ಮುಂಡಗೋಡ | ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಕಂಡು ಬಹಳ ಸಂತಸವಾಗಿದೆ – ಕಿರಣ್‌ ರಿಜಿಜು

ಮುಂಡಗೋಡ : ದೀರ್ಘ ಆಯುಷ್ಯಕ್ಕಾಗಿ ಹಿರಿಯ ಬಿಕ್ಕುಗಳ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದೇನೆ ಹಾಗೂ ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಕಂಡು ಬಹಳ ಸಂತಸವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದರು. ಮುಂಡಗೋಡ

ಇದನ್ನೂ ಓದಿ : ಮನರೇಗಾ ನಿರ್ಮಿಸಿದ ಪರಂಪರೆಯನ್ನು ಧ್ವಂಸ ಮಾಡುವ ವಿಬಿ-ಜಿ ರಾಮ್ ಜಿ: ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್

ಭವಿಷ್ಯದ ಪೀಳಿಗೆಗಳು ದಲೈಲಾಮಾ ಅವರ ಪರಸ್ಪರ ಸಹಾನುಭೂತಿ, ನೈತಿಕ ಜೀವನ ಮತ್ತು ಜವಾಬ್ದಾರಿಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವುದು ಅಗತ್ಯ ಎಂದು ತಾಲೂಕಿನ ಲಾಮಾ ಕ್ಯಾಂಪ್ ನಂ.2ರ ಡ್ರೆಪುಂಗ್ ಲೋಸಲಿಂಗ್ ಬೌದ್ಧ ಮಂದಿರದಲ್ಲಿ ಭಾನುವಾರ ನಡೆದ ದಲೈಲಾಮಾ ಅವರ 90ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲೈಲಾಮಾ ಅವರನ್ನು ಈ ಹಿಂದೆ ಧರ್ಮಶಾಲಾದಲ್ಲಿ ಅವರ ಜನ್ಮ ದಿನದಂದು ಕೇಂದ್ರದ ಪ್ರತಿನಿಧಿಯಾಗಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದೆ. ಈ ಸಲ ಇಲ್ಲಿ ಹಿರಿಯ ಲಾಮಾಗಳು ಆಯೋಜನೆ ಮಾಡಿರುವ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ.

ಮೂರು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಮಂದಿರದ ಬೌದ್ಧ ಅನುಯಾಯಿಗಳು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಬೌದ್ಧ ಮಂದಿರಗಳಿಗೆ ಅಗತ್ಯ ನೆರವು ನೀಡುವುದು ಹಾಗೂ ಲಾಮಗಳ ಬೇಡಿಕೆಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂದರು. ಸಂಸದ ವಿಶೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್ ಇದ್ದರು.

ಇದನ್ನೂ ನೋಡಿ : ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *