ಮಂಗಳೂರು | ಆರ್.ಆರ್.ಬಿ ಡಿ ಗ್ರುಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಮಂಗಳೂರು : ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ರೈಲ್ವೇ ನೇಮಕಾತಿ ಮಂಡಳಿ ಅಧಿಕೃತ ವೆಬ್​ತಾಣಗಳಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಅದೇಶ ಹೊರಡಿಸಲಾಗಿದೆ.

ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ತಿಳಿಸಲಾಗಿದೆ. ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಣೆ ಬಿಡುಗಡೆ ಮಾಡಿದೆ.  ಆರ್.ಆರ್.ಬಿ ಘೋಷಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ 2026 ಜನವರಿ 31ರಿಂದ ಆರಂಭವಾಗುತ್ತದೆ. ಅಭ್ಯರ್ಥಿಗಳು 2026 ಮಾರ್ಚ್ 2ರವರೆಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : ತುಮಕೂರು | ಕಾರ್ಮಿಕ ಹಕ್ಕು ರಕ್ಷಣೆಗೆ ಹೋರಾಟ: ಸಂಹಿತೆ ರದ್ದುಪಡಿಸುವಂತೆ ಬಂದ್‌ಗೆ ಕರೆ

ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 36 ವರ್ಷಗಳು. ಈ ಸಂಬಂಧಿತ ವಿವರಗಳು ಈ ಕೆಳಗಿನಂತಿವೆ.  ಅಭ್ಯರ್ಥಿಗಳು ಈ ಕೆಳಗಿನ ಲಿಂಕ್​ನಲ್ಲಿ ಅರ್ಜಿ ಸಲ್ಲಿಸಬಹುದು https://www.rrbapply.gov.in/#/auth/landing

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2 ಮಾರ್ಚ್ 2026

ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2 ಮಾರ್ಚ್ 2026

ಪರೀಕ್ಷೆ ದಿನಾಂಕ: ಶೀಘ್ರವೇ ತಿಳಿಸಲಾಗುವುದು

ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು

ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

ವಿವರಗಳಿಗೆ ಅಭ್ಯರ್ಥಿಗಳು ಆರ್.ಆರ್.ಬಿ  ಅಧಿಕೃತ ವೆಬ್ ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.

ಅರ್ಜಿ ಶುಲ್ಕ: ಜನರಲ್/ಒಬಿಸಿ/ಇಡಬ್ಲ್ಯುಎಸ್: 500 ರೂ. (+ ಜಿಎಸ್ಟಿ ಶೇ 18) ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಇಎಕ್ಸ್ಎಸ್: 250 ರೂ. (+ ಜಿಎಸ್ಟಿ ಶೇ 18). I ಮೊತ್ತವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

ಒಟ್ಟು ಹುದ್ದೆಗಳು:

  • 22,000 ಕ್ಕೂ ಅಧಿಕ ಹುದ್ದೆಗಳು
  • ಜನರಲ್ – 9235 ಹುದ್ದೆಗಳು
  • ಇಡಬ್ಲ್ಯುಸಿ- 2237 ಹುದ್ದೆಗಳು
  • ಒಬಿಸಿ- 5217 ಹುದ್ದೆಗಳು
  • ಎಸ್ಸಿ- 3231 ಹುದ್ದೆಗಳು
  • ಎಸ್ಟಿ- 1726 ಹುದ್ದೆಗಳು

ಹುದ್ದೆಯ ಹೆಸರು: ಪಾಯಿಂಟ್ಸ್ಮ್ಯಾನ್-ಬಿ, ಸಹಾಯಕ (ಟ್ರ್ಯಾಕ್ ಮಿಷಿನ್), ಸಹಾಯಕ (ಬ್ರಿಡ್ಜ್), ಟ್ರ್ಯಾಕ್ ಮೈಂಟೇನೆನ್ಸ್ ಜ್ಯೂನಿಯರ್, ಸಹಾಯಕ ಪಿ-ವೇ, ಸಹಾಯಕ (ಸಿ&ಡಬ್ಲ್ಯು). ಸಹಾಯಕ ಟಿಆರ್​ಡಿ, ಸಹಾಯಕ (ಎಸ್ &ಟಿ), ಸಹಾಯಕ ಲೋಕೋ ಶೆಡ್ (ಡೀಸೆಲ್), ಸಹಾಯಕ ಲೋಕೋಶೆಡ್ (ಎಲೆಕ್ಟ್ರಿಕಲ್), ಸಹಾಯಕ ಆಪರೇಶನ್ಸ್ (ಎಲೆಕ್ಟ್ರಿಕಲ್), ಸಹಾಯಕ ಟಿಎಲ್ &ಎಸಿ, ಸಹಾಯಕ ಟಿಎಲ್ &ಎಸಿ (ವರ್ಕ್ಶಾಪ್), ಸಹಾಯಕ ಟಿಎಲ್ & ಎಸಿ (ವರ್ಕ್ಶಾಪ್), ಸಹಾಯಕ (ವರ್ಕ್ಶಾಪ್) ಮೆಕಾನಿಕಲ್.

ವಿದ್ಯಾರ್ಹತೆ: NCVT/SCVT ಯಿಂದ ಮಾನ್ಯತೆ ಪಡೆದ ಶಾಲೆಯಿಂದ 10 ನೇ ತರಗತಿ (ಪ್ರೌಢಶಾಲೆ) ಪೂರ್ಣಗೊಳಿಸಿದ ಅಥವಾ NCVT ಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರುವ ಅಭ್ಯರ್ಥಿಗಳು RRB ಗ್ರೂಪ್ D ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ-1)
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಈ ಕೆಳಗಿನ ಲಿಂಕ್ ಗಳಲ್ಲಿ ವಿವರಗಳನ್ನು ಪಡೆಯಬಹುದು- https://sarkariresult.com.cm/railway-rrb-group-d-level-1-recruitment-2026-online/

ಇದನ್ನೂ ನೋಡಿ : ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media

Donate Janashakthi Media

Leave a Reply

Your email address will not be published. Required fields are marked *