ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲೆ ಎಫ್‌ಐಆರ್: ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ

Please follow and like us:
ಬೆಂಗಳೂರು: ಪೊಲೀಸ್ ಇಲಾಖೆಯು ಮಾನಹಾನಿ, ಆಕ್ಷೇಪಾರ್ಹ ಹೇಳಿಕೆ ಸೇರಿದಂತೆ ಪ್ರಚೋದಿಸುವ ವ್ಯಕ್ತಿಗಳ ಬಗ್ಗೆ ಎಫ್ಐಆರ್ ದಾಖಲಿಸಿಕೊಳ್ಳುವ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಾರ್ಗಸೂಚಿ ಹೊರಡಿಸಿದೆ. ಮೀಡಿಯಾ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎನ್.ಸಲೀಂ ಅವರು ಆದೇಶ ಹೊರಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿರುವ ಪೋಸ್ಟ್ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳುವಾಗ ಮಾರ್ಗಸೂಚಿಯಲ್ಲಿರುವ ಎಂಟು ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: ಬುಡಕಟ್ಟು ಸಮುದಾಯಗಳ ನಡುವೆ ಉದ್ವಿಗ್ನತೆ; ನಾಗಾ, ಕುಕಿ ಮನೆಗಳಿಗೆ ಬೆಂಕಿ ಹಚ್ಚಿದ ಉಗ್ರರು

ಆದೇಶದ ಅಂಶಗಳು:

1. ವ್ಯಕ್ತಿಗಳ ವಿರುದ್ಧ ಮಾನಹಾನಿಯಾಗಿದೆ ಎಂದು‌ ದೂರುವ ವ್ಯಕ್ತಿಯಿಂದ ಪ್ರಕರಣ ದಾಖಲಿಸಿಕೊಳ್ಳಬೇಕು. ಗಂಭೀರ ಅಪಾದನೆಗಳು ಬಂದಾಗ ಮಾತ್ರ ಅನ್ಯರಿಂದ ದೂರು ಬಂದರೆ ಪರಿಗಣಿಸಬಹುದು.

2. ದೂರಿನಲ್ಲಿ ಉಲ್ಲೇಖಿತ ಆಪಾದನೆಗಳು ಮೇಲ್ನೋಟಕ್ಕೆ ನಿಜವಾಗಿರಬೇಕು.‌ ಈ ಬಗ್ಗೆ ಪ್ರಾಥಮಿಕ ವಿಚಾರಣೆಯ ಬಳಿಕವಷ್ಟೇ ಪ್ರಕರಣ ದಾಖಲಿಸಬೇಕು.

3. ದ್ವೇಷ ಬಿತ್ತುವುದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಅಥವಾ ದೇಶದ್ರೋಹದಂತಹ ಆರೋಪಗಳಿದ್ದಾಗ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು.

4. ರಾಜಕೀಯವಾಗಿ ಕಟುಟೀಕೆ, ಆಕ್ಷೇಪಾರ್ಹ ಹೇಳಿಕೆ ಆಧರಿಸಿ ಯಾಂತ್ರಿಕವಾಗಿ ಕೇಸ್ ಮಾಡಬಾರದು. ಸಂವಿಧಾನದ 19 (1) ವಾಕ್ ಸ್ವಾತಂತ್ರ್ಯ ಅವಕಾಶ‌ ನೀಡಬೇಕು. ಪೋಸ್ಟ್​ನಿಂದ ಶಾಂತಿಗೆ ಭಂಗ ಸಾಧ್ಯತೆ ಕಂಡುಬಂದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು.

5. ಮಾನಹಾನಿ ‘ಅಸಂಜ್ಞೇಯ ಅಪರಾಧ’ ಆಗಿರುವುದರಿಂದ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರುದಾರರಿಗೆ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್) ಮೊರೆ ಹೋಗಲು ಸೂಚಿಸಬೇಕು.

6. ರಾಜಕೀಯ ಆಧಾರಿತ ಪೋಸ್ಟ್ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವ ಮುನ್ನ ಸರ್ಕಾರಿ ಅಭಿಯೋಜಕರೊಂದಿಗೆ ಚರ್ಚಿಸಬೇಕು. ಅನಗತ್ಯ ಹಾಗೂ ಯಾಂತ್ರಿಕವಾಗಿ ಯಾರನ್ನೂ ಬಂಧಿಸದಂತೆ ಪೊಲೀಸರಿಗೆ ತಿಳಿಸಲಾಗಿದೆ.

7. ಬರುವ ದೂರುಗಳು ಸುಳ್ಳು, ದ್ವೇಷಪೂರಿತ ಅಥವಾ ರಾಜಕೀಯ ಪ್ರೇರಿತ ಎಂದು ಕಂಡುಬಂದರೆ, ಅಂತಹ ಪ್ರಕರಣಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್ 176(1) ಅಡಿಯಲ್ಲಿ ಮುಕ್ತಾಯಗೊಳಿಸಬೇಕು.

ಇದನ್ನೂ ನೋಡಿ: ಬಸವನಗುಡಿ| ಸಾರ್ವಜನಿಕ ಶೌಚಾಲಕ್ಕೆ ಬೀಗ – ಜನರ ಪರದಾಟ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *