ಫೋರ್ಜರಿ, ಡೇಟಾ ಮತ್ತು ಪೌರತ್ವದ ಪ್ರಶ್ನೆಗಳು: ಸುಪ್ರೀಂ ಕೋರ್ಟ್‌ನ SIR ವಿಚಾರಣೆಗಳಲ್ಲಿ ಏನಾಗುತ್ತಿದೆ?

ನವದೆಹಲಿ: ದೇಶದ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ವಾರ ನಡೆದ ವಿಚಾರಣೆಗಳಲ್ಲಿ, ಪೌರತ್ವ, ಅತಿ ಕಡಿಮೆ ಕಾಲಾವಧಿ ಹಾಗೂ ಈ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಿಂದ ಹೊರಗಾಕುವ ಸಾಧ್ಯತೆಗಳ ಕುರಿತು ಅರ್ಜಿದಾರರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಡೇಟಾ 

ಇದಕ್ಕೂ ಮಧ್ಯೆ, ರಿಪೋರ್ಟರ್ಸ್ ಕಲೆಕ್ಟಿವ್ ಬಿಡುಗಡೆ ಮಾಡಿದ ಹೊಸ ವರದಿ, ಸುಪ್ರೀಂ ಕೋರ್ಟ್‌ ಮುಂದೆ ಚುನಾವಣಾ ಆಯೋಗ ನೀಡಿದ ಹೇಳಿಕೆಗೆ ವಿರುದ್ಧವಾದ ಮಾಹಿತಿಯನ್ನು ಹೊರಹಾಕಿದೆ. ಪಶ್ಚಿಮ ಬಂಗಾಳದಲ್ಲಿ ‘ತಾರ್ಕಿಕ ಅಸಮಂಜಸತೆ’ (logical discrepancies) ಎಂದು ಚುನಾವಣಾ ಆಯೋಗ ಹೇಳಿರುವ ಪ್ರಕರಣಗಳಲ್ಲಿ, ಪರಿಶೀಲಿಸದ ಮತ್ತು ಕೇಂದ್ರಿಕೃತ ಅಲ್ಗಾರಿದಮ್‌ಗಳ ಮೂಲಕ ಸಾವಿರಾರು ನೋಟಿಸ್‌ಗಳನ್ನು ಒಟ್ಟಾಗಿ ತಯಾರಿಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಕುರಿತು ವರದಿ ಹೇಳುವಂತೆ, ಪ್ರತಿದಿನ ಸಾವಿರಾರು ಪ್ರಕರಣಗಳನ್ನು ಪರಿಶೀಲಿಸಲು ಒತ್ತಡಕ್ಕೆ ಒಳಗಾದ ಚುನಾವಣಾ ನೋಂದಣಿ ಅಧಿಕಾರಿಗಳು, ಆಯೋಗದ ಸಾಫ್ಟ್‌ವೇರ್‌ ‘ಸಂಶಯಾಸ್ಪದ’ ಎಂದು ಗುರುತಿಸಿದ ಪ್ರಕರಣಗಳಲ್ಲಿ, ಕೇವಲ ಎರಡು ವಾರಗಳಲ್ಲಿ ದಶಲಕ್ಷಕ್ಕೂ ಹೆಚ್ಚು ನೋಟಿಸ್‌ಗಳಿಗೆ ಯಾಂತ್ರಿಕವಾಗಿ ಸಹಿ ಹಾಕಬೇಕಾದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಡೇಟಾ 

ಇದನ್ನೂ ಓದಿ: ಬಾಗಲಕೋಟೆ | ಮೂಲಸೌಕರ್ಯ ಬಲಪಡಿಸಲು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

‘SIR ಈಗ ಏಕೆ ಅಗತ್ಯವಾಯಿತು?’

SIR ವಿರೋಧಿಸಿ ಅರ್ಜಿ ಸಲ್ಲಿಸಿರುವವರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ, “ವಾರ್ಷಿಕವಾಗಿ ಮತದಾರರ ಪಟ್ಟಿಯ ನವೀಕರಣ ನಡೆಯುತ್ತಿರುವಾಗ, ದೇಶವ್ಯಾಪಿ SIR ಅಗತ್ಯವಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದತ್ತಾಂಶವನ್ನು ಚುನಾವಣಾ ಆಯೋಗ ದಾಖಲೆಗೆ ಸಲ್ಲಿಸಿದ್ದೇ?” ಎಂದು ಪ್ರಶ್ನಿಸಿದರು. ಡೇಟಾ 

ಚುನಾವಣಾ ಆಯೋಗವು ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ, ಈ ಪ್ರಕ್ರಿಯೆಯ ಅಗತ್ಯತೆ ಕುರಿತು ಸಮಗ್ರ ಅಧ್ಯಯನ ಆಧಾರಿತ ದತ್ತಾಂಶವನ್ನು ನೀಡಬೇಕಿತ್ತು ಎಂದು ಸಿಬಲ್ ವಾದಿಸಿದರು.

“ಇಂತಹ ಪ್ರಕ್ರಿಯೆಗೆ ಮನಸ್ಸಿನ ಅನ್ವಯ ಇರಬೇಕು. ಇಂದೇ ಇದೇಕೆ ಅಗತ್ಯವಾಯಿತು? ಒಂದು ಕ್ಷೇತ್ರಕ್ಕಾಗಿಯೇ ಅಲ್ಲ, ಇಡೀ ದೇಶಕ್ಕೇ ಏಕೆ?” ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, 2002ರ ಮತದಾರರ ಪಟ್ಟಿಗೆ ಹೆಸರು ಜೋಡಿಸಲು ಸಾಧ್ಯವಾಗದವರಿಂದ ಮಾತ್ರ ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಹೇಳಿದರು. ಡೇಟಾ 

ಆದರೆ ಸಿಬಲ್, “ಎಷ್ಟು ಜನರ ಬಳಿ ತಮ್ಮ ಅಥವಾ ತಮ್ಮ ಪೋಷಕರ ಜನನ ಪ್ರಮಾಣಪತ್ರ ಇರುತ್ತದೆ? ಈ ಮೂಲಕ 1.82 ಕೋಟಿ ಜನರ ಪೌರತ್ವವೇ ಪ್ರಶ್ನೆಯಾಗಿ ಮಾರ್ಪಡಿದೆ” ಎಂದು ಆಕ್ಷೇಪಿಸಿದರು. ಬಿಹಾರದಲ್ಲಿ SIR ಪೂರ್ಣಗೊಂಡ ಬಳಿಕ ಎಷ್ಟು ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಕೂಡ ಅವರು ಪ್ರಶ್ನಿಸಿದರು.

ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮರಣ ಮತ್ತು ವಲಸೆಯನ್ನು ಉಲ್ಲೇಖಿಸಿದರೂ, ಸಿಬಲ್, ಇವುಗಳೆಲ್ಲ ವಾರ್ಷಿಕ ನವೀಕರಣದ ಭಾಗವಾಗಿಯೇ ನಡೆಯುತ್ತಿವೆ ಎಂದು ಪ್ರತಿಪಾದಿಸಿದರು. ಡೇಟಾ 

‘ಭಯದ ವಾತಾವರಣ’

ಡಿಮೊಕ್ರಟಿಕ್ ರಿಫಾರ್ಮ್ಸ್ ಸಂಘಟನೆಯ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಜನರು “ವಿದೇಶಿಯರೆಂದು ಹೊರಗಾಕಲ್ಪಡುವ ಭಯದಲ್ಲಿ ಬದುಕುತ್ತಿದ್ದಾರೆ” ಎಂದು ಹೇಳಿದರು. ಅಮೆರಿಕದ ICE ದಾಳಿಗಳನ್ನು ಉಲ್ಲೇಖಿಸಿ, “ಒಂದು ಸಣ್ಣ ಕಾಗದವೇ ನಮ್ಮ ನಾಗರಿಕ ಹಕ್ಕುಗಳ ರಕ್ಷಣೆ” ಎಂದರು.

‘ಯಾವುದೇ ದಾಖಲೆ ನಕಲಿ ಆಗಬಹುದು’

ಗುರುತು ಪರಿಶೀಲನೆಗೆ ಆಧಾರ್ ಬಳಸಬಾರದೆಂಬ ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಪರವಾಗಿ ವಾದಿಸಿದ ವಿಜಯ್ ಹಂಸರಿಯಾ, ಆಧಾರ್ ಸುಲಭವಾಗಿ ನಕಲಿ ಆಗುತ್ತದೆ ಎಂದಾಗ, ನ್ಯಾಯಮೂರ್ತಿ ಬಾಗ್ಚಿ, “ಪಾಸ್‌ಪೋರ್ಟ್ ಕೂಡ ನಕಲಿ ಆಗಬಹುದು. ಯಾವುದೇ ದಾಖಲೆ ನಕಲಿ ಆಗಬಹುದು. ಆಧಾರ್ ಸಾರ್ವಜನಿಕ ದಾಖಲೆ” ಎಂದು ಸ್ಪಷ್ಟಪಡಿಸಿದರು.

‘ಬಂಗಾಳದ ನಿರ್ದೇಶನಗಳು ತಮಿಳುನಾಡಿಗೂ ಅನ್ವಯ’

ಡಿಎಂಕೆ ನಾಯಕ ಆರ್.ಎಸ್. ಭಾರತಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ, ಬಂಗಾಳಕ್ಕೆ ನೀಡಿದ ನಿರ್ದೇಶನಗಳನ್ನು ತಮಿಳುನಾಡಿಗೂ ಅನ್ವಯಿಸುವಂತೆ ಮಾಡಬೇಕು ಎಂದು ಕಪಿಲ್ ಸಿಬಲ್ ಮನವಿ ಮಾಡಿದರು. ‘ತಾರ್ಕಿಕ ಅಸಮಂಜಸತೆ’ ಹೆಸರಿನಲ್ಲಿ ನೋಟಿಸ್ ಪಡೆದವರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸೂಚಿಸಬೇಕೆಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ, “ಒಮ್ಮೆ ಏಕರೂಪ ಮಾರ್ಗಸೂಚಿ ನೀಡಿದ ಬಳಿಕ, ಅದನ್ನು ತಮಿಳುನಾಡಿಗೂ ಅನ್ವಯಿಸಬಹುದು” ಎಂದು ಅಭಿಪ್ರಾಯಪಟ್ಟರು. ತಮಿಳುನಾಡಿನಲ್ಲಿ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಜನವರಿ 30.

‘ಪೌರತ್ವ ನಿರಂತರವಾಗಿ ಪೂರೈಸಬೇಕು’

ಜನವರಿ 27ರಂದು ಚುನಾವಣಾ ಆಯೋಗ, ಮತದಾರರು ಸಂವಿಧಾನದ 326ನೇ ವಿಧಿಯಂತೆ ಭಾರತೀಯ ಪೌರತ್ವವನ್ನು “ನಿರಂತರವಾಗಿ ಪೂರೈಸಬೇಕು” ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹೆಸರು ಸೇರಿಸಿದ ನಂತರವೂ ಅರ್ಹತೆ ಉಳಿಯಬೇಕೆಂದು ಹಿರಿಯ ವಕೀಲ ಮನಿಂದರ್ ಸಿಂಗ್ ವಾದಿಸಿದರು.

ಆದರೆ, “ಪೌರತ್ವ ಪರಿಶೀಲನೆ ಮತ್ತು ಪೌರತ್ವ ನಿರ್ಧಾರ ಪ್ರಕ್ರಿಯೆ ಎರಡೂ ವಿಭಿನ್ನ” ಎಂದು ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ದಾಮಾ ಶೇಷಾಧಿರಿ ನಾಯ್ಡು ಸ್ಪಷ್ಟಪಡಿಸಿದರು. ಬಿಹಾರದಲ್ಲಿ ಯಾವುದೇ ಲೋಪಗಳ ಕುರಿತು ಒಂದೇ ಒಂದು ದೂರು ಬಂದಿಲ್ಲ ಎಂದು ಅವರು ಹೇಳಿದರು.

ಇದನ್ನೂ ನೋಡಿ: ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತರೆ ರಾಜ್ಯಪಾಲರು?! Janashakthi Media

Donate Janashakthi Media

Leave a Reply

Your email address will not be published. Required fields are marked *