ತುಮಕೂರು | ಕಾರ್ಮಿಕ ವಿರೋಧಿ ಸಂಹಿತೆ- ವಿದ್ಯುತ್ ಖಾಸಗಿಕರಣ, ಬೀಜ ಮಸೂದೆ ವಿರುದ್ದ ಪ್ರತಿಭಟನೆ ಬಂಧನ – ಬಿಡುಗಡೆ

ತುಮಕೂರು : ಕಾರ್ಮಿಕ ವಿರೋಧಿ ಸಂಹಿತೆ- ಉದ್ಯೋಗ ಖಾತ್ರಿಯಲ್ಲಿ ಬದಲಾವಣೆ ವಿದ್ಯುತ್ ಖಾಸಗಿಕರಣ, ಬೀಜ ಮಸೂದೆ ವಿರುದ್ದ  ರೈತರು, ಕಾರ್ಮಕರು, ಕೂಲಿಕಾರರು  ಬೃಹತ್  ಮೆರವಣಿಗೆ ನಡೆಸಿದರು.  ಬಿ.ಎಸ್.ಎನ್.ಎಲ್ ಕಛೇರಿ ಮುತ್ತಿಗೆ ಯತ್ನ ನಡೆಸಿದಾಗ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು.

ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ಜಾರಿ ವಿರೋಧಿಸಿ, ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಪುನರ್ ಸ್ಥಾಪಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಸೇವೆಗಳನ್ನು ಖಾಯಂ ಮಾಡಿ, 12 ಗಂಟೆಯ ದುಡಿಮೆ ಕಾನೂನು ಹಿಂಪಡೆಯಿರಿ, ಕನಿಷ್ಟ ವೇತನ ಮಾಸಿಕ ೪೧ಸಾವಿರ ನಿಗಧಿ ಮಾಡಿ,ನಿಗಧಿತ ಕಾಲಾವಧಿ ದುಡಿಮೆ ಅವಕಾಶ ನೀಡಿ, ಖಾಯಂ ಕೆಲಸಗಳೆ ಇಲ್ಲದಂತೆ ಮಾಡುವುದನ್ನು ವಿರೋಧಿಸಿ. ವಿದ್ಯುತ್ ಬಳಕೆದಾರರಿಗೆ ವಿಪರೀತ ಬೆಲೆ ಏರಿಕೆಗೆ ಕಾರಣವಾಗುವ ವಿದ್ಯುತ್ ಖಾಸಗಿಕರಣಕ್ಕೆ ದಾರಿ ಮಾಡುವ ವಿದ್ಯುತ್ ಕಾಯಿದೆ ವಿರೋಧಿಸಿ. ರೈತರ ಸ್ವಾವಲಂಬನೆಗೆ ಕುತ್ತು ತರುವ ಬೀಜ ಮಸೂದೆ ವಿರೋಧಿಸಿ , ಬಲವಂತದ ಭೂಸ್ವಾಧಿನ, ಬಗೇರ್ ಹುಕುಂ ಸಾಗುವಳಿದಾರರ ಪ್ರಶ್ನೆ ಇತ್ಯಾರ್ಥಕ್ಕೆ ಅಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆ ನೀಡಿದ್ದ ಫೆ 12 ,ರ ಅಖಿಲ ಭಾರತ ಸರ್ವಾತ್ರಿಕ ಮುಷ್ಕರದ ಭಾಗವಾಗಿ ತುಮಕೂರು ನಗರದಲ್ಲಿ ಸಾವಿರಾರು ರೈತ- ಕಾರ್ಮಿಕರು ಟೌನ್‌ಹಾಲ್ ಮುಂಭಾಗ ಸಮಾವೇಶಗೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಬಿ.ಎಸ್. ಎನ್. ಎಲ್ ಕಛೇರಿ ಎದುರು ಮುತ್ತಿಗೆ ಹಾಕಿದರು. ಅಂತರಸನ ಹಳ್ಳಿ, ಸತ್ಯಮಂಗಲ, ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಲಸಕ್ಕೆ ಹಾಜರಾಗದ ಸಾವಿರಾರು ಕಾರ್ಮಿಕರು ಮುಷ್ಕರದಲ್ಲಿ ಬಾಗಿಯಾದರು. ಅಂಗನವಾಡಿ, ಬಿಸಿಯೂಟ. ಅಶಾ, ಮುನಿಸಿಪಲ್ , ಅಸ್ವತ್ರೆ, ಹಮಾಲಿ ಕಾರ್ಮಿಕರು. ಫುಟ್‌ಪಾತ್ ವ್ಯಾಪಾರಿಗಳು. ಬ್ಯಾಂಕ್ ನೌಕರರು. ವಿಮಾ ನೌಕರರು. ಮುಷ್ಕರದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಗ್ರಾ. ಪಂ ಪಿಡಿಒ – ಅಧ್ಯಕ್ಷರ ವಿರುದ್ದ ಹಣ ದುರುಪಯೋಗ ಆರೋಪ: ಪಂಚಾಯಿತಿ ಸದಸ್ಯರು ಪ್ರತಿಭಟನೆ

ರೈತ ಸಂಘದ ಜಿಲ್ಲಾಧ್ಯಕ್ಷರಾದ ಎ. ಗೋವಿಂದ ರಾಜು ಅವರು ಮೆರವಣಿಗಗೆ ಚಾಲನೆ ನೀಡಿದರು. ಪ್ರಸ್ತಾವಿಕವಾಗಿ ಜೆಸಿಟಿಯು ಜಿಲ್ಲಾ ಸಂಚಾಲಕರಾದ ಕಂಬೆಗೌಡ ಅವರು ಮಾತನಾಡಿ ಈ ಐತಿಹಾಸಿಕ ಮುಷ್ಕರಕ್ಕೆ ಎಲ್ಲಾರು ಕೈಜೋಡಿಸಲು ಮನವಿ ಮಾಡಿದರು. ಮಂಡಿಪೇಟೆ ಸರ್ಕಲ್ ನಲ್ಲಿ ಪ್ರತಿಭಟನಾ ಮೇರವಣಿಗೆಯನ್ನು ಕುರಿತು ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕರಾದ ಮಂಜುಳ ಗೋನಾವರ ಅವರು ಸರ್ಕಾರಗಳು ನಿರಂತರವಾಗಿ ಜನವಿರೋಧಿಯಾಗಿ ವರ್ತಿಸುತ್ತಿವೆ , ಹೋರಾಟವೆ ಜನರಿಗೆ ಇರುವ ದಾರಿ ವರ್ತಕರಾದಿಯಾಗಿಎಲ್ಲಾರು ಕೈಜೋಡಿಸಬೇಕೆಂದರು.
ಉರಿಯುವ ಬಿಸಿಲಿನಲ್ಲೂ ಬಿ.ಎಸ್. ಎನ್. ಎಲ್ ಮುಂದೆ ಧರಣಿಕಾರರನ್ನು ಉದ್ದೆಶಿಸಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ಮಾತನಾಡಿ ಜನತೆ- ರೈತ – ಕಾರ್ಮಿಕರಿಗೆ ಮಾರಕವಾದ ಸರ್ಕಾರದ ನೀತಿಗಳು ಬಂಡವಾಳಗಾರ- ಕಾರ್ಪೂರೇಟ್ ಕಂಪನಿಗಳ ಲಾಭದ ಗ್ಯಾರೆಂಟಿಯನ್ನು ಮಾತ್ರ ನೋಡುತ್ತಿವೆ , ಕಾರ್ಮಿಕ- ರೈತರು-ಜನತೆ ನೀತಿ ಅಧಾರಿತವಾಗಿ ಮತ ನೀಡಲು, ಅಸಮಾನತೆ ಹೆಚ್ಚಿಸುವ ನೀತಿಗಳನ್ನು ಸೊಲಿಸಲು ಕರೆ ನೀಡಿದರು.

ಎಐಟಿಯುಸಿ ಜಿಲ್ಲಾ ಕಾರ್ಯಧ್ಯಕ್ಷರಾದ ಗಿರಿಶ್ ಮಾತನಾಡಿ ಸ್ವದೇಶಿ ಎಂದು ಹೇಳಿ ಅಧಿಕಾರ ಹಿಡಿದ ಬಿಜೆಪಿ ಅಮೇರಿಕಾ ದೇಶಕ್ಕೆ ಭಾರತವನ್ನು ಒತ್ತೆಇಟ್ಟಿದೆ. ನಾವು ಎಲ್ಲಿ ಪೆಟ್ರೋಲ್ ಖರಿದಿಸಬೇಕು. ಎಂಬು ಅವರೆ ಹೇಳುತ್ತಾರೆ. ಭಾರತವನ್ನು Àಮತ್ತೆ ಅವರ ಗುಲಾಮಗಿರಿಗೆ ಬಿಜೆಪಿ ತಂದು ನಿಲ್ಲಿಸಿದೆ ಎಂದರು
ಐಎನ್ಟಿಯುಸಿ ಗೊವಿಂದರಾಜು ೪ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದರು. ರಂಗನಾಥ್ ಮಾತನಾಡಿ ಉದ್ಯೋಗ ಖಾತರಿ ಯೊಜನೆಯನ್ನು ನಾಶಮಾಡಲು ಬಿಡಬಾರದು ಎಂದರು.

ಹೋರಾಟದಲ್ಲಿ ಸಿಐಟಿಯು ಷಣ್ಮಗಪ್ಪ. ಸುಜಿತ್ ನಾಯಕ್, ರಂಗಧಾಮಯ್ಯ, ಕರ್ನ ಲಿರ‍್ಸ್ ಕಾರ್ಮಿಕರ ಸಂಘ ಶಿವಕುಮಾರ್ ಸ್ವಾಮಿ. ಫೀಟ್ ವೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತುರಾಜ್, ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಗೌರಮ್ಮ. ಗಂಗಮ್ಮ. ಜಬಿನಾ, ಹಮಾಲಿ ಕಾರ್ಮಿಕರ ಸಂಘ ನಾಗರಾಜು. ಗ್ರಾಮ ಪಂಚಾಯತ್ ನೌಕರರ ಸಂಘ ನಾಗೇಶ, ಯೋಗಿಶ್. ವಿಶಾಕ ಕಾರ್ಮಿಕ ಸಂಘ ಸ್ಟಾಲಿ ಸುಕುಮಾರ್.

ಎಐಟಿಯುಸಿ ಚಂದ್ರಶೇಖರ್, ರಮೇಶ್ , ರವಿಪ್ರಸಾದ್ ಅಶೋಕ್ ಕುಮಾರ್ ರಾಣಿ ಇಂಜಿನ್ ,ಸಿಪ್ಸಾ ಯೊಗೀಶ್, ರಮೇಶ್, ಐಎನ್‌ಟಿಯುಸಿ ನವಾಜ್, ಜಗದಿಶ್ , ಮುನಿಸಿಪಾಲ್ ಕಾರ್ಮಿಕರ ಸಂಘ ಮಾರುತಿ , ಪ್ರಕಾಶ್, ಮಂಜುನಾಥ್, ಕುಮಾರ್ ಅಶಾ ನೌಕರರ ಸಂಘದ ಕಟ್ಟಡ ಕಾರ್ಮಿಕರ ಸಂಘ ಕಲೀಲ್ , ಪ್ರೇರಣಾ ಟ್ರೆಸ್ಟ್ ಬಾಬು ಮಾನಸೆ, ಪಿ.ಎಫ್ ಪಿಂಚಣಿದಾರರ ಸಂಘ ಟಿ.ಜಿ ಶಿವಲಿಂಯ್ಯ, ಜನವಾಧಿ ಮಹಿಳಾ ಸಂಘ ಟಿ.ಅರ್. ಕಲ್ಪನಾ ಮತ್ತಿತರರು ಮುಂದಾಳತ್ವ ವಹಿಸಿದ್ದರು.

ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *