-ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡನೆ
ಸಿಪಿಐ(ಎಂ) ಪೊಲಿಟ್ಬ್ಯುರೊ ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುರುದ್ದೇಶಪೂರ್ವಕವಾದ ದಾಳಿಗಳನ್ನು ನಡೆಸಲಾಗುತ್ತಿದೆ ಎನ್ನುತ್ತ ಅದನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ವೀಣಾ ಜಾರ್ಜ್ ಅವರ ಮೇಲೆ ಕೆಎಸ್ಯು ಗೂಂಡಾಗಳು ನಡೆಸಿದ ದೈಹಿಕ ದಾಳಿಯನ್ನು ಅದು ತೀವ್ರವಾಗಿ ಖಂಡಿಸುವುದಾಗಿ ಹೇಳಿದೆ. ಎಲ್ಡಿಎಫ್ ಸರ್ಕಾರವು ಸತತ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಅದರ ಸಾಧನೆಗಳನ್ನು ಎದುರಿಸಲು ಅಸಮರ್ಥರಾಗಿರುವ ಕಾಂಗ್ರೆಸ್ ಮತ್ತು ಇತರೆ ಎಲ್ಲಾ ಎಡವಿರೋಧಿ ಶಕ್ತಿಗಳ ಹತಾಶೆಯನ್ನು ಈ ದಾಳಿಗಳು ಬಿಂಬಿಸುತ್ತವೆ ಎಂದು ಇದನ್ನು ವಿಶ್ಲೇಷಿಸಿದೆ. ಖಾಸಗಿ
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸರ್ಕಾರ ಸಾಧಿಸಿರುವ ಯಶಸ್ಸುಗಳು ಜಗತ್ತಿನಾದ್ಯಂತ ಪ್ರಶಂಸೆ ಮತ್ತು ಮಾನ್ಯತೆ ಗಳಿಸಿವೆ. ಎಲ್ಡಿಎಫ್ನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಬಿಡದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಸಹ ಈ ಸತ್ಯವನ್ನು ಒಪ್ಪಿಕೊಳ್ಳಬೇಕಾಗಿ ಬಂದಿದ್ದು, ದೇಶದಲ್ಲಿ ಉಚಿತ ಚಿಕಿತ್ಸೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಒದಗಿಸಿದ ರಾಜ್ಯವೆಂದು ಕೇರಳಕ್ಕೆ ಸತತ ಮೂರು ವರ್ಷಗಳ ಕಾಲ ಪ್ರಶಸ್ತಿ ನೀಡಿ ಗೌರವಿಸಿದೆ. ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವು ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ಕೈಗೊಂಡ ವಿಶೇಷ ಉಪಕ್ರಮಗಳಿಗಾಗಿ ಯುಎನ್ ಪ್ರಶಸ್ತಿಯನ್ನು ಪಡೆದಿದೆ. ಕೇರಳದಲ್ಲಿ ಶಿಶು ಮರಣ ಪ್ರಮಾಣ (IMR) ಅನ್ನು 5ಕ್ಕೆ ಇಳಿಸಲಾಗಿದೆ; ಇದು ಹೆಚ್ಚಿನ ತಲಾ ಆದಾಯ ಇರುವ ಯುಎಸ್ ನ ಪ್ರಮಾಣ(5.6) ಕ್ಕಿಂತಲೂ ಉತ್ತಮವಾಗಿದೆ. ಇವೆಲ್ಲವೂ ಕೇರಳದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸರ್ಕಾರವು ಎಷ್ಟು ಗಂಭೀರವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸರ್ಕಾರ ಸಾಧಿಸಿರುವ ಯಶಸ್ಸುಗಳು ಜಗತ್ತಿನಾದ್ಯಂತ ಪ್ರಶಂಸೆ ಮತ್ತು ಮಾನ್ಯತೆ ಗಳಿಸಿವೆ. ಎಲ್ಡಿಎಫ್ನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಬಿಡದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಸಹ ಈ ಸತ್ಯವನ್ನು ಒಪ್ಪಿಕೊಳ್ಳಬೇಕಾಗಿ ಬಂದಿದ್ದು, ದೇಶದಲ್ಲಿ ಉಚಿತ ಚಿಕಿತ್ಸೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಒದಗಿಸಿದ ರಾಜ್ಯವೆಂದು ಕೇರಳಕ್ಕೆ ಸತತ ಮೂರು ವರ್ಷಗಳ ಕಾಲ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ : ಹಂಚಿಕೆಯಾಗದ ಆಶ್ರಯ ನಿವೇಶನ; ಸ್ವಂತ ಸೂರಿಗಾಗಿ 26 ವರ್ಷಗಳಿಂದ ಕಾಯುತ್ತಿರುವ 62 ದಲಿತ ಕುಟುಂಬಗಳು ಖಾಸಗಿ
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಹೇರಿದ ತೀವ್ರ ಹಣಕಾಸು ನಿರ್ಬಂಧಗಳ ನಡುವೆಯೂ ಈ ಸಾಧನೆಗಳು ಸಾಧ್ಯವಾಗಿವೆ. ಯುಡಿಎಫ್ ಸರ್ಕಾರದ (2011-16) ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ವೆಚ್ಚ ರೂ. 18,825.44 ಕೋಟಿಯಾಗಿತ್ತು. ಎಲ್ಡಿಎಫ್ ಸರ್ಕಾರದ (2016-21) ಅವಧಿಯಲ್ಲಿ ಅದು ದ್ವಿಗುಣವಾಗಿ ರೂ. 36,651.79 ಕೋಟಿಗೆ ಏರಿತು. ಕಳೆದ ನಾಲ್ಕು ವರ್ಷಗಳಲ್ಲಿ (2021-25) ಮತ್ತಷ್ಟು ರೂ. 41,510.43 ಕೋಟಿ ವೆಚ್ಚ ಮಾಡಲಾಗಿದೆ. ಈ ಹೆಚ್ಚಿದ ವೆಚ್ಚಗಳು ಸಾರ್ವಜನಿಕ ಆರೋಗ್ಯದ ಬಗ್ಗೆ ಎಲ್ಡಿಎಫ್ ಸರ್ಕಾರದ ಬದ್ಧತೆಯನ್ನು ಸ್ಪಷ್ಟಪಡಿಸುತ್ತವೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸಾಧಿಸಿರುವ ಈ ಯಶಸ್ಸುಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಸಹ ಸಹಿಸಿಕೊಳ್ಳಲಾಗುತ್ತಿಲ್ಲ, ಏಕೆಂದರೆ ಅವರ ನೀತಿ ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವುದಾಗಿದೆ.ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸಿ, ಆ ಮೂಲಕ ಖಾಸಗಿ ವಲಯದ ವಿಸ್ತರಣೆಗೆ ಅವಕಾಶ ಕಲ್ಪಿಸುವುದೇ ಈ ದಾಳಿಗಳ ನಿಜ ಉದ್ದೇಶವಾಗಿದೆ
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸಾಧಿಸಿರುವ ಈ ಯಶಸ್ಸುಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಸಹ ಸಹಿಸಿಕೊಳ್ಳಲಾಗುತ್ತಿಲ್ಲ, ಏಕೆಂದರೆ ಅವರ ನೀತಿ ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವುದಾಗಿದೆ. ಕೇರಳದಲ್ಲಿ ಖಾಸಗಿ ವಲಯವು ಆರೋಗ್ಯ ಕ್ಷೇತ್ರದಲ್ಲಿ ಭಾರೀ ಹೂಡಿಕೆಗಳನ್ನು ಮಾಡಿದ್ದರೂ ಆಳವಾಗಿ ಪ್ರವೇಶಿಸಲು ವಿಫಲವಾಗಿರುವುದಕ್ಕೆ ಬಹುಮಟ್ಟಿಗೆ ಬಲಿಷ್ಠ ಸಾರ್ವಜನಿಕ ವಲಯದ ಉಪಸ್ಥಿತಿಯೇ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸಿ, ಆ ಮೂಲಕ ಖಾಸಗಿ ವಲಯದ ವಿಸ್ತರಣೆಗೆ ಅವಕಾಶ ಕಲ್ಪಿಸುವುದೇ ಈ ದಾಳಿಗಳ ನಿಜ ಉದ್ದೇಶವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಈ ದಾಳಿಗಳನ್ನು ಖಂಡಿಸುತ್ತ, ಜನರು ಈ ದುಷ್ಟ ತಂತ್ರಗಳನ್ನು ಅರಿತು ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಎಲ್ಡಿಎಫ್ ಸರ್ಕಾರದ ರಕ್ಷಣೆಗೆ ದೃಢವಾಗಿ ನಿಲ್ಲಬೇಕು ಎಂದು ಆಗ್ರಹಪೂರ್ವಕವಾಗಿ ಮನವಿ ಮಾಡಿದೆ.
ಇದನ್ನೂ ನೋಡಿ : ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕೆ ಉತ್ತರ ಗಲಭೆಯೇ? Azim Premji Universityನಲ್ಲಿ ನಿಜವಾಗಿ ಏನಾಯಿತು?
