ತಿರುಪತಿ ದೇವಸ್ಥಾನಕ್ಕೆ ಪೂರೈಕೆಯಾಗಿದ್ದು ರಾಸಾಯನಿಕ ಮಿಶ್ರಣ: ಚಾರ್ಜ್​​ಶೀಟ್‌ನಲ್ಲಿ ಬಹಿರಂಗ!

ಅಮರಾವತಿ: ಎಸ್​ಐಟಿ ತನಿಖೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪೂರೈಕೆಯಾಗಿದ್ದ ಕಲಬೆರಕೆ ತುಪ್ಪದ ಕುರಿತು ಆಘಾತಕಾರಿ ವಿಚಾರವೊಂದು ಬಯಲಾಗಿದೆ. ​ತುಪ್ಪದ ಹೆಸರಿನಲ್ಲಿ ತಾಳೆ ಎಣ್ಣೆ, ತಾಳೆ ಕರ್ನಲ್ ಎಣ್ಣೆ ಮತ್ತು ಹಲವಾರು ಕೈಗಾರಿಕಾ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ರಾಸಾಯನಿಕ ಮಿಶ್ರಣ ಪೂರೈಕೆಯಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗೊಂಡಿದೆ ಎಂದು ಎಸ್​​ಐಟಿ ಚಾರ್ಜ್​​ಶೀಟ್​ನಲ್ಲಿ ಹೇಳಿದೆ. ತಿರುಪತಿ

ಎಸ್​ಐಟಿ ಸಲ್ಲಿಸಿರುವ ಚಾರ್ಜ್​​ಶೀಟ್​ನಲ್ಲಿ ಈ ಅಂಶಗಳಿವೆ ಎಂದು ತಿಳಿದು ಬಂದಿದೆ. ಭೋಲೆಬಾಬಾ ಡೈರಿ ಮತ್ತು ಇದರ ಸಹಯೋಗದ ಘಟಕಗಳು, 57.56 ಲಕ್ಷ ಕೆಜಿ ತಾಳೆ ಎಣ್ಣೆ ಮತ್ತು ತಾಳೆ ಕರ್ನಲ್ ಎಣ್ಣೆ, 8.30 ಲಕ್ಷ ಕೆಜಿ ಮಾನೋಗ್ಲಿಸರೈಡ್‌ಗಳು, ಲ್ಯಾಕ್ಟಿಕ್ ಆಮ್ಲ, ಎಲ್​ಎಬಿಎಸ್​ಎ (ಲೀನಿಯರ್ ಆಲ್ಕೈಲ್ ಬೆಂಜೀನ್ ಸಲ್ಫೋನಿಕ್ ಆಮ್ಲ) ಮತ್ತು ಅಸಿಟಿಕ್ ಆಮ್ಲ ಎಸ್ಟರ್‌ಗಳಂತಹ ರಾಸಾಯನಿಕಗಳನ್ನು ಖರೀದಿಸಿದ್ದವು. ಈ ಪದಾರ್ಥಗಳನ್ನು ಬಳಸಿ, ಆರೋಪಿಗಳು ಸುಮಾರು 68.17 ಲಕ್ಷ ಕೆಜಿ ತುಪ್ಪದಂತಹ ರಾಸಾಯನಿಕ ಮಿಶ್ರಣವನ್ನು ತಯಾರಿಸಿದ್ದರು ಎಂಬ ವಿಚಾರವನ್ನು ಎಸ್​​ಐಟಿ ಬಯಲಿಗೆ ಎಳೆದಿದೆ. ತಿರುಪತಿ

ಇದರಲ್ಲಿ ಸುಮಾರು 59.71 ಲಕ್ಷ ಕೆಜಿಯಷ್ಟು ತುಪ್ಪ ಎಂದು ಬಿಂಬಿಸಿ ಹಲವು ಡೈರಿಗಳ ಮೂಲಕ ಟಿಟಿಡಿಗೆ ಪೂರೈಕೆ ಮಾಡಲಾಗಿತ್ತು. ಇದರಿಂದ 234.51 ಕೋಟಿ ರೂ.ಗಳ ಆರ್ಥಿಕ ವಂಚನೆ ನಡೆಸಲಾಗಿದೆ. ಆಘಾತಕಾರಿ ಸಂಗತಿ ಎಂದರೆ, ಪವಿತ್ರ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಈ ರಾಸಾಯನಿಕ ಮಿಶ್ರಣವನ್ನು ಬಳಸಲಾಗಿದೆ ಎಂದು ಎಸ್​ಐಟಿ ತಿಳಿಸಿದೆ. ತಿರುಪತಿ

ಇದನ್ನೂ ಓದಿ: ಪ್ರತಿಭಟನೆ 100 ದಿನ ದಾಟಿದರೂ ಸ್ಪಂದನೆ ನೀಡದ ಜಿಲ್ಲಾಡಳಿತ: ಜನರು ಆಕ್ರೋಶ

ಈ ಕಲಬೆರಕೆಯ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡುವುದರ ಜೊತೆಗೆ ಇದರ ಒಂದು ಭಾಗವನ್ನು ವಿನಾಯಕ ಏಜೆನ್ಸಿಗಳು ಮತ್ತು ತಿರುಪತಿಯ ಸುಮತಿ ಟ್ರೇಡರ್ಸ್ ಮೂಲಕವೂ ರವಾನಿಸಲಾಗಿದೆ. ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಟಿಟಿಡಿಗೆ ಮಾತ್ರವಲ್ಲದೇ, ರಾಜ್ಯಾದ್ಯಂತ ಹಲವಾರು ದೇವಾಲಯಗಳಿಗೆ ನಕಲಿ ತುಪ್ಪವನ್ನು ಪೂರೈಸಲಾಗಿತ್ತು ಎನ್ನುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ.

ಖಾದ್ಯ ತೈಲಗಳ ಹೆಸರಿನಲ್ಲಿ ರಾಸಾಯನಿಕ ಪೂರೈಕೆ: ಭೋಲೆಬಾಬಾ ಡೈರಿ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ಖಾದ್ಯ ಎಣ್ಣೆಗಳ ಹೆಸರಿನಲ್ಲಿ ರಾಸಾಯನಿಕಗಳನ್ನು ಹೇಗೆ ಸಂಗ್ರಹಿಸಿದರು. ಭೋಲೆಬಾಬಾ ಡೈರಿ ಅಂಗಸಂಸ್ಥೆ ಸಂಸ್ಥೆಗಳಾದ ಹರ್ಶ್ ಟ್ರೇಡಿಂಗ್ ಮತ್ತು ಹರ್ಶ್ ಫ್ರೆಶ್ ಡೈರಿ ಫುಡ್ಸ್ ಮೂಲಕ ಕಲಬೆರಕೆ ತುಪ್ಪ ತಯಾರಿಸಲು ಅಗತ್ಯವಾದ ಮೊನೊಗ್ಲಿಸರೈಡ್‌ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ಗಳನ್ನು ಖರೀದಿಸಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿಯ ಸುಗಂಧ್ ಆಯಿಲ್ ಅಂಡ್ ಕೆಮಿಕಲ್ಸ್‌ನ ಮಾಲೀಕ ಅಜಯ್ ಕುಮಾರ್ ಸುಗಂಧ್, ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್ ಮತ್ತು ತೆಂಗಿನ ಎಣ್ಣೆಯ ಪೂರೈಕೆಯನ್ನು ತೋರಿಸುವ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿದ್ದರು. ಈ ಕಂಪನಿಯೇ 6.51 ಲಕ್ಷ ಕೆಜಿ ರಾಸಾಯನಿಕಗಳನ್ನು ಪೂರೈಸಿದೆ. ಭೋಲೆಬಾಬಾ ಡೈರಿ ದಾಖಲೆಗಳು ಖಾದ್ಯ ತೈಲಗಳಿಗೆ ಜಿಎಸ್‌ಟಿ ಹೊರತುಪಡಿಸಿ ರೂ. 7.94 ಕೋಟಿ ಪಾವತಿಗಳನ್ನು ತೋರಿಸಿದ್ದರೂ, ಸುಗಂಧ್ ಆಯಿಲ್ ಗೋದಾಮುಗಳಲ್ಲಿ ಎಸ್‌ಐಟಿ ದಾಳಿ ನಡೆಸಿದಾಗ ಯಾವುದೇ ಪಾಮ್ ಆಯಿಲ್ ಅಥವಾ ತೆಂಗಿನ ಎಣ್ಣೆ ದಾಸ್ತಾನು ಕಂಡು ಬಂದಿಲ್ಲ. ಬದಲಾಗಿ, ಕೊರಿಯಾದಿಂದ ಆಮದು ಮಾಡಿಕೊಂಡ ರಾಸಾಯನಿಕಗಳನ್ನು ಹೊಂದಿರುವ ನೀಲಿ ಕಬ್ಬಿಣದ ಡ್ರಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್​​ಐಟಿ ಚಾರ್ಜ್​ಶೀಟ್​ನಲ್ಲಿ ಹೇಳಿದೆ.

ನಕಲಿ ಇನ್​ವಾಯ್ಸ್​: ಎಸ್​ಐಟಿ ಚಾರ್ಜ್​ ಶೀಟ್​ನಲ್ಲಿ ದೆಹಲಿಯ ಶಿವಾಂಶ್ ಟ್ರೇಡಿಂಗ್ ಕಂಪನಿ ಮತ್ತು ನ್ಯಾಷನಲ್ ಆಯಿಲ್ಸ್ ಅಂಡ್ ಕೆಮಿಕಲ್ಸ್‌ನ ಮಹೇಶ್ ಕುಮಾರ್ ರೋಹಿರಾ ಹೆಸರು ಕೂಡಾ ದಾಖಲಿಸಲಾಗಿದೆ. ಇವರು ತಾಳೆ ಎಣ್ಣೆಯನ್ನು ಸುಳ್ಳು ಇನ್‌ವಾಯ್ಸ್‌ಗಳ ಅಡಿ ಎಎಂಜಿ 90 ಮತ್ತು ಮೈವಾಸೆಟ್ ಸಾಫ್ಟ್ 400 ನಂತಹ 30,000 ಕೆಜಿ ರಾಸಾಯನಿಕಗಳನ್ನು ಪೂರೈಸಿದ್ದಾರೆ. ಅವರ ಸೂಚನೆಯ ಮೇರೆಗೆ, ಅವರ ಸಹೋದರ ಅರ್ಚಿತ್ ರೋಹಿರಾ, ಜಿಆರ್​ ಇಂಪೆಕ್ಸ್ ಮೂಲಕ, ನಕಲಿ ದಾಖಲೆಗಳನ್ನು ಬಳಸಿ 70,000 ಕೆಜಿ ಇದೇ ರೀತಿಯ ರಾಸಾಯನಿಕಗಳನ್ನು ಪೂರೈಸಿದ್ದಾರೆ ಎಂದು ಎಸ್​​ಐಟಿ ಚಾರ್ಜ್​ಶೀಟ್​ನಲ್ಲಿ ಹೇಳಿದೆ.

ತನಿಖೆಯಲ್ಲಿ ದೆಹಲಿಯ ಅರಿಸ್ಟೋ ಕೆಮಿಕಲ್ಸ್‌ನಿಂದ 8,900 ಕೆಜಿ ಎಕ್​ಎಬಿಎಸ್​ಎ ಮತ್ತು ಲ್ಯಾಕ್ಟಿಕ್ ಆಮ್ಲದ ಖರೀದಿ ಕಂಡುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ರಾಸಾಯನಿಕ ಪೂರೈಕೆದಾರರನ್ನು ಎಸ್​ಐಟಿ ಆರೋಪಿಗಳೆಂದು ಗುರುತಿಸಿದೆ.

ಖರೀದಿ ಮಾರಾಟದಲ್ಲಿ ನಕಲಿ ದಾಖಲೆ: ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದಂತೆ, ಭೋಲೆಬಾಬಾ ಡೈರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, 57.56 ಕೆಜಿ ತಾಳೆ ಎಣ್ಣೆ ಮತ್ತು ತಾಳೆ ಕರ್ನೆಲ್​​ ತೈಲವನ್ನು ಹರ್ಷ ಡ್ರೇಟಿಂಗ್​ ಮೂಲಕ ಖರೀದಿಸಿದೆ. ವಾಸ್ತವದಲ್ಲಿ ಇವುಗಳನ್ನು ಕಲಬೆರಕೆ ತುಪ್ಪ ಬಳಕೆಗೆ ಸಾಗಿಸಲಾಗಿದೆ.

ಕಲಬೆರಕೆ ತುಪ್ಪ ತಯಾರಿಕೆಗೆ ಬಳಕೆಯಾದ ರಾಸಾಯನಿಕಗಳು:

  • ತಾಳೆ ಎಣ್ಣೆ
  • ತಾಳೆ ಕರ್ನೆಲ್​ ಎಣ್ಣೆ
  • ಲ್ಯಾಕ್ಟಿಕ್ ಆಮ್ಲ,
  • ಎಲ್​ಎಬಿಎಸ್​ಎ (ಲೀನಿಯರ್ ಆಲ್ಕೈಲ್ ಬೆಂಜೀನ್ ಸಲ್ಫೋನಿಕ್ ಆಮ್ಲ)
  • ಅಸಿಟಿಕ್ ಆಸಿಡ್​ ಎಸ್ಟರ್‌
  • ಮಾನೋಗ್ಲಿಸರೈಡ್‌ ಹಾಗೂ ಡಿಗ್ಲಿಸರೈಡ್

ಕಲಬೆರಕೆ ತುಪ್ಪವು ಯೋಜಿತ ಪಿತೂರಿಯಾಗಿದ್ದು, ಇವುಗಳು ನಕಲಿ ಇನ್‌ವಾಯ್ಸ್‌ಗಳು, ರಾಸಾಯನಿಕ ಪೂರೈಕೆದಾರರು ಮತ್ತು ವಿತರಣಾ ಜಾಲಗಳನ್ನು ಒಳಗೊಂಡಿದೆ. ಇದರಿಂದ ದೇಗುಲದ ಪ್ರಸಾದಗಳ ಪಾವಿತ್ರ್ಯಕ್ಕೆ ಕುಂದುಂಟಾಗಿದ್ದು, ಇದು ಆರ್ಥಿಕ ನಷ್ಟಕ್ಕೂ ಕಾರಣವಾಗಿದೆ ಎಂದು ಎಸ್​ಐಟಿ ತನಿಖೆಯಲ್ಲಿ ಕಂಡು ಬಂದಿದೆ.

ಇದನ್ನೂ ನೋಡಿ: ಇದು ಜನರ ಬಜೆಟ್ ಅಲ್ಲ- ಕಾರ್ಪೊರೇಟ್ ಲಾಭಕ್ಕೆ ಬಜೆಟ್! | ಟಿಆರ್‌ಸಿ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *