆ. ಈ ಪೈಕಿ ಮಹತ್ವದ ಬೆಳವಣಿಗೆ ತಮಿಳನಾಡಿನಲ್ಲಿ ನಡೆದಿದೆ. ವಿಜಯ್ ಜೊಸೆಫ್ ಟಿವಿಕೆ ಪಕ್ಷಕ್ಕೆ ಬಿಜೆಪಿ ಭರ್ಜರಿ ಆಫರ್ ನೀಡಿದೆ ಎಂದು ವರದಿಯಾಗಿದೆ. ಮೈತ್ರಿ ಮಾಡಿಕೊಂಡರೆ ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಟಿವಿಕೆ ಪಕ್ಷಕ್ಕೆ 80 ಸ್ಥಾನ ನೀಡುವುದಾಗಿ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ. ತಮಿಳುನಾಡು 

ಬಿಜೆಪಿ ಆಫರ್ ಒಪ್ಪಿಕೊಂಡು ವಿಜಯ್ ಟಿವಿಕೆ ಪಕ್ಷ ಮೈತ್ರಿ ಮಾಡಿಕೊಂಡರೆ ತಮಿಳುನಾಡಿನಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಡಿಎಂಕೆಗೆ ತೀವ್ರ ಹೊಡೆತ ನೀಡುವ ಸಾಧ್ಯತೆ ಇದೆ. ಬಿಜೆಪಿಯ ಅಭಿವೃದ್ಧಿ ಅಜೆಂಡಾ, ವಿಜಯ್ ಜನಪ್ರಿಯತೆ ಹಾಗೂ ಹೊಸ ಭರವಸೆ ಡಿಎಂಕೆ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ತುಮಕೂರು | ಮುಟ್ಟಿನ ರಜೆ ಕುರಿತು ಸುಪ್ರೀಂ ಕೋರ್ಟ್ ಅವಲೋಕನದಲ್ಲಿ ದೋಷ: ಸಿಐಟಿಯು

ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ಆಸೆ

ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀಯದಲ್ಲಿ ಬದಲಾವಣೆಗೆ ಮುಂದಾಗಿರುವ ವಿಜಯ್, ತಮ್ಮ ಪಕ್ಷದ ಮೂಲಕ ಮುಖ್ಯಮಂತ್ರಿ ಸ್ಥಾನವನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಬಿಜೆಪಿ ಜೊತೆ ನಡೆಯುತ್ತಿರುವ ಮಾತುಕತೆಯಲ್ಲಿ ಕೂಡ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಮೈತ್ರಿ ಕುರಿತು ಚಿಂತನೆ ಮಾಡುವುದಾಗಿ ತಿಳಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಹಲವು ಮಾರ್ಗಗಳಿಂದ ವಿಜಯ್ ಹಾಗೂ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ತಮಿಳುನಾಡಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಂತ್ರ ರೂಪಿಸಲು ಬಿಜೆಪಿ ಮುಂದಾಗಿದೆ. ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಮೈತ್ರಿ ಅಗತ್ಯವೆಂಬುದನ್ನು ಮನಗಂಡು ಟಿವಿಕೆ ಜೊತೆ ಕೈಜೋಡಿಸಿ ವಿಧಾನಸಭೆ ಚುನಾವಣೆಯನ್ನು ಎದುರಿಸುವ ಲೆಕ್ಕಾಚಾರ ನಡೆಯುತ್ತಿದೆ ಎನ್ನಲಾಗುತ್ತಿದೆ.

ತಮಿಳುನಾಡಿನಲ್ಲಿ ಬಿಜೆಪಿ ಇನ್ನೂ ತನ್ನ ನೆಲೆಯನ್ನು ಬಲಪಡಿಸುವ ಹಂತದಲ್ಲಿದೆ. ಅಣ್ಣಾಮಲೈ ಎಂಬ ಯುವ ನಾಯಕತ್ವದಿಂದ ಪಕ್ಷಕ್ಕೆ ಕೆಲ ಮಟ್ಟಿನ ಬಲ ಬಂದಿದ್ದರೂ, ಈಗಿನ ಮೈತ್ರಿಯೊಂದಿಗೆ ಅಧಿಕಾರಕ್ಕೆ ಏರುವುದು ಸುಲಭವಲ್ಲ ಎಂಬುದು ಪಕ್ಷದ ಒಳಗೇ ಚರ್ಚೆಯಾಗುತ್ತಿದೆ. ಹೀಗಾಗಿ ವಿಜಯ್ ಜನಪ್ರಿಯತೆ ಮತ್ತು ಟಿವಿಕೆ ಪಕ್ಷದತ್ತ ಹರಿದು ಬರುತ್ತಿರುವ ಅಭಿಮಾನಿಗಳ ಬೆಂಬಲವನ್ನು ಮತಗಳಾಗಿ ಪರಿವರ್ತಿಸಿ ಎನ್‌ಡಿಎ ಪರವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಡಿಎಂಕೆ ಅಭ್ಯರ್ಥಿಗಳು ಅತಿ ಕಡಿಮೆ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಆದ್ದರಿಂದ ವಿಜಯ್ ಜೊತೆಗಿನ ಮೈತ್ರಿ ರಾಜ್ಯ ರಾಜಕೀಯ ಸಮೀಕರಣವನ್ನೇ ಬದಲಿಸಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ವಿಜಯ್ ಅಭಿಮಾನಿಗಳ ಪೈಕಿ ಕೇವಲ ಕೆಲವು ಶೇಕಡಾ ಮತಗಳು ಮೈತ್ರಿಗೆ ಬಂದರೂ ಎನ್‌ಡಿಎಗೆ ಲಾಭವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ನಡೆಯುತ್ತಿದೆ.

ಇದನ್ನೂ ನೋಡಿ: ಮಹಿಳಾ ದೌರ್ಜನ್ಯ – ಸವಾಲುಗಳು, ಬಿಡುಗಡೆಯ ಸಾಧ್ಯತೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *