ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ: ಬಿಎನ್​ಪಿ ಗೆ ಭರ್ಜರಿ ಗೆಲುವು

ಢಾಕಾ: 2024ರ ಅಗಸ್ಟ್​ನಲ್ಲಿ ನಡೆದ ಸಾಮೂಹಿಕ ಆಂತರಿಕ ದಂಗೆ, ಶೇಖ್ ಹಸೀನಾ ಆಡಳಿತದ ಅಂತ್ಯದ ಬಳಿಕ ಫೆಬ್ರವರಿ 12ರಂದು ಬಾಂಗ್ಲಾದೇಶದಲ್ಲಿ ಮೊದಲ ಬಾರಿ 13ನೇ ಸಾರ್ವತ್ರಿಕ ಚುನಾವಣೆ ನಡೆದಿದ್ದು, ರಾತ್ರಿಯಿಂದಲೇ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತವಾದಿ ಪಕ್ಷ(ಬಿಎನ್​ಪಿ) ಭರ್ಜರಿ ಗೆಲುವಿನತ್ತ ಸಾಗಿದೆ ಎನ್ನಲಾಗಿದೆ.

299 ಸಂಸತ್​ ಕ್ಷೇತ್ರಗಳಿಗೆ ನಿನ್ನೆ ಬೆಳಗ್ಗೆ 7.30ರಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 4. 30ಕ್ಕೆ ಮುಗಿದಿದೆ. ಜನಾಭಿಪ್ರಾಯ ಸಂಗ್ರಹ ಮತ್ತು ಸಾರ್ವತ್ರಿಕ ಚುನಾವಣೆ ಒಂದೇ ದಿನ ನಡೆದಿವೆ. ಒಂದು ಸಂಸತ್ತಿಗೆ ಮತ್ತು ಇನ್ನೊಂದು ಜನಾಭಿಪ್ರಾಯ ಸಂಗ್ರಹಕ್ಕೆ ಮತದಾರರು ಮತ ಚಲಾಯಿಸಿದ್ದಾರೆ. ಸಂಜೆಯಿಂದಲೇ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬಾಂಗ್ಲಾದೇಶ 

ಢಾಕಾ ಟ್ರಿಬ್ಯೂನ್ ವರದಿ ಪ್ರಕಾರ, ಬಿಎನ್‌ಪಿ ಪ್ರಸ್ತುತ 165 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಪಕ್ಷದ ಅಧ್ಯಕ್ಷ ತಾರಿಕ್ ರೆಹಮಾನ್ ತಮ್ಮ ಎರಡೂ ಕ್ಷೇತ್ರಗಳಲ್ಲಿ, ಬೊಗುರಾ 6 ಮತ್ತು ಢಾಕಾ 17ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಜಮಾತ್ ನೇತೃತ್ವದ ಒಕ್ಕೂಟವು 43 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದೆ.

ಇದನ್ನೂ ಓದಿ: ಉಡುಪಿ | ಕಾರ್ಮಿಕರ ರಸ್ತೆ ತಡೆ ಸಂಹಿತೆ ವಿರುದ್ಧ ಆಕ್ರೋಶ

ಬಿಎನ್​ಪಿ ಹಿರಿಯ ನಾಯಕ ರುಹುಲ್ ಕಬೀರ್ ರಿಜ್ವಿ ಮಾತನಾಡಿದ್ದು, ಪಕ್ಷವು ಆಗಾಧವಾದ ಗೆಲುವನ್ನು ಸಾಧಿಸಿದೆ. ಶುಕ್ರವಾರ ಬೀದಿಗಳಲ್ಲಿ ವಿಜಯೋತ್ಸವ ಆಚರಿಸುವ ಬದಲು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇನ್ನೂ ಪ್ರಸ್ತುತ ಬಿಎನ್​ಪಿ ಮುಖ್ಯಸ್ಥರಾಗಿರುವ ತಾರಿಕ್ ರೆಹಮಾನ್, ಮಾಜಿ ಪ್ರಧಾನಿ ಜಿಯಾ ಖಲೀದಾ ಅವರ ಪುತ್ರ. ಕಳೆದ 17 ವರ್ಷಗಳಿಂದ ವಿದೇಶದಲ್ಲಿದ್ದರು. ತಾಯಿ ನಿಧನದ ಬಳಿಕ ವಾಪಸ್ ಬಾಂಗ್ಲಾಗೆ ಬಂದಿದ್ದು, ಪಕ್ಷದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಅವರೇ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ಕೆಲವು ದಶಕಗಳಿಂದ ಬಾಂಗ್ಲಾ ದೇಶದ ರಾಜಕೀಯ ಮೇಲೆ ಹಿಡಿತ ಸಾಧಿಸಿದ್ದ ಇಬ್ಬರು ಮಾಜಿ ಪ್ರಧಾನಿಗಳಾದ ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ಮತ್ತು ಬಿಎನ್​ಪಿಯ ಖಲೀದಾ ಜಿಯಾ ಅವರಿಲ್ಲದೇ ನಡೆದ ಮೊದಲ ಚುನಾವಣೆ ಇದು. ಸಾಮೂಹಿಕ ದಂಗೆಯ ನಂತರ ಪದಚ್ಯುತಗೊಂಡ ಶೇಖ್ ಹಸೀನಾ ಭಾರತದಲ್ಲಿದ್ದರೆ, ಕಳೆದ ಡಿಸೆಂಬರ್​ನಲ್ಲಿ ಬಿಎನ್​ಖಲೀದಾ ಜಿಯಾ ನಿಧನರಾದರು.

ಇನ್ನೂ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಬಳಿಕ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಅವಾಮಿ ಲೀಗ್ ಪಕ್ಷವನ್ನು ವಿಸರ್ಜಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದಾರೆ

ಇದನ್ನೂ ನೋಡಿ: ಸಿದ್ದಿ, ಕುಣಬಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆಯ ನೃತ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *