ಧಾರವಾಡ: ಕರ್ನಾಟಕ ತನ್ನ ಪಾರುಪತ್ಯವನ್ನು ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಸಿದ್ದು, ಐಐಐಟಿ (IIIT) ಧಾರವಾಡದ ‘ಕ್ವಾಂಟಮ್ ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ಅತ್ಯಾಧುನಿಕ ‘QpiAI ಇಂಡಸ್ 25-ಕ್ವಿಟ್’ ಕ್ವಾಂಟಮ್ ಕಂಪ್ಯೂಟರ್ ಅನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಕ್ವಾಂಟಮ್ ಮಿಷನ್ ಗುರಿ: ಈ ಯೋಜನೆಯು ಕರ್ನಾಟಕ ಕ್ವಾಂಟಮ್ ಮಿಷನ್ನ ಭಾಗವಾಗಿದ್ದು, 2035 ರ ವೇಳೆಗೆ ರಾಜ್ಯವನ್ನು $20 ಬಿಲಿಯನ್ ಕ್ವಾಂಟಮ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. ಇದರಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಎಲ್ಪಿಜಿ ಕೊರತೆ ಹೊಡೆತ: ಹೋಟೆಲ್ ಉದ್ಯಮಕ್ಕೆ ಸಂಕಷ್ಟ
ಎಸ್ಮಾ ಜಾರಿಗೊಳಿಸಿದ್ದು ಏಕೆ ? : ಪ್ರಿಯಾಂಕ್ ಖರ್ಗೆ
ನಮ್ಮ ಬಳಿ ಸಾಕಷ್ಟು ತೈಲ, ಅನಿಲ ಸಂಗ್ರಹವಿದೆ ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿಕೊಳ್ಳುತ್ತಾ ಬಂದಿದ್ದ ಕೇಂದ್ರ ಸರ್ಕಾರವು ಏಕಾಏಕಿ ಅಗತ್ಯ ಸೇವೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಫೆಬ್ರವರಿ 9ರಂದು ಹೇಳಿಕೆ ನೀಡಿದ್ದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಯುದ್ಧ ನಡೆದರೂ ನಮ್ಮಲ್ಲಿ 75 ದಿನಗಳಿಗೆ ಸಾಲುವಷ್ಟು ಪೆಟ್ರೋಲಿಯಂ ಸಂಗ್ರಹವಿದೆ ಎಂದಿದ್ದರು. ಮಾರ್ಚ್ 6ರಂದು ಅವರು ದೇಶದಲ್ಲಿ ಇಂಧನದ ಕೊರತೆ ಇಲ್ಲ. ಸಾರ್ವಜನಿಕರು ಚಿಂತಿಸಬೇಕಿಲ್ಲ ಎಂದು ಹೇಳಿದ್ದರು.
ಆದರೆ ಮಾರ್ಚ್ 7ರಂದು ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ 60 ರೂ. ಏರಿಕೆಯಾದರೆ, ವಾಣಿಜ್ಯ ಬಳಕೆ ಸಿಲಿಂಡರ್ ದರ 115 ರೂ. ಹೆಚ್ಚಳವಾಗಿದೆ. ಒಂದು ತಿಂಗಳಿನಿಂದ ಸತ್ಯಾಂಶವನ್ನು ಮುಚ್ಚಿಟ್ಟಿದ್ದ ಕೇಂದ್ರ ಸರ್ಕಾರವು ಮಾರ್ಚ್ 10ರಂದು ಎಸ್ಮಾ ಜಾರಿಗೊಳಿಸಿದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲಿಯಂ ಸರಕುಗಳ ಸಂಗ್ರಹ ಇದ್ದರೆ ಎಸ್ಮಾ ಜಾರಿಗೊಳಿಸಿದ್ದು ಏಕೆ? ರಶ್ಮಿಕಾ ಮಂದಣ್ಣ ಅ ವರಿಗೆ, ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಲು ಸಮಯವಿರುವ ಪ್ರಧಾನಿ ಮೋದಿಯವರು ಎಸ್ಮಾ ಜಾರಿ ಕುರಿತು ಯಾಕೆ ಬಾಯಿಬಿಡುತ್ತಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ನೋಡಿ: ಹೆಣ್ಣು ಮಕ್ಕಳ ಕಣ್ಮರೆ – ಸ್ಟ್ಯಾನ್ಲಿ Janashakthi Media
