ರಾಮನಗರ: ನಗರದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಎಸಗಲಾಗಿದ್ದು, ಮೂವರು ಆರೋಪಿಗಳನ್ನು ನಗರದ ದಕ್ಷಿಣ ಜಿಲ್ಲೆ ಮಾಗಡಿ ಠಾಣೆ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ವಿಕಾಸ್, ಪ್ರಶಾಂತ್, ಚೇತನ್ ಎಂದು ಗುರುತಿಸಲಾಗಿದ್ದೂ, ಮಾಗಡಿ ಪೊಲೀಸರು ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕಾಲೇಜಿನಲ್ಲಿ 19 ವರ್ಷದ ಯುವತಿ ಓದುತ್ತಿದ್ದಳು. ವಿಕಾಸ್ ಎಂಬಾತ ಮೊದಲು ಯುವತಿಯನ್ನ ಪರಿಚಯ ಮಾಡಿಕೊಂಡು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದನು.
ಇದನ್ನೂ ಓದಿ: ಡಿ. 22 – ಮನರೇಗದಲ್ಲಿ ಬದಲಾವಣೆಗಳನ್ನು ವಿರೋಧಿಸಿ ಅಖಿಲ ಭಾರತ ಪ್ರತಿಭಟನಾ ದಿನ: ಎಡಪಕ್ಷಗಳ ಕರೆ
ಅದನ್ನ ವಿಡಿಯೋ ಮಾಡಿಕೊಂಡ ವಿಕಾಸ್ ನಾನು ಕರೆದಾಗಲೆಲ್ಲಾ ಬರಬೇಕು , ಇಲ್ಲವಾದಲ್ಲಿ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ವಿಕಾಸ್ ಸ್ನೇಹಿತರಾದ ಪ್ರಶಾಂತ್ ಚೇತನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ, ಮರಘಾ ಪ್ರಕರಣ | ಮಹಿಳೆಯರ ವಿರುದ್ಧ ಷಡ್ಯಂತ್ರಗಳು…! ಅಲ್ಲಿ ಇಲ್ಲಿ ಎಲ್ಲೆಲ್ಲೂ Janashakthi Media
